ಶಾಸಕ ಪ್ರಭು ಚವ್ಹಾಣ್ ವಿರುದ್ಧ ದೂರು ದಾಖಲು
Team Udayavani, Apr 11, 2019, 3:00 AM IST
ಬೀದರ: ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಔರಾದ್ ಶಾಸಕ ಪ್ರಭು ಚವ್ಹಾಣ್ ವಿರುದ್ಧ ಸಹಾಯಕ ಚುನಾವಣಾ ಧಿಕಾರಿ ಔರಾದ ತಾಲೂಕಿನ ಸಂತಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಂತಪೂರ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ಪ್ರಭು ಚೌವ್ಹಾಣ, “ಜೋ ಕಾಂಗ್ರೆಸ್ ಕೋ ವೋಟ್ ದೇತಾ ವೋ ಜಾಯೇಗಾ ಪಾಕಿಸ್ತಾನ’ ಎಂದು ಭಾಷಣ ಮಾಡಿದ್ದಾರೆಂದು ಆರೋಪಿಸಿ ಚುನಾವಣಾಧಿ ಕಾರಿ ವಿದ್ಯಾನಂದ ಸಿ. ಪೊಲೀಸ್ ಅಧಿ ಕಾರಿಗೆ ದೂರು ಸಲ್ಲಿಸಿದ್ದರಿಂದ ಸಂತಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.