ಯೂಟರ್ನ್ ರೈಲ್ವೇ ಮಾರ್ಗ ರದ್ದು, ಸವಾರರಿಗೆ ಸಂತಸ

Team Udayavani, Nov 21, 2020, 4:12 PM IST

ಯೂಟರ್ನ್ ರೈಲ್ವೇ ಮಾರ್ಗ ರದ್ದು, ಸವಾರರಿಗೆ ಸಂತಸ

ಬೂದಿಕೋಟೆ ಮಾರ್ಗದಲ್ಲಿಯೂಟರ್ನ್ ರಸ್ತೆ ಮಾರ್ಗ ರದ್ದು ಮಾಡಿ ಈ ಹಿಂದೆ ಇದ್ದ ರಸ್ತೆಯನ್ನು ರೈಲ್ವೆ ಇಲಾಖೆಯು ದುರಸ್ತಿ ಮಾಡುತ್ತಿರುವುದು.

ಬಂಗಾರಪೇಟೆ: ಪಟ್ಟಣದಿಂದ ಬೂದಿಕೋಟೆ ಹೋಬಳಿ ಮಾರ್ಗದಲ್ಲಿರುವ ಬಂಗಾರಪೇಟೆ-ಕೋಲಾರ ರೈಲ್ವೆ ಮಾರ್ಗ ಹಳಿಯನ್ನು ಹಾದು ಹೋಗುವುದನ್ನು ರೈಲ್ವೆ ಇಲಾಖೆಯು ನಿಲ್ಲಿಸಿ ಯೂಟರ್ನ್ ಮಾಡಿಕೊಂಡು ಬರುವ ವಾಹನ ಸವಾರರಿಗೆ ತೀವ್ರ ಕಿರಿಕಿರಿಯಾಗಿದ್ದರಿಂದ, ಸಂಸದ ಎಸ್‌.ಮುನಿಸ್ವಾಮಿ ಹಾಗೂ ಸ್ಥಳೀಯ ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ಪರಿಶ್ರಮದ ಫ‌ಲವಾಗಿ ಯುಟರ್ನ್ ಮಾಡುವುದನ್ನು ರದ್ದು ಮಾಡಿ ರೈಲ್ವೆ ಹಳಿ ಮೇಲಿನ ಸಂಚಾರಕ್ಕೆ ರೈಲ್ವೆ ಇಲಾಖೆಯು ಅನುಮತಿ ನೀಡಿರುವುದರಿಂದ ಈ ಭಾಗದ ಜನರಿಗೆ ಸಂತಸವಾಗಿದೆ.

ಕಷ್ಟಕರವಾಗಿತ್ತು: ಬಂಗಾರಪೇಟೆಯಿಂದ ಬೂದಿ ಕೋಟೆ ಹೋಬಳಿ ಸೇರಿದಂತೆ ಮಾಲೂರು ತಾಲೂಕಿಗೆ ಹಾದುಹೋಗುವ ಈ ಮಾರ್ಗದಲ್ಲಿ ಪ್ರತಿನಿತ್ಯ  ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದ್ದು,ಬೂದಿಕೋಟೆ ಮುಖ್ಯ ರಸ್ತೆಗೆ ಹಾದುಹೋಗಲು ಸೇಟ್‌ಕಾಂಪೌಂಡ್‌ ಬಳಿ ಯೂಟರ್ನ್ ಮಾಡಲು ತೀವ್ರಕಷ್ಟಕರವಾಗಿತ್ತು.

ಹಿಂದೆ ಈ ರಸ್ತೆಯಲ್ಲಿ ಬಂಗಾರಪೇಟೆ-ಕೋಲಾರ ರೈಲ್ವೆ ಹಳಿ ಮೇಲೆಯೇ ವಾಹನಗಳ ಸಂಚಾರವಿತ್ತು. ಎರಡು ವರ್ಷಗಳ ಹಿಂದೆ ಕೇಂದ್ರ ರೈಲ್ವೆ ಇಲಾಖೆಯು ರೈಲ್ವೆ ಮಾರ್ಗವನ್ನು ಸುತ್ತುಕೊಂಡು ಬರಲು ವ್ಯವಸ್ಥೆ ಮಾಡಿದ್ದರಿಂದ ವಾಹನಗಳ ಸಂಚಾರರಿಗೆ ತೀವ್ರ ಕಷ್ಟವೇ ಆಗಿತ್ತು.

