Mother

 • ಬಾಣಂತಿ ಬಾಳು…ಬಯಸಿದ್ದೆಲ್ಲ ತಿನ್ನೋ ಹಾಗಿಲ್ಲ…

  ಹೆಣ್ಣಿನ ಬಾಳಿನಲ್ಲಿ ತಾಯ್ತನದ ಘಟ್ಟ ಬಹಳ ಮುಖ್ಯವಾದುದು. ತಾಯ್ತನ ಅಂದರೆ, ಆ ನವಮಾಸವಷ್ಟೇ ಅಲ್ಲ. ಅದರ ನಂತರದ ಬಾಣಂತನದಲ್ಲೂ ತಾಯಿ-ಮಗುವನ್ನು ಮುಚ್ಚಟೆಯಿಂದ ಕಾಪಾಡಬೇಕು. ಆ ಸಮಯದಲ್ಲಿ ತಾಯಿ, ಬಯಸಿದ್ದನ್ನೆಲ್ಲ ತಿನ್ನುವಂತಿಲ್ಲ. ಕಟ್ಟುನಿಟ್ಟಾಗಿ ಪಥ್ಯ ಮಾಡಬೇಕು. ಅಮ್ಮನೋ-ಅಜ್ಜಿಯೋ ಹೇಳಿದ್ದನ್ನು ಚಾಚೂ…

 • ಮಗು ಕೊಂದು ತಾಯಿ ಆತ್ಮಹತ್ಯೆ

  ಚಿತ್ರದುರ್ಗ: ಹೆತ್ತ ತಾಯಿಯೇ ಒಂದು ವರ್ಷದ ಗಂಡು ಮಗುವನ್ನು ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳಲ್ಕೆರೆ ತಾಲೂ ಕು ಐನಹಳ್ಳಿಯಲ್ಲಿ ಸೋಮವಾರ ನಡೆದಿದೆ. ಆಶಾಬಾಯಿ (25) ನೇಣಿಗೆ ಶರಣಾದ ಮಹಿಳೆ. ಬುಧವಾರ…

 • ತಾಯಿ ಹುಡುಕಿಕೊಂಡು ಸ್ವೀಡನ್‌ನಿಂದ ಬಂದ ಪುತ್ರಿ

  ಮಂಡ್ಯ: 29 ವರ್ಷಗಳ ಬಳಿಕ ತಾಯಿಯನ್ನು ಹುಡುಕಿಕೊಂಡು ದೂರದ ಸ್ವೀಡನ್‌ ದೇಶದಿಂದ ಪುತ್ರಿ ಆಗಮಿಸಿದ್ದಾಳೆ. ತಾಯಿಯನ್ನು ಕಾಣುವ ಪತ್ನಿಯ ಹಂಬಲಕ್ಕೆ ಪತಿ ಕೂಡ ಸಾಥ್‌ ಕೊಟ್ಟಿದ್ದಾರೆ. ಸ್ವೀಡನ್‌ ದೇಶದ ಜೋಲಿ ತನ್ನ ಪತಿ ಎರಿಕ್‌ ಜೊತೆ ತವರೂರು ಮಂಡ್ಯ…

 • ಅಮ್ಮನೇ ಬೆಸ್ಟ್‌ ಫ್ರೆಂಡ್‌

  ಅಮ್ಮನಷ್ಟು ಒಳ್ಳೆಯ ಗೆಳತಿ ಸಿಗಲು ಸಾಧ್ಯವಿಲ್ಲ. ಎಲ್ಲವನ್ನು ಮೀರಿ ನಿಜವಾದ ಕಾಳಜಿ ಮಾಡುವ ಪರಿಶುದ್ಧ ಮನಸ್ಸಿನ ಗೆಳತಿಯೇ ಅಮ್ಮ. ತಮಗೇನು ಬೇಕು ಎಂಬುದು ಮಕ್ಕಳಿಗೆ ಗೊತ್ತಿರುತ್ತದೆಯೇ? ಆದರೆ, ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಏನೇನು ಬೇಕು ಎಂಬ ಸರಿಯಾದ ಗ್ರಹಿಕೆ…

