One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?


Team Udayavani, Apr 30, 2024, 9:28 PM IST

20-one-plus

ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಫೋನ್ ಗಳಿಗೆ ಹೆಸರುಗಳಿಸಿರುವ ಒನ್ ಪ್ಲಸ್ , ಈಗ ಮೀಡಿಯಂ ರೇಂಜ್ ನಲ್ಲಿ ಹೊಸ ಫೋನ್ ಬಿಡುಗಡೆ ಮಾಡಿದೆ. ಅದು ಒನ್ ಪ್ಲಸ್ ನಾರ್ಡ್ ಸಿಇ4.

ಇದರ ದರ 8+128 ಜಿಬಿ ಮಾದರಿಗೆ 24,999 ರೂ ಹಾಗೂ 8+256 ಜಿಬಿ  ಮಾದರಿಗೆ 26,999 ರೂ. ಇದೆ. ಅಮೆಜಾನ್ ನಲ್ಲಿ ಈಗ ಐಸಿಐಸಿಐ ಮತ್ತು ಎಚ್ಡಿಎಫ್ಸಿ ಕ್ರೆಡಿಟ್ ಕಾರ್ಡ್ ಗಳಿಗೆ 1500 ರೂ. ರಿಯಾಯಿತಿ ಇದೆ.

ಈ ಹೊಸ ಫೋನಿನಲ್ಲಿ ಏನೇನಿದೆ ಎಂಬುದರ ವಿವರ ಇಲ್ಲಿದೆ.

ವಿನ್ಯಾಸ ಮತ್ತು ಪರದೆ:

ಇದರ ವಿನ್ಯಾಸ ಹಿಂದಿನ ನಾರ್ಡ್ ಸರಣಿಯ ಫೋನ್ ಗಳಿಗಿಂತ ಭಿನ್ನವಾಗಿದೆ. ಹೊಸದಾಗಿದೆ. ಇದರ ಹಿಂಬದಿ ಪ್ಯಾನೆಲ್ ಪಾಲಿಕಾರ್ಬೊನೆಟ್ ಆಗಿದ್ದು  ಹೊಳಪಿನಿಂದ ಕೂಡಿದೆ. ಹಿಂಬದಿಯ ಎಡ ಮೂಲೆಯಲ್ಲಿ ಮೂರು ವೃತ್ತಾಕಾರದ ಕ್ಯಾಮರಾ ಲೆನ್ಸ್ ಅನ್ನು ಒಂದರ ಕೆಳಗೆ ಒಂದರಂತೆ ಅಳವಡಿಸಲಾಗಿದೆ. ಇದು ಸರಳ ಸುಂದರವಾಗಿ ಕಾಣುತ್ತದೆ. ಫೋನ್ಗೆ ಸಿಲಿಕಾನ್ ಬ್ಯಾಕ್ ಕವರನ್ನು ಮೊಬೈಲ್ನೊಂದಿಗೇ ನೀಡಲಾಗಿದೆ.

ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54-ರೇಟ್ ಹೊಂದಿದೆ.  ಮತ್ತು ಇದು ನೀರಿನ ಸಿಂಪಡಿಕೆ ತಡೆದುಕೊಳ್ಳಬಲ್ಲುದು. ಇದಕ್ಕಾಗಿ AquaTouch ತಂತ್ರಜ್ಞಾನವನ್ನು ಪರದೆಗೆ ಅಳವಡಿಸಲಾಗಿದ್ದು, ಒದ್ದೆ ಬೆರಳುಗಳಲ್ಲಿ ಮುಟ್ಟಿದರೂ ಕೆಲಸ ನಿರ್ವಹಿಸುತ್ತದೆ.

