ಐಪಿಎಲ್‌ನಲ್ಲಿ ಗರಿಷ್ಠ ರನ್‌ ದಾಖಲೆ ರೈನಾ ಹಿಂದಿಕ್ಕಿದ ಕೊಹ್ಲಿ


Team Udayavani, Apr 19, 2018, 6:00 AM IST

23.jpg

ಮುಂಬಯಿ: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡದೆದುರು ಏಕಾಂಗಿ ಹೋರಾಟ ನೀಡಿದ ಆರ್‌ಸಿ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ತನ್ನ ತಂಡಕ್ಕೆ ಗೆಲುವು ತಂದುಕೊಡಲು ವಿಫ‌ಲರಾದರೂ ಐಪಿಎಲ್‌ನಲ್ಲಿ ಗರಿಷ್ಠ ರನ್‌  ಪೇರಿಸಿದ ದಾಖಲೆ ಮಾಡಿದರು.

62 ಎಸೆತಗಳಿಂದ 92 ರನ್‌ ಸಿಡಿಸಿದ ಕೊಹ್ಲಿ ಅವರು ಐಪಿಎಲ್‌ನಲ್ಲಿ ಆಡಿದ 153 ಪಂದ್ಯಗಳಿಂದ 4,619 ರನ್‌ ಕಲೆ ಹಾಕಿದ ಸಾಧನೆ ಮಾಡಿದರಲ್ಲದೇ ನಂ. ವನ್‌ ಸ್ಥಾನದಲ್ಲಿದ್ದ ಸುರೇಶ್‌ ರೈನಾ ಅವರನ್ನು ಹಿಂದಿಕ್ಕಿದರು. ಚೆನ್ನೈ ಸೂಪರ್‌ ಕಿಂಗ್ಸ್‌ನ ಸುರೇಶ್‌ ರೈನಾ 4,558 ರನ್ನುಗಳೊಂದಿಗೆ ದ್ವಿತೀಯ ಮತ್ತು ಮುಂಬೈ ನಾಯಕ ರೋಹಿತ್‌ ಶರ್ಮ ಮೂರನೇ ಸ್ಥಾನದಲ್ಲಿದ್ದಾರೆ. ಅಗ್ರ ಹತ್ತು ಮಂದಿಯಲ್ಲಿ ಭಾರತದ ಏಳು ಮಂದಿ ಬ್ಯಾಟ್ಸ್‌ಮನ್‌ ಇದ್ದಾರೆ. ಡೇವಿಡ್‌ ವಾರ್ನರ್‌, ಕ್ರಿಸ್‌ ಗೇಲ್‌ ಮತ್ತು ಎಬಿ ಡಿ’ವಿಲಿಯರ್ ಉಳಿದ ಮೂವರು ಆಟಗಾರರಾಗಿದ್ದಾರೆ.

ಆರೆಂಜ್‌ ಕ್ಯಾಪ್‌ ಧರಿಸಿದ ಅನುಭವ ನನಗಾಗುತ್ತಿಲ್ಲ. ಯಾಕೆಂದರೆ ಇದರಿಂದ ಏನೂ ಆಗಿಲ್ಲ ಎಂದು ಕೊಹ್ಲಿ ಹೇಳಿದರು. ಈ ಋತುವಿನಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ 201 ರನ್‌ ಗಳಿಸಿರುವ ಕೊಹ್ಲಿ ಬ್ಯಾಟಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ನಾವು ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಿದೆವು. ಉಳಿದ ಆಟಗಾರರು ಉತ್ತಮ ಬೆಂಬಲ ನೀಡಲು ಕೂಡ ವಿಫ‌ಲರಾದರು ಎಂದು ಕೊಹ್ಲಿ ವಿವರಿಸಿದರು. ಮುಂಬೈಯ 213 ರನ್ನಿಗೆ ಉತ್ತರವಾಗಿ ಬೆಂಗಳೂರು 8 ವಿಕೆಟಿಗೆ 167 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಬೆಂಗಳೂರು ತಂಡ ಇಷ್ಟರವರೆಗೆ 4 ಪಂದ್ಯ ಆಡಿದ್ದು ಇದು ಮೂರನೇ ಸೋಲು ಆಗಿದೆ. 

2008ರಲ್ಲಿ ಐಪಿಎಲ್‌ ಆರಂಭವಾದ ದಿನದಿಂದ 29ರ ಹರೆಯದ ಕೊಹ್ಲಿ ಬೆಂಗಳೂರು ತಂಡದಲ್ಲಿದ್ದಾರೆ. ಆದರೆ ಇಷ್ಟರವರೆಗೆ ಶ್ರೀಮಂತ ಟಿ20 ಲೀಗ್‌ನ ಪ್ರಶಸ್ತಿ ಗೆಲ್ಲಲು ಅವರಿಂದ ಸಾಧ್ಯವಾಗಲಿಲ್ಲ. 

ಟಾಪ್ ನ್ಯೂಸ್

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

ICC Men’s Test Team Rankings; Team India slipped to second place

ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ

Thomas Cup: ಬ್ಯಾಡ್ಮಿಂಟನ್‌; ಭಾರತದ ಆಟಕ್ಕೆ ತೆರೆ

Thomas Cup: ಬ್ಯಾಡ್ಮಿಂಟನ್‌; ಭಾರತದ ಆಟಕ್ಕೆ ತೆರೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

1——dsadsa

Madikeri; ಮೊಬೈಲ್ ನಿಂದ ಬಡಿದು ಅತ್ತೆ ಹತ್ಯೆಗೈದು ಕಥೆ ಕಟ್ಟಿದ ಸೊಸೆ!

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.