ವಿರೂಪಾಪೂರಗಡ್ಡಿ ಖಾಲಿ ಖಾಲಿ

Team Udayavani, Feb 21, 2020, 4:52 PM IST

kopala-tdy-1

ಗಂಗಾವತಿ: ಮಿನಿಗೋವಾ, ದೇಶ ವಿದೇಶದ ಪ್ರವಾಸಿಗರ ಸ್ವರ್ಗ ಎಂದೇ ಖ್ಯಾತಿ ಪಡೆದ ಹಂಪಿ ಸಮೀಪದಲ್ಲಿರುವ ತಾಲೂಕಿನ ವಿರೂಪಾಪೂರಗಡ್ಡಿ ಸಂಪೂರ್ಣ ಖಾಲಿ ಖಾಲಿಯಾಗಿದ್ದು, ಇಲ್ಲಿಯ ರೆಸಾರ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಬೆಂಗಳೂರು, ಗೋವಾ, ಮಂಗಳೂರಿಗೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಕಳೆದ ಮೂರು ದಶಕಗಳಿಂದ ರೆಸಾರ್ಟ್‌ಗಳಲ್ಲಿ ಸುತ್ತಲಿನ ಗ್ರಾಮಗಳ ನೂರಾರು ಕಾರ್ಮಿಕರು ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ, ಸಣ್ಣಪುಟ್ಟ ಮನೆ ನಿರ್ಮಿಸಿಕೊಂಡಿದ್ದರು. ವಿರೂಪಾಪೂರಗಡ್ಡಿ ಹತ್ತಿರದ ಹಂಪಿ ಪ್ರದೇಶದಲ್ಲಿರುವ ಅನೇಕ ಸ್ಮಾರಕಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಗಡ್ಡಿಯಲ್ಲಿರುವ ರೆಸಾರ್ಟ್‌ ತೆರವು ಮಾಡುವಂತೆ ಹಂಪಿ ಅಭಿವೃದ್ಧಿ ಪ್ರಾಧಿ ಕಾರ 2011ರಲ್ಲಿ ನೋಟಿಸ್‌ ನೀಡಿದ್ದನ್ನು ರೆಸಾರ್ಟ್‌ ಮಾಲೀಕರು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಮೂಲಕ ಇಲ್ಲಿಯವರೆಗೆ ತಡೆಯಾಜ್ಞೆ ಪಡೆದು ರೆಸಾರ್ಟ್‌ ವ್ಯವಹಾರ ನಡೆಸುತ್ತಿದ್ದಾರೆ. ರೆಸಾರ್ಟ್‌ಗಳಲ್ಲಿ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದ್ದು, ತಿಂಗಳೊಳಗೆ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್‌ ಆದೇಶ ಮಾಡಿದ್ದು, ಹಂಪಿ ಪ್ರಾ ಧಿಕಾರ ಮತ್ತು ಜಿಲ್ಲಾಡಳಿತ ರೆಸಾರ್ಟ್‌ ಮಾಲೀಕರಿಗೆ ಸುಪ್ರೀಂ ಕೋರ್ಟ್‌ ಆದೇಶ ಪ್ರತಿಯನ್ನು ತಲುಪಿಸಿದೆ.

ಇದರಿಂದ ಸ್ವಯಂ ಪ್ರೇರಣೆಯಿಂದ ರೆಸಾರ್ಟ್‌ ಮಾಲೀಕರು ಸುತ್ತಲಿನ ಗ್ರಾಮಗಳಲ್ಲಿರುವ ಖಾಲಿ ಗೋದಾಮುಗಳಲ್ಲಿ ಸಾಮಗ್ರಿ ಸಂಗ್ರಹಿಸಲಾಗುತ್ತಿದೆ. ಈ ಮಧ್ಯೆ 2002ರಲ್ಲಿ ರಚನೆಯಾಗಿರುವ ಹಂಪಿ ಅಭಿವೃದ್ಧಿ ಪ್ರಾಧಿ ಕಾರ ಮತ್ತು ನಿಯಮಗಳನ್ನು ಪ್ರಶ್ನಿಸಿ ರೆಸಾರ್ಟ್‌ ಮಾಲೀಕರು 2011ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಫೆ. 24ರಂದು ಈ ಅರ್ಜಿ ವಿಚಾರಣೆ ನಡೆಯಲಿದ್ದು ವಿರೂಪಾಪೂರಗಡ್ಡಿಯಲ್ಲಿರುವ ರೆಸಾರ್ಟ್‌ ಅಳಿವು ಉಳಿವು ಅಂದು ಗೊತ್ತಾಗಲಿದೆ.

