ಲಾಕ್ ಡೌನ್ ಟೈಮ್ ನಲ್ಲಿ ಭಾರತೀಯರು ಗೂಗಲ್ ನಲ್ಲಿ ಏನೇನು ಸರ್ಚ್ ಮಾಡಿದ್ದಾರೆ ಗೊತ್ತಾ ?


ಮಿಥುನ್ ಪಿಜಿ, May 5, 2020, 7:18 PM IST

most-search-in-google

ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಳವಳ ಹೆಚ್ಚಿಸಿರುವ ಕೋವಿಡ್ -19 ವೈರಸ್ ನಿಂದಾಗಿ ಜನರು ಮನೆಯಲ್ಲಿಯೇ ಉಳಿಯುವಂತಾಗಿದೆ. ಈ ಸಮಯದಲ್ಲಿ ಕೆಲವರು ಸಿನಿಮಾಗಳ ಮೊರೆ ಹೋದರೆ ಮತ್ತೆ ಹಲವರು ಪುಸ್ತಕ, ಅಡುಗೆ, ಇಂಟರ್ ನೆಟ್  ಎಂಬಿತ್ಯಾದಿ ಕಾಯಕದಲ್ಲಿ ನಿರತರಾಗಿದ್ದಾರೆ.

ಇದೇ ಸಂದರ್ಭದಲ್ಲಿ  ತಂತ್ರಜ್ಞಾನ ದೈತ್ಯ ಗೂಗಲ್ ಮತ್ತು ಯೂಟ್ಯೂಬ್, ಲಾಕ್​ಡೌನ್​ ಸಮಯದಲ್ಲಿ ಭಾರತೀಯರು ಅತೀ  ಹೆಚ್ಚು ಸರ್ಜ್​ ಮಾಡಿರುವ ಸಂಗತಿ ಯಾವುದು ಎಂಬ ಕೂತೂಹಲಕಾರಿ ವಿಚಾರವನ್ನು  ಬಹಿರಂಗ ಮಾಡಿದೆ.  ಆ ಮಾಹಿತಿ ಈ ಕೆಳಗಿನಂತಿದೆ.

ಅಡುಗೆ ವಿಚಾರಗಳು: ಲಾಕ್ ಡೌನ್ ಸಮಯದಲ್ಲಿ ಹಲವು ಪುರುಷರು ಬಾಣಸಿಗರಾಗಿ ನಳಪಾಕ ಮಾಡಿಕೊಂಡಿರುವುದನ್ನು ಮೀಮ್ಸ್ ಗಳಲ್ಲಿ ಕಾಣಬಹುದು. ಗೂಗಲ್/ ಯೂಟ್ಯೂಬ್ ಮೂಲಕ ಚಿಕನ್ ಸಾಂಬರ್ ಮಾಡುವುದು ಹೇಗೆ ? ಪನ್ನೀರ್ ದಾಲ್ , ಮಾತ್ರವಲ್ಲದೆ ಡಾಲ್ಗೋನಾ ಕಾಫಿ ಮಾಡುವ ಬಗೆ ಹೇಗೆ  ಎಂಬ ವಿಚಾರಗಳು ಅತೀ ಹೆಚ್ಚು ಸರ್ಚ್ ಆಗಿವೆ.

ಇನ್ನೂ ಕೂತೂಹಲಕಾರಿ ಅಂಶವೆಂದರೇ ಶೇ 90% ಜನರು ಪಾನಿಪುರಿ  ಮಾಡುವ ಬಗೆ, ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಉಲ್ಲೇಖಿಸಿದ ಆಯುರ್ವೇದಿಕ್  ಔಷಧ ‘ಖಡಾ’ ಮಾಡುವ ರೀತಿ  ಹೇಗೆ ? ಎಂಬುದನ್ನು ಸರ್ಚ್ ಮಾಡಿ ತಿಳಿದುಕೊಂಡಿದ್ದಾರೆ. ಮಾತ್ರವಲ್ಲದೆ ಹೊಟೇಲ್ ಗಳು ಇಲ್ಲದ ಕಾರಣ 5 ನಿಮಿಷಗಳಲ್ಲಿ  ಹೇಗೆ ಅಡುಗೆ ಮಾಡಬಹುದು ಎಂಬುದನ್ನು ಸರ್ಚ್ ಮಾಡಿದ್ದಾರೆ.

