ಚಿಮ್ಮಲಗಿ ಬಾಲಕಿ ಅತ್ಯಾಚಾರಿ ಆರೋಪಿ ಸೆರೆ
Team Udayavani, Oct 9, 2018, 6:50 AM IST
ವಿಜಯಪುರ: ಚಿಮ್ಮಲಗಿ ತಾಂಡಾದ ಬಾಲಕಿ ಮೇಲಿನ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ತಾಂಡಾದ ಶಿವಾನಂದ ಚಂದು ಲಮಾಣಿ (35) ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಪ್ರಕಾಶ ನಿಕ್ಕಂ, ಚಿಮ್ಮಲಗಿ ತಾಂಡಾದಲ್ಲಿ ಸೆ.30ರಂದು ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿತ್ತು. ಈ ಕುರಿತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಾಗಿ ಬಸವನಬಾಗೇವಾಡಿ ಡಿಎಸ್ಪಿ ಮಹೇಶ್ವರ ಗೌಡ ನೇತೃತ್ವದಲ್ಲಿ 50 ಪೊಲೀಸರ ತಂಡ ರಚಿಸಲಾಗಿತ್ತು. ಅಚ್ಚರಿ ಸಂಗತಿ ಎಂದರೆ ಸದರಿ ಆರೋಪಿ ಬಾಲಕಿ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಎಂದರು. ಹತ್ಯೆಯಾದ ಬಾಲಕಿ ತಂದೆ ಹಾಗೂ ಆರೋಪಿ ಮಧ್ಯೆ ಸ್ಥಳಕ್ಕೆ ಸಂಬಂಧಿ ಸಿದಂತೆ ಜಗಳ ಇತ್ತು. ಈ ಸಿಟ್ಟಿನಿಂದಾಗಿ ಅಂಗವಿಕಲೆಯಾಗಿದ್ದ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿ, ಹತ್ಯೆ ನಡೆಸಿದ್ದಾಗಿ ಬಾಯಿ ಬಿಟ್ಟಿದ್ದಾನೆ ಎಂದರು.