ಇದ್ದೂ ಇಲ್ಲದಂತಾದ ಶುದ್ಧ ಕುಡಿವ ನೀರಿನ ಘಟಕ

| ದುರಸ್ತಿಯಿಲ್ಲದೇ ತಿಂಗಳು ಕಂಡ ಘಟಕ | ಉದಗಟ್ಟಿ ಗ್ರಾಮಸ್ಥರ ಪರದಾಟ

Team Udayavani, Oct 30, 2020, 5:16 PM IST

ಇದ್ದೂ ಇಲ್ಲದಂತಾದ ಶುದ್ಧ ಕುಡಿವ ನೀರಿನ ಘಟಕ

ಕಲಾದಗಿ: ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ತಿಂಗಳು ಕಳೆದರೂ ದುರಸ್ತಿ ಕೈಗೊಳ್ಳದ್ದರಿಂದ ಉದಗಟ್ಟಿ ಗ್ರಾಮಸ್ಥರುಶುದ್ಧ ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. ಪರ ಊರಿಗೆ ತೆರಳಿ ನೀರು ತರುವಂತಾಗಿದ್ದು, ಅಧಿಕಾರಿಗಳು ಕುಡಿಯುವ ನೀರಿನ ಘಟಕ ದುರಸ್ತಿ ಬಗ್ಗೆ ಗಮನಹರಿಸುತ್ತಿಲ್ಲಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಘಟಕ ದುರಸ್ತಿಗೊಳಿಸಿದ ದಿನ ಮಾತ್ರ ನೀರು ಲಭ್ಯವಾಗಿ ಮರು ದಿನ ಮತ್ತೆ ಕೆಟ್ಟುಹೋದ ಸ್ಥಿತಿಯಲ್ಲಿರುತ್ತದೆ.ಇಂತಹ ಶುದ್ಧ ಕುಡಿಯುವ ನೀರಿನ ಘಟಕ ಇದ್ದು ಇಲ್ಲದಂತಾಗಿದೆ. ಗ್ರಾಮಸ್ಥರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ನಿರ್ಲಕ್ಷé ಧೋರಣೆ ಅನುಸರಿಸುತ್ತಿದ್ದಾರೆ.

ಉದಗಟ್ಟಿಯಲ್ಲಿ 1,500ಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಗ್ರಾಮಸ್ಥರು ಮೂರ್‍ನಾಲ್ಕು ಕಿಲೋಮೀಟರ್‌ ದೂರದ ಗ್ರಾಮ ಮುಧೋಳ ತಾಲೂಕಿನ ಜುನ್ನೂರು ಗ್ರಾಮಕ್ಕೆ ಇಲ್ಲವೇ ಪಕ್ಕದ ಶಾರದಾಳ ಗ್ರಾಮಕ್ಕೆ ಹತ್ತಾರು ರೂ. ಖರ್ಚು ಮಾಡಿ ನೀರು ತಂದು ದಾಹವನ್ನು ಇಂಗಿಸಿಕೊಳ್ಳುತ್ತಿದ್ದಾರೆ. ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕವಾಗಿ ದುರಸ್ತಿಗೊಳಿಸಬೆಕಾಗಿದೆ.

ಖಜ್ಜಿಡೋಣಿ ಗ್ರಾಪಂ ಮಾಜಿ ಅಧ್ಯಕ್ಷರು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟಕ ದುರಸ್ತಿ ಟೆಂಡರ್‌ ಏಜೆನ್ಸಿಯವರಿಗೆ ಮಾತನಾಡಿ ಶೀಘ್ರ ದುರಸ್ತಿ ಮಾಡಲು ತಿಳಿಸಲಾಗಿದೆ. ಆರ್‌.ವಾಯ್‌. ಅಪ್ಪನ್ನವರ್‌, ಖಜ್ಜಿಡೋಣಿ ಗ್ರಾಪಂ ಪ್ರಭಾರಿ ಪಿಡಿಒ

ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸರಕಾರದ ಆದೇಶದ ಅನುಸಾರ ಖಾಸಗಿ ಏಜೆನ್ಸಿಗಳಿಗೆ ನೀಡಲಾಗಿದೆ. ಗ್ರಾಮದ ಪಿಡಿಒ ಮುಖಾಂತರ ಅಲ್ಲಿನ ಖಾಸಗಿ ಏಜೆನ್ಸಿ ಬಗ್ಗೆ ಮಾಹಿತಿ ಪಡೆದು ಅವರಿಗೆ ದುರಸ್ತಿಗೊಳಿಸಲು ಕ್ರಮ ವಹಿಸಲು ಸೂಚನೆ ನೀಡಲಾಗುವುದು. ಎನ್‌.ವೈ. ಬಸರಿಗಿಡದ, ಬಾಗಲಕೋಟೆ ತಾಪಂ ಇಒ

ಕಳೆದು ಒಂದು ತಿಂಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಒಂದು ದಿನ ಮಾತ್ರ ಸುಸ್ಥಿತಿಯಲ್ಲಿತ್ತು. ಉಳಿದ ದಿನಗಳಲ್ಲಿ ಘಟಕ ಕೆಟ್ಟ ಸ್ಥಿತಿಯಲ್ಲಿದೆ. ಗ್ರಾಮಸ್ಥರು ಬೇರೆ ಊರಿಗೆ ಹೋಗಿ ನೀರು ತರುತ್ತಿದ್ದಾರೆ. ಅಧಿಕಾರಿಗಳು ಶುದ್ಧ ನೀರಿನ ಘಟಕ ಶೀಘ್ರ ದುರಸ್ತಿ ಮಾಡಿಸಬೇಕು.ಬಸವರಾಜ ಪುಂಡಿಕಟಗಿ, ಗ್ರಾಮಸ್ಥ

 

-ಚಂದ್ರಶೇಖರ ಹಡಪದ

ಟಾಪ್ ನ್ಯೂಸ್

MOdi (3)

I.N.D.I.A. ಯಿಂದ ವೋಟ್‌ ಜೆಹಾದ್‌: ಪ್ರಧಾನಿ ಮೋದಿ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

ಬಿಜೆಪಿ ಶಾಸಕ ಯತ್ನಾಳ ಶುಗರ್‌ ಫ್ಯಾಕ್ಟ್ರಿ ಹೆಂಗ್‌ ಕಟ್ಟಿದ್ರು: ಶಿವಾನಂದ ಪಾಟೀಲ

ಬಿಜೆಪಿ ಶಾಸಕ ಯತ್ನಾಳ ಶುಗರ್‌ ಫ್ಯಾಕ್ಟ್ರಿ ಹೆಂಗ್‌ ಕಟ್ಟಿದ್ರು: ಶಿವಾನಂದ ಪಾಟೀಲ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

MOdi (3)

I.N.D.I.A. ಯಿಂದ ವೋಟ್‌ ಜೆಹಾದ್‌: ಪ್ರಧಾನಿ ಮೋದಿ

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

Rahul Gandhi: 400 ಮಹಿಳೆಯರ ಮೇಲೆ  ಪ್ರಜ್ವಲ್‌ ಅತ್ಯಾಚಾರ – ರಾಹುಲ್‌ ಗಾಂಧಿ

Rahul Gandhi: 400 ಮಹಿಳೆಯರ ಮೇಲೆ  ಪ್ರಜ್ವಲ್‌ ಅತ್ಯಾಚಾರ – ರಾಹುಲ್‌ ಗಾಂಧಿ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.