ಮುಂಡಕನ ಓಲಿಯಿಂದ ಬಹೂಪಯೋಗಿ ಉತ್ಪಾದನೆ


Team Udayavani, Sep 27, 2021, 2:06 AM IST

ಮುಂಡಕನ ಓಲಿಯಿಂದ ಬಹೂಪಯೋಗಿ ಉತ್ಪಾದನೆ

ಉಡುಪಿ: ಕೆರೆ ದಂಡೆ, ನದಿದಂಡೆ, ಬೇಲಿಗಳಲ್ಲಿ ಬೆಳೆಯುವ ಮುಂಡಕನ ಓಲಿಯಿಂದ (ಎಲೆ) ವಿವಿಧ ಬಗೆಯ ಚಾಪೆ, ಕೈಚೀಲ, ಮೂಡೆಗಳನ್ನು ತಯಾರಿಸಲಾಗುತ್ತದೆ. ಚಾಪೆಗಳಲ್ಲಿ ಇಬ್ಬರು ಮಲಗುವುದು, ಒಬ್ಬರು ಮಲಗುವುದು, ಊಟಕ್ಕೆ ಕುಳಿತುಕೊಳ್ಳುವುದು, ತೊಟ್ಟಿಲು ಮಗು ಮಲಗುವುದು ಹೀಗೆ ನಾನಾ ಬಗೆಗಳಿವೆ.

ಪರಿಶಿಷ್ಟ ಜಾತಿಗೆ ಸೇರಿದ ಗುಡ್ಡ
ಮೊಗೇರ ಸಮುದಾಯ ಮುಂಡಕನ ಓಲಿಯಿಂದ ವಸ್ತುಗಳನ್ನು ಕುಲಕಸು ಬಾಗಿ ತಯಾರಿಸಿಕೊಂಡು ಬಂದಿದೆ. ಈ ಸಮುದಾಯ ಕಟಪಾಡಿ ಮಟ್ಟು, ಕಾಪು, ಮೂಳೂರು, ಪಡುಬಿದ್ರಿ, ಕನ್ನಂಗಾರು, ಅವರಾಲು, ಹೆಜಮಾಡಿ ಕೋಡಿಯಲ್ಲಿದ್ದರೂ ವೃತ್ತಿಯನ್ನು ಕಾಪಾಡಿಕೊಂಡು ಬರುತ್ತಿರುವುದು ಕಟಪಾಡಿ ಮಟ್ಟುವಿನವರು ಮಾತ್ರ.

ಮುಂಡಕ ಸಸ್ಯದಲ್ಲಿ ನಾಲ್ಕು ಬಗೆಗಳಿವೆ- ತುಳು ಮುಂಡಯಿ, ಪಂಜಿ ಮುಂಡಯಿ, ಬೊನ್ಯ ಮುಂಡಯಿ, ಕೋಲು ಮುಂಡಯಿಗಳು. ಕೇದಗೆ ಮುಂಡಯಿಗಳಲ್ಲಿ ಬಿಳಿ ಮತ್ತು ಹಳದಿ ಬಣ್ಣದ ಕೇದಗೆ ಹೂವುಗಳು ಬರುತ್ತವೆ. ಹಳದಿ ಬಣ್ಣದ ಕೇದಗೆ ಹೂವು ನಾಗನ ಪೂಜೆಗೆ ಶ್ರೇಷ್ಠವಾದರೆ ಇದರ ಎಲೆಗಳು ಚಿಕ್ಕದಾದ ಕಾರಣ ಚಾಪೆ ಹೆಣೆಯಲು ಆಗುವುದಿಲ್ಲ. ಉಳಿದಸಸ್ಯಗಳ ಎಲೆಗಳು ಉದ್ದ ಇರುವುದ ರಿಂದ ಚಾಪೆ ತಯಾರಿಸುತ್ತಾರೆ.

