ಕೊವಿನ್‌ ಮೂಲಕವೇ ಲಸಿಕೆಗೆ ಆರ್ಡರ್‌ : ಖಾಸಗಿಗೆ ಕೇಂದ್ರದ ಮೂಗುದಾರ

Team Udayavani, Jul 1, 2021, 7:25 AM IST

ಕೊವಿನ್‌ ಮೂಲಕವೇ ಲಸಿಕೆಗೆ ಆರ್ಡರ್‌ : ಖಾಸಗಿಗೆ ಕೇಂದ್ರದ ಮೂಗುದಾರ

ಹೊಸದಿಲ್ಲಿ: ಕೊರೊನಾ ಲಸಿಕೆ ಖರೀದಿ ವಿಚಾರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಸರಕಾರ ಮೂಗುದಾರ ಹಾಕಿದೆ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕೋವಿನ್‌ ಪೋರ್ಟಲ್‌ ಮೂಲಕವೇ ಲಸಿಕೆಯನ್ನು ಆರ್ಡರ್‌ ಮಾಡಬೇಕೇ ಹೊರತು ಉತ್ಪಾದಕರಿಂದ ನೇರವಾಗಿ ಖರೀದಿಸುವಂತಿಲ್ಲ ಎಂದು ಸೂಚಿಸಿದೆ. ಅಷ್ಟೇ ಅಲ್ಲ, ಮಾಸಿಕ ಲಸಿಕೆ ಖರೀದಿಯ ಮೇಲೆ “ಗರಿಷ್ಠ ಮಿತಿ’ ಹೇರಲಾಗಿದ್ದು, ಮಿತಿಗಿಂತ ಹೆಚ್ಚು ಲಸಿಕೆ ಖರೀದಿಸುವಂತಿಲ್ಲ ಎಂದೂ ನಿರ್ದೇಶಿಸಿದೆ.

ಸೀಮಿತ ಪೂರೈಕೆಯಲ್ಲಿ ಸಮತೋಲನ ಕಾಪಾಡಿಕೊಳ್ಳುವುದು, ವೇಸ್ಟೇಜ್‌ ತಪ್ಪಿಸುವುದು ಹಾಗೂ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದೇ ಇದರ ಉದ್ದೇಶ ಎಂದು ಹೇಳಲಾಗಿದೆ. ಜುಲೈ 1ರಿಂದಲೇ ಈ ಹೊಸ ಮಾರ್ಗಸೂಚಿಯು ಜಾರಿಯಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಬಾರಿಗೆ ಲಸಿಕೆ ಅಭಿಯಾನ ನಡೆಸಲಿರುವ ಆಸ್ಪತ್ರೆಗಳಿಗೆ ಲಭ್ಯವಿರುವ ಬೆಡ್‌ ಗಳ ಆಧಾರದಲ್ಲಿ ಲಸಿಕೆಯನ್ನು ವಿತರಿಸಲಾಗುತ್ತದೆ. ಎಲ್ಲ ಖಾಸಗಿ ಆಸ್ಪತ್ರೆಗಳೂ ಕೋವಿನ್‌ ಡೇಟಾಬೇಸ್‌ ನಲ್ಲಿ ಅಗತ್ಯ ವಿವರಗಳನ್ನು ಸಲ್ಲಿಸಬೇಕು. ಅಲ್ಲದೆ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಪೋರ್ಟಲ್‌ ಮೂಲಕ ಎಲೆಕ್ಟ್ರಾನಿಕ್‌ ರೂಪದಲ್ಲೇ ಹಣ ಪಾವತಿಸಬೇಕು ಎಂದೂ ಸೂಚಿಸಲಾಗಿದೆ. ಡೋಸ್‌ ಗಳ 75:25ರ ಹಂಚಿಕೆಯನ್ನು ಬದಲಿಸುವಂತೆ ಕೆಲವು ರಾಜ್ಯಗಳು ಕೋರಿಕೊಂಡ ಹಿನ್ನೆಲೆಯಲ್ಲಿ ಈ ರೀತಿಯ ಹೊಸ ವಿಧಾನಗಳನ್ನು ಸರಕಾರ ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮನೆಯಲ್ಲೇ ಲಸಿಕೆ: ಅನಾರೋಗ್ಯ ಪೀಡಿತರಾಗಿ ಅಥವಾ ವಯೋವೃದ್ಧರಾಗಿ ಹಾಸಿಗೆ ಹಿಡಿದಿರುವ ನಾಗರಿಕರಿಗೆ ಮನೆಗಳಲ್ಲೇ ಲಸಿಕೆ ನೀಡುವ ಪ್ರಾಯೋಗಿಕ ಪ್ರಕ್ರಿಯೆ ಆರಂಭಿಸುವುದಾಗಿ ಮಹಾರಾಷ್ಟ್ರ ಸರಕಾರ ಬುಧವಾರ ಬಾಂಬೆ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಇದಕ್ಕೆ ಕೇಂದ್ರ ಸರಕಾರ ಅನುಮತಿ ನೀಡುವವರೆಗೆ ಕಾಯುವುದಿಲ್ಲ ಎಂದೂ ಹೇಳಿದೆ.

ಕೊವಿಶೀಲ್ಡ್‌, ಕೊವ್ಯಾಕ್ಸಿನ್‌ ಪರಿಗಣಿಸಲು ಭಾರತ ಮನವಿ: ಐರೋಪ್ಯ ಒಕ್ಕೂಟದ (ಇ.ಯು) ರಾಷ್ಟ್ರ ಗಳು, ತಮ್ಮ ಕೊರೊನಾ ಲಸಿಕೆ ಪಡೆದವರಿಗೆ ಪಾಸ್‌ಪೋರ್ಟ್‌ ನೀಡುವ ಯೋಜನೆಯಲ್ಲಿ ಕೊವಿಶೀಲ್ಡ್‌ ಹಾಗೂ ಕೊವ್ಯಾಕ್ಸಿನ್‌ ಲಸಿಕೆ ಪಡೆದವರನ್ನೂ ಪರಿ ಗಣಿಸಬೇಕು ಎಂದು ಕೇಂದ್ರ ಸರ ಕಾ ರ, ಐರೋಪ್ಯ ಒಕ್ಕೂಟವನ್ನು ಆಗ್ರಹಿಸಿದೆ.

ಜಗತ್ತಿನ ವಿವಿಧ ದೇಶಗಳು ಒಂದಾಗಿ ಕೊರೊನಾ ವಿರುದ್ಧ ಸೆಣೆಸಬೇಕು. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯಸಂಸ್ಥೆಯಲ್ಲೇ ಭಾರೀ ಸುಧಾರಣೆಗಳಾಗಬೇಕು. ಎಲ್ಲ ದೇಶಗಳು ಪರಸ್ಪರ ತಮ್ಮ ಅನುಭವ, ಜ್ಞಾನ, ಉತ್ತಮ ಆರೋಗ್ಯ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳಬೇಕು.
ಡಾ.ಹರ್ಷವರ್ಧನ್‌, ಕೇಂದ್ರ ಆರೋಗ್ಯ ಸಚಿವ

ಟಾಪ್ ನ್ಯೂಸ್

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

congress-workers

ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

1-24-thursday

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ

Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

GST ಎಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ !

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

Lok Sabha Election: ವಾರಾಣಸಿಯಲ್ಲಿ ರಿಯಲ್‌ ಮೋದಿ VS ರೀಲ್‌ ಮೋದಿ ಫೈಟ್‌!

congress-workers

ಬೆನಕಟ್ಟಿ: SC/ST ಯ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

1-24-thursday

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.