 • ಅಮ್ಮನ ಬದುಕೇ ಜೀವನಪಾಠ

  ಅಮ್ಮ ಓದಿದ್ದು 8ನೇ ತರಗತಿಯಾದರೂ, ಆಕೆಯ ಯೋಚನೆಗಳು ಯಾವ ಆಧುನಿಕ ಮಹಿಳೆಗಿಂತ ಕಡಿಮೆಯಿರಲಿಲ್ಲ. ನಮ್ಮ ಪ್ರಾಮಾಣಿಕತೆ ನಮ್ಮನ್ನು ಕಾಪಾಡುತ್ತದೆ, ಸತ್ಯಕ್ಕೆ ಬೆಲೆ ಇದೆ ಎಂದು ಹೇಳುತ್ತಾ, ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಾ ಹೋದಳು. ನನ್ನಪ್ಪನ ಕುಡಿತದ ಚಟ…

 • ಅಮ್ಮನೆಂಬ ಅಲಾರಂ

  ಅಮ್ಮ, ಪತ್ನಿ, ಸೊಸೆ ಹೀಗೆ ಹಲವಾರು ಪಾತ್ರಗಳನ್ನು ನಿಭಾಯಿಸುವ ಅಮ್ಮ, ಹತ್ತಾರು ಅಲಾರಮ್‌ಗಳನ್ನು ಅಣಿಗೊಳಿಸಬೇಕಾಗುತ್ತದೆ. ಅದು ಆಕೆಯ ಮನಸ್ಸಿನಲ್ಲಿಯೇ ಸಿದ್ಧಗೊಳ್ಳುವ ಅಲಾರಮ್‌. ಮಕ್ಕಳ ಶಾಲೆ, ಕಾಲೇಜುಗಳ ಸಮಯ, ಪತಿಯ ಕೆಲಸಕ್ಕೆ ಹೋಗುವ ಸಮಯ, ಅತ್ತೆ-ಮಾವಂದಿರ ಔಷಧಿ ಸಮಯ ಎಲ್ಲವನ್ನೂ…

 • ಶಾಸಕ ರಾಜುಗೌಡಗೆ ಮಾತೃ ವಿಯೋಗ

  ನಾರಾಯಣಪುರ: ಎರಡು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುರಪುರ ಕ್ಷೇತ್ರದ ಶಾಸಕ ನರಸಿಂಹನಾಯಕ (ರಾಜುಗೌಡ) ಅವರ ತಾಯಿ ತಿಮ್ಮಮ್ಮ ಶಂಭನ ಗೌಡ (64) ಸೋಮವಾರ ಚಿಕಿತ್ಸೆ ಫ‌ಲಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತಿ, ನಿವೃತ್ತ ಅಬಕಾರಿ ಡಿವೈಎಸ್‌ಪಿ…

 • ಅಮ್ಮಾ… ನಿನ್ನ ನೋವ ನಾ ಬಲ್ಲೆ…

  ಹೊಟ್ಟೆಯೊಳಗೆ ಮಗು ಸುತ್ತಮುತ್ತ ತಿರುಗುವಾಗ, ಕೈ-ಕಾಲು ಆಡಿಸುವಾಗಿನ ಅನುಭವವನ್ನು ಪದಗಳಲ್ಲಿ ವಿವರಿಸಲಾಗದು. ಆಗೊಮ್ಮೆ ಈಗೊಮ್ಮೆ ಕಾಲಿನಿಂದ ಮೆಲ್ಲನೆ ಒದೆಯುವುದು ಬೇರೆ. ಕಣ್ಣಿಗೆ ಕಾಣದ ಮಗುವಿನೊಂದಿಗೆ ನಾನು ಆಗಲೇ ಮಾತು ಶುರುಮಾಡಿದ್ದೆ. ಹೊಟ್ಟೆಯೊಳಗಿಂದಲೇ ಮಗು ಹೂಂಗುಟ್ಟುತ್ತಿದ್ದೆ ಅಂತೆಲ್ಲಾ ಅನ್ನಿಸುತ್ತಿತ್ತು… ಅಮ್ಮಾ……

