5 ಕೋಟಿ ರೂ. ವಹಿವಾಟಿಗಿಂತ ಹೆಚ್ಚಿನ ಉದ್ದಿಮೆಗೆ ಇ-ಇನ್‌ವಾಯ್ಸ ಕಡ್ಡಾಯ
Team Udayavani, Oct 12, 2022, 8:05 AM IST
ನವದೆಹಲಿ: ಮುಂದಿನ ಜ.1ರಿಂದ ವಾರ್ಷಿಕವಾಗಿ 5 ಕೋಟಿ ರೂ.ಗಳಿಗಿಂತ ಹೆಚ್ಚು ವಹಿವಾಟು ಇರುವ ಉದ್ದಿಮೆಗಳಿಗೆ ಇ-ಇನ್‌ವಾಯ್ಸ ಸಲ್ಲಿಸುವುದು ಕಡ್ಡಾಯ. ಮುಂದಿನ ವಿತ್ತೀಯ ವರ್ಷದಿಂದ ವಾರ್ಷಿಕವಾಗಿ 1 ಕೋಟಿ ರೂ.ಗಳಿಗಿಂತ ಹೆಚ್ಚು ವಹಿವಾಟು ಇರುವ ಉದ್ದಿಮೆಗಳಿಗೆ ಇ-ಇನ್‌ವಾಯ್ಸ ಕಡ್ಡಾಯ ಮಾಡಲು ಉದ್ದೇಶಿಸಿರುವಂತೆಯೇ ಈ ನಿರ್ಧಾರ ಪ್ರಕಟವಾಗಿದೆ.
ಇ-ಇನ್‌ವಾಯ್ಸಗಳನ್ನು ಜಿಎಸ್‌ಟಿ ನೆಟ್‌ವರ್ಕ್ ನಿರ್ವಹಿಸುವ ಇನ್‌ವಾಯ್ಸ ನೋಂದಣಿ ವೆಬ್‌ಸೈಟ್ (ಐಆರ್‌ಪಿ) ಮೂಲಕ ದೃಢೀಕರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಒಳಗಾಗಿ ವೆಬ್‌ಸೈಟ್‌ನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜಿಎಸ್‌ಟಿ ಮಂಡಳಿ ಐಆರ್‌ಪಿ ತಂತ್ರಜ್ಞಾನ ನೀಡುವ ಸಂಸ್ಥೆಗೆ ಈಗಾಗಲೇ ಸೂಚಿಸಲಾಗಿದೆ.
ಇ-ಇನ್‌ವಾಯ್ಸನಿಂದಾಗಿ ತೆರಿಗೆ ಸೋರಿಕೆಯಾಗುವುದರ ಮೇಲೆ ಮತ್ತಷ್ಟು ನಿಗಾ ಇರಿಸಿ, ಅದರ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯವಿದೆ. ಜಿಎಸ್‌ಟಿಯ ಮಂಡಳಿಯ ಸಭೆಯಲ್ಲಿ ಕೂಡ ಹಂತ ಹಂತವಾಗಿ ಈ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ತೀರ್ಮಾನವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೀಪಾವಳಿ: ಬೆಂಗಳೂರು- ಮಡಗಾಂವ್ ನಡುವೆ ವಿಶೇಷ ರೈಲು ಸಂಚಾರ
iPhone: ದೇಶದಲ್ಲಿ ಸಿದ್ಧಗೊಂಡ ಐಫೋನ್ ರಫ್ತು ಶೇ.30ರಷ್ಟು ಹೆಚ್ಚಳ
Deepavali Festival: ಹುಬ್ಬಳ್ಳಿ, ಮೈಸೂರು, ಬೆಂಗಳೂರು ನಡುವೆ 55 ವಿಶೇಷ ರೈಲುಗಳ ಸಂಚಾರ
Happy Deepavali: ದೀಪಾವಳಿ ಭರಾಟೆ-250ಕ್ಕೂ ಅಧಿಕ ವಿಶೇಷ ರೈಲು ಸಂಚಾರ: ರೈಲ್ವೆ ಘೋಷಣೆ
Railways’ ವಾರ್ಷಿಕ ಆದಾಯ ಎಷ್ಟು ಗೊತ್ತಾ?2023-24ನೇ ಸಾಲಿನ ಪ್ರಯಾಣಿಕರ ಸಂಖ್ಯೆ 648 ಕೋಟಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.