ಬೆಲೆ ಸಿಗದಿರುವುದು ವೃತ್ತಿ ನಶಿಸಲು ಕಾರಣ
ಮುಂಡಕನ ಎಲೆ ಸಂಗ್ರಹಿಸು ವುದು, ಕೆರೆ, ನದಿದಂಡೆಗಳಿಂದ ತರ ಬೇಕಾದ ಕಾರಣ ತಲೆ ಹೊರೆಯಲ್ಲಿಯೇ ತರುವುದು, ಶ್ರಮ ಉತ್ಪನ್ನ
ಗಳಿಗೆ ಸೂಕ್ತವಾದ ಬೆಲೆ ಸಿಗದಿರುವುದು ವೃತ್ತಿ ನಶಿಸಲು ಒಂದು ಕಾರಣ.ಕಲಾವಿದರಿಗೆ ಸೂಕ್ತ ವಿನ್ಯಾಸ ರೂಪಿಸಿ ಗುಣಮಟ್ಟ ಹೆಚ್ಚಿಸುವಂತೆ ಮಾಡಿ ಮಾರುಕಟ್ಟೆ ಲಭ್ಯವಾಗುವಂತೆ ಮಾಡುವುದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸದಾಶಯವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಚಾಪೆ ಹೆಣೆಯುವ ಕಾರ್ಯಾಗಾರ ನಡೆಯಿತು. ಸಮುದಾಯದ ಸುಮಾರು ನೂರು ಮಂದಿ ವೃತ್ತಿಪರರು ಪಾಲ್ಗೊಂಡಿದ್ದರು.ಕಾರ್ಯಾಗಾರವನ್ನು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಸಮಾರೋಪ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಮಾಜ ಕಲ್ಯಾಣ ಇಲಾಖೆ ಯಿಂದ ಈ ವೃತ್ತಿಪರರಿಗೆ ಸಬ್ಸಿಡಿ ಕೊಡಿಸುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

ಇದನ್ನೂ ಓದಿ:ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಶಾಸಕರಾದ ಕೆ.ರಘುಪತಿ ಭಟ್‌, ಲಾಲಾಜಿ ಮೆಂಡನ್‌, ನಬಾರ್ಡ್‌ ಮಂಗಳೂರಿನ ಮಹಾಪ್ರಬಂಧಕ ಅರುಣ ತಲ್ಲೂರು, ಸಲಹೆಗಾರ ಪುರುಷೋತ್ತಮ ಅಡ್ವೆ, ಸಮುದಾಯದ ಸಂಘಟಕ ಜಗನ್ನಾಥ ಬಂಗೇರ ಮಟ್ಟು, ನಾಗರಾಜ ಗುರಿಕಾರ ಅಭ್ಯಾಗತರಾಗಿದ್ದರು. ಸಂಘಟಕ ರಾಜಶೇಖರ ಜಿ.ಎಸ್‌. ಮಟ್ಟು ಪ್ರಸ್ತಾವನೆಗೈದರು.

ಆರೋಗ್ಯಲಾಭ
ಮುಂಡಕನ ಎಲೆಗಳಿಂದ ಅನೇಕ ಬಗೆಯ ಉತ್ಪನ್ನಗಳನ್ನು ತಯಾರಿಸಬಹುದು. ಇದರ ಮೂಲದ್ರವ್ಯವನ್ನು ಪುಕ್ಕಟೆಯಾಗಿ ನಿಸರ್ಗ ಕೊಡುತ್ತದೆ. ಇದನ್ನು ಮಾಡುವ ವೃತ್ತಿಪರರಿಗೆ ಜೀವನಾಧಾರ, ಪಡೆಯುವ ಜನರಿಗೆ ಪರಿಸರಸ್ನೇಹಿ, ಆರೋಗ್ಯದಾಯಿ ಲಾಭ -ಹೀಗೆ ಕೊಡುಕೊಳ್ಳುವಿಕೆ ಲಾಗಾಯ್ತಿನಿಂದ ಬಂದಿದೆಯಾದರೂ ಆಧುನಿಕ ಜೀವನಕ್ರಮದಲ್ಲಿ ಈ ಕಲೆ ನಶಿಸುತ್ತ ಬಂದಿದೆ. ಮುಂಡಕನ ಓಲಿಯ ಚಾಪೆಯಲ್ಲಿ ಮಲಗುವುದರಿಂದ ಬೆನ್ನುನೋವು ಮೊದಲಾದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎನ್ನುತ್ತಾರೆ ರಾಜಶೇಖರ ಜಿ.ಎಸ್‌. ಮಟ್ಟು .

ಟಾಪ್ ನ್ಯೂಸ್

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

Udupi: ಆಕಸ್ಮಿಕವಾಗಿ ಬಾವಿಗೆ ಬಿದ್ದವರ ರಕ್ಷಣೆ

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಬಿಸಿಲಲ್ಲಿ ಬಿಸಿಯೂಟ ಸೇವಿಸಲು ವಿದ್ಯಾರ್ಥಿಗಳ ನಿರಾಸಕ್ತಿ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.