ನಾಡಿದ್ದು ಬಹಿರಂಗ ಪ್ರಚಾರ ಅಂತ್ಯ: ಜಿಲ್ಲಾಧಿಕಾರಿ

Team Udayavani, Apr 19, 2019, 4:51 PM IST

Udayavani Kannada Newspaper

ಕಾರವಾರ: ಏ.23 ರಂದು ಮತದಾನ ನಡೆಯುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 48 ಗಂಟೆಗಳ ಮುಂಚಿತವಾಗಿ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು ಈ ಅವಧಿಯಲ್ಲಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವುದನ್ನು ಚುನಾವಣಾ ಆಯೋಗ ನಿರ್ಬಂಧಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ಹರೀಶಕುಮಾರ್‌ ಕೆ. ತಿಳಿಸಿದ್ದಾರೆ.

ಏ.23 ರಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, 48 ಗಂಟೆಗಳ ಮುಂಚಿತವಾಗಿ ಅಂದರೆ ಏ.21 ರ ಸಂಜೆ 6 ಗಂಟೆಗೆ‌ ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಆದ್ದರಿಂದ ಏ.22 ಮತದಾನದ ಮುನ್ನಾ ದಿನ ಹಾಗೂ ಏ.23ರ ಮತದಾನದ ದಿನ ಯಾವುದೇ ಮಾಧ್ಯಮಗಳನ್ನು ಬಳಸಿಕೊಂಡು ಪ್ರಚಾರ ಮಾಡಲು ಅವಕಾಶ ಇರುವುದಿಲ್ಲ. ಆದರೆ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸುವ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಡಿಸಿ ಕಚೇರಿಯಲ್ಲಿರುವ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ (ಎಂಸಿಎಂಸಿ)ಯಲ್ಲಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು.

ಪತ್ರಿಕಾ ಮಾಧ್ಯಮದಲ್ಲಿ ಜಾಹೀರಾತು ನೀಡಲು ಬಯಸುವ ಯಾವುದೇ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿ ಸ್ವಯಂ ದೃಢೀಕರಿಸಿದ ಜಾಹೀರಾತಿನ ಎರಡು ಪ್ರತಿಯನ್ನು ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ಅನುಮತಿ ಪತ್ರ ಪಡೆಯಬೇಕು. ಅನುಮತಿ ಪತ್ರ ಪಡೆಯದ ಜಾಹೀರಾತನ್ನು ಯಾವುದೇ ಮಾಧ್ಯಮಗಳು ಪ್ರಕಟಿಸಬಾರದು. ಈ ವಿಷಯದಲ್ಲಿ ಎಲ್ಲ ಪತ್ರಿಕಾ ಮಾಧ್ಯಮಗಳು ಸಹಕರಿಸಬೇಕಿದೆ.

ಅಲ್ಲದೆ ಪ್ರಜಾ ಪ್ರತಿನಿಧಿ ಕಾಯ್ದೆ ಸೆಕ್ಷನ್‌ 126ಎ ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರುವ ಪತ್ರಿಕೆ, ಟಿವಿ, ರೇಡಿಯೋ ಚಾನೆಲ್‌ಗ‌ಳು, ಕೇಬಲ್‌ ನೆಟ್‌ವರ್ಕ್‌ ಸೇರಿದಂತೆ ಇತರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಭಾವ ಬೀರುವ ಯಾವುದೇ ಸುದ್ದಿ ಪ್ರಸಾರ, ಸಂದರ್ಶನ, ಚರ್ಚೆ, ಜಾಹೀರಾತು, ಮತಗಟ್ಟೆ ನಿರ್ಗಮನ ಹಾಗೂ ಚುನಾವಣಾ ಸಂಬಂಧಿಸಿದ ಅಭಿಪ್ರಾಯ ಪ್ರಸಾರ ಮಾಡುವಂತಿಲ್ಲ.
ರಾಜಕೀಯ ಪಕ್ಷಗಳು, ಆಭ್ಯರ್ಥಿಗಳು ಹಾಗೂ ವಿವಿಧ ಮಾಧ್ಯಮಗಳು ಚುನಾವಣಾ ಆಯೋಗದ ಈ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಡಾ| ಹರೀಶಕುಮಾರ್‌ ಕೆ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತದಾನ ದಿನದಂದು ಕಾರ್ಮಿಕರಿಗೆ ವೇತನ ಸಹಿತ ರಜೆ
ಕಾರವಾರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಏ.23 ರಂದು ಮತದಾನಕ್ಕಾಗಿ ಎಲ್ಲಾ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಲಾಗುತ್ತದೆ ಎಂದು ಕಾರ್ಮಿಕ ಇಲಾಖೆಯ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮತದಾನ ದಿನದಂದು ಜಿಲ್ಲೆಯಾದ್ಯಂತ ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು ಮತ್ತು ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರಜಾ ಪ್ರತಿನಿಧಿ ಕಾಯ್ದೆ, 135(ಬಿ) ರಡಿಯಲ್ಲಿ ರಜೆ ಘೋಷಿಸಿ ಸಂವಿಧಾನಾತ್ಮಕ ಹಕ್ಕಾದ ಮತ ಚಲಾಯಿಸುವುದಕ್ಕಾಗಿ ಎಲ್ಲಾ ಸಂಸ್ಥೆ, ನಿಯೋಜಕರು ಅವಕಾಶ ಮಾಡಿಕೊಡಲು ಸೂಚಿಸಲಾಗಿದೆ. ಕಾರ್ಮಿಕರಿಗೆ ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ರಜೆ ನೀಡದೇ ಇದ್ದಲ್ಲಿ ಅಂತಹ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆ

ಟಾಪ್ ನ್ಯೂಸ್

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

Temperature Increase: ಮೊಟ್ಟೆ ದರ ಇಳಿಕೆ

Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

Temperature Increase: ಮೊಟ್ಟೆ ದರ ಇಳಿಕೆ

Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Dharmasthala ಸಂಸ್ಕಾರವಂತ ಬದುಕು ನಮ್ಮದಾಗಲಿ: ಚಿತ್ರ ನಟ ದೊಡ್ಡಣ್ಣ ಕಳಕಳಿ

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

Speed ​​Boat ಹೊರಟದ್ದು ಅಳಸಮುದ್ರಕ್ಕೆ; ತಲುಪಿದ್ದು ತೀರಕ್ಕೆ!

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

BC Road, ಉಪ್ಪಿನಂಗಡಿಯಲ್ಲಿ ಸಂಚಾರ ಸಂಕಷ್ಟ : ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌

Temperature Increase: ಮೊಟ್ಟೆ ದರ ಇಳಿಕೆ

Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.