6.7 ಇಂಚಿನ 120 ಹರ್ಟ್ಜ್ ಅಮೋಲೆಡ್ ಪರದೆ ಹೊಂದಿರುವುದು ವಿಶೇಷ. ಪರದೆಯಲ್ಲೇ ಬೆರಳಚ್ಚು ರೀಡರ್ ಇದೆ. ಅಮೋಲೆಡ್ ಪರದೆಯ ಕಾರಣ ಚಿತ್ರಗಳು, ವಿಡಿಯೋಗಳು ಕಣ್ಣಿಗೆ ತ್ರಾಸ ಕೊಡದೇ ರಿಚ್ ಆಗಿ ಕಾಣುತ್ತವೆ. HDR10 Netflix ನಂತಹ ಸ್ಟ್ರೀಮಿಂಗ್ ಅಪ್ಲಿಕೇಶನ್ಗಳಿಗೆ ಉಪಯುಕ್ತವಾಗಿದೆ. ಪರದೆ ಹೊರಾಂಗಣದಲ್ಲಿ ಬಿಸಿಲಿನಲ್ಲೂ ಪ್ರಕಾಶಮಾನವಾಗಿ ಕಾಣುತ್ತದೆ.

ಪ್ರೊಸೆಸರ್ ಮತ್ತು ಕಾರ್ಯಾಚರಣೆ:

OnePlus Nord CE 4 ಹೊಸ Qualcomm Snapdragon 7 Gen 3 SoC ಹೊಂದಿದೆ.  ಪ್ರೊಸೆಸರ್ ಶಕ್ತ ದಕ್ಷವಾಗಿದ್ದು, ಮತ್ತು ಮಧ್ಯಮ ಶ್ರೇಣಿಯ ಕಾರ್ಯಕ್ಷಮತೆ ಹೊಂದಿದೆ. ಇದರಲ್ಲಿ 2 ನ್ಯಾನೋ ಸಿಮ್ ಕಾರ್ಡ್ ಅಥವಾ ಸಿಮ್ ಕಾರ್ಡ್ ಮತ್ತು 1 ಟಿಬಿ ವರೆಗೆ ಮೈಕ್ರೊ ಎಸ್ಡಿ ಕಾರ್ಡ್ ಇರುವ ಹೈಬ್ರಿಡ್ ಸಿಮ್ ಸೌಲಭ್ಯ ಹೊಂದಿದೆ.

ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.4, ಯುಎಸ್ಬಿ ಟೈಪ್-ಸಿ ಪೋರ್ಟ್ (ಯುಎಸ್ಬಿ 2.0), ಹಲವಾರು 5 ಜಿ ಬ್ಯಾಂಡ್ ಗಳನ್ನು ಬೆಂಬಲಿಸುತ್ತದೆ.  8 ಜಿಬಿ ರ್ಯಾಮ್ ಇದ್ದು, ಫೋನಿನ ಮೆಮೊರಿ ಬಳಸಿಕೊಂಡು 8 ಜಿಬಿ ಹೆಚ್ಚುವರಿ ವರ್ಚುವಲ್ ರ್ಯಾಮ್ ಮಾರ್ಪಡಿಸಿಕೊಳ್ಳಬಹುದಾಗಿದೆ.

Android 14 ಅನ್ನು ಆಧರಿಸಿದ OxygenOS 14 ಕಾರ್ಯಾಚರಣೆ ವ್ಯವಸ್ಥೆಯಿದೆ.  ಇದಕ್ಕೆ  2 ವರ್ಷಗಳ ಸಾಫ್ಟ್ವೇರ್ ಅಪ್ಡೇಟ್ ಮತ್ತು 3 ವರ್ಷಗಳ ಭದ್ರತಾ ಅಪ್ಡೇಟ್  ನೀಡುತ್ತದೆ.

ಫೋನ್ ನೊಂದಿಗೆ ನಮಗೆ ಅಗತ್ಯವಿಲ್ಲದ ಬ್ಲೋಟ್ ವೇರ್ ಆಪ್ಗಳನ್ನು ನೀಡಿಲ್ಲದೇ ಇರುವುದು ಸಮಾಧಾನದ ಸಂಗತಿ.

