ಕರಾವಳಿ ಆಸ್ಪತ್ರೆಗಳಲ್ಲಿಯೂ ಈಗ ಬೆಡ್‌ ನಿರ್ವಹಣೆ  ಸವಾಲು


Team Udayavani, May 8, 2021, 7:20 AM IST

ಕರಾವಳಿ ಆಸ್ಪತ್ರೆಗಳಲ್ಲಿಯೂ ಈಗ ಬೆಡ್‌ ನಿರ್ವಹಣೆ  ಸವಾಲು

ಸಾಂದರ್ಭಿಕ ಚಿತ್ರ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋವಿಡ್ ದೈನಂದಿನ ಪ್ರಕರಣ ಏರಿಕೆಯಾಗುತ್ತಿದ್ದಂತೆ, ಆಕ್ಸಿಜನ್‌ ಸಮಸ್ಯೆಯ ಜತೆಗೆ ಬೆಡ್‌ಗಳ ಸಮಸ್ಯೆ ಉಂಟಾಗಬಹುದೆಂಬ ಆತಂಕ ಕಾಡುತ್ತಿದೆ.

ಆರೋಗ್ಯ ಕ್ಷೇತ್ರದ ಉತ್ಕೃಷ್ಟ ಸೇವೆಯಲ್ಲಿ ಹೆಸರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ರೋಗಕ್ಕೆ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಉಂಟಾಗುವ ಮೊದಲು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಕೆಲ ದಿನಗಳಿಂದ ಸಾವಿರಕ್ಕೂ ಹೆಚ್ಚಿನ ದೈನಂದಿನ ಪ್ರಕರಣ ದಾಖಲಾಗುತ್ತಿದ್ದು, ಈ ನಡುವೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಏರತೊಡಗಿದೆ. ಕೆಲವು ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಐಸಿಯು, ವೆಂಟಿಲೇಟರ್‌ ಬೆಡ್‌ಗಾಗಿ ವಿಚಾರಿಸಿದರೆ “ಬೆಡ್‌ ಖಾಲಿ ಇಲ್ಲ’ ಎಂಬ ಉತ್ತರ ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚು ತ್ತಿರುವ ಜತೆಗೆ ಉಡುಪಿ, ಉತ್ತರ ಕನ್ನಡ, ಕಾಸರಗೋಡು, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ತೀವ್ರ ಸಮಸ್ಯೆಯಿಂದ ಬಳಲುತ್ತಿರು ವವರನ್ನು ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಹಾಗಾಗಿ ಬಹುತೇಕ ಬೆಡ್‌ಗಳು ತುಂಬಿವೆ.

ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಗುರುವಾರದವರೆಗೆ ದ.ಕ. ಜಿಲ್ಲೆಯಲ್ಲಿ 1,383 ಮಂದಿ ಕೋವಿಡ್‌ ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 644 ಮಂದಿ ಒ2, ಎಚ್‌ಎಫ್‌ಒ ಬೆಡ್‌ನ‌ಲ್ಲಿ 58 ಮಂದಿ, ಐಸಿಯುನಲ್ಲಿ 98, ವೆಂಟಿಲೇಟರ್‌ನಲ್ಲಿ 132 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲೂ ಜಿಲ್ಲಾ ವೆನಾÉಕ್‌ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಒಳಗೊಂಡ ಐಸಿಯುನ 21 ಬೆಡ್‌ಗಳು ಕೋವಿಡ್‌ ರೋಗಿಗಳಿಗೆ ಮೀಸಲಾಗಿದ್ದು, 21 ಹಾಸಿಗೆಗಳು ಕೂಡ ಭರ್ತಿಯಾಗಿವೆ. ಇದೇ ಕಾರಣಕ್ಕೆ ಹೆಚ್ಚುವರಿಯಾಗಿ 30 ವೆಂಟಿಲೇಟರ್‌ ಐಸಿಯು ಹಾಸಿಗೆ ವಿಸ್ತರಿಸಲಾಗಿದೆ. ಅದರಲ್ಲೂ ಬಹುತೇಕ ಬೆಡ್‌ಗಳು ಭರ್ತಿಯಾಗಿವೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳಿಗೆ ಮೀಸಲಿಟ್ಟ 3,086 ಜನರಲ್‌ ಬೆಡ್‌ಗಳಲ್ಲಿ 391 ಮಂದಿ, ಎಚ್‌ಡಿಯು ಹೈ ಫ್ಲೋ ಆಕ್ಸಿಜನ್‌ನ 199 ಬೆಡ್‌ಗಳ ಪೈಕಿ 58, ಎಚ್‌ಡಿಯು ಆಕ್ಸಿಜನ್‌ ರಹಿತ 1,495 ಬೆಡ್‌ಗಳಲ್ಲಿ 464, ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ 123ರಲ್ಲಿ 106 ಮಂದಿ, ವೆಂಟಿಲೇಟರ್‌ ರಹಿತ ಐಸಿಯು 169 ಬೆಡ್‌ಗಳಲ್ಲಿ 98 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

