CONNECT WITH US  

ಪೂಜಾ ಸಮಯ

ತನ್ನ ಮೊದಲ ಚಿತ್ರಕ್ಕೇ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಪೋಷಕ ನಟಿ ಪಡೆದ ನಟಿ ಎಂದರೆ ಅದು ಪೂಜಾ. ತಿಥಿ ಚಿತ್ರದಲ್ಲಿ ನಟಿಸಿದ ಆಕೆ, ಆ ನಂತರ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಕ್ರಮೇಣ ಮೂಕ ಹಕ್ಕಿ ಎಂಬ ಚಿತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಂತು. ಈಗ ಆ ಚಿತ್ರ ಮುಗಿದು, ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಕಳೆದ ತಿಂಗಳೇ ಚಿತ್ರ ಬಿಡುಗಡೆಯಾಗಬೇಕಿತ್ತು. ಸ್ವಲ್ಪ ತಡವಾದ ಕಾರಣ ಈ ತಿಂಗಳು ಬಿಡುಗಡೆಯಾಗುತ್ತಿದೆ. ತಿಥಿ ಬಿಡುಗಡೆಯಾಗಿ ಒಂದೂವರೆ ವರ್ಷಗಳೇ ಆಗಿವೆ. ಇಷ್ಟು ದಿನಗಳಲ್ಲಿ ಪೂಜಾ ಯಾವೊಂದು ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ತಡವಾಗಿಯಾದರೂ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಈ ಗ್ಯಾಪ್‌ ಆಯಿತು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಕುರಿತು ಅವರನ್ನು ಕೇಳಿದರೆ, ಅವರ ಉತ್ತರ ಹೀಗಿದೆ...
""ಹಾಗೇ ಲೆಕ್ಕ ಹಾಕಿದರೆ ಸಾಕಷ್ಟು ಕಥೆಗಳು ಬಂದವು. ಆದರೆ, ಬಂದ ಯಾವ ಕಥೆಗಳೂ ಅಷ್ಟೊಂದು ಇಷ್ಟವಾಗಲಿಲ್ಲ.

ಕೆಲವು ಇಷ್ಟವಾದರೆ, ಪಾತ್ರದಲ್ಲೇನೋ ಕೊರತೆ ಕಾಣುತ್ತಿತ್ತು. ಮಾಡೋದಾ, ಬಿಡೋದಾ ಎಂಬ ಗೊಂದಲ ಒಂದು ಕಡೆ, ಕಾಲೇಜು ಬಂಕ್‌ ಮಾಡಿದರೆ ಹೇಗೆ ಎಂಬ ಗೊಂದಲ ಮತ್ತೂಂದು ಕಡೆ. ಹಾಗಾಗಿ ನನಗಿಷ್ಟ ಆಗದ್ದನ್ನು ಕೈಬಿಟ್ಟೆ. ಆದರೆ, ಮೂಕಹಕ್ಕಿ ಕಥೆ ಕೇಳಿದಾಗ ಇಷ್ಟವಾಯ್ತು. ಆದರೆ, ಮತ್ತದೇ ಕಾಸ್ಟೂéಮ್‌, ಅದೇ ರೀತಿಯ ಪಾತ್ರವಿದೆಯೆಲ್ಲಾ ಅಂತೆನಿಸಿತು. ಡಿಗ್ಲಾಮ್‌ ಪಾತ್ರವಿದ್ದರೂ, ಕಥೆಯಲ್ಲಿ ಹಿಡಿತವಿದೆ. ಗೌರಿ ಎಂಬ ಪಾತ್ರದಲ್ಲಿ ಹೊಸತೇನೋ ಇದೆ ಅನಿಸಿತು. ಒಪ್ಪಿದೆ. ಮೂಕ ಹಕ್ಕಿ ನನ್ನ ಬದುಕಿನ ಮತ್ತೂಂದು ಮಜಲು'' ಎನ್ನುತ್ತಾರೆ ಪೂಜಾ.

