ಕಾಂಗ್ರೆಸ್ ತೊರೆದ ಗುಲಾಂ ನಬಿ ಆಜಾದ್ ರಿಂದ ಹೊಸ ಪಕ್ಷ: ಇಂದು ಬೃಹತ್ ರ್ಯಾಲಿ
Team Udayavani, Sep 4, 2022, 10:16 AM IST
ಶ್ರೀನಗರ: ಕಾಂಗ್ರೆಸ್ ಪಕ್ಷದಿಂದ ದೂರ ಬಂದಿರುವ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಅವರು ಇದೀಗ ಹೊಸ ರಾಜಕೀಯ ಅಧ್ಯಾಯ ಬರೆಯಲು ಮುಂದಾಗಿದ್ದಾರೆ. ಇದೀಗ ತಮ್ಮದೇ ಹೊಸ ಪಕ್ಷವೊಂದನ್ನು ರಚಿಸಲು ಹೊರಟಿರುವ ಅವರು ತವರು ರಾಜ್ಯ ಜಮ್ಮು ಕಾಶ್ಮೀರದಲ್ಲಿ ಇಂದು ಮೊದಲ ಘಟಕವನ್ನು ಸ್ಥಾಪಿಸಲಿದ್ದಾರೆ.
73 ವರ್ಷದ ಗುಲಾಂ ನಬಿ ಅಜಾದ್ ಅವರು ಇಂದು ಬೆಳಗ್ಗೆ 11 ಗಂಟೆಗೆ ಜಮ್ಮುವಿಗೆ ಬರಲಿದ್ದಾರೆ. ವಿಮಾನ ನಿಲ್ದಾಣದಿಂದ ಬೆಂಬಲಿಗರೊಂದಿಗೆ ಅವರು ಸೈನಿಕ್ ಫಾರ್ಮ್ಸ್ ಗೆ ತೆರಳಲಿದ್ದಾರೆ. ಅಲ್ಲಿ ಸುಮಾರು 20 ಸಾವಿರ ಮಂದಿಯ ಬೆಂಬಲಿಗರ ರ್ಯಾಲಿಯಲ್ಲಿ ಅವರು ಭಾಷಣ ಮಾಡಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಅವರು ತಮ್ಮ ಹೊಸ ರಾಷ್ಟ್ರೀಯ ಪಕ್ಷದ ಕುರಿತು ಮಾತನಾಡಲಿದ್ದಾರೆ.
ಕಾಂಗ್ರೆಸ್ ಪಕ್ಷದೊಂದಿಗೆ ಸುಮಾರು ಐದು ದಶಕಗಳ ನಂಟನ್ನು ಕಡಿದುಕೊಂಡಿರುವ ಗುಲಾಂ ನಬಿ ಆಜಾದ್, ಕಳೆದ ಆಗಸ್ಟ್ 26ರಂದು ಪಕ್ಷ ತೊರೆದಿದ್ದರು. ಅಲ್ಲದೆ ಕಾಂಗ್ರೆಸ್ ಪಕ್ಷವು ಸಮಗ್ರವಾಗಿ ನಾಶವಾಗಿದೆ ಎಂದಿದ್ದರು. ಪಕ್ಷದೊಳಗಿನ ಸಲಹಾ ಕಾರ್ಯವಿಧಾನವನ್ನು ರಾಹುಲ್ ಗಾಂಧಿ ನಾಶ ಮಾಡಿದ್ದಾರೆ ಎಂದು ಆಜಾದ್ ದೂರಿದ್ದರು.
ಇದನ್ನೂ ಓದಿ:2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 50 ಸೀಟು ಮಾತ್ರ: ನಿತೀಶ್ ಕುಮಾರ್
ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಗೆ ತೀವ್ರ ಹಿನ್ನಡೆಯಾಗಿದೆ. ಮಾಜಿ ಸಚಿವರು, ಶಾಸಕರು ಸೇರಿ ಡಜನ್ ಗೂ ಹೆಚ್ಚು ಪ್ರಭಾವಿ ನಾಯಕರು, ನೂರಾರು ಜಿಲ್ಲಾ- ತಾಲೂಕು ಪಂಚಾಯತ್ ಮಟ್ಟದ ಸದಸ್ಯರು, ಬ್ಲಾಕ್ ಲೆವೆಲ್ ನಾಯಕರು, ಪಾಲಿಕೆ ಕಾರ್ಪೋರೇಟರ್ ಗಳು ಕಾಂಗ್ರೆಸ್ ತೊರೆದು, ಆಜಾದ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TPG Passes Away: ಬಿಪಿಎಲ್ ಸಮೂಹ ಸಂಸ್ಥೆ ಸ್ಥಾಪಕ ಟಿ.ಪಿ.ಗೋಪಾಲನ್ ನಂಬಿಯಾರ್ ನಿಧನ
Deepavali Celebration: ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
Rocket launcher: ತಮಿಳುನಾಡಿನಲ್ಲಿ ಆತಂಕ ಸೃಷ್ಟಿಸಿದ ರಾಕೆಟ್ ಲಾಂಚರ್… ಪೊಲೀಸರಿಂದ ತನಿಖೆ
Mumbai: ಮೊಬೈಲ್ ಕಳ್ಳರ ಗ್ಯಾಂಗ್ ಸೆರೆ- 70 ಮೊಬೈಲ್, 4.70 ಲಕ್ಷ ರೂಪಾಯಿ ನಗದು ವಶಕ್ಕೆ!
2 ದಿನದ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.