ಶೀಘ್ರ 16,000 ಪೇದೆ, 630 ಪಿಎಸ್‌ಐ ನೇಮಕ

Team Udayavani, Sep 24, 2019, 3:07 AM IST

shigra

ಕಲಬುರಗಿ: ಮುಂಬರುವ ಎರಡು ವರ್ಷದೊಳಗೆ 16,000 ಪೊಲೀಸ್‌ ಪೇದೆಗಳು ಹಾಗೂ 630 ಪಿಎಸ್‌ಐಗಳ ನೇಮಕಾತಿ ಮಾಡಿಕೊಳ್ಳಲಾಗುವುದು. ಈಗಾಗಲೇ 6,000 ಪೇದೆಗಳ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಕುರಿತು ಹೈಕೋರ್ಟ್‌ಗೂ ಮಾಹಿತಿ ಸಲ್ಲಿಸಲಾಗಿದ್ದು, ಹಣಕಾಸು ಇಲಾಖೆ ಸಹ ಒಪ್ಪಿಗೆ ಸೂಚಿಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಲ್ಲಿನ ನಾಗನಹಳ್ಳಿ ಪೊಲೀಸ್‌ ತರಬೇತಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ 9ನೇ ತಂಡದ ಪಿಎಸ್‌ಐ ಪ್ರಶಿಕ್ಷಣಾ ರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕಾರ ಹಾಗೂ ಬಹು ಮಾನ ವಿತರಿಸಿ ಅವರು ಮಾತನಾಡಿದರು.

ಪಿಎಸ್‌ಐಗಳ ನೇಮಕ ಹಾಗೂ ಬಡ್ತಿಯಲ್ಲಿ 371ಜೆ ವಿಧಿ ಬಳಕೆಯಾಗದೇ ಇರುವುದು ಹಾಗೂ 371ನೇ ವಿಧಿಯಡಿ ಪ್ರಮಾಣ ಪತ್ರ ದುರ್ಬಳಕೆ ಮಾಡಿರುವ ಕುರಿತಾಗಿ ಮರು ಪರಿಶೀಲಿಸಿ, ಸಾಧ್ಯವಾ ದರೆ ಮರು ತನಿಖೆಗೆ ಆದೇಶಿಸಲಾಗುವುದು. ಪೊಲೀಸ್‌ ಇಲಾಖೆ ಸುಧಾರಣೆಗೆ ದೃಢ ಹೆಜ್ಜೆ ಇಡಬೇಕಾಗಿದೆ. ಹೀಗಾಗಿ ಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾ ಗುವುದು. ಉಡುಪಿಯಲ್ಲಿ ಹೊಸದಾಗಿ ಪೊಲೀಸ್‌ ತರ ಬೇತಿ ಶಾಲೆ ತೆರೆಯ ಲಾಗುವುದು ಎಂದರು.

ತರಬೇತಿಯಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಕಲಬುರಗಿ ಸೇರಿ ರಾಜ್ಯದ 14 ಪೊಲೀಸ್‌ ತರಬೇತಿ ಮಹಾವಿದ್ಯಾಲಯ ಹಾಗೂ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಸುಧಾರಣೆ ಮೊದಲ ಹೆಜ್ಜೆಯಾಗಿ ಮೈಸೂರು ಪಿಟಿಸಿ ಯನ್ನು ಸೆಂಟರ್‌ ಆಫ್ ಎಕ್ಸ್‌ಲೆನ್ಸ್‌ ಮಾಡಲಾಗುವುದು. ಪೊಲೀಸ್‌ ಇಲಾಖೆಯ 12 ಹಾಗೂ ಕೆಎಸ್‌ಆರ್‌ಪಿಯ 2 ತರಬೇತಿ ಮಹಾವಿದ್ಯಾಲಯಗಳನ್ನು ಹಂತ-ಹಂತವಾಗಿ ಉನ್ನತಿಕರಣಗೊಳಿಸಲಾಗುವುದು ಎಂದರು. ಈಗಿರುವ ತರಬೇತಿಯಲ್ಲೂ ಬದಲಾವಣೆ ತರಲಾಗುವುದು.

