ಕೃಷಿಯೊಂದಿಗೆ ಕೋಮು ಸೌಹಾರ್ದತೆ ಮೆರೆಯುವ ಅರುಣ್ ಡಿ’ಸೋಜಾ
Team Udayavani, Jul 24, 2018, 6:00 AM IST
ಶಿರ್ವ: ಕ್ರಿಶ್ಚಿಯನ್ ಧರ್ಮದವರಾಗಿದ್ದರೂ ಕೂಡ ಶಿರ್ವ ಸಮೀಪದ ಪಿಲಾರುಕಾನ ಶ್ರೀ ಮಹಾಲಿಂಗೇಶ್ವರನ ಪರಮ ಭಕ್ತನಾಗಿ ಶ್ರೀ ದೇಗುಲದ ಸೇವಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಆದಕ್ಕಾಗಿಯೇ ಆರು ಭಟ್ಟರೆಂದೇ ಪಸಿದ್ಧಿ ಪಡೆದಿರುವ ಅರುಣ್ ಡಿ’ಸೋಜಾ ಪಿಲಾರು ಕರಾವಳಿಯಲ್ಲಿ ಕೋಮು ಸೌಹಾರ್ದತೆ ಮೆರೆದಿದ್ದಾರೆ.
ಪ್ರತಿದಿನ ಪಿಲಾರುಕಾನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆಲಸ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದು ದೇವಸ್ಥಾನದ ಪೂಜಾ ಕೈಂಕರ್ಯಗಳಲ್ಲಿ ಅರ್ಚಕರಿಗೆ ಸಹಾಯ ಮಾಡುತ್ತಿದ್ದಾರೆ. ಕಳೆದ ಐದಾರು ವರ್ಷಗಳಿಂದ ದೇವಸ್ಥಾನದ ದೇವಕಾರಿಗಳು ಕೆಲಸಬಿಟ್ಟಿದ್ದು ಅಂದಿನಿಂದ ದೇವಸ್ಥಾನದ ಸ್ವತ್ಛತೆಯ ಕಾರ್ಯವನ್ನೂ ನಡೆಸುತ್ತಿದ್ದಾರೆ.
ರಾಮಾಯಣ, ಮಹಾಭಾರತ, ಭಗವದ್ಗೀತೆಯ ಸಂಸೃತ ಶೋಕಗಳನ್ನು ನಿರರ್ಗಳವಾಗಿ ಹೇಳುವ ಇವರಿಗೆ ಗೊತ್ತಿಲ್ಲದ ಹಿಂದೂ ಧಾರ್ಮಿಕ ಆಚಾರ ವಿಚಾರಗಳೇ ಇಲ್ಲ. ಇವರ ಕಲೆ, ಧಾರ್ಮಿಕ ಹಾಗೂ ಸಮಾಜಸೇವೆಯನ್ನು ಗುರುತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಕೂಡ ಇವರನ್ನು ಸಮ್ಮಾನಿಸಿದ್ದಾರೆ.
