ಗೊರಕೆ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ


ಆದರ್ಶ ಕೊಡಚಾದ್ರಿ, May 24, 2021, 3:41 PM IST

Snoring is the problem

ನಿದ್ರೆ ಪ್ರತಿಯೊಬ್ಬರ ಬದುಕಿನಲ್ಲಿ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದು. ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಮಾನಸಿಕ ನೆಮ್ಮದಿಯನ್ನು ನೀಡುವುದರ ಜೊತೆ ಜೊತೆಗೆ ದೈಹಿಕ ಆರೋಗ್ಯದ ಸಮತೋಲನದಲ್ಲಿಯೂ  ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆದರೆ ಈ ಸುಖಕರವಾದ ನಿದ್ದೆ ಮಾಡುವಾಗ ಪಕ್ಕದಲ್ಲಿರುವವರ ಗೊರಕೆ ಸದ್ದು ನಮ್ಮ  ಸುಂದರ ಕನಸಿನ ನಿದ್ದೆಯನ್ನು ಹಾಳು ಮಾಡಿಬಿಡಬಹುದು.

ನಿಮ್ಮ ಮನೆಯಲ್ಲಿರುವವರ ಗೊರಕೆಯ ಸಮಸ್ಯೆ ನಿಮ್ಮ ನಿದ್ದೆಯನ್ನು ಹಾಳುಮಾಡುತ್ತಿರಬಹುದು. ಅದೆಷ್ಟೋ ಸನ್ನಿವೇಶಗಳಲ್ಲಿ ಈ ಗೊರಕೆಯ ಸಮಸ್ಯೆ ಗಂಡ -ಹೆಂಡತಿಯರ ದಾಂಪತ್ಯ ಬದುಕಿನ ಮೇಲೆ ಪ್ರಭಾವ ಬೇರುವ ಮೂಲಕ ದಂಪತಿಗಳು ಪರಸ್ಪರ ದೂರವಾಗುವ ಸನ್ನೆವೇಶಗಳನ್ನು ನಾವು ಕೇಳಿದ್ದೇವೆ. ಆದರೆ ಗೊರಕೆಯಂತಹ ಸಮಸ್ಯೆ ಹೊಂದಿರುವ  ವ್ಯಕ್ತಿಯನ್ನು ದೂರ ತಳ್ಳುವುದರ ಬದಲಾಗಿ  ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಒಂದು ವೇಳೆ ನಿಮ್ಮ ಜೊತೆಗಿರುವವರಲ್ಲಿ ಗೊರಕೆಯ ಸಮಸ್ಯೆ ಇದ್ದರೆ ಅಥವಾ ನಿಮಗೆ ಈ ಸಮಸ್ಯೆ ಇದ್ದರೆ  ಕೆಳಕಂಡ ವಿಧಾನವನ್ನು ಪಾಲಿಸಿ ಗೊರಕೆ ಸಮಸ್ಯೆಯಿಂದ ಪಾರಾಗಬಹುದಾಗಿದೆ

ಸ್ಟೀಮ್ ತೆಗೆದುಕೊಳ್ಳುವುದು

ಸಾಮಾನ್ಯವಾಗಿ ಶೀತ ಅಥವಾ ಜ್ವರದಂತಹ ಸಮಸ್ಯೆಗಳಿದ್ದಾಗ  ಮೂಗು ಕಟ್ಟಿ ಗೊರಕೆ ಹೊಡೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಒಂದು ದೊಡ್ಡ ಬಟ್ಟಲಿನಲ್ಲಿ ಸ್ವಲ್ಪ ಬಿಸಿನೀರನ್ನು ಸುರಿಯಿರಿ. ಇದಕ್ಕೆ ನೀಲಗಿರಿ, ಬೇವು ಅಥವಾ ಯಾವುದೇ ಸಾರಭೂತ ಎಣ್ಣೆಯನ್ನು ಮೂರರಿಂದ ನಾಲ್ಕು ಹನಿಗಳನ್ನು ಸೇರಿಸಿ. ನಿಮ್ಮ ಮುಖವನ್ನು ನೀರಿನ ಹತ್ತಿರಕ್ಕೆ ತಂದ ನಂತರ, ನಿಮ್ಮ ತಲೆ ಮೇಲೆ ಟವೆಲ್ ಹಾಕಿ ಈ ಹಬೆಯನ್ನು ತೆಗೆದುಕೊಳ್ಳಿ. ಹಬೆಯನ್ನು ತೆಗೆದುಕೊಳ್ಳುವಾಗ ಉಚ್ಛ್ವಾಸ ಮತ್ತು ನಿಶ್ವಾಸಗಳನ್ನು ಮಾಡಿ ಇದರಿಂದ ಮೂಗಿನಲ್ಲಿ ಸಂಗ್ರಹವಾದ ಅಂಶ ಕರಗಿ ಸಮಸ್ಯೆ ಪರಿಹಾರವಾಗುತ್ತದೆ.

