Madikeri

 • ಡಾಮರು, ದುರಸ್ತಿ ಕಾಮಗಾರಿಗೆ ಚಾಲನೆ

  ಗೋಣಿಕೊಪ್ಪಲು: 3 ಕೋಟಿ 50 ಲಕ್ಷ ಅನುದಾನದಲ್ಲಿ ಮಡಿಕೇರಿ ಕುಟ್ಟ ರಾಜ್ಯ ಹೆದ್ದಾರಿಯ ಪೊನ್ನಂಪೇಟೆ ಮುಖ್ಯ ರಸ್ತೆಯ 7 ಕಿ.ಮೀ ವ್ಯಾಪ್ತಿಯಲ್ಲಿ ಡಾಮರು ಕಾಮಗಾರಿಗೆ ಕ್ಕೆ ಮತ್ತು ಅರುವತ್ತೂಕ್ಲು ಗ್ರಾ.ಪಂ. ವ್ಯಾಪ್ತಿಯ 86.80 ಲಕ್ಷ‌ ಅನುದಾನದ ರಸ್ತೆ ಮತ್ತು…

 • ಮಡಿಕೇರಿ: ವ್ಯಾಪಾರಿಗಳಿಂದ ದಿಢೀರ್‌ ಪ್ರತಿಭಟನೆ

  ಮಡಿಕೇರಿ: ಮಡಿಕೇರಿಯ ಮಾರುಕಟ್ಟೆ ಆವರಣ ಅಶುಚಿತ್ವದಿಂದ ಕೂಡಿದ್ದು, ಮಾಂಸದ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದರೂ ನಗರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿ ಸಂತೆ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು. ತರಕಾರಿ ಮತ್ತು ಮಾಂಸದ ಮಾರುಕಟ್ಟೆಗಳ…

 • ಸಂಸದ ಹೆಗಡೆ ವಿರುದ್ಧ ಮಡಿಕೇರಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ

  ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಸ್ವಾತಂತ್ರ್ಯ ಹೋರಾಟ ಗಾರರನ್ನು ಸಂಸದ ಅನಂತ್‌ ಕುಮಾರ್‌ ಹೆಗಡೆ ಅವರು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಮತ್ತು ಆಶ್ರಮ ಗಳಿಗೆ ನೀಡಲಾಗುತ್ತಿದ್ದ ದಾಸೋಹದ ಧಾನ್ಯ ಗಳನ್ನು ಬಿಜೆಪಿ ಸರ್ಕಾರ ಸ್ಥಗಿತ ಗೊಳಿಸಿದೆ…

 • ಜನಸಾಮಾನ್ಯರ ಪಡಿತರ ವ್ಯವಸ್ಥೆ ನ್ಯೂನತೆ ಸರಿಪಡಿಸಲು ಆಗ್ರಹ

  ಮಡಿಕೇರಿ: ಪಡಿತರ ವ್ಯವಸ್ಥೆಯಲ್ಲಿ ಕಂಡು ಬಂದಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್ವಾದಿ) ನಗರದಲ್ಲಿ ಪತ್ರಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಹಾರ…

 • ಮಡಿಕೇರಿ: ಗಣರಾಜ್ಯೋತ್ಸವ

  ಮಡಿಕೇರಿ: ಸ್ವಾತಂತ್ರ್ಯ, ಸಮಾನತೆ, ಭಾÅತೃತ್ವಗಳ ಅಡಿಗಲ್ಲಿನ ಮೇಲೆ ಪ್ರಜಾಸತ್ತಾತ್ಮಕ ಗಣರಾಜ್ಯದ ಕಲ್ಪನೆಯನ್ನು ಅರ್ಥೈಸಿಕೊಳ್ಳುವುದರೊಂದಿಗೆ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ನೀತಿಯೊಂದಿಗೆ ಯಾವುದೇ ಭೇದ ಭಾವವಿಲ್ಲದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೊಡಿಸೋಣ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ…

