Rohini sex racket case: ಬಯಲಾದವು ನಡುಕ ಹುಟ್ಟಿಸುವ ವಿವರಗಳು


Team Udayavani, Dec 23, 2017, 3:37 PM IST

Baha-Virendra-Dixit-Ashram-700.jpg

ಹೊಸದಿಲ್ಲಿ : ಸ್ವಘೋಷಿತ ದೇವಮಾನವ ಬಾಬಾ ವೀರೇಂದ್ರ ದೇವ ದೀಕ್ಷಿತ್‌ ಅವರ ವಿವಾದಾತ್ಮಕ ಆಶ್ರಮ ಆಧ್ಯಾತ್ಮಿಕ ವಿಶ್ವ  ವಿದ್ಯಾಲಯದ ದಿಲ್ಲಿಯಲ್ಲಿನ ಎಲ್ಲ  ಎಂಟು ಕೇಂದ್ರಗಳ ಮೇಲೆ ದಿಲ್ಲಿ ಹೈಕೋರ್ಟ್‌ ಆದೇಶದ ಪ್ರಕಾರ ದಾಳಿ ನಡೆಸಿದ ವೇಳೆ ನಡುಕ ಹುಟ್ಟಿಸುವ ಅನೇಕ  ವಿವರಗಳು ಬಯಲಾಗಿವೆ.

ಕಳೆದ 22 ವರ್ಷಗಳಿಂದಲೂ ಇಲ್ಲಿ ಮಹಿಳೆಯರನ್ನು ಅಕ್ರಮ ಬಂಧನದಲ್ಲಿಟ್ಟು ಅವರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ; ಆಧ್ಯಾತ್ಮಕ ವಿಶ್ವ ವಿದ್ಯಾಲಯದವಾರದ ಅವರನ್ನು ಬಸ್ಸಿನಲ್ಲಿ ಅಜ್ಞಾತ ಸ್ಥಳಕ್ಕೆ ಒಯ್ದು ಅಲ್ಲಿ ಅವರಿಗೆ ವೇಶ್ಯಾಗಾರಿಕೆಯ ತರಬೇತಿ ನೀಡಿ ಅವರನ್ನು ಅಕ್ರಮ ಮೈಮಾರುವ ಧಂಧೆಗೆ ಬಳಲಾಗುತ್ತಿದೆ; ಆಶ್ರಮದಲ್ಲಿ  ತುಂಬಿಟ್ಟ ಅನೇಕ ಚೀಲಗಳಲ್ಲಿ ಸಿರಿಂಜ್‌ ಮತ್ತು ಮಾದಕ ದ್ರವ್ಯಗಳು ಇರುವುದನ್ನು ಪತ್ತೆ ಹಚ್ಚಲಾಗಿದೆ. 

ವಿಶ್ವವಿದ್ಯಾಲಯ ಸ್ಥಾಪನೆಗೆಂದು ಸರಕಾರ ನೀಡಿರುವ ಸ್ಥಳದಲ್ಲಿ ಸ್ಥಾಪಿಸಲಾಗಿರುವ ಆಧ್ಯಾತ್ಮಿಕ  ವಿಶ್ವ ವಿದ್ಯಾಲಯವನ್ನು ಬಾಬಾ ವೀರೇಂದ್ರ ದೇವ ದೀಕ್ಷಿತ್‌ ಸೆಕ್ಸ್‌ ಕೇಂದ್ರವಾಗಿ ಮಾರ್ಪಡಿಸಿದ್ದಾರೆ. ಅವರ ಈ ಸಂಸ್ಥೆ ನೋಂದಾವಣೆಗೊಳ್ಳದ ಸೊಸೈಟಿಯಾಗಿದೆ. 

ವೀರೇಂದ್ರ ದೇವ ದೀಕ್ಷಿತ್‌ ಅವರು ತಮ್ಮ ಈ ಆಧ್ಯಾತ್ಮಿಕ ಕೇಂದ್ರವನ್ನು ಸೇರುವ ಹುಡುಗಿಯರಿಂದ ಅಫಿದಾವಿತ್‌ ಬರೆಸಿಕೊಂಡಿದ್ದಾರೆ. ತಾವೆಂದೂ ತಮ್ಮ ಹೆತ್ತವರು ಕಾಣಲು ಮನೆಗೆ ಹೋಗುವುದಿಲ್ಲ ಎಂದು ಅವರು ಅಫಿದಾವಿತ್‌ನಲ್ಲಿ ಬರೆದುಕೊಟ್ಟಿದ್ದಾರೆ.