ಆಲ್ಕೊಹಾಲ್ ತ್ಯೆಜಿಸಿ

ಆಲ್ಕೊಹಾಲ್ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತದೆ, ನಿಮ್ಮ ಗಂಟಲಿನ ಹಿಂಭಾಗದಲ್ಲಿರುವ ಸ್ನಾಯುಗಳ ಮೇಲೆ ಉದ್ವೇಗವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ನಿಮ್ಮ ಗೊರಕೆಯ ಸಮಸ್ಯೆ ಹೆಚ್ಚಾಗುತ್ತದೆ. ತಂಬಾಕು ಹೊಗೆ, ಮತ್ತೊಂದೆಡೆ ಗಂಟಲಿನಲ್ಲಿರುವ ಲೋಳೆಯ ಪೊರೆಗಳನ್ನು ಕೆರಳಿಸಬಹುದು. ಆದ್ದರಿಂದ ಈ ಎರಡನ್ನೂ ನೀವು ಸಂಪೂರ್ಣವಾಗಿ ಬಿಟ್ಟುಬಿಡಲು ಸಾಧ್ಯವಾಗದಿದ್ದರೂ, ನೀವು ಆಲ್ಕೊಹಾಲ್ ಸೇವನೆ ಮತ್ತು ಸಿಗರೇಟ್ ಬಳಕೆ ಮಾಡುವ  ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವುದು ಬಹಳ ಮುಖ್ಯ. ಹೀಗೆ  ಮಾಡುವುದರಿಂದ ಕೇವಲ ಗೊರಕೆ ಸಮಸ್ಯೆ ಮಾತ್ರವಲ್ಲದೆ ಆಲ್ಕೊಹಾಲ್ ಸೇವನೆಯಿಂದ ಕಂಡುಬರುವ ಹಲವಾರು ಸಮಸ್ಯೆಗಳಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ,

ಬೆಳ್ಳುಳ್ಳಿಯ ಬಳಕೆ

ಬೆಳ್ಳುಳ್ಳಿಯಲ್ಲಿ ಹಲವಾರು ರೋಗ ನಿರೋಧಕ ಅಂಶಗಳಿದ್ದು, ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಇದು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತದೆ, ಬೆಳ್ಳುಳ್ಳಿಯ ಸೂಕ್ಷ್ಮಜೀವಿಯ ವಿರೋಧಿ ಗುಣಲಕ್ಷಣಗಳು ಮೂಗಿನ ಮಾರ್ಗದಲ್ಲಿರುವ ಲೋಳೆ ತೊಡೆದುಹಾಕಲು ಸಹಾಯ ಮಾಡುತ್ತದೆ. ಬರೀ ಸಾಮಾನ್ಯ ಶೀತದಿಂದಾಗಿ ನೀವು ಗೊರಕೆ ಹೊಡೆಯುತ್ತಿದ್ದರೆ, ಬೆಳ್ಳುಳ್ಳಿ ನಿಮಗೆ ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಹಸಿ ಬೆಳ್ಳುಳ್ಳಿ ಮತ್ತು  ಲವಂಗವನ್ನು ಅಗಿಯಿರಿ. ನಂತರ ಒಂದು ಲೋಟ ನೀರನ್ನು ಕುಡಿಯಿರಿ. ಮಲಗುವ ಮುನ್ನ ಕನಿಷ್ಠ 20 ರಿಂದ 30 ನಿಮಿಷಗಳಾದರೂ ಇದನ್ನು ಅನುಸರಿಸುವುದು ಉತ್ತಮ.

