Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ


Team Udayavani, May 19, 2024, 12:01 PM IST

5-

ಒಬ್ಬ ವ್ಯಕ್ತಿಯ ಕ್ರಿಯಾತ್ಮಕ ಚಟುವಟಿಕೆಗಳ ಮೇಲೆ ಗಂಭೀರವಾಗಿ ಪರಿಣಾಮ ಬೀರುವ ಯಾವುದೇ ಮಾನಸಿಕ ಕಾಯಿಲೆ ಅಥವಾ ನಡವಳಿಕೆಯ ತೊಂದರೆಯನ್ನು ತೀವ್ರ ಮಾನಸಿಕ ಅಸ್ವಸ್ಥತೆ ಎಂದು ಕರೆಯಲಾಗುತ್ತದೆ. ಸ್ಕಿಝೋಫ್ರೆàನಿಯಾ, ಬೈಪೋಲಾರ್‌ ಅಸ್ವಸ್ಥತೆ ಮತ್ತು ಖನ್ನತೆಯನ್ನು ತೀವ್ರ ಮಾನಸಿಕ ಅಸ್ವಸ್ಥತೆಗಳೆಂದು ಪರಿಗಣಿಸಲಾಗುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವ ಶೇ. 20-60 ರೋಗಿಗಳು ಸಾಮಾನ್ಯವಾಗಿ ದೊರಕುವ ಔಷಧಗಳಿಗೆ ಸ್ಪಂದಿಸುವುದಿಲ್ಲ. ಇದನ್ನು ಚಿಕಿತ್ಸೆ ಪ್ರತಿರೋಧಕವೆಂದು (treatment resistance) ಪರಿಗಣಿಸಲಾಗುತ್ತದೆ ಮತ್ತು ಇದರಿಂದ ಚಿಕಿತ್ಸೆಯ ವೆಚ್ಚ ಹೆಚ್ಚಾಗುತ್ತದೆ. ಈ ರೋಗಿಗಳಲ್ಲಿ ನ್ಯೂರೋಮೊಡ್ನೂಲೇಶನ್‌ (neuromodulation) ಚಿಕಿತ್ಸೆಯು ಒಂದು ಪರಿಣಾಮಕಾರಿ ವಿಧಾನ. ಈ ಚಿಕಿತ್ಸೆಯು ಭಾರತದ ಹಲವು ಕಡೆ ಲಭ್ಯವಿದ್ದು, ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಬಳಸಲಾಗುತ್ತಿದೆ. ಇದರ ಕುರಿತು ಈ ಲೇಖನವು ಕೆಲವು ಮಾಹಿತಿಯನ್ನು ಒಳಗೊಂಡಿದೆ.

ನ್ಯೂರೋಮಾಡ್ಯುಲೇಶನ್‌ ಎಂದರೇನು? ನ್ಯೂರೋಮಾಡ್ಯುಲೇಶನ್‌ ಎನ್ನುವುದು ವಿವಿಧ ವೈದ್ಯಕೀಯ ವಿಧಾನಗಳಿಗೆ ನೀಡಲಾದ ಹೆಸರು. ಈ ಚಿಕಿತ್ಸೆಯು ಮೆದುಳಿನ ಕೆಲವು ಭಾಗಗಳನ್ನು ನೇರವಾಗಿ ಉತ್ತೇಜಿಸುವ ಮೂಲಕ ಆ ಭಾಗದ ಚಟುವಟಿಕೆಯನ್ನು ಹಲವಾರು ರೀತಿಯಲ್ಲಿ ಬದಲಾಯಿಸುತ್ತದೆ. ಮೆದುಳಿನ ಕೆಲವು ಭಾಗಗಳ ಕಾರ್ಯನಿರ್ವಹಣೆಯನ್ನು ಬದಲಾಯಿಸುವ ಮೂಲಕ ಮಾನಸಿಕ ಕಾಯಿಲೆಗಳ ರೋಗಲಕ್ಷಣಗಳನ್ನು ಸುಧಾರಿಸುವುದು ನ್ಯೂರೋಮಾಡ್ಯುಲೇಶನ್‌ ಚಿಕಿತ್ಸೆಯ ಗುರಿಯಾಗಿದೆ.