 • ಸ್ಕೂಲ್‌ ಇದೆ ನಂಗೆ, ಬೇಗ ಏಳಮ್ಮಾ…

  ಬೆಳಗ್ಗಿನ ಹೊಸ ವೇಳಾಪಟ್ಟಿಗೆ ಅಡ್ಜಸ್ಟ್‌ ಆಗಲು ಅಮ್ಮ-ಮಗಳಿಗೆ ಒಂದು ತಿಂಗಳೇ ಬೇಕಾಯ್ತು. ಏಳು ಗಂಟೆಗೆ ಏಳುತ್ತಿದ್ದ ನಾನು ಆರಕ್ಕೂ, ಎಂಟೂವರೆಗೆ ಏಳುತ್ತಿದ್ದ ಅವಳು ಆರೂ ಮುಕ್ಕಾಲಿಗೂ ಏಳುವ ಅನಿವಾರ್ಯವನ್ನು ಸೃಷ್ಟಿಸಿದ “ಒಂದನೇ ತರಗತಿಗೆ’ ಇಬ್ಬರೂ ಹಿಡಿ ಶಾಪ ಹಾಕಿದೆವು….

 • ಆರು ವರ್ಷದ ಮಗುವನ್ನು ಬಸ್ಸಿನಲ್ಲಿ ಮರೆತು ಹೋದ ಹೆತ್ತಬ್ಬೆ !

  ಕಾಸರಗೋಡು: ಮಹಿಳೆಯೊಬ್ಬರು ತನ್ನ ಆರು ವರ್ಷದ ಮಗುವನ್ನು ಮರೆತು ಬಸ್ಸಿನಲ್ಲೇ ಬಿಟ್ಟು ಹೋದ ಘಟನೆ ನಗರದಲ್ಲಿ ಬುಧವಾರ ನಡೆದಿದೆ. ಬಸ್‌ ಹೊಸ ಬಸ್‌ ನಿಲ್ದಾಣಕ್ಕೆ ಆಗಮಿಸಿದಾಗ ಅಳುತ್ತಿರುವ ಮಗುವನ್ನು ಗಮನಿಸಿದ ಸಿಬಂದಿ ಮಗುವನ್ನು ಪಿಂಕ್‌ ಪೊಲೀಸರಿಗೆ ಹಸ್ತಾಂತರಿಸಿದರು. ಮಗುವಿನ…

 • ಮದರ್‌ ಇಂಡಿಯಾ; 14 ವರ್ಷದ ಮಗನನ್ನು ಎತ್ತಿಕೊಂಡೇ ಹೋಗ್ತಿದ್ದ ತಾಯಿ…

  ಪ್ರಕೃತಿ ಮತ್ತು ಭೂಮಿಯ ಹೋಲಿಕೆ ಸಲ್ಲುವುದು ತಾಯಿಗೆ ಮಾತ್ರ. ಆಕೆ ಸಹನಾಮಯಿ. ಮಕ್ಕಳ ಎಲ್ಲ ಕಷ್ಟವನ್ನು ಹೊರಲು ಆಕೆ ಸದಾ ಸಿದ್ಧ. ಈ ಮಾತಿಗೆ ಸಾಕ್ಷಿ ಎನ್ನುವಂಥ ತಾಯಿಯೊಬ್ಬಳು ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿಯಲ್ಲಿ ಇದ್ದಾಳೆ. ಹದಿನಾಲ್ಕು ವರ್ಷದ ವಿಕಲಚೇತನ…

 • ಅವಳು ಕಲಿಸಿದ ಜೀವನಪಾಠ

  ನಮ್ಮ ಅತ್ತೆಮ್ಮಾನೂ ನಂಜೊತೆಗೇ ಬಂದವ್ಳೆ. ಅವಳೋ ಬೆಳಗ್ಗೆಯಿಂದಾ ಏನೂ ತಿಂದಿಲ್ಲಾ ಪಕ್ಕದ ರೋಡ್ನಾಗೆ ಅವಳೂ ಮರ ಸಾರ್ಸೊಕ್ಕೆ ಹೋಗವ್ಳೆ. ಪಾಪ ಅವಳೋ ಅಸ್ಕಂಡವ್ಳೆ. ನನ್ನ ಗಂಡ ನನ್ನನ್ನ ಬಿಟ್ಟು ಹೋದಾಗ್ನಿಂದ ನಮ್ಮತ್ತೇನ ನಾನೇ ನೋಡ್ಕಂತಾಯಿರೋದು.ಮಗ ಕೈಬಿಟ್ಟಾಂತ ನಾನೂ ಕೈ…