ದಿನಸಿ ಮತ್ತು ಇತರೆ: ಶೇ. 300ರಷ್ಟು ಜನರು ಗೂಗಲ್​ನಲ್ಲಿ ‘ಹತ್ತಿರದ ರೇಷನ್​ ಅಂಗಡಿ, ಔಷಧ ಅಂಗಡಿ, ಪ್ರಾಣಿ ವೈದ್ಯರು​​​, ಕಿರಾಣಿ ವಿತರಕರು ಎಂದು ಸರ್ಚ್​ ಮಾಡಿದ್ದಾರೆ. ಇದರ ಜೊತೆಗೆ ಹೆಡ್​ಸೆಟ್, ಮ್ಯಾಟ್ರೆಸ್ ಯ್ಯೂಟೂಬ್​ನಲ್ಲಿ ಸಿಗುವ ಸಿನಿಮಾಗಳ ಬಗ್ಗೆ ಹುಡುಕಾಡಿದ್ದಾರೆ.

ಇನ್ನು ‘ಜಿಮ್ ಎಟ್ ಹೋಮ್​, ಲರ್ನ್​ ಆನ್​ಲೈನ್​,  ಟೀಚ್​​ ಆನ್​ಲೈನ್​ ಎಟ್​ ಹೋಮ್​ ಬಗ್ಗೆಯೂ ಹುಡುಕಾಡಿದ್ದಾರೆ. ‘ವಿಟಮಿನ್​ ಸಿ‘ ಎಂಬ ಪದವನ್ನು ಶೇ. 150ರಷ್ಟು ಜನರು ಹುಡುಕಾಡಿದರೆ. ಶೇ. 60ರಷ್ಟು ಜನರು  ‘ಕನ್ಸಲ್ಟ್​​ ಡಾಕ್ಟರ್​​ ಆನ್​ಲೈನ್​‘ ಎಂಬ ಪದವನ್ನು ಹುಡುಕಾಡಿದ್ದಾರೆ. ಇದಲ್ಲದೆ ವರ್ಕ್ ಫ್ರಂಮ್​ ಹೋಮ್​​​, ಸಾಫ್ಟ್​​ವೇರ್​​, ಫ್ರೀ ವಿಡಿಯೋ ಡೇಟಿಂಗ್​ ಎಂದು ಹುಡುಕಾಟ ನಡೆಸಿದ್ದಾರೆ

ಹೌ–ಟು : ಆಸಕ್ತಿಕರ ವಿಚಾರವೆಂದರೇ ಇಂಟರ್ ನೆಟ್ ಬಳಸುವ ಶೇ 180% ಜನರು ಇಲೆಕ್ಟ್ರಿಕ್​​ ಬಿಲ್​ ಪಾವತಿಸುವುದು ಹೇಗೆ ? ಶೇ. 200ರಷ್ಟು ಜನರು ಯುಪಿಐ ಪಿನ್​ ಬದಲಿಸುವು ಹೇಗೆ ? ಎಂಬುದನ್ನು ಸರ್ಚ್ ಮಾಡಿದ್ದಾರೆ. ಮಾತ್ರವಲ್ಲದೆ Near me  ಸರ್ಚ್ ಗಳು ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ದ್ವಿಗುಣಗೊಂಡಿವೆ. ತೂಕ ಇಳಿಸುವುದು ಹೇಗೆ ? ಕೇಕ್ ತಯಾರಿಸುವುದು ಹೇಗೆ, ಬಿಯರ್ ತಯಾರಿಸುವುದು ಹೇಗೆ ? ಸ್ಯಾನಿಟೈಸರ್ ತಯಾರಿಸುವ ಬಗೆಯನ್ನು ಕೂಡ ಗೂಗಲ್ ನಲ್ಲಿ ಹುಡುಕಾಡಿದ್ದಾರೆ. ಕೆಲವರು ಇನ್ನು ಸ್ವಲ್ಪ ಮುಂದೆ ಹೋಗಿ ವೈರಸ್ ಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಗೆ ಹೇಗೆ ಎಂಬುದನ್ನು ಜಾಲಾಡಿದ್ದಾರೆ.