230 ಮಂದಿಗೆ ವೆಂಟಿಲೇಟರ್‌, ಐಸಿಯುನಲ್ಲಿ ಚಿಕಿತ್ಸೆ :

ವೆಂಟಿಲೇಟರ್‌, ಐಸಿಯುನಲ್ಲಿ ಚಿಕಿತ್ಸೆ ಪಡೆಯು ತ್ತಿರುವವರ ಸಂಖ್ಯೆಯೂ ಏರತೊಡಗಿದೆ. ಚಿಕಿತ್ಸೆಗಾಗಿ ವೆಂಟಿಲೇಟರ್‌ ಅಥವಾ ಐಸಿಯು ಬೇಕು ಎಂದು ಕೆಲವೊಂದು ಕೋವಿಡ್‌ ರೋಗಿಗಳ ಸಂಬಂಧಿಕರು ಆಸ್ಪತ್ರೆಗಳಲ್ಲಿ ಹಠ ಹಿಡಿಯುತ್ತಿದ್ದಾರೆ. ಆದರೆ ಅವರ ರೋಗದ ಸ್ಥಿತಿಗೆ ಅದು ಅವಶ್ಯವಾಗಿರುವುದಿಲ್ಲ ಎನ್ನುತ್ತಾರೆ ವೈದ್ಯರು. ಜಿಲ್ಲೆಯ ವೆನಾÉಕ್‌ ಆಸ್ಪತ್ರೆಯಲ್ಲಿ 21 ಮಂದಿ, ಖಾಸಗಿ ಆಸ್ಪತ್ರೆಗಳಲ್ಲಿ 106 ಮಂದಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ, ಖಾಸಗಿ ಆಸ್ಪತ್ರೆಯಲ್ಲಿ 98 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿ: ಸದ್ಯ ಆತಂಕವಿಲ್ಲ :

ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಟ್ಟು 43 ಆಸ್ಪತ್ರೆಗಳ 1914 ಬೆಡ್‌ಗಳಲ್ಲಿ 955 ಆಕ್ಸಿಜನ್‌ ಬೆಡ್‌ಗಳನ್ನು ಮೀಸಲಿರಿಸಲಾಗಿದ್ದು 788 ಖಾಲಿ ಇದೆ. ಆಕ್ಸಿಜನ್‌ ಅಲ್ಲದ 1,944 ಬೆಡ್‌ಗಳಲ್ಲಿ 956 ಬೆಡ್‌ಗಳನ್ನು ಮೀಸಲಿರಿಸಿದ್ದು ಇವುಗಳಲ್ಲಿ 706 ಖಾಲಿ ಇದೆ. ಎಚ್‌ಡಿಯು 216ರಲ್ಲಿ 111 ಬೆಡ್‌ಗಳು ಮೀಸಲಿವೆ. ಇದರಲ್ಲಿ 77 ಖಾಲಿ ಇದೆ. ಐಸಿಯು 392 ಬೆಡ್‌ಗಳಲ್ಲಿ 195ನ್ನು ಮೀಸಲಿರಿಸಲಾಗಿದೆ. ಇದರಲ್ಲಿ 132 ಖಾಲಿ ಇವೆ. ಎಚ್‌ಎಫ್ಎನ್‌ಸಿಯಲ್ಲಿ 61ರಲ್ಲಿ 31 ಮೀಸಲಿರಿಸಲಾಗಿದೆ. ಇದರಲ್ಲಿ 24 ಖಾಲಿ ಇವೆ. ವೆಂಟಿಲೇಟರ್‌ ಬೆಡ್‌ಗಳು ಒಟ್ಟು 158 ಇದ್ದು 78 ಮೀಸಲಿರಿಸಲಾಗಿದೆ. ಇದರಲ್ಲಿ 38 ಬಳಕೆಯಲ್ಲಿದೆ. 40 ಖಾಲಿ ಇವೆ.

