Updated: 07:36 PM IST
Wednesday 13 Aug, 2025
Updated: 07:36 PM IST
Wednesday 13 Aug, 2025
Team Udayavani
ಮೈಸೂರು : ತಾಂಬೂಲ ಪ್ರಶ್ನೆಗಿಂತ ಹೆಚ್ಚಿನ ತೀರ್ಮಾನ ಕೇಶವ ಕೃಪಾದಲ್ಲಿ ಆಗುತ್ತದೆ, ಅಲ್ಲಿಂದ ಬಂದ ಸಂದೇಶಗಳನ್ನ ಇವರು ಪಾಲಿಸುತ್ತಾರೆ. ಈ ರೀತಿಯ ವಾತಾವರಣದಿಂದ ದೇಶಕ್ಕೆ ಮುಂದೆ ಉತ್ತಮ ಭವಿಷ್ಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳೂರಿನ ಮಳಲಿ ಮಸೀದಿ ವಿಚಾರದಲ್ಲಿ ನಡೆಯುತ್ತಿರುವ ತಾಂಬೂಲ ಪ್ರಶ್ನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ತೀರ್ಮಾನ ಆಗುವುದು ಕೇಶವ ಕೃಪಾದಲ್ಲಿ.ಇನ್ನೂ ಒಂದು ವರ್ಷ ಈ ತರದ ಬೆಳವಣಿಗೆಗಳು ನಡೆಯುತ್ತಿರುತ್ತವೆ.ದೇಶದ ಶಾಂತಿ, ಸಾಮರಸ್ಯ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ ಎಂದರು.
ಬಿಎಸ್ ವೈ ಪುತ್ರ ವಿಜಯೇಂದ್ರ ಅವರಿಗೆ ಮೇಲ್ಮನೆ ಟಿಕೆಟ್ ತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೋ ತತ್ವದ ಕಥೆ ಹೇಳಿ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಇದು ಬಿಜೆಪಿಗೆ ತಿರುಗುಬಾಣವಾಗುವ ಲಕ್ಷಣಗಳು ಕಾಣುತ್ತಿದೆ. ಇದರಿಂದ ಬೇರೆ ಪಕ್ಷಕ್ಕೆ ಲಾಭ ನಷ್ಟದ ಪ್ರಶ್ನೆ ಇಲ್ಲ.ಆದರೆ ಸರ್ಕಾರದ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು. ಆಡಳಿತದ ಮೇಲು ಕೆಟ್ಟ ಪರಿಣಾಮ ಬೀರುವ ಲಕ್ಷಣ ಕಾಣುತ್ತಿದೆ. ಗುಂಪುಗಾರಿಕೆಗೆ ಇನ್ನು ಹೆಚ್ಚು ಅವಕಾಶವಾಗಬಹುದು ಎಂದರು.
ಜೆಡಿಎಸ್ ಹಿತ ಶತ್ರುಗಳಿಂದ ತಮಗೆ ಲಾಭ ಆಗುತ್ತದೆ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಅದ್ಯಾವುದು ಈಗ ನಡೆಯುವುದಿಲ್ಲ.ಪಕ್ಷದಲ್ಲಿರುವ ಹಿತ ಶತ್ರುಗಳು ಈಗ ನೇರ ಶತ್ರುಗಳಾಗಿದ್ದಾರೆ. ಅವರ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಅರಿವಾಗಿದೆ ಎಂದರು.
ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂದು ನಿನ್ನೆ ಸಿದ್ದರಾಮಯ್ಯ ಕೇಳಿದ್ದಾರೆ. ತಮ್ಮ ಕೊಡುಗೆ ಏನು ಎಂದು ಸಿದ್ದರಾಮಯ್ಯ ಹೇಳಲಿ.ರೈತರು ಆತ್ಮಹತ್ಯೆ ಮಾಡಿಕೊಂಡರು ಅದು ನಿಮ್ಮ ಕೊಡುಗೆ. 200 ಕುಟುಂಬಗಳ ಅನಾಥವಾಗಿ ಮಾಡಿದ್ದೆ ನಿಮ್ಮ ಕೊಡುಗೆ. ನಮ್ಮ ಕೊಡುಗೆ ಏನು ಎಂಬುದು ಮಂಡ್ಯ ಜನರಿಗೆ ಗೊತ್ತಿದೆ. ನಾನು ಮಂಡ್ಯವನ್ನು ಇನ್ನಷ್ಟು ಅಭಿವೃದ್ಧಿ ಮಾಡುತ್ತಿದ್ದೆ. ಅಷ್ಟರಲ್ಲಿ ನೀವು ಸರ್ಕಾರ ತೆಗೆದಿರಿ. ಎಂದು ಕಿಡಿ ಕಾರಿದರು.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿಚಾರದಲ್ಲಿ ಜೆಡಿಎಸ್ ನಿಲುವಿನ ವಿಚಾರ ಏನು ಎಂಬ ಪ್ರಶ್ನೆಗೆ ಉತ್ತರಿಸಿ, ಇದರ ಬಗ್ಗೆ ಆತುರ ಮಾಡುವುದು ಏನಿದೆ. ದೇವರು ಕನಸ್ಸಿನಲ್ಲೇನಾದರು ಬಂದು ನನ್ನ ಮೂಲ ಸ್ಥಾನ ಇಲ್ಲಿದೆ ಅಂತ ಹೇಳಿದ್ದಾನಾ?ಅದನ್ನ ಸರಿಪಡಿಸಿ ಅಂತ ಕೇಳಿದ್ದಾನಾ? ಇದನ್ನ ನೋಡಿದರೆ ಮತ್ತೊಂದು ವಿವಾದ ಶುರು ಆಗುವ ಲಕ್ಷಣ ಇದೆ. ಟಿಪ್ಪು ಕಾಲದಲ್ಲಿ ಹಲವು ಹಿಂದೂ ದೇವಾಲಯಗಳಿಗೆ ಭೂಮಿ ದಾನ ಮಾಡಿದ್ದ. ಇದು ಆ ಸಮಾಜಕ್ಕೆ ಕನಸ್ಸಿನಲ್ಲಿ ಬರುತ್ತೆ. ಆವಾಗ ಆ ಸಮಾಜಕ್ಕೆ ಭೂಮಿ ಬಿಟ್ಟುಕೊಡುತ್ತೀರಾ? ಹಲವು ದೇವಾಲಯಗಳಿಗೆ ಟಿಪ್ಪು ಭೂಮಿ ನೀಡಿರೋ ಉದಾಹರಣೆ ಇದೆ. ಆವರೂ ಕೂಡಾ ಬಂದು ಕೇಳಿದರೆ ನೀವು ಕೊಡುತ್ತೀರಾ? ಇದನ್ನ ಬಿಟ್ಟು ಜನರ ಬದುಕನ್ನ ನೋಡಿ ಎಂದರು.
ಇದನ್ನೂ ಓದಿ : ಚಿಕ್ಕಮಗಳೂರು: ತಂದೆ – ಮಗನ ಪಬ್ ಜಿ ಜಗಳ; ತಾಯಿಯ ಕೊಲೆಯಲ್ಲಿ ಅಂತ್ಯ
10 minutes ago
1 hour ago
3 hours ago
4 hours ago
6 hours ago
10 hours ago
11 hours ago
11 hours ago
11 hours ago
11 hours ago