ಕೇಂಬ್ರಿಡ್ಜ್ ಅನಾಲಿಟಿಕಾಗೆ ಕೇಂದ್ರ ಸರ್ಕಾರದಿಂದ ನೋಟಿಸ್ ಜಾರಿ
Team Udayavani, Mar 24, 2018, 7:30 AM IST
ನವದೆಹಲಿ: ಭಾರತೀಯ ಚುನಾವಣೆಗಳ ಸಮಯದಲ್ಲಿ ಕೆಲವು ರಾಜಕೀಯ ಪಕ್ಷಗಳ ಜತೆಗೂಡಿ ಮತದಾರರ ಮೇಲೆ ಪರಿಣಾಮ ಬೀರುವ ಕೆಲಸ ಮಾಡಿರುವ ಆರೋಪ ಹೊತ್ತಿರುವ ಲಂಡನ್ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ (ಸಿಎ) ಸಂಸ್ಥೆಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಗೊಳಿಸಿದ್ದು, ಮಾ. 31ರೊಳಗೆ ಉತ್ತರಿಸುವಂತೆ ಸೂಚಿಸಿದೆ.
ಇದೇ ವೇಳೆ, ಸಿಎ ವಿರುದ್ಧದ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಚುನಾವಣಾ ಆಯೋಗ, ಮುಂಬರುವ ಚುನಾವಣೆಗಳ ವೇಳೆ, ಮತದಾರರ ಮೇಲೆ ಬಾಹ್ಯ ಸಂಸ್ಥೆಗಳು ಯಾವುದೇ ರೀತಿಯಲ್ಲಿ ಪ್ರಭಾವ ಬೀರಲು ಸಾಧ್ಯವಾಗದಂಥ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. 2014ರ ಮಹಾ ಚುನಾವಣೆಯಲ್ಲೂ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರ ಮೇಲೆ ಪರಿಣಾಮ ಬೀರ ಲಾಗಿತ್ತೇ ಎಂಬುದರ ಬಗ್ಗೆ ಚರ್ಚಿಸಲು ನಿರ್ಧರಿಸಿದೆ.
ಏತನ್ಮಧ್ಯೆ, ಕೇಂಬ್ರಿಡ್ಜ್ ಅನಾಲಿಟಿಕಾ ಹಾಗೂ ಕಾಂಗ್ರೆಸ್ ನಡುವೆ ನಂಟಿದೆ ಎಂದು ಆರೋಪಿಸಿರುವ ಬಿಜೆಪಿಯು ಸುಳ್ಳಿನ ಕಾರ್ಖಾನೆಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
TPG Passes Away: ಬಿಪಿಎಲ್ ಸಮೂಹ ಸಂಸ್ಥೆ ಸ್ಥಾಪಕ ಟಿ.ಪಿ.ಗೋಪಾಲನ್ ನಂಬಿಯಾರ್ ನಿಧನ
Deepavali Celebration: ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
Rocket launcher: ತಮಿಳುನಾಡಿನಲ್ಲಿ ಆತಂಕ ಸೃಷ್ಟಿಸಿದ ರಾಕೆಟ್ ಲಾಂಚರ್… ಪೊಲೀಸರಿಂದ ತನಿಖೆ
Mumbai: ಮೊಬೈಲ್ ಕಳ್ಳರ ಗ್ಯಾಂಗ್ ಸೆರೆ- 70 ಮೊಬೈಲ್, 4.70 ಲಕ್ಷ ರೂಪಾಯಿ ನಗದು ವಶಕ್ಕೆ!
2 ದಿನದ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.