ದೀಕ್ಷಿತ್‌ ಅವರ ಒಟ್ಟು ಕಾರ್ಯ ವೈಖರಿ ಈಚೆಗೆ ಜೈಲುಪಾಲಾಗಿರುವ ವಿವಾದಿತ ದೇವಮಾನವ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ ಅವರ ಕಾರ್ಯವೈಖರಿಯನ್ನು ಹೋಲುತ್ತದೆ.

ದಿಲ್ಲಿ ಹೈಕೋರ್ಟಿನ ಜಸ್ಟಿಸ್‌ ಗೀತಾ ಮಿತ್ತಲ್‌ ಮತ್ತು ಜಸ್ಟಿಸ್‌ ಸಿ ಹರಿ ಶಂಕರ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠದ  ಆದೇಶದ ಪ್ರಕಾರ ದಿಲ್ಲಿ ಪೊಲೀಸರು ಮತ್ತು ದಿಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸಿದ ಜಂಟಿ  ದಾಳಿಯಲ್ಲಿ ಈ ಬಗೆಯ ಹಲವು ಆಘಾತಕಾರಿ ವಿವರಗಳು ಬಯಲಾಗಿವೆ. 

ದಿಲ್ಲಿಯ ರೋಹಿಣಿಯಲ್ಲಿನ ವಿಜಯ ವಿಹಾರದಲ್ಲಿರುವ ಬಾಬಾ ದೀಕ್ಷಿತ್‌ ಅವರ ಕೇಂದ್ರ ಹಾಗೂ ಇತರ ಕೇಂದ್ರಗಳ ಮೇಲೆ ನಡೆಸಲಾದ ದಾಳಿಯಲ್ಲಿ ಕಳೆದ 22 ವರ್ಷಗಳಿಂದಲೂ ಬಂಧಿಗಳಾಗಿ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿರುವ ಹಲವಾರು ಮಹಿಳೆಯರನ್ನು ರಕ್ಷಿಸಲಾಗಿದೆ.

ಟಾಪ್ ನ್ಯೂಸ್

1-sasadsad

Asian Games ವನಿತಾ ಕ್ರಿಕೆಟ್‌: ಚಿನ್ನಕ್ಕಾಗಿ ಭಾರತ-ಶ್ರೀಲಂಕಾ ಹೋರಾಟ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

1-sasadsa

2nd ODI ; ಆಸೀಸ್ ವಿರುದ್ಧ ಭರ್ಜರಿ ಜಯ : ಸರಣಿ ವಶ ಪಡಿಸಿಕೊಂಡ ಟೀಮ್ ಇಂಡಿಯಾ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aksharadhama nj

USA: ಅ. 8ರಂದು ಬೃಹತ್‌ ದೇಗುಲ ದರ್ಶನ: ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಾಣ

S JAISHANKAR

UNO: ಜಗತ್ತಿನಲ್ಲಿ ಈಗಲೂ ದ್ವಂದ್ವ ನಿಲುವು: ಜೈಶಂಕರ್‌ 

MANIPUR ARMY

Manipur: ಮಾಮೂಲಿ ಟ್ರಕ್‌ಗಳಿಗೆ ಸೇನೆ ಮಾದರಿ ಬಣ್ಣ ಬಳಿದ ಬಂಡುಕೋರರು!

ayodhya airport

Ayodhya: ವರ್ಷಾಂತ್ಯಕ್ಕೆ ಅಯೋಧ್ಯಾ ವಿಮಾನ ನಿಲ್ದಾಣ ಲೋಕಾರ್ಪಣೆ

1-fdwewq

Gujarat ; ಕುಸಿದು ಬಿದ್ದ ಹಳೆಯ ಸೇತುವೆ: ಕನಿಷ್ಠ 6 ಮಂದಿ ನೀರುಪಾಲು ಶಂಕೆ

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

ashwath narayan

NEP ಜಾರಿ ಅವಸರದ ಕ್ರಮವಲ್ಲ: ಡಾ| ಸಿ.ಎನ್‌.ಅಶ್ವತ್ಥನಾರಾಯಣ

DOCTOR

Medical- Dental Course: ಮೂಲ ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ

1-sasadsad

Asian Games ವನಿತಾ ಕ್ರಿಕೆಟ್‌: ಚಿನ್ನಕ್ಕಾಗಿ ಭಾರತ-ಶ್ರೀಲಂಕಾ ಹೋರಾಟ

solar panels 2

Solar: ರಾಜ್ಯದಲ್ಲಿ ಶೀಘ್ರದಲ್ಲೇ ತಲೆ ಎತ್ತಲಿವೆ ಮತ್ತೆರಡು ಸೌರೋದ್ಯಾನ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Nipah virus ಕೇರಳದಲ್ಲಿ ನಿಫಾ; ಗಡಿಯಲ್ಲಿ ಮುಂದುವರಿದ ತಪಾಸಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.