ಮಾನಸಿಕ ಅಸ್ವಸ್ಥತೆಗಳಲ್ಲಿ ನ್ಯೂರೋಮಾಡ್ಯುಲೇಶನ್‌ ಹೇಗೆ ಸಹಾಯ ಮಾಡುತ್ತದೆ?

ಮಾನಸಿಕ ಕಾಯಿಲೆಯನ್ನು ಹೊಂದಿರುವ ರೋಗಿಗಳ ಮೆದುಳಿನ ಕೆಲವು ಭಾಗಗಳ ಚಟುವಟಿಕೆಯಲ್ಲಿ ವ್ಯತ್ಯಾಸವಿರುತ್ತದೆ. ಇದು ಈ ಮೊದಲು ನಡೆಸಿದ ಮೆದುಳಿನ ಸ್ಕ್ಯಾನ್‌ ಅಧ್ಯಯನಗಳ ಮೂಲಕ ತಿಳಿದು ಬಂದಿದೆ. ಮೆದುಳಿನ ಚಟುವಟಿಕೆಗಳ ಬದಲಾವಣೆ ಒಬ್ಬ ವ್ಯಕ್ತಿ ಯಾವ ಮಾನಸಿಕ ಕಾಯಿಲೆಯನ್ನು ಹೊಂದಿದ್ದಾನೆ ಎಂಬುದನ್ನು ಅವಲಂಬಿಸಿರುತ್ತದೆ. ಕೆಲವು ಕಾಯಿಲೆಗಳಲ್ಲಿ ಮಿದುಳಿನ ವಿವಿಧ ಭಾಗಗಳ ಚಟುವಟಿಕೆಯು ಹೆಚ್ಚಿರಬಹುದು ಮತ್ತು ಇನ್ನು ಕೆಲವು ಕಾಯಿಲೆಗಳಲ್ಲಿ ಕಡಿಮೆಯಾಗಿರಬಹುದು.

ಉದಾಹರಣೆಗೆ, ಖನ್ನತೆಯಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಅವರ ಮೆದುಳಿನ ಭಾಗಗಳ ಚಟುವಟಿಕೆ ಕಡಿಮೆಯಾಗಿರಬಹುದು. ಸೈಕೋಸಿಸ್‌ನಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ (ಉದಾಹರಣೆಗೆ, ಸ್ಕಿಜೋಫ್ರೇನಿಯಾ ಕಾಯಿಲೆ) ಮೆದುಳಿನ ಕೆಲವು ಭಾಗಗಳು ಹೆಚ್ಚು ಸಕ್ರಿಯವಾಗಿರಬಹುದು.

ಈ ವ್ಯತ್ಯಾಸಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರಬಹುದು. ಒಬ್ಬ ವ್ಯಕ್ತಿಯ ಕಾಯಿಲೆಯ ಲಕ್ಷಣ ಉತ್ತಮವಾಗುತ್ತಿದ್ದಂತೆ ಅಥವಾ ಹೆಚ್ಚು ಅಸ್ವಸ್ಥಗೊಂಡಂತೆ, ಮೆದುಳಿನ ಚಟುವಟಿಕೆಗಳು ಬದಲಾಗಬಹುದು. ಮೆದುಳಿನ ಈ ಚಟುವಟಿಕೆಗಳನ್ನು ನ್ಯೂರೊಮೊಡ್ನೂಲೇಶನ್‌ ಚಿಕಿತ್ಸೆಯ ಮೂಲಕ ಬದಲಾಯಿಸಬಹುದು ಮತ್ತು ಇದರಿಂದ ಉಂಟಾಗುವ ಮಾನಸಿಕ ಕಾಯಿಲೆಯ ಕೆಲವು ಲಕ್ಷಣಗಳನ್ನು ಸರಿಪಡಿಸಬಹುದು.