ಹೊಟೇಲ್‌ಗೆ ಶುಕ್ರದೆಸೆ: ಪ್ರತಿವರ್ಷ ನವೆಂಬರ್‌ನಿಂದ ಏಪ್ರಿಲ್‌ವರೆಗೆ ಹಂಪಿ ವಿರೂಪಾಪೂರಗಡ್ಡಿ, ಕಿಷ್ಕಿಂದಾ ಅಂಜನಾದ್ರಿಬೆಟ್ಟ ವೀಕ್ಷಣೆಗೆ ದೇಶ ವಿದೇಶ ಪ್ರವಾಸಿಗರು ಆಗಮಿಸುತ್ತಾರೆ. ರೆಸಾರ್ಟ್‌ಗಳನ್ನು ತೆರವು ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದ್ದರಿಂದ ರೆಸಾರ್ಟ್‌ ಮಾಲೀಕರು ಪೂರ್ಣ ಪ್ರಮಾಣದಲ್ಲಿ ವ್ಯವಹಾರ ಸ್ಥಗಿತ ಮಾಡಿದ್ದರಿಂದ ಸಾಣಾಪೂರ, ಕಡೆಬಾಗಿಲು, ಜಂಗ್ಲಿ, ಹನುಮನಹಳ್ಳಿ, ಆನೆಗೊಂದಿ ಗ್ರಾಮಗಳಲ್ಲಿರುವ ಸಣ್ಣಪುಟ್ಟ ಹೊಟೇಲ್‌ಗ‌ಳಲ್ಲಿ ಪ್ರವಾಸಿಗರು ಉಳಿದು ಕೊಂಡಿದ್ದು, ವಿರೂಪಾಪೂರಗಡ್ಡಿ ಸುತ್ತಲಿನ ಗ್ರಾಮಗಳ ಹೊಟೇಲ್‌ಗ‌ಳಿಗೆ ಶುಕ್ರದೆಸೆ ಬಂದಿದೆ.

ರೆಸಾರ್ಟ್‌ ತೆರವು ಮಾಡುವ ಸುಪ್ರೀಂಕೋರ್ಟ್‌ ಆದೇಶದ ಪ್ರತಿ ರೆಸಾರ್ಟ್‌ ಮಾಲೀಕರಿಗೆ ತಲುಪಿಸಲಾಗಿದೆ. ಪ್ರಾ ಧಿಕಾರದಿಂದ ಸಮೀಕ್ಷೆ ನಡೆಸಲಾಗಿದೆ. ಈಗಾಗಲೇ ರೆಸಾರ್ಟ್‌ ಕ್ಲೋಸ್‌(ಮುಚ್ಚಿವೆ) ಎಂದು ಬೋರ್ಡ್‌ ಹಾಕಲಾಗಿದೆ. ಮುಂಗಡ ಕಾಯ್ದಿರಿಸಿದ್ದ ರೂಮ್‌ ಕ್ಯಾನ್ಸಲ್‌ ಮಾಡಲಾಗಿದೆ. ಕೂಲಿಕಾರರು ಗುಳೆ ಹೋಗಿರುವ ಕುರಿತು ಮಾಹಿತಿ ಇಲ್ಲ ಮಾಹಿತಿ ಸಂಗ್ರಹ ಮಾಡಲಾಗುತ್ತದೆ. -ಎಲ್‌.ಡಿ. ಚಂದ್ರಕಾಂತ, ತಹಶೀಲ್ದಾರ್‌

-ಕೆ.ನಿಂಗಜ್ಜ

ಟಾಪ್ ನ್ಯೂಸ್

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Dharwad; ಗುಜರಾತ್ ನಿಂದ ಓಡಿ ಹೋದ 12 ಉದ್ಯಮಿಗಳ ಬಗ್ಗೆ ಮಾತನಾಡಿ: ಮೋದಿಗೆ ಲಾಡ್ ಸವಾಲು

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

11-plastic

Eco-friendly Bio Plastic: ಪರಿಸರ ಸ್ನೇಹಿ ಮೆಕ್ಕೆಜೋಳದ ಬಯೋ ಪ್ಲಾಸ್ಟಿಕ್‌

16-uv-fusion

Aranthodu: ವಾಹನಗಳ ಮಧ್ಯೆ ಸರಣಿ ಅಪಘಾತ; ಬೈಕ್ ಸವಾರ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

Koppala; ವಿದೇಶಿ ನಾಯಕರು ಮೋದಿ ಬೇಕೆಂದು ಸ್ವಾಗತ ಮಾಡಿದ್ದಾರೆ: ಎ ನಾರಾಯಣಸ್ವಾಮಿ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ

12-gangavathi

ವಿಧಾನಸಭಾ ಚುನಾವಣೆಯಲ್ಲಿ ಸಿದ್ದು,ಡಿಕೆಶಿ ನನ್ನ ಜತೆ ಕೈ ಜೋಡಿಸಿದ್ದರು:ಗಾಲಿ ಜನಾರ್ದನ ರೆಡ್ಡಿ

11-

Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur Lok Sabha Constituency: ಬಿಸಿಲೂರಿನಲ್ಲಿ ಕಾವೇರಿದ “ನಾಯಕ’ತ್ವದ ಹೋರಾಟ

Raichur Lok Sabha Constituency: ಬಿಸಿಲೂರಿನಲ್ಲಿ ಕಾವೇರಿದ “ನಾಯಕ’ತ್ವದ ಹೋರಾಟ

13-uv-fusion

UV Fusion: ನಾವು ನಮಗಾಗಿ ಬದುಕುತ್ತಿರುವುದು ಎಷ್ಟು ಹೊತ್ತು?

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ

12-uv-fusion

Spray fans: ಬಿಸಿ ಗಾಳಿಯೂ ತಂಪಾಯ್ತು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.