ಕಾಯ್ದಿರಿಸಿರುವ ಹುಲ್ಲುಗಾವಲು ಭೂಮಿ ಮಂಜೂರು ಬೇಡ

ಕುರಿಗಳ ಸಮೇತ ರೈತ ಸಂಘ,ಕುರಿಗಾಹಿಗಳಿಂದ ಮಿನಿವಿಧಾನಸೌಧದ ಮುಂದೆ ಪ್ರತಿಭಟನೆ

Team Udayavani, Sep 11, 2021, 1:52 PM IST

ಕಾಯ್ದಿರಿಸಿರುವ ಹುಲ್ಲುಗಾವಲು ಭೂಮಿ ಮಂಜೂರು ಬೇಡ

ಮುಳಬಾಗಿಲು: ತಾಲೂಕಿನ ಬೈರಕೂರು ಹೋಬಳಿ ಟಿ.ಕುರುಬರಹಳ್ಳಿ ಗ್ರಾಮದಲ್ಲಿ ಹುಲ್ಲುಗಾವಲಿಗೆ ಮೀಸಲಿಟ್ಟಿರುವ ಸರ್ವೆ ನಂ.36, 37ರಲ್ಲಿನ
ಜಮೀನನ್ನು ದರಕಾಸ್ತು ಕಮಿಟಿಯಲ್ಲಿ ಗ್ರಾಮದ ಬಲಾಡ್ಯರಿಗೆ ನೀಡಬಾರದೆಂದು ವಿರೋಧಿಸಿ ರೈತ ಸಂಘ ಮತ್ತು ಕುರಿಗಾಹಿಗಳು ನಗರದ
ಮಿನಿವಿಧಾನಸೌಧ ಎದುರು ಕುರಿಗಳ ಸಮೇತ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಟಿ.ಕುರುಬರಹಳ್ಳಿಯಲ್ಲಿ ಶೇ.80 ನಾಯಕ
ಸಮುದಾಯ ವಾಸವಾಗಿದ್ದು, ಅವರು ತಮ್ಮ ಜೀವನ ನಿರ್ವಹಣೆಗೆ ಕುರಿ ಮೇಯಿಸುತ್ತಿ ದ್ದಾರೆ. ಟಿ.ಕುರುಬರಹಳ್ಳಿ ಸ.ನಂ. 36/1ರಲ್ಲಿನ 36 ಎಕರೆ ಹಾಗೂ ಸ.ನಂ. 37ರಲ್ಲಿ 25 ಎಕರೆ ಸೇರಿ 52 ಎಕರೆ ಜಮೀನನ್ನು ಹುಲ್ಲುಗಾವಲಿಗೆ ಮೀಸಲಿಟ್ಟು ಹಿಂದಿನ ತಹಶೀಲ್ದಾರ್‌ ಬಿ.ಎನ್‌
.ಪ್ರವೀಣ್‌ ಆದೇಶಿಸಿದ್ದರು. ಅಂತೆಯೇ ಜಮೀನನ್ನು ಕುರಿಗಾವಲಿಗೆ ಹೊರತುಪಡಿಸಿ, ಬೇರೆ ಚಟುವಟಿಕೆಗಳಿಗೆ ಮಂಜೂರು ಮಾಡಬಾರದೆಂಬ
ನಾಮಫ‌ಲಕ ಅಳವಡಿಸಿದ್ದರು ಎಂದರು.

ಮಂಜೂರಾತಿಗೆ ಮುಂದಾಗಿದ್ದ ಸರಿಯಲ್ಲ:
ಅದರಂತೆ ಕುರಿಗಾಹಿಗಳು ಈ ಜಮೀನಿನಲ್ಲಿ ಕುರಿ ಮೇಯಿಸಿಕೊಂಡಿರುವಾಗ ಗ್ರಾಮದ ಕೆಲವು ಬಲಾಡ್ಯರು ಕಂದಾಯ ಇಲಾಖೆಯಲ್ಲಿನ ಕೆಲ ಭ್ರಷ್ಟ ಅಧಿಕಾರಿಗಳು ಮತ್ತು ಕೆಲವು ದರಕಾಸ್ತು ಸದಸ್ಯರ ಕುಮ್ಮಕ್ಕಿನಿಂದ ಟಿ.ಕುರುಬರಹಳ್ಳಿ ಸ.ನಂ. 36/1ರಲ್ಲಿನ 36 ಎಕರೆ ಹಾಗೂ ಸ.ನಂ. 37ರಲ್ಲಿ 25 ಎಕರೆ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಸಲು ಪ್ರಯತ್ನಿಸುತ್ತಿರುವುದು ಸರಿಯಾದಕ್ರಮ ಅಲ್ಲ ಎಂದು ದೂರಿದರು.

ಇದನ್ನೂ ಓದಿ:ಮುಂಬೈ: ನಿರ್ಭಯಾ ರೀತಿ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವು

ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಒಂದು ವೇಳೆ ಹುಲ್ಲುಗಾವಲಿಗೆ ಮೀಸಲಿಟ್ಟಿರುವ ಗೋಮಾಳ ಜಮೀನನ್ನು ಬಲಾಡ್ಯರಿಗೆ ಮಂಜೂರು ಮಾಡಿದರೆ
ಭೂಮಿಗಾಗಿ ಟಿ.ಕುರುಬರಹಳ್ಳಿ ಕುರಿಗಾಹಿಗಳು ಮತ್ತು ರೈತ ಸಂಘದಿಂದ ಮಹಾಯುದ್ಧವೇ ನಡೆಯಲಿದೆ ಎಂದು ತಾಲೂಕು ಆಡಳಿತಕ್ಕೆ ಎಚ್ಚರಿಕೆ
ನೀಡಿದ ಅವರು ತಹಶೀಲ್ದಾರ್‌ ರಾಜಶೇಖರ್‌ಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ ರಾಜಶೇಖರ್‌, ಯಾವುದೇ ಕಾರಣಕ್ಕೂ ಹುಲ್ಲುಗಾವುಲಿಗೆ ಮೀಸಲಿಟ್ಟಿರುವ ಗೋಮಾಳ
ಜಮೀನನ್ನು ದರಕಾಸ್ತು ಕಮಿಟಿಯಲ್ಲಿ ಮಂಜೂರು ಮಾಡುವುದಿಲ್ಲವೆಂದು ಭರವಸೆ ನೀಡಿದರು. ತಾಲೂಕು ಅಧ್ಯಕ್ಷ ಫಾರುಕ್‌ಪಾಷ, ಹಸಿರು ಸೇನೆ
ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್‌, ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ, ಮೂರಂಡಹಳ್ಳಿ ಶಿವಾರೆಡ್ಡಿ, ವಿಜಯ್‌ಪಾಲ್‌, ವೇಣು, ನವೀನ್‌, ಕೇಶವ, ಹೆಬ್ಬಣಿ ಆನಂದರೆಡ್ಡಿ, ನಂಗಲಿ ಯುವ ಮುಖಂಡ ಕಿಶೋರ್‌, ಧರ್ಮ, ನಾಗೇಶ್‌,ಟಿ.ಕುರುಬರಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಮತ್ತು ಚನ್ನರಾಯಪ್ಪ ಹಲವರಿದ್ದರು.

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.