ನ್ಯೂರೊಮೊಡ್ನೂಲೇಶನ್‌ ಚಿಕಿತ್ಸೆಯ ವಿವಿಧ ಬಗೆಗಳು ಯಾವುವು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ?

ನ್ಯೂರೊಮೊಡ್ನೂಲೇಶನ್‌ ಚಿಕಿತ್ಸೆ ಒಂದು ವಿಶಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ವಿವಿಧ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಬಳಸುವ ಎರಡು ನ್ಯೂರೊಮೊಡ್ನೂಲೇಶನ್‌ ವಿಧಾನಗಳೆಂದರೆ:

  1. ತಲೆಯ ಮೇಲೆ ಮ್ಯಾಗ್ನೆಟಿಕ್‌ ಕಾಯಿಲ್‌ ಇರಿಸುವ ಮೂಲಕ ನೀಡಲಾಗುವ ಚಿಕಿತ್ಸೆ – ಟ್ರಾನ್ಸ್ ಕ್ರೇನಿಯಲ್‌ ಮ್ಯಾಗ್ನೆಟಿಕ್‌ ಸ್ಟಿಮ್ಯುಲೇಶನ್‌ (tCMS)‌
  2. ತಲೆಯ ಮೇಲೆ ವಿದ್ಯುದ್ವಾರಗಳನ್ನು ಇರಿಸಿ ಅವುಗಳ ನಡುವೆ ಸಣ್ಣ ಪ್ರಮಾಣದ ವಿದ್ಯುತ್‌ ಪ್ರವಾಹವನ್ನು ಹಾಯಿಸಿ ನೀಡಲಾಗುವ ಚಿಕಿತ್ಸೆ – ಟ್ರಾನ್ಸ್ ಕ್ರೇನಿಯಲ್‌ ಡೈರೆಕ್ಟ್ ಕರೆಂಟ್‌ ಸ್ಟಿಮ್ಯುಲೇಶನ್‌ (tDCS). ‌

ಎರಡೂ ವಿಧಾನಗಳು ಮೆದುಳಿನ ನರಕೋಶಗಳ ಚಟುವಟಿಕೆಯನ್ನು ಬದಲಾಯಿಸುವ ಮೂಲಕ ಮೆದುಳಿನ ಇತರ ಭಾಗಗಳೊಂದಿಗಿನ ಸಂಪರ್ಕವನ್ನು ಮಾರ್ಪಾಟು ಮಾಡಬಹುದು. ಈ ಮೂಲಕ ವ್ಯತ್ಯಾಸಗೊಂಡಿರುವ ಮೆದುಳಿನ ಚಟುವಟಿಕೆಗಳು ಬದಲಾಯಿಸಿ, ಕಾಯಿಲೆಯ ಲಕ್ಷಣಗಳು ಸುಧಾರಿಸಬಹುದು. ‌

ಟ್ರಾನ್ಸ್ ಕ್ರೇನಿಯಲ್‌ ಮ್ಯಾಗ್ನೆಟಿಕ್‌ ಸ್ಟಿಮ್ಯುಲೇಶನ್‌ (TMS)

ನ್ಯೂರೋಮಾಡ್ಯುಲೇಶನ್‌ನ ಅತ್ಯಂತ ಸಾಮಾನ್ಯ ವಿಧವೆಂದರೆ “ರೆಪೆಟಿಟಿವ್‌ ಟ್ರಾನ್ಸ್‌ ಕ್ರಾನಿಯಲ್‌ ಮ್ಯಾಗ್ನೆಟಿಕ್‌ ಸ್ಟಿಮ್ಯುಲೇಶನ್‌’. ಇದನ್ನು ಆರ್‌ಟಿಎಂಎಸ್‌ (rTMS- ಸಾಮಾನ್ಯವಾಗಿ ‘ TMS) ಎಂದು ಕರೆಯಲಾಗುತ್ತದೆ. ಇದನ್ನು ಮೊದಲ ಬಾರಿಗೆ 1980ರ ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತು.