 • ತಾಯಿ ಕಾಳಜಿ ವಹಿಸಿದರೆ ಮಕ್ಕಳಿಗೆ ಉತ್ತಮ ಭವಿಷ್ಯ

  ಚಿಕ್ಕಬಳ್ಳಾಪುರ: ತಾಯಿಯು ಕಾಳಜಿ, ಗಮನವನ್ನು ಮಕ್ಕಳ ಕಡೆ ಹರಿಸದಿದ್ದರೆ ಮಕ್ಕಳು ಸಮಾಜದಲ್ಲಿ ಕೆಟ್ಟವರಾಗಿ ಬೆಳೆಯುತ್ತಾರೆ. ಆದ್ದರಿಂದ ತಾಯಿಂದರು ಮಕ್ಕಳ ಬಗ್ಗೆ ಕಾಳಜಿ ವಹಿಸಿದರೆ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯುತ್ತಾರೆ ಎಂದು ಆದಿಚುಂಚನಗಿರಿ ಶಾಖಾ ಮಠದ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು….

 • ಜಗವೆಲ್ಲ ಮಲಗಿದ್ರೂ ಅಮ್ಮ ಎದ್ದಿರುತ್ತಾಳೆ?

  ಅಲಾರಾಂ ಸದ್ದು ಕೇಳದೆಯೂ, ಮುಂಜಾನೆಯೇ ಅಮ್ಮನಿಗೆ ಎಚ್ಚರಾಗಿಬಿಡುತ್ತದೆ. ಇನ್ನೂ ಬೆಳಕಾಗಿಲ್ಲ, ಸ್ವಲ್ಪ ಹೊತ್ತು ನಿದ್ರೆ ಮಾಡಿ ಎಂದು ಎಲ್ಲರಿಗೂ ಹೇಳಿ ತಾನು ಮಾತ್ರ ಒಂದೊಂದೇ ಕೆಲಸದಲ್ಲಿ ತೊಡಗಿಕೊಳ್ಳುತ್ತಾಳೆ… ಬೆಳಗ್ಗೆ ಬೇಗ ಏಳುವುದು ಅಮ್ಮನಿಗೇಕೆ ಕಷ್ಟವಲ್ಲ? ಇದು ನಿನ್ನೆ -ಮೊನ್ನೆ ಕಾಡಿರುವ…

 • ಅಮ್ಮಾ, ಕೇಳಮ್ಮಾ…

  ಚಿತ್ರಪಟದಲ್ಲಿನ ದೇವರಿಗೆ ಎಂಟು ಕೈಗಳಾದರೆ, ಅಮ್ಮನಿಗೆ ಎರಡೇ ಕೈ. ಆದರೂ, ಅಮ್ಮ ಒಟ್ಟಿಗೇ ಹತ್ತಾರು ಕೆಲಸಗಳನ್ನು ನಿರ್ವಹಿಸಬಲ್ಲ ಚತುರೆ. ಅದಕ್ಕೇ ಅಲ್ವಾ ಅಮ್ಮನನ್ನು ದೇವರು ಅನ್ನೋದು? ಆದರೆ, ನಾನು ಹೇಳ್ತಾ ಇದ್ದೀನಿ. ಅಮ್ಮ ದೇವರಲ್ಲ! ಯಾಕೆ ಗೊತ್ತಾ? ದೇವರನ್ನು…

 • ಅಮ್ಮನಿಗೇಕೆ ಬೆಳಗ್ಗೆ ಬೇಗ ಏಳುವುದು ಕಷ್ಟವಲ್ಲ !

  ಇದು ನಿನ್ನೆ -ಮೊನ್ನೆ ಕಾಡಿರುವ ಪ್ರಶ್ನೆಯಲ್ಲ. ಬಾಲ್ಯದಿಂದ ಇಂದಿನವರೆಗೂ ಯಕ್ಷಪ್ರಶ್ನೆಯಾಗಿ ಕಾಡುತ್ತಿರುವ ಪ್ರಶ್ನೆ. ಸರಿಯಾಗಿ ಉತ್ತರ ಸಿಗದೆ ಮತ್ತಷ್ಟು ಕಗ್ಗಂಟಾಗಿ ಉಳಿದಿರುವ ಪ್ರಶ್ನೆ. ಎಲ್ಲರೂ ಬೆಳಗ್ಗೆ ಬೇಗ ಏಳಬೇಕು ಅಂದರೆ ಮೂಗು ಮುರಿಯುವವರೇ. ಆದರೆ, ಅಮ್ಮನಿಗೇಕೆ ಬೆಳಗ್ಗೆ ಬೇಗ ಏಳುವುದು…

 • ಅಮ್ಮನಿಗೆ ಚಳಿಯೇ ಆಗ್ತಿರಲಿಲ್ವಾ…?