 • ಕಾವೇರಿ ನದಿ ಹೂಳೆತ್ತಲು 130 ಕೋಟಿ ರೂ.: ಅಪ್ಪಚ್ಚುರಂಜನ್‌

  ಮಡಿಕೇರಿ: ಕಾವೇರಿ ನದಿ ಜಲಾನಯನ ಪ್ರದೇಶಗಳ ಹೂಳೆತ್ತಲು ಸರಕಾರದಿಂದ ಘೋಷಣೆಯಾಗಿರುವ ರೂ.130 ಕೋಟಿ ರೂ.ಗಳನ್ನು ತತ್‌ಕ್ಷಣವೇ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಭರವಸೆ ನೀಡಿದ್ದಾರೆ. ಕುಶಾಲನಗರದಲ್ಲಿ ನೂತನವಾಗಿ ಅಸ್ವಿತ್ವಕ್ಕೆ ಬಂದ ಕಾವೇರಿ ನದಿ…

 • “ಎಚ್‌ಐವಿ ಸೋಂಕಿನ ತಪ್ಪು ಕಲ್ಪನೆ ದೂರವಾಗಲಿ’

  ಮಡಿಕೇರಿ: ಸದೃಢ‌ ಯುವ ಜನರನ್ನು ರೂಪಿಸುವುದು ಮುಖ್ಯ ಗುರಿಯಾಗಿದ್ದು, ಎಚ್‌ಐವಿ ಸೋಂಕಿನ ಬಗ್ಗೆ ಇರುವ ತಪ್ಪು ಕಲ್ಪನೆ ಮತ್ತು ತಾರತಮ್ಯ ಜನರಿಂದ ದೂರವಾಗಬೇಕು ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಸುನಿತಾ ಮುತ್ತಣ್ಣ ಅವರು ಹೇಳಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ,…

 • ಕಾಟೋಳಪ್ಪ ದೇಗುಲದ ಪುನರ್‌ ನಿರ್ಮಾಣ ಕಾರ್ಯಕ್ಕೆ ಚಾಲನೆ ಆರಂಭ

  ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪುರಾತನ ಮುಕೋಡ್ಲುವಿನ ಆವಂಡಿ ಗ್ರಾಮದಲ್ಲಿ ಸುಮಾರು ಐದು ವರ್ಷಗಳ ಹಿಂದೆ ಮರಬಿದ್ದು ಹಾನಿಗೀಡಾಗಿದ್ದ ಪುರಾತನ‌ ಶ್ರೀ ಕಾಟೋಳಪ್ಪ ದೇವಾಲಯದ ಪುನರ್‌ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದ್ದು, ಇತ್ತೀಚೆಗೆ ಭೂಮಿಪೂಜೆ ನೆರವೇರಿಸಲಾಗಿದೆ. ವಿಧಾನ…

 • “ಮಹಿಳಾ ಕಾಲೇಜು ನಿರ್ಮಾಣಕ್ಕೆ ಅಡ್ಡಿ ಬೇಡ’

  ಮಡಿಕೇರಿ: ಸರಕಾರಿ ಮಹಿಳಾ ಕಾಲೇಜ್‌ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರ್ಗದ ವಿದ್ಯಾರ್ಥಿಗಳೇ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಲೇಜು ಕಾಮಗಾರಿಗೆ ಯಾರೂ ಅಡ್ಡಿಪಡಿಸಬಾರದು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಹೇಳಿದ್ದಾರೆ. ಕಾಲೇಜು ಕಟ್ಟಡದ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿದ್ದ…

 • ಮಧುಚಂದ್ರ ಕಾಲ…ಈ ಬಾರಿಯ ಪಯಣ

  ನವದಂಪತಿ ಪರಸ್ಪರ ಅರಿಯಲು, ರೊಮ್ಯಾಂಟಿಕ್‌ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸಲು ಹನಿಮೂನ್‌ ಗೆ ತೆರಳುತ್ತಾರೆ. ಏಕಾಂತದಿಂದ ಜೋಡಿ ಹಕ್ಕಿಗಳಾಗಿ ವಿಹರಿಸುವ ಕ್ಷಣಗಳವು. ಈ ಅನುಭವವೂ ಸುಮಧುರ ಮಯವಾಗಿರಬೇಕೆಂದರೆ ತಾಣವೂ ಸೇರಿದಂತೆ ಎಲ್ಲದರ ಬಗ್ಗೆ ಪೂರ್ವ ಮಾಹಿತಿ ಇರಬೇಕು. ವ್ಯವಸ್ಥಿತವಾದ ಯೋಜನೆಯೂ…