ಹಾಗಾದರೆ, ಪೂಜಾ ಗ್ಲಾಮರಸ್‌ ಪಾತ್ರಗಳ ನಿರೀಕ್ಷೆಯಲ್ಲೇನಾದರೂ ಇದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ತನಗೆ ಗ್ಲಾಮರ್‌ ಮುಖ್ಯವಲ್ಲ, ಪಾತ್ರ ಮುಖ್ಯ ಎಂಬ ಉತ್ತರ ಅವರಿಂದ ಬರುತ್ತದೆ. "ಬರೀ ಒಂದೇ ರೀತಿಯ ಪಾತ್ರ, ಕಥೆಗಳಿಗೆ ಜೋತು ಬೀಳಲು ನನಗಿಷ್ಟವಿಲ್ಲ. ನಾನೊಬ್ಬ ನಟಿ, ಹೊಸ ತರಹದ ಪಾತ್ರಗಳನ್ನು ಬಯಸೋದು ಸಹಜ. ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವುದು ನನಗಿಷ್ಟ. ಈಗ ನೀವು ಕರೆ ಮಾಡಿದ ಚಂದಾದಾರರು ಬಿಜಿಯಾಗಿದ್ದಾರೆ ಎಂಬ ಚಿತ್ರದಲ್ಲಿ ಬೇರೆ ರೀತಿಯ ಪಾತ್ರವಿದೆ. ಒಳ್ಳೇ ಕಥೆ, ದೊಡ್ಡ ತಾರಾಬಳಗದಲ್ಲಿ ನಾನೂ ಇದ್ದೇನೆ. ಅಲ್ಲಿ ಜನರ ಮನಸ್ಸಿಗೆ ಹತ್ತಿರವಾಗುವಂತಹ ಪಾತ್ರ ನನ್ನದು' ಎಂದುತ್ತರಿಸುತ್ತಾರೆ ಪೂಜಾ.

ಒಂದು ಚಿತ್ರ ಬಿಡುಗಡೆ ಮತ್ತು ಇನ್ನೊಂದು ಚಿತ್ರದಲ್ಲಿ ನಟಿಸುವುದಕ್ಕೆ ಎದುರು ನೋಡುತ್ತಿರುವ ಪೂಜಾ ಸದ್ಯದಲ್ಲೇ ಇನ್ನೊಂದು ಚಿತ್ರದಲ್ಲೂ ನಟಿಸುವ ಸಾಧ್ಯತೆ ಇದೆ. ಆದರೆ, ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ""ಇತ್ತೀಚೆಗೆ ಕುರಿಕಳ್ಳ ಎಂಬ ಕಥೆ ಕೇಳಿದ್ದೇನೆ. ಒನ್‌ಲೈನ್‌ ನನಗಿಷ್ಟವಾಗಿದೆ. ಸ್ಕ್ರಿಪ್ಟ್ ಪಡೆದು, ಓದಿದ ಬಳಿಕ ನನ್ನ ನಿರ್ಧಾರ ಹೇಳ್ತೀನಿ.

ಮೊದಲೇ ಹೇಳಿದಂತೆ  ತಿಥಿ ಬಳಿಕ ಬಂದಿದ್ದು ಬಂದ ಸಾಕಷ್ಟು ಕಥೆ ಒಪ್ಪದಿರಲು ಕಾರಣ, ನಾನು ಮಾಡುವ ಪಾತ್ರದಲ್ಲಿ ಏನಾದರೊಂದು ವಿಶೇಷತೆ ಇರಬೇಕು. ಹಾಗಾಗಿ ಬಿಟ್ಟೆ. ಈಗ ಮಾಡಿರುವ ಎರಡು ಚಿತ್ರಗಳಲ್ಲಿ ಆ ವಿಶೇಷ ಗುಣಗಳಿವೆ. ಇನ್ನೆರಡು ಕಥೆ ಬಂದಿವೆ. ಇನ್ನು ಅಂತಿಮವಾಗಿಲ್ಲ'' ಎನ್ನುತ್ತಾರೆ ಪೂಜಾ.

Trending videos

Back to Top