ಈ ಚಿಕಿತ್ಸೆಯಲ್ಲಿ ಮ್ಯಾಗ್ನೆಟಿಕ್‌ ಕಾಯಿಲ್‌ ಅನ್ನು ತಲೆಯ ಮೇಲೆ ಇರಿಸಲಾಗುತ್ತದೆ. ಈ ಕಾಯಿಲ್‌ ನ ಒಳಗೆ ಲೋಹದ ತಂತಿಗಳಿರುತ್ತವೆ. ಈ ತಂತಿಗಳಲ್ಲಿ ಕ್ಷಿಪ್ರವಾಗಿ ವಿದ್ಯುತ್‌ ಪ್ರವಾಹವನ್ನು ಹರಿಸಿದಾಗ ತಾತ್ಕಾಲಿಕವಾಗಿ ತಂತಿಯ ಹೊರಗೆ ಆಯಸ್ಕಾಂತ ಕ್ಷೇತ್ರವು ಉತ್ಪಾದನೆಗೊಳ್ಳುತ್ತದೆ. ಇದನ್ನು ಭೌತಶಾಸ್ತ್ರದಲ್ಲಿ “ಎಲೆಕ್ಟ್ರೋಮ್ಯಾಗ್ನೆಟಿಕ್‌ ಇಂಡಕ್ಷನ್‌’ ಎಂದು ಕರೆಯಲಾಗುತ್ತದೆ. ಕಾಯಿಲ್‌ನಲ್ಲಿ ಹರಿಯುವ ವಿದ್ಯುತ್‌ ಶಕ್ತಿಯನ್ನು ಕ್ಷಿಪ್ರವಾಗಿ “ಆನ್‌’ ಮತ್ತು “ಆಫ್‌’ ಮಾಡುವುದರಿಂದ ಅಷ್ಟೇ ಕ್ಷಿಪ್ರವಾಗಿ ಕಾಯಿಲ್‌ನ ಬಳಿಯಿರುವ ಆಯಸ್ಕಾಂತ ಕ್ಷೇತ್ರವು ಬದಲಾಗುತ್ತದೆ. ಕ್ಷಿಪ್ರವಾಗಿ ಬದಲಾಗುವ ಈ ಅಯಸ್ಕಾಂತ ಕ್ಷೇತ್ರವನ್ನು ಬಳಸಿಕೊಂಡು ಮೆದುಳಿನ ವಿವಿಧ ಪ್ರದೇಶಗಳ ನರಕೋಶಗಳ ಮೇಲೆ ಮೇಲೆ ಪರಿಣಾಮವನ್ನುಂಟು ಮಾಡಬಹುದು.