 • ಸಂಪಾಜೆ: ದೇಶ ಸುತ್ತಲು ಹೊರಟ ಜಾರ್ಖಂಡ್ ಮೂಲದ ಇಬ್ಬರು ರಸ್ತೆ ಅಪಘಾತದಲ್ಲಿ ಸಾವು

  ಸುಳ್ಯ: ಇಲ್ಲಿನ ಸಂಪಾಜೆಯ ಕೊಯಿನಾಡಿನಲ್ಲಿ ಬಸ್ ಮತ್ತು ಬೈಕಿನ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಸಾವನ್ನಪ್ಪಿದ ಇಬ್ಬರು ಜಾರ್ಖಂಡ್ ಮೂಲದವರಾಗಿದ್ದು, ಇದುವರೆಗೆ ಗುರುತು ಪತ್ತೆಯಾಗಿಲ್ಲ. ಜಾರ್ಖಂಡ್ ಮೂಲದ ಇಬ್ಬರು ಯುವಕರು…

 • ಕಾಫಿ ಎಸ್ಟೇಟ್ ಆಸೆಗಾಗಿ ಅತ್ತಿಗೆಯನ್ನೇ ಕೊಲ್ಲಲು ಸುಪಾರಿ ಕೊಟ್ಟು ತಾನೆ ಸಿಕ್ಕಿಹಾಕಿಕೊಂಡ

  ಮಡಿಕೇರಿ: ಅತ್ತಿಗೆಯ ಆಸ್ತಿಯ ಮೇಲೆ ಕಣ್ಣು ಹಾಕಿದ್ದ ಮೈದುನ ಆಕೆಯನ್ನು ಕೊಲ್ಲಲು ಸುಪಾರಿ ಕೊಟ್ಟು ತಾನೆ ಸಿಕ್ಕಿಹಾಕಿಕೊಂಡ ಘಟನೆ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ. ಮಡಿಕೇರಿಯ ಚೇಲಾವರದ ಸುಬ್ಬಯ್ಯ ಎಂಬಾತೇ ಅತ್ತಿಗೆಯ ಕೊಲೆಗೆ ಸುಪಾರಿ ಕೊಟ್ಟು ಪೊಲೀಸರ ಅತಿಥಿಯಾಗಿರುವಾತ. ಆರೋಪಿ…

 • ಗೋಲಿಬಾರ್‌ ಖಂಡಿಸಿ ಮಡಿಕೇರಿ ಬಂದ್‌

  ಮಡಿಕೇರಿ: ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಪ್ರಕರಣವನ್ನು ಖಂಡಿಸಿ ಮಡಿಕೇರಿ ನಗರದಲ್ಲಿ ಮುಸ್ಲಿಂ ವರ್ತಕರು ಶನಿವಾರ ತಮ್ಮ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಬಹುತೇಕ ಎಲ್ಲ ಮುಸ್ಲಿಂ ವರ್ತಕರು ತಮ್ಮ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳನ್ನು ಸಂಜೆ…

 • ಕರಾವಳಿಯಲ್ಲಿ ಇನ್ನೆರಡು ದಿನ ಮಳೆ ಸಾಧ್ಯತೆ

  ಮಂಗಳೂರು/ ಉಡುಪಿ/ಕಾಸರಗೋಡು/ಮಡಿಕೇರಿ:ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಮತ್ತು ಕೊಡಗು ಜಿಲ್ಲೆಗಳ ಹೆಚ್ಚಿನ ಕಡೆಗಳಲ್ಲಿ ಶನಿವಾರ ಮಧ್ಯಾಹ್ನದ ಬಳಿಕ ಅನಿರೀಕ್ಷಿತ ಉತ್ತಮ ಮಳೆಯಾಗಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ಜನಜೀವನಕ್ಕೆ ತೊಂದರೆಯಾಯಿತು. ಮಂಗಳೂರಿನಲ್ಲಿ ಸಂಜೆ ವೇಳೆಗೆ ನಿರಂತರ ಮಳೆ ಸುರಿಯಿತು….

 • ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಆಯಾಮಗಳು ಬರಲಿ : ಸುನೀತಾ

  ಮಡಿಕೇರಿ: ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ಪರಂಪರೆಯ ಜೊತೆಗೆ ವರ್ತಮಾನದ ಸಂಗತಿಗಳನ್ನು ಮನನ ಮಾಡಿಕೊಂಡು ಹೊಸ ಆಯಾಮಗಳನ್ನು ಸಾಹಿತ್ಯದಲ್ಲಿ ತರುವ ಪ್ರಯತ್ನ ಮಾಡಬೇಕು ಎಂದು ಕವಯತ್ರಿ ಸುನೀತಾ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಚಿಕ್ಕ ಅಳುವಾರದ ಮಂಗಳೂರು ವಿವಿ…

 • ಕೀರ್ತನೆಗಳು ಸಂದೇಶಗಳು ಸಾರ್ವಕಾಲಿಕ: ಜಿಲ್ಲಾಧಿಕಾರಿ

  ಮಡಿಕೇರಿ: ಭಕ್ತ ಕನಕದಾಸರ ಕೀರ್ತನೆಗಳು ಸಾರ್ವಕಾಲಿಕವಾಗಿದ್ದು, ಕನಕದಾಸರ ಸಂದೇಶಗಳನ್ನು ತಿಳಿದುಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಸಲಹೆ ಮಾಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

 • ಕೇಂದ್ರ ಸರಕಾರದ ವಿರುದ್ಧ ಕೊಡಗು ಕಾಂಗ್ರೆಸ್‌ ಪ್ರತಿಭಟನೆ

  ಮಡಿಕೇರಿ : ಕೇಂದ್ರ ಸರ್ಕಾರ ಜನ ವಿರೋಧಿ ಆರ್ಥಿಕ ನೀತಿ ಅನುಸರಿಸುತ್ತಿದೆ ಮತ್ತು ದೇಶವನ್ನು ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಜಿಲ್ಲಾಡಳಿತದ ಭವನದ ಎದುರು ಪ್ರತಿಭಟನೆ ನಡೆಸಿತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ…

 • ಮಡಿಕೇರಿ: ಪತ್ನಿಗೆ 30 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪತಿ

  ಮಡಿಕೇರಿ: ತನ್ನ ಪತ್ನಿಯ ನಡತೆ ಸರಿಯಿಲ್ಲವೆಂದು ಅನುಮಾನಿಸುತ್ತಿದ್ದ ಪತಿಯೊಬ್ಬ ಆಕೆಯನ್ನು  30 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಮಡಿಕೇರಿಯ ಹೊಸಬಡಾವಣೆಯಲ್ಲಿ ನಡೆದಿದೆ. ಜುಬೈದಾ(25) ಹತ್ಯೆಯಾದವರು. ಪತಿ ಷರೀಫ್ 7 ವರ್ಷದ ಹಿಂದೆ ಜುಬೈದಾಳನ್ನು ವಿವಾಹವಾಗಿದ್ದು, ಇಬ್ಬರು…

 • ಜೋಡುಪಾಲದಲ್ಲಿ ಬೀಡುಬಿಟ್ಟ ಕಾಡಾನೆ ಹಿಂಡು

  ಮಡಿಕೇರಿ: ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇರುವ ಮಡಿಕೇರಿಯ ಜೋಡುಪಾಲ ಗ್ರಾಮದಲ್ಲಿ ಹತ್ತು ದಿನಗಳಿಂದ ಕಾಡಾನೆಗಳ ಉಪಟಳ ಮಿತಿ ಮೀರಿದೆ. ನಾಲ್ಕೈದು ಕಾಡಾನೆಗಳ ಹಿಂಡು ಗ್ರಾಮದ ಬಹುತೇಕ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅ. 17ರಂದೇ…

 • ಕೃಷಿಕೊಳದಲ್ಲಿ ಮೀನು ಸಾಕಾಣಿಕೆ : ತಜ್ಞರಿಂದ ಕ್ಷೇತ್ರ ಭೇಟಿ

  ಬಾಯಾರು‌:  ಕ್ಷೇತ್ರ ಭೇಟಿಯ ಅಂಗವಾಗಿ ಮಂಗಳೂರಿನ ಮೀನುಗಾರಿಕೆ ಮಹಾವಿದ್ಯಾಲಯದ ತಜ್ಞರು ಕೇರಳ ಗಡಿ ಪ್ರದೇಶದಲ್ಲಿರುವ ಬಾಯಾರು ಗ್ರಾಮದ ಸಮಗ್ರ ಕೃಷಿ ಭೂಮಿಗೆ ಭೇಟಿ ನೀಡಿ ಜಮೀನಿನ ಕೊಳಗಳಲ್ಲಿ ಮೀನು ಕೃಷಿ ಮಾಡುವ ಬಗ್ಗೆ ರೈತರಿಗೆ ಸಲಹೆ ಸೂಚನೆ ನೀಡಿದರು….

ಹೊಸ ಸೇರ್ಪಡೆ