CONNECT WITH US  

ಕುಸ್ತಿ ಹೆಣ್ಣು ಮಕ್ಕಳಿಗೇಕೆ? ಕಂಚು ಗೆದ್ದ ಸಾಕ್ಷಿಗಿತ್ತು ವಿರೋಧ !

ಹೊಸದಿಲ್ಲಿ : ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಪದಕ ಗೆಲ್ಲುವುದಕ್ಕೆ ವಿಫ‌ಲವಾಗುತ್ತಿದ್ದ ವೇಳೆಮಹಿಳೆಯರ 58 ಕೆ.ಜಿ. ವಿಭಾಗದ ಫ್ರೀ ಸ್ಟೈಲ್‌ ಕುಸ್ತಿ ಪಂದ್ಯಾಟದಲ್ಲಿ ಕಂಚು ಗೆದ್ದು ಇಡೀ ದೇಶವೇ ಹೆಮ್ಮೆ ಪಡುವಂತ ಸಾಧನೆ ಮಾಡಿರುವ 23 ರ ಹರೆಯದ ಸಾಕ್ಷಿ ಮಲಿಕ್‌ ಅವರಿಗೆ ಆರಂಭದಲ್ಲಿ ಕುಸ್ತಿ ಪಟುವಾಗಲು ವಿರೋಧ ವ್ಯಕ್ತವಾಗಿತ್ತಂತೆ. 

ಸಾಕ್ಷಿ 12 ನೇ ವಯಸ್ಸಿಗೆ ಕುಸ್ತಿ ಅಂಗಣಕ್ಕಿಳಿದು ಗುರು ಈಶ್ವರ್‌ ದಹಿಯಾ ಅವರ ಬಳಿ ಕಠಿಣ ಅಭ್ಯಾಸ ಶುರುಮಾಡಿದ್ದರು. ಆದರೆ ಈ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಹೆಣ್ಣು ಮಕ್ಕಳು ಅಖಾಡಕ್ಕಿಳಿದು ಕುಸ್ತಿ ಆಡುವುದು ನಮ್ಮ ಸಂಪ್ರದಾಯವಲ್ಲ. ಇದಕ್ಕೆ ಬೆಂಬಲ ನೀಡಬೇಡಿ ಎಂದು ವಿರೋಧ ವ್ಯಕ್ತಪಡಿಸಿದ್ದರಂತೆ. 

ಸಾಕ್ಷಿ ಪರಿಚಯ 
23 ರ ಹರೆಯದ ಸಾಕ್ಷಿ ಹರ್ಯಾಣದ ರೋಹಟಕ್‌ನಲ್ಲಿ ಜನಿಸಿದ್ದರು . ಅವರ ತಂದೆ ದೆಹಲಿ ಸಾರಿಗೆ ನಿಯಮದ ಉದ್ಯೋಗಿ ಯಾಗಿದ್ದರು. 2010 ರಲ್ಲಿ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದ ಸಾಕ್ಷಿ, 2014 ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದು  ಕ್ರೀಡಾರಂಗದಲ್ಲಿ ಗಮನ ಸೆಳೆದಿದ್ದರು. 

ಸಾಕ್ಷಿ ಸಾಧನೆಗೆ ನಗದು ಪ್ರೋತ್ಸಾಹ
ಸಾಕ್ಷಿ ಕಂಚು ಗೆದ್ದ ಬಳಿಕ ಸಾಧನೆಗೆ ಪ್ರೋತ್ಸಾಹವಾಗಿ ಹರ್ಯಾಣ ಸರಕಾರ 2 ಕೋಟಿ ರೂಪಾಯಿ, ರೈಲ್ವೇ ಇಲಾಖೆ 50 ಲಕ್ಷ ರೂ.ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ 50 ಲಕ್ಷ ರೂ,ಜೆಎಸ್‌ಎಚ್‌ ಗ್ರೂಪ್‌ 15 ಲಕ್ಷ ಮತ್ತು  ನಟ ಸಲ್ಮಾನ್‌ ಖಾನ್‌ 1.01 ಲಕ್ಷ ನಗದು ಹಣ ನೀಡುವುದಾಗಿ ಘೋಷಿಸಿದ್ದಾರೆ. 

Trending videos

Back to Top