ಮ್ಯಾಗ್ನೆಟಿಕ್‌ ಕಾಯಿಲ್‌ನಲ್ಲಿ ಹರಿಯುವ ವಿದ್ಯುತ್‌ ಶಕ್ತಿಯನ್ನು “ಆನ್‌’ ಮತ್ತು “ಆಫ್‌’ ಮಾಡುವ ವೇಗವನ್ನು ಬದಲಾಯಿಸಬಹುದು. ಅದನ್ನು ತ್ವರಿತವಾಗಿ ಆನ್‌ ಮತ್ತು ಆಫ್‌ ಮಾಡುವುದರಿಂದ ನ್ಯೂರಾನ್‌ ಗಳನ್ನು “ಎಕ್ಸೈಟ್‌’ ಮಾಡಲು ಮತ್ತು ಅವುಗಳನ್ನು ಹೆಚ್ಚು ಸಕ್ರಿಯವಾಗಿಸಲು ಸಹಾಯ ಮಾಡುತ್ತದೆ. ಅದನ್ನು ನಿಧಾನವಾಗಿ ಆನ್‌ ಮತ್ತು ಆಫ್‌ ಮಾಡುವುದರಿಂದ ನ್ಯೂರಾನ್‌ ಗಳನ್ನು “ಪ್ರತಿಬಂಧಿಸಲು’ ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ಕಡಿಮೆ ಸಕ್ರಿಯವಾಗಿ ಮಾಡಬಹುದು. ಚಿಕಿತ್ಸೆಯು ಮೆದುಳಿನ ಕೋಶಗಳ ನಡುವಿನ ದೀರ್ಘಾವಧಿಯ ಸಂಪರ್ಕಗಳನ್ನು ಬದಲಾಯಿಸಬಹುದು ಮತ್ತು ಪರಸ್ಪರ ಹೊಸ ಸಂಪರ್ಕಗಳನ್ನು ರೂಪಿಸಲು ಸಹಾಯ ಮಾಡಬಹುದು ಎಂದು ಇದುವರೆಗಿನ ಅಧ್ಯಯನಗಳಿಂದ ತಿಳಿದು ಬಂದಿದೆ. ಈ ಚಿಕಿತ್ಸೆಯ ಪರಿಣಾಮಗಳ ಅವಧಿ ಒಬ್ಬೊಬ್ಬರಲ್ಲೂ ಭಿನ್ನವಾಗಿರುತ್ತದೆ. ಇದರ ಬಗ್ಗೆ ಹಲವು ಅಧ್ಯಯನಗಳು ಪ್ರಸ್ತುತ ನಡೆಯುತ್ತಿವೆ.

ಆರ್‌ಟಿಎಂಎಸ್‌ (rTMS) ಚಿಕಿತ್ಸೆಯು ಕೆಲವು ಅಡ್ಡ ಪರಿಣಾಮಗಳನ್ನು ಹೊಂದಿದೆ. ಇದನ್ನು ಪಡೆದ ಅನಂತರ ಕೆಲವು ಜನರು ತಾತ್ಕಾಲಿಕವಾಗಿ ತಲೆನೋವು ಅನುಭವಿಸಬಹುದು. ಹೆಚ್ಚಿನ ಜನರು ಆರ್‌ಟಿಎಂಎಸ್‌ ಪಡೆಯುವಾಗ ನೋವನ್ನು ಅನುಭವಿಸುವುದಿಲ್ಲ. ಮ್ಯಾಗ್ನೆಟಿಕ್‌ ಕಾಯಿಲ್‌ ಅನ್ನು ಮುಖಕ್ಕೆ ತುಂಬಾ ಹತ್ತಿರಕ್ಕೆ ಸರಿಸಿದರೆ ಅದು ಮುಖದ ಸ್ನಾಯುಗಳು ಸೆಳೆತಕ್ಕೆ ಕಾರಣವಾಗಬಹುದು. ಆದರೆ ಇದರಿಂದ ಯಾವುದೇ ಅಪಾಯವಿರುವುದಿಲ್ಲ. ಈ ಚಿಕಿತ್ಸೆಯಿಂದ ನೆನಪಿನ ಶಕ್ತಿಯ ಸಮಸ್ಯೆ ಅಥವಾ ಇನ್ನಿತರ ಧೀರ್ಘ‌ಕಾಲದ ದುಷ್ಪರಿಣಾಮಗಳಿರುವುದಿಲ್ಲ.

ಖನ್ನತೆಗೆ ಚಿಕಿತ್ಸೆ ನೀಡಲು ಆರ್‌ ಟಿಎಂಎಸ್‌ (rTMS)) ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಖನ್ನತೆಯಿಂದ ಬಳಲುತ್ತಿರುವ ಜನರಲ್ಲಿ ಮೆದುಳಿನ “ಪ್ರಿಫ್ರಂಟಲ್‌ ಕಾರ್ಟೆಕ್ಸ್’ ಎಂಬ ಭಾಗದ ಚಟುವಟಿಕೆ ಕಡಿಮೆಯಾಗಿರುತ್ತದೆ. ಆರ್‌ಟಿಎಂಎಸ್‌ ಮೂಲಕ ಈ ಭಾಗದ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಖನ್ನತೆಯ ಲಕ್ಷಣಗಳನ್ನು ಸರಿಪಡಿಸಬಹುದು.

