ಕೋಟೇಶ್ವರ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರಾಥಮಿಕ ವಿಭಾಗಕ್ಕೆ  ಕೊಠಡಿಗಳದ್ದೇ ಕೊರತೆ

Team Udayavani, Sep 19, 2021, 3:30 AM IST

ಕೋಟೇಶ್ವರ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರಾಥಮಿಕ ವಿಭಾಗಕ್ಕೆ  ಕೊಠಡಿಗಳದ್ದೇ ಕೊರತೆ

ಕೋಟೇಶ್ವರ: ಇಲ್ಲಿನ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಒಂದೇ ಸೂರಿನಡಿ ಹಿ.ಪ್ರಾ. ಶಾಲೆ, ಪ್ರೌಢಶಾಲೆ ಹಾಗೂ ಪ.ಪೂ. ಕಾಲೇಜು ಇದ್ದು, ಹಿ.ಪ್ರಾ. ಶಾಲೆಯಲ್ಲಿ 476 ವಿದ್ಯಾರ್ಥಿಗಳಿದ್ದಾರೆ. ಇಷ್ಟೊಂದು ವಿದ್ಯಾರ್ಥಿಗಳಿದ್ದರೂ ಸೌಲಭ್ಯಗಳ ಕೊರತೆ ಶಾಲೆಯನ್ನು ಇನ್ನೂ ಕಾಡುತ್ತಿದೆ.

ಕರ್ನಾಟಕ ಪಬ್ಲಿಕ್‌ ಸ್ಕೂಲ್‌ 1906ರಲ್ಲಿ ಆರಂಭಗೊಂಡಿದ್ದು, ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. 1ನೆ ತರಗತಿಯಲ್ಲಿ 2020-21ನೇ ಸಾಲಿನಲ್ಲಿ 56, 2021-22ನೇ ಸಾಲಿನಲ್ಲಿ 84 ವಿದ್ಯಾರ್ಥಿಗಳಿದ್ದಾರೆ. 2ನೇ ತರಗತಿಯಲ್ಲಿ ಕಳೆದ ವರ್ಷ 40, ಈ ಬಾರಿ 57 ವಿದ್ಯಾರ್ಥಿಗಳಿದ್ದಾರೆ. 3ನೇ ತರಗತಿಯಲ್ಲಿ ಹಿಂದಿನ ವರ್ಷ 38, ಈ ಬಾರಿ 52 ವಿದ್ಯಾರ್ಥಿಗಳಿದ್ದಾರೆ. 4ನೇ ತರಗತಿಯಲ್ಲಿ  ಈ ಬಾರಿ 39, 5ನೇ ತರಗತಿಯಲ್ಲಿ ಈ ಬಾರಿ 40, 6ನೇ ತರಗತಿಯಲ್ಲಿ ಈ ಬಾರಿ 58, ಹಾಗೂ 7ನೇ ತರಗತಿಯಲ್ಲಿ ಈ ಬಾರಿ 76 ವಿದ್ಯಾರ್ಥಿಗಳಿದ್ದಾರೆ.

2020-21ನೇ ಸಾಲಿನಲ್ಲಿ ಒಟ್ಟು 325 ವಿದ್ಯಾರ್ಥಿಗಳಿದ್ದು, 2021-22ರಲ್ಲಿ 406 ವಿದ್ಯಾರ್ಥಿಗಳಿದ್ದಾರೆ. ಎಲ್‌.ಕೆ.ಜಿ. ಯಲ್ಲಿ 37 ವಿದ್ಯಾರ್ಥಿಗಳಿದ್ದು, ಯು.ಕೆ.ಜಿ.ಯಲ್ಲಿ 33 ವಿದ್ಯಾರ್ಥಿಗಳಿದ್ದಾರೆ.

