ಆನೆಮಡುವಿನ ಕೆರೆಗೆ ನೀರು ಹರಿಸಲು ಆಗ್ರಹಿಸಿ ರೈತರಿಂದ ಅಹೋರಾತ್ರಿ ಧರಣಿ


Team Udayavani, Jun 7, 2022, 10:47 PM IST

ಆನೆಮಡುವಿನ ಕೆರೆಗೆ ನೀರು ಹರಿಸಲು ಆಗ್ರಹಿಸಿ ರೈತರಿಂದ ಅಹೋರಾತ್ರಿ ಧರಣಿ

ಚಾಮರಾಜನಗರ: ತಾಲೂಕಿನ ಆನೆ ಮಡುವಿನ ಕೆರೆಗೆ ನೀರು ಹರಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ , ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ತಾಲೂಕಿನ ಉಡಿಗಾಲ ಗ್ರಾಮದಿಂದ ರೈತರು ಚಾಮರಾಜನಗರಕ್ಕೆ ಪಾದಯಾತ್ರೆ ನಡೆಸಿ, ಬಳಿಕ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಮುಂದುವರೆಸಿದ್ದಾರೆ.

ಉಡಿಗಾಲ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದಲೂ ರೈತರು ಧರಣಿ ಸತ್ಯಾಗ್ರಹ ನಡೆ ಸುತ್ತಿದ್ದು ಮೂರನೇ ದಿನವಾದ ಮಂಗಳವಾರ ಗ್ರಾಮದಿಂದ ಜಿಲ್ಲಾಕೇಂದ್ರಕ್ಕೆ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು. ಸುಮಾರು 16 ಕಿ.ಮೀ ದೂರ ಪಾದಯಾತ್ರೆ ನಡೆಸಿದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸ್ಥಳಕ್ಕೆ ಆಗಮಿಸಿ, ಚುನಾವಣಾ ನೀತಿ ಸಂಹಿತೆ ಇರುವುದರಿಂದ ಪ್ರತಿಭಟನೆ ಅಂತ್ಯಗೊಳಿಸಿ, ಚುನಾವಣೆ ಬಳಿಕ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು. ಆದರೆ ಪ್ರತಿಭಟನಾಕಾರರು ಇದಕ್ಕೆ ಒಪ್ಪಲಿಲ್ಲ. ಪ್ರತಿಭಟನೆ ಮುಂದುವರೆಸಿದರು. ಸ್ಥಳದಲ್ಲೇ ಅಡುಗೆ ಮಾಡಿ, ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ರಾತ್ರಿಯೂ ಪ್ರತಿಭಟನೆ ಮುಂದುವರೆಸಿದ್ದಾರೆ.

ಇದಕ್ಕೂ ಮೊದಲು ರಾಜ್ಯ ಕಬ್ಬು ಬೆಳೆಗಾರರ ಸಂಘ ದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಆನೆಮಡುವಿನ ಕೆರೆಗೆ ನೀರು ತುಂಬಿಸುವ ನಿಟ್ಟಿನಲ್ಲಿ ಕಳೆದ ಆರು ತಿಂಗಳಿಂದಲೂ ನಿರಂತರವಾಗಿ ಹೋ ರಾಟ ಮಾಡುತ್ತಾ ಸರ್ಕಾರದ ಗಮನ ಸೆಳೆಯಲಾಗಿತ್ತು. ಆ ನಿಟ್ಟಿನಲ್ಲಿ ಕೆರೆಗೆ ನೀರು ತುಂಬಿಸುವ ಸಂಬಂಧ ನೀರಾವರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಭೆ ನಡೆಸಿ ಕೆರೆಗೆ ನೀರು ತುಂಬಿಸಲು ಸೂಚನೆ ನೀಡಿದ್ದರು.ಅಲ್ಲದೇ ಕೆರೆಗೆ ನೀರು ತುಂಬಿಸಲು 3 ಕೋಟಿ ಅನುದಾನವನ್ನು ಸಹ ಸರ್ಕಾರ ಬಿಡುಗಡೆ ಮಾಡಿತ್ತು. ಅದರಂತೆ ಆನೆಮಡುವಿನ ಕೆರೆಗೆ ಗುರುತ್ವಾಕರ್ಷಣೆ ಮುಖಾಂತರ ಚಿಕ್ಕ ಮೋರಿ ತಾಯಿ ಕಾಲುವೆ ಮೂಲಕ ನೀರು ಹರಿಸಲು ರೈತರ ಆಗ್ರಹವಾಗಿದೆ.

ಇದನ್ನೂ ಓದಿ : ವಿಜಯಪುರ : ಉಪಹಾರ ಸೇವಿಸಿದ ವಸತಿ ಶಾಲೆಯ 25 ಬಾಲಕಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು

ಆದರೆ, ಅಧಿಕಾರಿಗಳು ತಮ್ಮಡಿಹಳ್ಳಿ ಕೆರೆಯಿಂದ ನೇರವಾಗಿ ಪೈಪ್‌ಲೈನ್ ಮೂಲಕ ನೀರು ಹರಿಸಲು ಮುಂದಾಗಿರುವುದು ಖಂಡನೀಯ ಎಂದರು.ಚಿಕ್ಕಮೋರಿಯ ಮೂಲಕ ನೀರು ಹರಿಸಿದರೆ ಅಂತರ್ಜಲ ಮಟ್ಟ ಸಹ ವೃದ್ಧಿಯಾಗುತ್ತದೆ. ಆದ್ದರಿಂದ ಚಿಕ್ಕಮೋರಿ ಮೂಲಕ ನೀರು ಹರಿಸುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ತಾಲೂಕು ಅಧ್ಯಕ್ಷ ಮೂಕಳ್ಳಿ ಮಹಾದೇವಸ್ವಾಮಿ, ಉಪಾಧ್ಯಕ್ಷ ಹಾಲಿನ ನಾಗರಾಜ್, ಹಾಡ್ಯ ರವಿ, ಹೆಗ್ಗೋಠಾರ ಶಿವಸ್ವಾಮಿ, ಗೌಡಹಳ್ಳಿ ಷಡಕ್ಷರಿ, ಬರಡನಪುರ ನಾಗರಾಜು, ಕುರುಬೂರು ಸಿದ್ದೇಶ್, ಗೌರೀಶ್, ಕೆರೆಹುಂಡಿ ರಾಜಣ್ಣ ಸೇರಿದಂತೆ ಉಡಿಗಾಲ ಗ್ರಾಮ ಘಟಕದ ಪದಾಧಿಕಾರಿಗಳು ರೈತರು ಭಾಗವಹಿಸಿದ್ದರು.

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.