ಸೈಕೋಸಿಸ್‌ ಅಥವಾ ಸ್ಕಿಝೋಫ್ರೇನಿಯಾ ಕಾಯಿಲೆ ಅನುಭವಿಸುತ್ತಿರುವ ಜನರಲ್ಲಿ ಕೇಳುವ ಧ್ವನಿಗಳಿಗೆ ( ಶ್ರಾವ್ಯ ಭ್ರಮೆಗಳು) ಚಿಕಿತ್ಸೆ ನೀಡಲು ಆರ್‌ ಟಿಎಂಎಸ್‌ ಅನ್ನು ಬಳಸಬಹುದು. ಶ್ರಾವ್ಯ ಭ್ರಮೆಗಳಿಂದ ಬಳಲುತ್ತಿರುವ ಜನರಲ್ಲಿ ಮೆದುಳಿನ “ಟೆಂಪೊರೊ – ಪೆರೈಟಲ್‌ ಜಂಕ್ಷನ್‌’ ಎಂಬ ಭಾಗ ಹೆಚ್ಚು ಸಕ್ರಿಯವಾಗಿರುತ್ತದೆ. ಮೆದುಳಿನ ಈ ಭಾಗವು ಮಾತನ್ನು ಉತ್ಪಾದಿಸುವ ಮತ್ತು ಇತರರ ಮಾತನ್ನು ಅರ್ಥಮಾಡಿಕೊಳ್ಳುವ ಕಾರ್ಯವನ್ನು ನಡೆಸುತ್ತದೆ. ಆರ್‌ಟಿಎಂಎಸ್‌ ಮೂಲಕ ಈ ಭಾಗದ ಚಟುವಟಿಕೆಯನ್ನು ಕಡಿಮೆ ಮಾಡುವ ಮೂಲಕ ಶ್ರಾವ್ಯ ಭ್ರಮೆಗಳನ್ನು ಸುಧಾರಿಸಬಹುದು.

ಇದನ್ನು ಹೊರತುಪಡಿಸಿ ಆರ್‌ ಟಿಎಂಎಎಸ್‌ (rTMS) ಚಿಕಿತ್ಸೆಯನ್ನು ಗೀಳು ಖಾಯಿಲೆ (ಒಬ್ಸೆಸ್ಸಿವ್‌ ಕಂಪಲ್ಸಿವ್‌ ಡಿಸಾರ್ಡರ್‌), ಮದ್ಯಪಾನ ವ್ಯಸನ, ದೀರ್ಘ‌ಕಾಲದ ನೋವಿನ ಸಮಸ್ಯೆ ಮತ್ತು ಇತರ ಕಾಯಿಲೆಗಳಲ್ಲಿ ಬಳಸಲಾಗುತ್ತದೆ. ಆದರೆ ಈ ಕಾಯಿಲೆಗಳಲ್ಲಿ ಆರ್‌ಟಿಎಂಎಸ್‌ (rTMS) ಚಿಕಿತ್ಸೆ ಎಷ್ಟು ಪರಿಣಾಮಕಾರಿ ಎಂಬುದು ಇನ್ನೂ ಸಂಶೋಧನೆಯ ಹಂತದಲ್ಲಿದೆ.

