ಕುಸಿದ ಸಿದ್ದಿಬೈಲು ಮೋರಿ ಸಂಕ: ದುರಸ್ತಿಗೆ ಇಲಾಖೆ ನಿರ್ಲಕ್ಷ್ಯ


Team Udayavani, Jul 19, 2018, 6:00 AM IST

poor-quality.jpg

ಕಾಸರಗೋಡು: ಸೀತಾಂಗೋಳಿ – ವಿದ್ಯಾನಗರ ರಾಜ್ಯ ಹೆದ್ದಾರಿಯ ಕಣ್ಣೂರು – ಅನಂತಪುರ ರಸ್ತೆಯ ಸಿದ್ದಿಬೈಲು ಮೋರಿ ಸಂಕ ಉದ್ಘಾಟನೆಗೊಂಡು ಒಂದು ವರ್ಷದಲ್ಲೇ ಸಂಕದ ಸ್ಲಾಬ್‌ ಕುಸಿದು ಬಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.ಸ್ಲಾಬ್‌ ಕುಸಿದು ತಿಂಗಳುಗಳೇ ಕಳೆದರೂ ಯಾವುದೇ ರೀತಿಯ ತುರ್ತು ಕಾಮಗಾರಿಗೆ ಮುಂದಾಗದಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ
ತೋರುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಪುತ್ತಿಗೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಕಣ್ಣೂರು 9ನೇ ವಾರ್ಡ್‌ಗೆ ಒಳಪಡುವ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ರಸ್ತೆಯ ಸಿದ್ದಿಬೈಲುನಲ್ಲಿ ಮೋರಿ ಸಂಕ ಕುಸಿದು ರಸ್ತೆಯ ಮಧ್ಯೆಯೇ ಹೊಂಡ ನಿರ್ಮಾಣವಾಗಿ ಅನೇಕ ತಿಂಗಳುಗಳೇ ಕಳೆದಿವೆ. ಅಧಿಕಾರಿಗಳು ತುರ್ತು ಭೇಟಿ ನೀಡಿ ಅಪಘಾತವನ್ನು  ಆಹ್ವಾನಿಸುತ್ತಿರುವ ಬಗ್ಗೆ ಸೂಚನಾ ಫಲಕವನ್ನಾದರೂ ಸ್ಥಾಪಿಸದೇ ಇರುವುದರಿಂದ ಇಲ್ಲಿ  ಪ್ರತಿನಿತ್ಯ ಸಣ್ಣಪುಟ್ಟ  ಅವಘಡಗಳಿಗೆ ಕಾರಣವಾಗುತ್ತಲೇ ಇದೆ. ಇದರಿಂದಾಗಿ ಪ್ರಯಾಣಿಕರ ರೋಷ ಮತ್ತಷ್ಟು  ಹೆಚ್ಚಿದೆ.

ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಳಕ್ಕೆ ರಾಜ್ಯ,ಹೊರ ರಾಜ್ಯ ಯಾತ್ರಾರ್ಥಿಗಳು, ಕಿನ್‌ಫ್ರಾ ಇಂಡಸ್ಟ್ರೀಯಲ್‌ಗೆ ಸರಕು ಸಾಗಿಸುವ ಘನ ವಾಹನಗಳು, ವಿವಿಧ ಶಾಲಾ ಕಾಲೇಜು ವಾಹನಗಳು, ಮಾಯಿ ಪ್ಪಾಡಿ – ನಾಯ್ಕಪು ಮೂಲಕ ಕುಂಬಳೆಗೆ ಹತ್ತಿರದ ದಾರಿಯಲ್ಲಿ  ತಲುಪುವ ವಾಹನಗಳು ಅಲ್ಲದೆ ಪ್ರತಿ ದಿನ ನೂರಾರು ವಾಹನಗಳು ಸಂಚರಿ ಸುವ ಈ ಮುಖ್ಯ ರಸ್ತೆಯಲ್ಲಿರುವ ಮೋರಿ ಸಂಕ ಇದೀಗ ಸಂಪೂರ್ಣ ಕುಸಿತದ ಭೀತಿ ಎದುರಿಸುತ್ತಿದೆ.