ಸ್ಮಾರ್ಟ್ ಟಚ್ (ಸ್ಕ್ರೀನ್ಶಾಟ್ನಿಂದ ಪಠ್ಯವನ್ನು ಬೇರ್ಪಡಿಸಲು) ನಂತಹ ಹಗುರವಾದ AI- ಸಕ್ರಿಯಗೊಳಿಸಿದ ವೈಶಿಷ್ಟ್ಯಗಳು ಸಹ ಇವೆ. ಫೈಲ್ ಡಾಕ್ ಮೂಲಕ ಬೆಂಬಲಿತ ಅಪ್ಲಿಕೇಶನ್ಗಳಿಗೆ ಸ್ಮಾರ್ಟ್ ಸೈಡ್ಬಾರ್ನಿಂದ ಫೈಲ್ಗಳು ಅಥವಾ ಚಿತ್ರಗಳನ್ನು ಡ್ರಾಗ್ಮಾಡಬಹುದು. ಫೋನು, ಸಾಫ್ಟ್ವೇರ್ ದೃಷ್ಟಿಯಿಂದ  ಯಾವುದೇ ವಿಳಂಬವಿಲ್ಲದೆ, ಮೃದುವಾಗಿ ಕಾರ್ಯಾಚರಿಸುತ್ತದೆ.

ಬ್ಯಾಟರಿ:

ಈ ಫೋನ್ 5,500mAh ಬ್ಯಾಟರಿ ಹೊಂದಿದೆ. ಬಾಕ್ಸ್ನಲ್ಲಿ 100W ಚಾರ್ಜರ್ ಇರುವುದು ಬೋನಸ್. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ಕ್ಯಾಶುಯಲ್ ಬಳಕೆಯೊಂದಿಗೆ ಸುಮಾರು ಒಂದೂವರೆ ದಿನದ ಬ್ಯಾಟರಿ ಬರುತ್ತದೆ. ನಿರಂತರವಾಗಿ ಬಳಸಿದರೆ ಒಂದು ದಿನ ಪೂರ್ತಿ ಬರುತ್ತದೆ.

ಕೇವಲ 39 ನಿಮಿಷಗಳಲ್ಲಿ ಸೊನ್ನೆಯಿಂದ 100 ಶೇಕಡಾ ಚಾರ್ಜ್ ಆಗುತ್ತದೆ. ಈ ದರದಲ್ಲಿ 100 ವ್ಯಾಟ್ಸ್ ತ್ವರಿತ ವೇಗದ ಚಾರ್ಜರ್ ನೀಡಿರುವುದು ಶ್ಲಾಘನೀಯ.

ಕ್ಯಾಮರಾ:

OnePlus ಹೊಸ 50-ಮೆಗಾಪಿಕ್ಸೆಲ್ LYT600 Sony IMX890 ಪ್ರಾಥಮಿಕ ಲೆನ್ಸ್ ,  8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ (ಸೋನಿ IMX355) ಮತ್ತು 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.  ಇದರಲ್ಲಿ ಹಿಂದಿನ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಕೈಬಿಡಲಾಗಿದೆ.

ಪ್ರಾಥಮಿಕ ಕ್ಯಾಮರಾ ಸ್ಯಾಚುರೇಟೆಡ್ ಬಣ್ಣಗಳೊಂದಿಗೆ ಉತ್ತಮವಾಗಿ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಬೆಳಕಿನಲ್ಲಿ ಫೋಟೋ ತೆಗೆದಾಗ ವಸ್ತುವಿನ ಡೀಟೇಲ್ ಚೆನ್ನಾಗಿ ಮೂಡಿಬರುತ್ತದೆ.  ಉತ್ತಮ ಕ್ಲೋಸ್-ಅಪ್ ಚಿತ್ರಗಳನ್ನು ಪಡೆಯಬಹುದಾಗಿದೆ.