ಶಿಥಿಲಗೊಂಡ ಕೊಠಡಿ, ಹೊಸ ಕಟ್ಟಡ‌ ಅಗತ್ಯ:

ಕಟ್ಟಡದ ಒಂದು ಪಾರ್ಶ್ವದ ಗೋಡೆ ಸಂಪೂರ್ಣ ಕುಸಿದು ಬಿದ್ದಿದ್ದು, ಇನ್ನಿತರ ಕೊಠಡಿಗಳು ಬಿರುಕು ಬಿಟ್ಟಿವೆ. ಹಳೆಯ ಕಟ್ಟಡದ ತೆರವಿಗೆ ತಾಂತ್ರಿಕ ಕಾರಣ ಎದುರಾಗಿದ್ದು, ಹೊಸ ಕಟ್ಟಡದ ನಿರ್ಮಾಣಕ್ಕೆ ಅನುದಾನ ಸಾಲದು. 6 ತರಗತಿಗಳ ಕೊಠಡಿಗಳು ದುರ ವಸ್ಥೆಯಲ್ಲಿದ್ದು 4 ಕೊಠಡಿಗಳಲ್ಲಿ ಪಾಠ ನಡೆಸಬೇಕಾಗಿದೆ. ಬಳಕೆಯಲ್ಲಿ ಇರುವ 4 ಕೊಠಡಿಗಳಲ್ಲಿ ಕಚೇರಿ ಕೋಣೆ, ಕಂಪ್ಯೂಟರ್‌ ರೂಂ, ನಲಿ-ಕಲಿ ತರಗತಿ ಅಲ್ಲದೆ 1ನೇ, 2ನೇ, 3ನೇ ತರಗತಿಯ ಮಕ್ಕಳಿಗೆ ಪಾಠ ಕಲಿಸಬೇಕಾಗಿದೆ.

ಪ್ರೌಢಶಾಲಾ ಜಾಗದಲ್ಲಿ 3 ಕೊಠಡಿ:

ಕೊಠಡಿಗಳ ಕೊರತೆಯಿಂದಾಗಿ ಈಗ ಪ್ರೌಢಶಾಲಾ ಜಾಗದಲ್ಲಿನ ಮೂರು ಕೋಣೆಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಶಿಥಿಲಗೊಂಡ ಕಟ್ಟಡದ ಹೆಂಚುಗಳು ಹಾರಿಹೋಗಿವೆ. ಪೊದೆಗಳು ಬೆಳೆದು ಶೌಚಾಲಯಕ್ಕೆ ಸಾಗಲು ಪುಟ್ಟಮಕ್ಕಳು ಹರಸಾಹಸಪಡಬೇಕಾಗಿದೆ.   ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೊಠಡಿ ಗಳ ಕೊರತೆ ನಿಭಾಯಿಸುವಲ್ಲಿ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕಿದೆ.

ಶಿಕ್ಷಕರ ಕೊರತೆ:

1ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಎ ಮತ್ತು¤ ಬಿ ವಿಭಾಗ ಆರಂಭಿಸಲಾಗಿದೆ. ಪ್ರತೀ ವಿಭಾಗದಲ್ಲೂ ಶಿಕ್ಷಕರ ಕೊರತೆ ಇದ್ದು ಹೆಚ್ಚುವರಿ 5 ಶಿಕ್ಷಕರ ಕೊರತೆ ಕಂಡುಬಂದಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸಬೇಕಾದ ಆದ್ಯತೆ ಇಲಾಖೆ ನೀಡಬೇಕಿದೆ.

ಇಲಾಖೆ ಸೂಕ್ತ ಕ್ರಮ ವಹಿಸಲಿ:

ಶಾಲೆಯ ಪ್ರಾಥಮಿಕ ವಿಭಾಗಕ್ಕೆ ಕೊಠಡಿಗಳ ಕೊರತೆ ಇದೆ. ಹಳೆ ಕಟ್ಟಡದ ಏಲಂ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ. ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿ ಇರುವುದರಿಂದ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ  ಸಂಖ್ಯೆ ಹೆಚ್ಚುತ್ತಿರುವುದರಿಂದ ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಬೇಕು.ಆನಂದ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ

ಜ ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.