ತಾಲೂಕು ಆಸ್ಪತ್ರೆಗೆ  ಹೆಚ್ಚುವರಿ ವೆಂಟಿಲೇಟರ್‌ :

ಜಿಲ್ಲೆಯಲ್ಲಿ ಸದ್ಯಕ್ಕೆ ಕೋವಿಡ್‌ ರೋಗಿಗಳಿಗೆ ಬೆಡ್‌ ಕೊರತೆ ಇಲ್ಲ. ಜಿಲ್ಲೆಯ ತಾ| ಆಸ್ಪತ್ರೆಗಳಲ್ಲಿ ಹೆಚ್ಚುವರಿ ವೆಂಟಿಲೇಟರ್‌ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಕೆಲವೊಂದು ವೆಂಟಿಲೇಟರ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹೆಚ್ಚುವರಿ 10 ವೆಂಟಿಲೇಟರ್‌ ಬೆಡ್‌ ಅಳವಡಿಸಲಾಗುವುದು. ಖರೀದಿ ಮಾಡಿ ಮತ್ತಷ್ಟು ವೆಂಟಿಲೇಟರ್‌ ಅಳವಡಿಸಲು ದ.ಕ. ಆಸ್ಪತ್ರೆಗಳಲ್ಲಿ ಜಾಗದ ಸಮಸ್ಯೆ ಇದೆ. ಉಡುಪಿ ಜಿಲ್ಲೆಯಲ್ಲಿ ಹತ್ತು ವೆಂಟಿಲೇಟರ್‌ಗಳು ಸರಕಾರದಿಂದ ಬಂದಿದ್ದು ಇವುಗಳನ್ನು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅಳವಡಿಸಲಾಗಿದೆ.

ಡಾ| ಕಿಶೋರ್‌ ಕುಮಾರ್‌, ಡಾ|ಸುಧೀರ್‌ಚಂದ್ರ ಸೂಡ, ದ.ಕ. ಮತ್ತು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ

 

ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Road Mishap ಮಣಿಪಾಲ: ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Theme Park Karkala ಅವಶೇಷ‌ ತೆರವಿಗೆ ಕೋರ್ಟ್‌ ಆದೇಶ; ಜಿಲ್ಲಾಧಿಕಾರಿ ತಡೆ!

Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್‌ ಶೆಟ್ಟಿ ಆರೋಪ

Parashurama Theme Park; ಕೊನೆಯ ಸಾಕ್ಷ್ಯವೂ ನಾಶಕ್ಕೆ ಯತ್ನ: ಉದಯ ಕುಮಾರ್‌ ಶೆಟ್ಟಿ ಆರೋಪ

ಪದವೀಧರರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ: ಜಿಲ್ಲಾಧಿಕಾರಿ

ಪದವೀಧರರ, ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ: ಜಿಲ್ಲಾಧಿಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

Amit Shah ನಕಲಿ ವೀಡಿಯೋ ಕೇಸ್‌: ಕಾಂಗ್ರೆಸ್‌ ಮುಖಂಡನ ಸೆರೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.