ಇದು ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿಲ್ಲ, ಆದ್ದರಿಂದ ಹಿಂದಿನ Nord CE3 ನಂತೆ ತೀವ್ರ ಕ್ಲೋಸ್-ಅಪ್ಗಳನ್ನು ಚಿತ್ರೀಕರಿಸುವುದು ಸಾಧ್ಯವಿಲ್ಲ. ಆದಾಗ್ಯೂ, ವಸ್ತುಗಳನ್ನು 15-20 ಸೆಂಟಿಮೀಟರ್ ಹತ್ತಿರದಲ್ಲಿ ತೆಗೆಯಬಹುದು.

ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಸೆಲ್ಫಿ ಕ್ಯಾಮರಾ ಮತ್ತು ವಿಡಿಯೋ ಚಿತ್ರೀಕರಣ ಈ ದರಕ್ಕೆ ಸಮಾಧಾನಕರವಾಗಿದೆ.

OnePlus Nord CE 4, ಹಿಂದಿನ Nord CE3 ಗೆ ಹೋಲಿಸಿದರೆ ಉತ್ತಮ ಅಪ್ಗ್ರೇಡ್ ಆಗಿದೆ. ಇದು ಬಳಕೆದಾರರಿಗೆ ಐಪಿ ರೇಟಿಂಗ್, ಹೆಚ್ಚು ಶಕ್ತಿಶಾಲಿ ಪ್ರೊಸೆಸರ್, ಯೋಗ್ಯ ಕ್ಯಾಮೆರಾ ಮತ್ತು ವೇಗದ ಚಾರ್ಜಿಂಗ್ ಉಳ್ಳ ಉತ್ತಮ ಬ್ಯಾಟರಿ ಹೊಂದಿದೆ.

-ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Crime News: ಕಾಸರಗೋಡು ಅಪರಾಧ ಸುದ್ದಿಗಳು

Crime News: ಕಾಸರಗೋಡು ಅಪರಾಧ ಸುದ್ದಿಗಳು

ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

Hiriadka ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

Udupi ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

BJP notice to Union Minister Sinha who did not come to campaign and did not vote

BJP: ಪ್ರಚಾರಕ್ಕೆ ಬರದ, ವೋಟ್‌ ಮಾಡದ ಕೇಂದ್ರ ಸಚಿವ ಸಿನ್ಹಾಗೆ ಬಿಜೆಪಿ ನೋಟಿಸ್‌

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟ್ವಿಟರ್‌ ಹೋಯಿತು, ಈಗ ಎಕ್ಸ್‌.ಕಾಮ್‌ ಅಧಿಕೃತ: ಎಲಾನ್‌ ಮಸ್ಕ್

ಟ್ವಿಟರ್‌ ಹೋಯಿತು, ಈಗ ಎಕ್ಸ್‌.ಕಾಮ್‌ ಅಧಿಕೃತ: ಎಲಾನ್‌ ಮಸ್ಕ್

Update Android Mobile: Central Govt Warning to Users

Android ಮೊಬೈಲ್‌ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

BOULT BassBox X120

Smart Home Audio; ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Road Mishap ಬೈಕ್‌-ಸ್ಕೂಟರ್‌ ಢಿಕ್ಕಿ; ಮೂವರಿಗೆ ಗಾಯ

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Uppunda ಅಪರಿಚಿತ ವಾಹನ ಢಿಕ್ಕಿ; ಕೂಲಿ ಕಾರ್ಮಿಕ ಸಾವು

Crime News: ಕಾಸರಗೋಡು ಅಪರಾಧ ಸುದ್ದಿಗಳು

Crime News: ಕಾಸರಗೋಡು ಅಪರಾಧ ಸುದ್ದಿಗಳು

ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

Hiriadka ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ: ಪ್ರಕರಣ ದಾಖಲು

ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

Udupi ಟೆಸ್ಟ್‌ ಡ್ರೈವ್‌ ನೆಪದಲ್ಲಿ ಕಾರಿಗೆ ಜಖಂ; ಕಳ್ಳತನಕ್ಕೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.