ಜಾತಿಗಳೆಂಬ ವಾತಾವರಣದಿಂದ ಹೊರಬನ್ನಿ


Team Udayavani, May 16, 2017, 12:24 PM IST

mys1.jpg

ಮೈಸೂರು: ಜಾತಿಗಳೆಂಬುದು ಭಯಾನಕ. ಮೊದಲು ಅಂತಹ ವಾತಾವರಣದಿಂದ ಹೊರಬರಬೇಕು ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ವಿಜಯಲಕ್ಷ್ಮೀ ಪ್ರಕಾಶನ ಹಾಗೂ ಬಳಗ ಮೈಸೂರು ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ನೀಲಗಿರಿ ತಳವಾರ ಹಾಗೂ ಡಾ.ಯೋಗೇಶ್‌ ಸಂಪಾದಿಸಿರುವ ಬಸವರಾಜು ಕುಕ್ಕರಹಳ್ಳಿ ಕಥಾಲೋಕ ಪುಸ್ತಕ ಲೋಕಾರ್ಪಣೆ ಮತ್ತು ಕಥಾಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮಲ್ಲಿ 1200ಕ್ಕೂ ಹೆಚ್ಚು ಜಾತಿಗಳು ಸೃಷ್ಟಿಯಾಗಿವೆ. ಈ ಜಾತಿಗಳ ಹೆಸರು ಕೇಳಿದರೆ ಭಯವಾಗುತ್ತದೆ. ಕಲ್ಲು, ಮಣ್ಣು, ಮರ-ಗಿಡಗಳು ಪವಿತ್ರ. ಆದರೆ, ಮನುಷ್ಯ ಪವಿತ್ರ ಅಲ್ಲ ಎಂಬಂತಹ ವಾತಾವರಣ ಸೃಷ್ಟಿಯಾಗಿದೆ. ಇಂತಹವುಗಳಿಂದ ಮೊದಲು ಹೊರ ಬರಬೇಕು. ಇನ್ನೊಬ್ಬರ ಜೀವನ ಸುಖದಾಯಕಗೊಳಿಸುವುದೇ ಸಾಹಿತ್ಯ. ಅದರಲ್ಲೂ ಕಥಾ ಸಾಹಿತ್ಯಗಳು ಎಲ್ಲರನ್ನೂ ಸಂತೋಷವಾಗಿಯೇ ಇಡುತ್ತವೇ ಎಂದರು.

ನಮ್ಮ ಮನಸ್ಸನ್ನು ಸಂತೋಷಗೊಳಿಸಿಕೊಳ್ಳಲು ಕಥೆಗಳನ್ನು ಬರೆಯುತ್ತೇವೆ. ಕುಕ್ಕರಹಳ್ಳಿ ಬಸವರಾಜು ನನ್ನ ಹಳೇ ಸ್ನೇಹಿತರು. ಅವರ ಕಥೆಗಳನ್ನು ಓದಿದ್ದೇನೆ. ಟೀಕೆ ಇಲ್ಲದೇ ತಮ್ಮ ಕೃತಿಗಳ ಮೂಲಕ ಮನೆ ಮಾತಾಗಿದ್ದಾರೆ. ವಾಗ್ವಾದ ಸೃಷ್ಟಿಸದಂತೆ ಕೃತಿಗಳನ್ನು ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಕನ್ನಡ ಸಾಹಿತ್ಯ ಅಂತಃಕರಣಕ್ಕೆ ಹೆಸರು ವಾಸಿಯಾಗಿದೆ. ಕುವೆಂಪು ಕನ್ನಡ ಸಾಹಿತ್ಯವನ್ನು ದಿಗಂತಕ್ಕೇರಿಸಿದರು. ಅದರಲ್ಲೂ ಗ್ರಾಮೀಣ ಲೇಖಕರು ಕನ್ನಡಕ್ಕೆ ಶಕ್ತಿ ತುಂಬಿದ್ದಾರೆ. ಗ್ರಾಮೀಣ ಲೇಖಕರಿಂದಲೇ ಕನ್ನಡ ಉಳಿದಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.