ಬಹು ಮುಖ್ಯವಾಗಿ ಇತ್ತೀಚೆಗೆ ಸೈಬರ್‌ ಕ್ರೈಂ ಹೆಚ್ಚುತ್ತಿ ರುವುದರಿಂದ ತರಬೇತಿ ಅವಧಿಯಲ್ಲಿ ಪೊಲೀಸರಿಗೆ ಇ-ಲರ್ನಿಂಗ್‌, ಇ- ಪೊಲೀಸಿಂಗ್‌ ಕುರಿತು ತರಬೇತಿ ನೀಡಲಾಗುವುದು. ಫಾರೆನಿಕ್ಸ್‌ ಪತ್ತೆ, ಭದ್ರತೆ, ಸಂಚಾರ ನಿರ್ವ ಹಣೆಯಲ್ಲಿ ವೃತ್ತಿಪರತೆ ಹೆಚ್ಚಿಸಲು ರಾಜ್ಯದ ಪೊಲೀಸರಿಗೆ ಅಮೆರಿಕ, ಸ್ಕಾಟ್‌ಲ್ಯಾಂಡ್‌ ಸೇರಿ ವಿದೇಶಗಳಿಗೆ ಕಳುಹಿಸಿ ಅಲ್ಲಿನ ಮಾದರಿ ಹಾಗೂ ತಾಂತ್ರಿಕ ತರಬೇತಿ ಸಹ ನೀಡಲಾಗುವುದು ಎಂದರು.

ಔರಾದಕರ್‌ ವರದಿಗೆ ಶೀಘ್ರ ಅಧಿಸೂಚನೆ: ಔರಾದಕರ್‌ ವರದಿ ಜಾರಿಗೆ ಸರ್ಕಾರ ಬದ್ಧವಿದೆ. ಈ ಕುರಿತು ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು. ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಜೈಲರ್‌ ಸಿಬ್ಬಂದಿಯನ್ನು ಹೊರಗಿಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಎರಡು ಸುತ್ತಿನ ಸಭೆ ನಡೆಸಿ ಇವರನ್ನೂ ಸೇರಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಟಾಪ್ ನ್ಯೂಸ್

T20 World Cup; Cricket mega event threatened by Pakistani militants

T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ

Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು

Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು

Paris Olympics: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ ಪುರುಷರ ರಿಲೇ ತಂಡ

Paris Olympics: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ, ಪುರುಷರ ರಿಲೇ ತಂಡ

Cipla and Glenmark; ಭಾರತದಲ್ಲಿ ತಯಾರಾದ ಅಸ್ತಮಾ ಔಷಧ ವಾಪಸ್‌

Cipla and Glenmark; ಭಾರತದಲ್ಲಿ ತಯಾರಾದ ಅಸ್ತಮಾ ಔಷಧ ವಾಪಸ್‌

3

ಕ್ರಿಕೆಟ್‌ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು: ಕುಸಿದು ಬಿದ್ದು 11 ವರ್ಷದ ಬಾಲಕ ಮೃತ್ಯು

ED raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ

ED Raids; ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿತ್ತು ಕಂತೆ ಕಂತೆ ಹಣ, ಬೆಚ್ಚಿ ಬಿದ್ದ ಅಧಿಕಾರಿ

Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್‌ ಮಾಡಿದ್ರಾ ಸಮಂತಾ?: ಟ್ರೆಂಡ್‌ ಆದ ಸ್ಯಾಮ್

Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್‌ ಮಾಡಿದ್ರಾ ಸಮಂತಾ?: ಟ್ರೆಂಡ್‌ ಆದ ಸ್ಯಾಮ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್‌

LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್‌

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್‌

LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್‌

T20 World Cup; Cricket mega event threatened by Pakistani militants

T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ

Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು

Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು

ಡ್ರಗ್ಸ್‌ ಕೊಟ್ಟು, ಸಂಸದೆಗೇ ಲೈಂಗಿಕ ಕಿರುಕುಳ ಆರೋಪ; ಆಸ್ಟ್ರೇಲಿಯಾ ಎಂಪಿ ಅಳಲು

ಡ್ರಗ್ಸ್‌ ಕೊಟ್ಟು, ಸಂಸದೆಗೇ ಲೈಂಗಿಕ ಕಿರುಕುಳ ಆರೋಪ; ಆಸ್ಟ್ರೇಲಿಯಾ ಎಂಪಿ

Paris Olympics: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ ಪುರುಷರ ರಿಲೇ ತಂಡ

Paris Olympics: ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ, ಪುರುಷರ ರಿಲೇ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.