ಟ್ರಾನ್ಸ್ ಕ್ರೇನಿಯಲ್‌ ಡೈರೆಕ್ಟ್ ಕರೆಂಟ್‌ ಸ್ಟಿಮ್ಯುಲೇಶನ್‌

(ಟಿಡಿಸಿಎಸ್‌- tDCS) “ಟ್ರಾನ್ಸ್‌ಕ್ರೇನಿಯಲ್‌ ಡೈರೆಕ್ಟ್ ಕರೆಂಟ್‌ ಸ್ಟಿಮ್ಯುಲೇಶನ್‌’ ಅಥವಾ “ಟಿಡಿಸಿಎಸ್‌’ ಎಂಬುದು ಆರ್‌ಟಿಎಂಎಸ್‌ನ ಅನಂತರ ಕಂಡುಹಿಡಿಯಲಾದ ಚಿಕಿತ್ಸೆ. ಇದರಲ್ಲಿ ಎರಡು ಸಣ್ಣ ಲೋಹದ ಎಲೆಕ್ಟ್ರೋಡ್‌ಗಳನ್ನು ತಲೆಯ ಮೇಲೆ ಇರಿಸಲಾಗುತ್ತದೆ. ಬ್ಯಾಟರಿಯಿಂದ ಅವುಗಳ ನಡುವೆ 1 ಅಥವಾ 2 ಮಿಲಿ ಆಂಪಿಯರ್‌ನಷ್ಟು (mA) ದುರ್ಬಲವಾದ ವಿದ್ಯುತ್‌ ಶಕ್ತಿಯನ್ನು ರವಾನಿಸಲಾಗುತ್ತದೆ. ಇದು ನರಕೋಶಗಳ (ನ್ಯೂರೊನ್‌) ಚಟುವಟಿಕೆಯ ಮಾದರಿಯನ್ನು ಬದಲಾಯಿಸುತ್ತದೆ ಎಂದು ತೋರಿಸಲಾಗಿದೆ. ಈ ಎರಡು ಎಲೆಕ್ಟ್ರೋಡ್‌ಗಳನ್ನು ಮೆದುಳಿನ ಬೇರೆ ಬೇರೆ ಭಾಗಗಳಲ್ಲಿ ಇರಿಸಿ ಇವುಗಳ ಚಟುವಟಿಕೆಗಳನ್ನು ಬದಲಾಯಿಸಬಹುದು.

ಟಿಡಿಸಿಎಸ್‌ ಚಿಕಿತ್ಸೆಯ ಸಮಯದಲ್ಲಿ ಕೆಲವು ದುಷ್ಪರಿಣಾಮಗಳಾಗಬಹುದು. ಇದನ್ನು ಪಡೆಯುವಾಗ ಹೆಚ್ಚಿನ ಜನರು ನೋವನ್ನು ಅನುಭವಿಸುವುದಿಲ್ಲ. ಎಲೆಕ್ಟ್ರೋಡ್ಸ್‌ಗಳನ್ನು ಇರಿಸುವ ಸ್ಥಳದಲ್ಲಿ ತುರಿಕೆ ಅಥವಾ ಜುಮ್ಮೆನಿಸುವಿಕೆ ಅಥವಾ ಲಘುವಾಗಿ ಸುಡುವ ಸಂವೇದನೆಯಾಗಬಹುದು. ಆದರೆ ಯಾವುದೇ ದೀರ್ಘ‌ಕಾಲಿಕ ದುಷ್ಪರಿಣಾಮವಿರುವುದಿಲ್ಲ.

ಟಿಡಿಸಿಎಸ್‌ ಚಿಕಿತ್ಸೆಯು ಸೈಕೋಸಿಸ್‌ ಅಥವಾ ಸ್ಕಿಝೋಫ್ರೇನಿಯಾ ಕಾಯಿಲೆಯಲ್ಲಿ ಉಂಟಾಗುವ ಶ್ರಾವ್ಯ ಭ್ರಮೆಗಳನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದಲ್ಲದೆ ಟಿಡಿಸಿಎಸ್‌ ಚಿಕಿತ್ಸೆಯನ್ನು ಖನ್ನತೆ, ಗೀಳು ಕಾಯಿಲೆ, ಮದ್ಯವ್ಯಸನ ಮತ್ತು ಕಾಗ್ನಿಟಿವ್‌ (ನೆನಪಿನ ಸಮಸ್ಯೆ) ಕಾಯಿಲೆಗಳಲ್ಲಿ ಬಳಸಲಾಗುತ್ತದೆ.