ಝೂಮ್ ಆ್ಯಪ್:  ಲಾಕ್ ಡೌನ್ ಸಮಯದಲ್ಲಿ ಝೂಮ್ ಆ್ಯಪ್ ಅತೀ ಹೆಚ್ಚು ಪ್ರಚಾರ ಗಳಿಸಿಕೊಂಡಿತ್ತು. ಒಂದೇ ಸಮಯದಲ್ಲಿ 100 ಮಂದಿ ವಿಡಿಯೋ ಕಾಲ್ ನಲ್ಲಿ ಭಾಗವಹಿಸಬಹುದಾದ್ದರಿಂದ ಹಲವು ಕಂಪೆನಿಗಳು ವರ್ಕ್ ಫ್ರಂ ಹೋಮ್ ಮಾಡುವ ತನ್ನ ನೌಕರರಿಗೆ ಈ ಆ್ಯಪ್  ಮೂಲಕ ಮೀಟಿಂಗ್ ನಡೆಸುತ್ತಿವೆ. ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳು ಇದರ ಮೂಲಕ ತರಗತಿ ನಡೆಸುತ್ತಿವೆ. ಈ ಸಮಯದಲ್ಲಿ ಗೂಗಲ್ ಮತ್ತು ಯೂಟ್ಯೂಬ್ ನಲ್ಲಿ ಹಲವರು ‘ಹೌ ಟು ಯುಸ್ ಝೂಮ್ ಆ್ಯಪ್’ ಎಂಬುದನ್ನು ಸರ್ಚ್ ಮಾಡಿದ್ದರು.

ಇದಾದ ಕೆಲವೇ ದಿನಗಳಲ್ಲಿ ಈ ಆ‍್ಯಪ್ ನಲ್ಲಿ ಡಾಟಾಗಳು ಸೋರಿಕೆಯಾಗುತ್ತಿವೆ, ಭದ್ರತಾ ಸಮಸ್ಯೆಗಳಿವೆ ಎಂದು ಸರ್ಕಾರವೇ ಎಚ್ಚರಿಕೆ ನೀಡಿದ್ದರಿಂದ ‘ಹೌ ಟು ಡಿಲೀಟ್ ಝೂಮ್ ಆ್ಯಪ್’ ಎಂಬ ಅಂಶಗಳು ಟ್ರೆಂಡಿಂಗ್  ನಲ್ಲಿ ಕಾಣಿಸಿಕೊಂಡವು.

ಆನ್ ಲೈನ್ ಗೇಮ್ಸ್ : ಲೂಡೋ ಆಟವನ್ನು ಆಡದವರುಂಟೇ ? ಲಾಕ್ ಡೌನ್ ನಲ್ಲಿ ಪ್ರಚಲಿತಕ್ಕೆ ಬಂದ ಈ ಆ್ಯಪ್ ಅನ್ನು ಅತೀ ಹೆಚ್ಚು ಜನರು ಹುಡುಕಾಡಿ ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಚೆಸ್ , ರಮ್ಮಿ ಮುಂತಾದ ಆಟಗಳನ್ನು ಸರ್ಚ್ ಮಾಡಲಾಗಿದೆ.

ಓವರ್ ದ ಟಾಪ್ (OTT): ಮನರಂಜನೆಗಾಗಿ ಜನರು ಅಮೆಜಾನ್, ನೆಟ್ ಫ್ಲಿಕ್ಸ್ ಮೊದಲಾದ ಓಟಿಟಿ ಫ್ಯಾಟ್ ಫಾರ್ಮ್ ಗೆ ದಾಂಗುಡಿಯಿಟ್ಟಿದ್ದಾರೆ. ಇದರ ಬಗ್ಗೆ ಗೂಗಲ್ ನಲ್ಲಿ ಅತೀ ಹೆಚ್ಚು ಸರ್ಚ್ ಮಾಡಿದ್ದಾರೆ. ಮತ್ತೊಂದೆಡೆ ರಾಮಾಯಾಣ ಮತ್ತು ಮಹಾಭಾರತ ದೃಶ್ಯಕಾವ್ಯಗಳು ಅತೀ ಹೆಚ್ಚು ವೀಕ್ಷಕರನ್ನು ಪಡೆದುಕೊಂಡು ದಾಖಲೆ ಸೃಷ್ಟಿಸಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

-ಮಿಥುನ್ ಮೊಗೇರ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

11

ಪೊಲೀಸ್‌ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್‌ ಸ್ಟರ್‌ ಆದದ್ದೇಗೆ?

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ಸಲ್ಮಾನ್‌ ಖಾನ್‌ ಟು ಸಿಧು ಮೂಸೆವಾಲ: ಗುಂಡಿನ ದಾಳಿಗೆ ಬೆದರಿದ ಸೆಲೆಬ್ರಿಟಿಗಳಿವರು

ರೋಮಾಂಚನಗೊಳಿಸುವ ಡಿಸ್ನಿ ಲೋಕ…. ; ಇಲ್ಲಿ ಎಲ್ಲವೂ ಕಣ್ಣೆದುರಿಗೆ

Disneyland: ರೋಮಾಂಚನಗೊಳಿಸುವ ಡಿಸ್ನಿ ಲೋಕ….ಇಲ್ಲಿ ಎಲ್ಲವೂ ಕಣ್ಣೆದುರಿಗೆ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.