ವಿಮರ್ಶಕ ಡಾ.ಎಚ್‌.ಎಸ್‌.ರಾಘವೇಂದ್ರ ರಾವ್‌ ಕೃತಿ ಬಿಡುಗಡೆ ಮಾಡಿದರು. ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಅಬ್ದುಲ್‌ ರಶೀದ್‌, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಡಾ.ಪ್ರೀತಿ ಶ್ರೀಮಂಧರಕುಮಾರ್‌, ಲೇಖಕ ಬಸವರಾಜು ಕುಕ್ಕರಹಳ್ಳಿ, ಡಾ.ನೀಲಗಿರಿ ತಳವಾರ, ಡಾ.ಎನ್‌. ಯೋಗೇಶ್‌, ಭವಾನಿ ಸಂಜಯ್‌ ಇನ್ನಿತರರು ಇದ್ದರು.

ಟಾಪ್ ನ್ಯೂಸ್

Waqf

Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು

Pro-KABADDI

Pro Kabaddi: ದಬಾಂಗ್‌ ಡೆಲ್ಲಿಯನ್ನು ಕೆಡವಿದ ಪಾಟ್ನಾ ಪೈರೆಟ್ಸ್‌

Rohith

India Vs Newzeland Test: ವಾಂಖೇಡೆ: ರೋಹಿತ್‌ ಶರ್ಮಾ ಪಡೆಗೆ ಅಗ್ನಿಪರೀಕ್ಷೆ

KrishnaMata–baleendra

Deepavali: ಕರಾವಳಿಯಲ್ಲಿ ಕಳೆಗಟ್ಟಿದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ

Myyar-Kambala

Kambala: ಹಲವು ವರ್ಷಗಳ ಬಳಿಕ ಪುನರಾರಂಭ; ಮಿಯ್ಯಾರಿನಲ್ಲಿ ಕಂಬಳ ಕೋಣಗಳಿಗೆ ತರಬೇತಿ

Coastal-Rain

Heavy Rain: ಕರಾವಳಿಯಲ್ಲಿ ಸಂಜೆಯಾಗುತ್ತಲೇ ಮಳೆ; ಬೆಳ್ತಂಗಡಿಯಲ್ಲಿ ಮನೆ ಕುಸಿತ

S.Thangadagi

Golden Jubilee: ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ 1ಲಕ್ಷ ರೂ.ಗೆ ಏರಿಕೆ: ಸಚಿವ ತಂಗಡಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Hunsur: ಆಟೋ-ಬೈಕ್ ಡಿಕ್ಕಿ; ಸವಾರ ಸಾವು

ED-Raid

MUDA Case: ಜಾರಿ ನಿರ್ದೇಶನಾಲಯದಿಂದ ನೂರಾರು ಪುಟಗಳ ದಾಖಲೆ ವಶ

JDS

By Election: ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿ: ಜಿಟಿಡಿ ಹೆಸರು ಔಟ್‌, ಪುತ್ರ ಎಂಟ್ರಿ 

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

Prathap-Simha

Waqf Property: ವಕ್ಫ್ ಆಸ್ತಿ ಅಕ್ಬರ್, ಔರಂಗಜೇಬ್‌ ಬಿಟ್ಟುಹೋದ ಆಸ್ತಿಯಾ?: ಪ್ರತಾಪ್‌ ಸಿಂಹ

MUST WATCH

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

ಹೊಸ ಸೇರ್ಪಡೆ

Waqf

Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು

Pro-KABADDI

Pro Kabaddi: ದಬಾಂಗ್‌ ಡೆಲ್ಲಿಯನ್ನು ಕೆಡವಿದ ಪಾಟ್ನಾ ಪೈರೆಟ್ಸ್‌

Rohith

India Vs Newzeland Test: ವಾಂಖೇಡೆ: ರೋಹಿತ್‌ ಶರ್ಮಾ ಪಡೆಗೆ ಅಗ್ನಿಪರೀಕ್ಷೆ

Suside-Boy

Kasaragodu: ಅಯೋಧ್ಯೆಯಿಂದ ಶಬರಿಮಲೆ ತೀರ್ಥಾಟನೆ ವೇಳೆ ಸಾವು

Missing

Mangaluru: ಮನೆಯಿಂದ ನಾಪತ್ತೆಯಾದ ವಿದ್ಯಾರ್ಥಿನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.