ನ್ಯೂರೋಮಾಡ್ಯುಲೇಶನ್‌ ಚಿಕಿತ್ಸೆಗಳು ಎಷ್ಟು ಪರಿಣಾಮಕಾರಿಯಾಗಿವೆ?

ನ್ಯೂರೋಮಾಡ್ಯುಲೇಶನ್‌ ಚಿಕಿತ್ಸೆಗಳ ಪರಿಣಾಮ ಅದರಲ್ಲಿ ಬಳಸುವ ತಂತ್ರ ಮತ್ತು ಸ್ಥಿತಿಯನ್ನು ಅವಲಂಬಿಸಿರುತ್ತದೆ. ಇತರ ಮಾನಸಿಕ ಆರೋಗ್ಯ ಚಿಕಿತ್ಸೆಗಳಿಗೆ ಹೋಲಿಸಿದರೆ ನ್ಯೂರೋಮಾಡ್ಯುಲೇಶನ್‌ ತಂತ್ರಗಳು ಇತ್ತೀಚೆಗೆ ಲಭ್ಯವಾದ ಚಿಕಿತ್ಸೆಯಾಗಿದೆ. ಈ ಕ್ಷೇತ್ರದಲ್ಲಿ ಪ್ರಸ್ತುತ ಹಲವು ಅಧ್ಯಯನಗಳು ನಡೆಯುತ್ತಿವೆ. ಆದ್ದರಿಂದ ಹಲವು ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಶನ್‌ ಚಿಕಿತ್ಸೆಯನ್ನು ಔಷಧಗಳ ಜತೆಗೆ ನೀಡಲಾಗುತ್ತದೆ. ಖನ್ನತೆ, ಗೀಳು ಕಾಯಿಲೆ, ಧೂಮಪಾನ ವ್ಯಸನ, ವಿವಿಧ ಬಗೆಯ ಆತಂಕದ ಕಾಯಿಲೆಗಳು ಮತ್ತು ಸೈಕೋಸಿಸ್‌ ಕಾಯಿಲೆಯ ಕೆಲವು ಲಕ್ಷಣಗಳಿಗೆ ನ್ಯೂರೊಮೊಡ್ನೂಲೇಶನ್‌ ಚಿಕಿತ್ಸೆಗಳು ಪರಿಣಾಮಕಾರಿಯಾಗಿವೆ ಎಂದು ಈಗ ಲಭ್ಯವಿರುವ ಸಂಶೋಧನ ಅಧ್ಯಯನಗಳಿಂದ ದೃಢಪಟ್ಟಿದೆ.

ಡಾ| ಅಭಿರಾಮ್‌ ಪಿ.ಎನ್‌.,

ಸಹಾಯಕ ಪ್ರಾಧ್ಯಾಪಕರು,

ಮನೋರೋಗಶಾಸ್ತ್ರ ವಿಭಾಗ,

ಕಸ್ತೂರ್ಬಾ ಆಸ್ಪತ್ರೆ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮನೋರೋಗಶಾಸ್ತ್ರ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-health

Monsoon Diseases:ಮಳೆಗಾಲದಲ್ಲಿ ಸಾಮಾನ್ಯ; ಮಾನ್ಸೂನ್‌ ರೋಗಗಳು,ತಡೆಗಟ್ಟುವಿಕೆಗಾಗಿ ಸಲಹೆಗಳು

2-health

Scleroderma: ಸ್ಕ್ಲೆರೋಡರ್ಮಾ ಜತೆಗೆ ಜೀವಿಸುವುದು

6-health

Hemorrhoids: ಮಲದಲ್ಲಿ ರಕ್ತಸ್ರಾವವಾದಾಗಲೆಲ್ಲ ಮೂಲವ್ಯಾಧಿ ಕಾರಣವಲ್ಲ

4-health

Rhinoplasty: ರಿನೊಪ್ಲಾಸ್ಟಿ

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

car

Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು

Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ

Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

Screenshot (7) copy

Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.