ಪಂಚಾಯತ್‌ ಪ್ರತಿ ವಾರ್ಷಿಕ ಮುಂಗಡಪತ್ರದಲ್ಲಿ  ರಸ್ತೆಗಳ ಅಭಿವೃದ್ಧಿಗೆ ಹಾಗೂ ಸುರಕ್ಷತೆಗೆ ಕೋಟಿ ರೂ. ಲೆಕ್ಕದಲ್ಲಿ  ಅನುದಾನ ಮೀಸಲಿರಿಸಿದ್ದರೂ, ಇಂತಹ ತುರ್ತು ಕಾಮಗಾರಿ ಬಗ್ಗೆ  ನಿರ್ಲಕ್ಷ್ಯ  ವಹಿಸಿರುವುದು ವಿಷಾದನೀಯ. ಇದೀಗ ಈ ಮೋರಿ ಸಂಕದ ಉದ್ಘಾಟನೆ ನಡೆದು ಜುಲೈ 28ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಇನ್ನೊಂದೆಡೆ ಮೋರಿ ಸಂಕದ ಕಾಮಗಾರಿ ಭ್ರಷ್ಟಾ ಚಾರದ ಪರಮಾವಧಿ ಎಂದು ನಾಗರಿ ಕರು ದೂರಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ವಿವಿಧ ಭರವಸೆಗಳನ್ನು ನೀಡಿ ಗೆದ್ದ ನಂತರ ಇಂತಹ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ಸ್ಪಂದಿಸದೆ ನಿರ್ಲಕ್ಷ್ಯಧೋರಣೆ ತಳೆಯುತ್ತಿದ್ದಾರೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕೇವಲ ಒಂದು ವರ್ಷದಲ್ಲೇ ಕುಸಿದ ಕಳಪೆ ಗುಣಮಟ್ಟದ ಸಂಕವನ್ನು  ನಿರ್ಮಿಸಿ ಕೊಟ್ಟದ್ದಕ್ಕಾಗಿ ಸಂಬಂಧಪಟ್ಟವರು ತಲೆತಗ್ಗಿಸಬೇಕಾಗಿದೆ. ಸಾರ್ವಜನಿಕರನ್ನು  ಮೋಸ ಗೊಳಿಸುವ ಇಂತಹ ಕೆಲಸಗಳ ಬಗ್ಗೆ  ನೋವಿದೆ. ಇಂತಹ ಅನಾಸ್ಥೆಯ ವಿರುದ್ಧ  ಸಂಬಂಧಪಟ್ಟ  ಅಧಿಕಾರಿಗಳಿಗೆ ಸೂಕ್ತ  ದಾಖಲೆಗಳನ್ನು  ಒದಗಿಸುವ ಪ್ರಯತ್ನ  ನಮ್ಮದು. ಇನ್ನಾದರೂ ಜನರ ಪ್ರಾಣದೊಂದಿಗೆ ಚೆಲ್ಲಾಟವಾಡದಂತೆ ಸಂಬಂಧಿತ ಇಲಾಖೆಯು ಎಚ್ಚರಿಕೆ ವಹಿಸಬೇಕಾಗಿದೆ.
– ಮೊಹಮ್ಮದ್‌,ಸ್ಥಳೀಯ ನಿವಾಸಿ

ಟಾಪ್ ನ್ಯೂಸ್

sunil kumar

Interview; ಮುಸ್ಲಿಂ ಲೀಗ್‌ನ ‘ಬಿ’ ಟೀಂ ಕಾಂಗ್ರೆಸ್‌: ಸುನಿಲ್‌ ಕುಮಾರ್‌

MOdi (3)

I.N.D.I.A. ಯಿಂದ ವೋಟ್‌ ಜೆಹಾದ್‌: ಪ್ರಧಾನಿ ಮೋದಿ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

sunil kumar

Interview; ಮುಸ್ಲಿಂ ಲೀಗ್‌ನ ‘ಬಿ’ ಟೀಂ ಕಾಂಗ್ರೆಸ್‌: ಸುನಿಲ್‌ ಕುಮಾರ್‌

ಪೆನ್‌ಡ್ರೈವ್‌ ಪ್ರಕರಣ: ಕುತೂಹಲ ಕೆರಳಿಸಿದ ಪ್ರೀತಮ್‌ ಗೌಡ ಮೌನ

ಪೆನ್‌ಡ್ರೈವ್‌ ಪ್ರಕರಣ: ಕುತೂಹಲ ಕೆರಳಿಸಿದ ಪ್ರೀತಮ್‌ ಗೌಡ ಮೌನ

21

H.D. Revanna: ಇಂದು ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

MOdi (3)

I.N.D.I.A. ಯಿಂದ ವೋಟ್‌ ಜೆಹಾದ್‌: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.