CONNECT WITH US  

ಪೆಟ್ಟು ತಿಂದರೂ ನರಿ ಬುದ್ದಿ ಬಿಡದ ಪಾಕ್‌ :ಗಡಿಯಲ್ಲಿ ಗುಂಡಿನ ದಾಳಿ 

ಜಮ್ಮು : ಭಾರತೀಯ ವೀರ ಯೋಧರು  ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಏಳು ಉಗ್ರರ ಶಿಬಿರಗಳ ಮೇಲೆ ಬುಧವಾರ ರಾತ್ರಿಯಿಂದ ಗುರುವಾರ ನಸುಕಿನ ಜಾವದವರೆಗೆ ಅತ್ಯಂತ ರಹಸ್ಯವಾಗಿ "ಸರ್ಜಿಕಲ್‌ ಸ್ಟ್ರೈಕ್‌' (ಸೀಮಿತ ದಾಳಿ) ನಡೆಸಿ 38 ಉಗ್ರರನ್ನು ಸಂಹಾರ ಮಾಡಿ ಭಾರಿ ಶಾಕ್‌ ನೀಡಿದ ಬಳಿಕವೂ ಪಾಕ್‌ ನರಿ ಬುದ್ದಿ ಮುಂದುವರಿಸಿದ್ದು ಶುಕ್ರವಾರ ನಸುಕಿನ ವೇಳೆ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಸೇನಾ ಪಡೆಗಳನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. 

ಜಮ್ಮುವಿನ  ಅಂಖೂರ್‌ ಸೆಕ್ಟರ್‌ನ ಪಲ್ಲಾನ್‌ವಾಲಾ, ಛಾಪ್ರಿಯಲ್‌ ಮತ್ತು ಸಮ್ನಮ್‌ನ ಗಡಿ ನಿಯಂತ್ರಣ ರೇಖೆಯಲ್ಲಿ  ನಡುರಾತ್ರಿ ಕಳೆದ ಬಳಿಕ 1 ಗಂಟೆಗಳ ಕಾಲ ಸಣ್ಣ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಲಾಗಿದೆ. ದಾಳಿಯಿಂದಾಗಿ ಯಾವುದೇ ಪ್ರಾಣ ,ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. 

ಸಪ್ಟೆಂಬರ್‌ ತಿಂಗಳಿನಲ್ಲಿ ಪಾಕ್‌ ನಡೆಸಿದ 5 ನೇ ಗುಂಡಿನ ದಾಳಿ ಇದಾಗಿದ್ದು, ಕಳೆದ 36 ಗಂಟೆಗಳ ಒಳಗೆ ನಡೆದ 3 ನೇ ದಾಳಿ ಯಾಗಿದೆ.  

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನಾ ಪಡೆಗಳು ಸರ್ಜಿಕಲ್‌ ಸ್ಟ್ರೈಕ್‌ ನಡೆಸಿ 38 ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಅಂಖೂರ್‌ ಸೆಕ್ಟರ್‌ ನಲ್ಲಿ  ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. 

Trending videos

Back to Top