ಬಿಸಿ ನೀರಿನ ಬಳಕೆ

ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಬಿಸಿ -ಬಸಿಯಾದ  ನೀರನ್ನು ಸೇವನೆ ಮಾಡುವುದರಿಂದ  ಸಾಮಾನ್ಯ ಶೀತದಿಂದ ಗಂಟಲಿನಲ್ಲಿ ಸಂಗ್ರಹವಾಗಿರುವ ಲೋಳೆಯಂತಹ ಅಂಶ ಕರಗುತ್ತದೆ. ಇದರಿಂದ ಗೊರಕೆ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಅರಿಶಿನ ಬಳಕೆ

ಸಾಮಾನ್ಯವಾಗಿ ಎಲ್ಲಾ ವಿಧವಾದ ಆರೋಗ್ಯ ಸಮಸ್ಯೆಗಳಿಗೆ ಅರಶಿನದ ಬಳಕೆ ಅತ್ಯಂತ ಪ್ರಮುಖವಾದ ಮದ್ದಾಗಿ ಕಾರ್ಯನಿರ್ವಹಿಸುತ್ತದೆ. ಇದು ಪ್ರಬಲವಾದ ನಂಜು ನಿರೋಧಕ ಎಂದು ತಿಳಿದುಬಂದಿದೆ. ಇದು ನಿಮ್ಮ ಗೊರಕೆ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತದೆ. ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಚಮಚ ತಾಜಾ ಅರಿಶಿನ ಪುಡಿಯನ್ನು ಸೇರಿಸಿ, ಮಲಗುವ ಮುನ್ನ ಬೆರೆಸಿ ಕುಡಿಯಿರಿ. ಹೀಗೆ ಅರಶಿನವನ್ನು ಸೇವನೆ ಮಾಡುವುದರಿಂದ ಸಮಸ್ಯೆಯಿಂದ ಬಹುಬೇಗ ಗುಣಮುಖವಾಗಬಹುದಾಗಿದೆ.

ಏಲಕ್ಕಿ

ಭಾರತೀಯ ಆಹಾರ ಪರಂಪರೆಯಲ್ಲಿ ಹಲವಾರು ಮಸಾಲೆಗಳಿದ್ದು, ಇವುಗಳು ತನ್ನಲ್ಲಿ ಬಹಳಷ್ಟು ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ಅವುಗಳಲ್ಲಿ ಏಲಕ್ಕಿ ಕೂಡಾ ಒಂದು . ಈ ಮಸಾಲೆ ಅತ್ಯುತ್ತಮ ಎಕ್ಸ್‌ಪೆಕ್ಟೊರೆಂಟ್ ಮತ್ತು ಡಿಕೊಂಜೆಸ್ಟೆಂಟ್ ಆಗಿದೆ. ಇದರಿಂದಾಗಿ ಉಸಿರಾಟದ ಜಾಗದ ಉದ್ದಕ್ಕೂ ಗಾಳಿಯನ್ನು ಸ್ಪಷ್ಟವಾಗಿ ಸಾಗಿಸಲು ಸಹಾಯ ಮಾಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿಗೆ ಸುಮಾರು ಒಂದೂವರೆ ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಮಲಗುವ ಮುನ್ನ ಕನಿಷ್ಠ ಅರ್ಧ ಘಂಟೆಯಾದರೂ ಮುಂಚೆ ಕುಡಿಯಿರಿ.

ಟಾಪ್ ನ್ಯೂಸ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ರೋಮಾಂಚನಗೊಳಿಸುವ ಡಿಸ್ನಿ ಲೋಕ…. ; ಇಲ್ಲಿ ಎಲ್ಲವೂ ಕಣ್ಣೆದುರಿಗೆ

Disneyland: ರೋಮಾಂಚನಗೊಳಿಸುವ ಡಿಸ್ನಿ ಲೋಕ….ಇಲ್ಲಿ ಎಲ್ಲವೂ ಕಣ್ಣೆದುರಿಗೆ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.