  ದಿನ ಅಮ್ಮಂದಿರಿಗೆ ಚಳಿಯಿದ್ದೂ ಚಳಿಯಿರಲಿಲ್ಲ. ಕಷ್ಟಗಳಿದ್ದರೂ ಅದರ ಬಗ್ಗೆ ಕೊರಗುಗಳಿರಲಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಇದ್ದರೂ ಸ್ವಾತಂತ್ರ್ಯದಿಂದ ವಂಚಿತರಾಗಿದ್ದೇವೆ ಎನಿಸಿರಲಿಲ್ಲ. ಈಗ ಕಾಲ ಬದಲಾಗಿದೆ. ಅಮ್ಮಂದಿರ ಪರಿಸ್ಥಿತಿ ಬದಲಾಗಿದೆ. ನಾವೆಲ್ಲಾ ಆಗಿನ್ನೂ ಚಿಕ್ಕವರಿದ್ದೆವು. ಅಮ್ಮ ಬೆಳ್ಳಂಬೆಳಗ್ಗೆ ಎದ್ದು ಬಹಳಷ್ಟು…

 • ಡಿಕೆಶಿ ತಾಯಿ, ಪತ್ನಿಗೆ ಶೀಘ್ರ ಸಮನ್ಸ್‌

  ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಪತ್ನಿ ಮತ್ತು ತಾಯಿಗೆ ಸದ್ಯದಲ್ಲೇ ಹೊಸದಾಗಿ ಸಮನ್ಸ್‌ ಜಾರಿಗೊಳಿಸುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ. ಇ.ಡಿ. ಪರವಾಗಿ ವಾದ ಮಂಡಿಸಿದ ಕೇಂದ್ರ ಸರ್ಕಾರದ ವಕೀಲ ಅಮಿತ್‌…

 • ಅಮ್ಮನ ಗೊಣಗಾಟ!

  ಅಮ್ಮ ಎಂದರೆ ಮೊದಲಿಗೆ ನೆನಪಾಗುವುದು ಪ್ರೀತಿ, ಮಮತೆ, ಅಕ್ಕರೆ. ಅಮ್ಮನ ಬಗ್ಗೆ ಎಷ್ಟೇ ಹೇಳಿದರೂ ಸಾಲದು ಎಂದು ಹೇಳಿದರೆ ಯಾರು ಇಲ್ಲವೆನ್ನುತ್ತಾರೆ ! ಶಾಲಾ-ಕಾಲೇಜಿಗೆ ಹೋಗುವ ಮಕ್ಕಳನ್ನು ಬೆಳಗ್ಗೆ ಹಾಸಿಗೆಯಿಂದ ಎಬ್ಬಿಸುವಾಗಲೇ ಅಮ್ಮಂದಿರ ಗೊಣಗಾಟ ಆರಂಭವಾಗಿರುತ್ತದೆ. ಅದರಲ್ಲೂ ಕಾಲೇಜಿಗೆ…

 • ತಾಯಿ ಇದ್ದರೆ ತಾನೇ ಮಲತಾಯಿ ಧೋರಣೆ?

  ಬಾಗಲಕೋಟೆ: ಪ್ರವಾಹ ಪರಿಹಾರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ, ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸ್ಪೀಕರ್‌ ರಮೇಶಕುಮಾರ್‌, ತಾಯಿ ಇದ್ದರೆ ತಾನೇ ಮಲತಾಯಿ? ಪ್ರಧಾನಿ ಮೋದಿಗೆ ತಾಯಿ ಹೃದಯವೇ ಇಲ್ಲ. ಮಲತಾಯಿ…

ಹೊಸ ಸೇರ್ಪಡೆ