ಉತ್ತಮ ಕೃಷಿಕ
ಉಡುಪಿ ಜಿಲ್ಲೆಯ ಶಿರ್ವ ಗ್ರಾಮದ ಗಡಿ ಭಾಗದಲ್ಲಿರುವ ಪಿಲಾರು ಮಿತ್ತಬೆಟ್ಟುವಿನಲ್ಲಿ ಹಿರಿಯರಿಂದ ಬಂದ ಸುಮಾರು 15 ಎಕ್ರೆ ಜಾಗದಲ್ಲಿ ತೆಂಗು,ಅಡಕೆ,ಬಾಳೆ, ಭತ್ತ, ಕರಿಮೆಣಸು, ಮಲ್ಲಿಗೆ ಹಾಗೂ ವಿವಿಧ ತರಕಾರಿಗಳನ್ನು ಬೆಳೆಸಿ ಕೃಷಿ ಮಾಡುತ್ತಿರುವ ಪ್ರಗತಿಪರ ಕೃಷಿಕ, ಸಮಾಜ ಸೇವಕ,ಯಕ್ಷಗಾನ ಕಲಾವಿದ ಅರುಣ್ ಡಿ’ಸೋಜಾ ಪಿಲಾರು ಯಾನೆ ಆರು ಭಟ್ರಾ. ಸಣ್ಣ ವಯಸ್ಸಿನಿಂದಲೇ ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಪಾಸ್‌ಪೋರ್ಟ್‌ಮಾಡಿ ವಿದೇಶಕ್ಕೆಂದು ಹೊರಟವರು ಮುಂಬೈನಿಂದಲೇ ವಾಪಾಸು ಬಂದು ಕೃಷಿ ಕಾರ್ಯದಲ್ಲಿ ತೊಡಗಿಕೊಂಡು ಬಿಡುವಿನ ವೇಳೆಯಲ್ಲಿ ದೇವಸ್ಥಾನದಲ್ಲಿ ದೇವರ ಸೇವೆ ಮಾಡುತ್ತಿದ್ದರು.ತನ್ನ ಕೃಷಿ ಭೂಮಿಯಲ್ಲಿ ಸುಡುಮಣ್ಣು ಹಾಗೂ ಸಾವಯವ ಗೊಬ್ಬರವನೇ° ಬಳಸುವ ಇವರು ಅದಕ್ಕೇಂದೆ ದನಗಳೊಂದಿಗೆ ಎಮ್ಮೆಯನ್ನೂ ಸಾಕಿದ್ದಾರೆ.
ಯಕ್ಷಗಾನ ಅಭಿಮಾನಿ
ಕೃಷಿ,ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರು ತುಳುನಾಡಿನ ಪಾಡ್ದನ ಹಾಗೂ ಜಾನಪದ ಕಂಗೀಲು ನೃತ್ಯಪ್ರವೀಣರು. ಇವರು ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ಅಭಿಮಾನಿ.ಪಂಚವಟಿ ಯಕ್ಷಗಾನ ಪ್ರಸಂಗದಲ್ಲಿ ವಿಭೀಷಣ ಪಾತ್ರ ಮಾಡಿ ನೀತಿ ನಿರೂಪಿಸಿದ್ದಕ್ಕಾಗಿ ಕಟೀಲು ಅಸ್ರಣ್ಣರಿಂದ ಪುರಸ್ಕೃತಗೊಂಡಿದ್ದರು. ಶಿರ್ವ ಹಾಗೂ ಆಸುಪಾಸಿನ ಹಲವು ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಪುರಸ್ಕರಿಸಿವೆ. ಪತ್ನಿ ಇಮಿಲಿಯಾ ಮತ್ತು ಮಗಳು ಬಿಎಸ್ಸಿ ನರ್ಸಿಂಗ್ ಮಾಡಿರುವ ಎವಿಟಾ ಡಿ’ಸೋಜಾರವರೊಂದಿಗಿನ ಸುಖೀ ಸಂಸಾರ ಇವರದು.
ಪಿಲಾರುಕಾನ ಶ್ರೀಮಹಾಲಿಂಗೆಶ್ವರ ಮಹಾಗಣಪತಿ ದೇವರ ಮೇಲಿನ ಭಕ್ತಿಯಿಂದ ದೇವರ ಸೇವೆಯನ್ನು ಶೃದ್ಧಾ ಭಕ್ತಿಪೂರ್ವಕವಾಗಿ ನಿರ್ವಹಿಸುತ್ತಿದ್ದೇನೆ. ಕೃಷಿ ಕಾರ್ಯದೊಂದಿಗೆ ದೇವರ ಸೇವೆ ಮಾಡುವುದರಿಂದ ಧನ್ಯತಾ ಭಾವ ಮೂಡಿದೆ.
– ಅರುಣ್ ಡಿ’ಸೋಜಾ ಪಿಲಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.