ಈ ಬಗ್ಗೆ ಸ್ಥಳೀಯ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದರೂ ಸಹ ರೈಲ್ವೆ ಇಲಾಖೆಯು ರೈಲ್ವೆ ಮಾರ್ಗದ ಬಳಿ ವಾಹನ ಸಂಚಾರಕ್ಕೆ ಹೆಚ್ಚು ವಿರೋಧ ವ್ಯಕ್ತಪಡಿಸಿತ್ತು. ಈ ಮಾರ್ಗದಲ್ಲಿ ಬೂದಿಕೋಟೆ ಹೋಬಳಿ ಅಲ್ಲದೇ ಮಾಲೂರು ತಾಲೂಕು ಹಾಗೂ ತಮಿಳುನಾಡು ರಾಜ್ಯಗಳಿಗೆ ಭಾರೀ ವಾಹನಗಳು ಸಂಚಾರ ಮಾಡಿದ್ದರಿಂದ ರೈಲ್ವೆ ಇಲಾಖೆಯು ತಾತ್ಕಾಲಿಕವಾಗಿ ಯೂಟರ್ನ್ ರಸ್ತೆ ನಿರ್ಮಾಣ ಮಾಡಿದ್ದರಿಂದ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದರೂ ರೈಲ್ವೆ ಇಲಾಖೆಯು ಯಾವುದೇಕ್ರಮಕೈಗೊಳ್ಳದಿದ್ದರಿಂದ ಶಾಸಕರ ಆಕ್ರೋಶಕ್ಕೆ ಕಾರಣವಾಗಿತ್ತು. ಜೊತೆಗೆ ಹಲವಾರು ಸಂಘಟನೆಗಳು ಪ್ರತಿಭಟನೆ ಮಾಡಿದ್ದರೂ ಸಹ ರೈಲ್ವೆ ಇಲಾಖೆಯು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಮೆಚ್ಚುಗೆ: ಸಂಸದ ಎಸ್‌.ಮುನಿಸ್ವಾಮಿಬಂಗಾರಪೇಟೆಗೆ ಆಗಮಿಸುತ್ತಿದ್ದ ಪ್ರತಿ ಬಾರಿಯೂ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಸೇರಿದಂತೆ ಬಿಜೆಪಿ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ಒತ್ತಡ ಹೇರುತ್ತಿದ್ದರು. ಈ ಸಮಸ್ಯೆ ಬಗೆಹರಿಸಲು ಸಂಸದರು ಬೆಂಗಳೂರಿನಿಂದ ಹಿಡಿದುದೆಹೆಲಿವರೆಗೂ ಹೋರಾಟ ನಡೆಸಿದ್ದರು. ತಾಲೂಕಿನ ಜನತೆಗೆ ಸಂಸದರು ನೀಡಿದ್ದ ಭರವಸೆ ನಿಧಾನವಾದರೂ ಸಾಧನೆ ಮಾಡಿರುವುದಕ್ಕೆ ಜನಪ್ರತಿನಿಧಿ ಗಳು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದಿ.ಸುರೇಶ್‌ ಅಂಗಡಿ ಅವರನ್ನು ನೆನೆದ ಸಂಸದ ಮುನಿಸ್ವಾಮಿ : ಬಂಗಾರಪೇಟೆ ಜನತೆಗೆ ಕೊಟ್ಟ ಮಾತಿನಂತೆ ಈ ಸಮಸ್ಯೆಯನ್ನು ಬಗೆಹರಿಸಲಾಗಿದ್ದು,ಕೇಂದ್ರರೈಲ್ವೆ ಸಹಾಯಕ ಸಚಿವರಾಗಿದ್ದ ದಿ.ಸುರೇಶ  ಅಂಗಡಿಯವರ ಸಹಾಯದಿಂದ ಈ ಸಮಸ್ಯೆ ಬಗೆಹರಿದಿದೆ. ಅವರು ನಮ್ಮನಗಲಿ ದ್ದರೂಅವರುಮಾಡಿದ್ದಆದೇಶದಮೇರೆಗೆ ಸಮಸ್ಯೆ ಇತ್ಯರ್ಥವಾಗಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು. ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ಈ ಸಮಸ್ಯೆ ಪ್ರತಿನಿತ್ಯ ಸಾವಿರಾರು ವಾಹನ ಸವಾರರಿಗೆ ಸಂಕಷ್ಟ ಎದುರಾಗಿತ್ತು. ಸ್ಥಳೀಯ ಶಾಸಕರು,ಬಿಜೆಪಿಮುಖಂಡರು ಸೇರಿದಂತೆ

ಸಾರ್ವಜನಿಕರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆ ಇರುವ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳನ್ನು ಕರೆಯಿಸಿ ಪರಿಶೀಲನೆ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಶ್ರಮಿಸಿದ್ದರ ಫ‌ಲವಾಗಿ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದರು.

ರೈಲ್ವೆ ಅಂಡರ್‌ಪಾಸ್‌ ಸಮಸ್ಯೆ ಬಗೆಹರಿಸಲಿ :  ಈ ಹಿಂದೆ ರೈಲ್ವೆ ಇಲಾಖೆಯು ಅವೈಜ್ಞಾನಿಕವಾಗಿ ಬಂಗಾರಪೇಟೆ-ಕೋಲಾರ ರೈಲ್ವೆ ಮಾರ್ಗದ ಬಳಿ ವಾಹನ ಸಂಚಾರ ಮಾರ್ಗಬದಲಾವಣೆಮಾಡಿದ್ದರಿಂದ ಸಾರ್ವಜನಿಕರಿಗೆ, ಸವಾರರಿಗೆ ತೀವ್ರ ಅನಾನುಕೂಲ ವಾಗಿತ್ತು. ಸಂಸದರೊಂದಿಗೆ ರೈಲ್ವೆ ಇಲಾಖೆಯ ಅಧಿಕಾರಿ ಗಳಿಗೆ ಸಮಸ್ಯೆ ಬಗ್ಗೆ ಮನದಟ್ಟು ಮಾಡಿ ಬಗೆಹರಿಸಲು ಶ್ರಮಿಸಲಾಗಿದೆ ಎಂದು ಬಂಗಾರಪೇಟೆ ಕ್ಷೇತ್ರದ ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ ತಿಳಿಸಿದರು.

ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ರೈಲ್ವೆ ಇಲಾಖೆಯು ಸಾಮಾನ್ಯ ಜನರಿಗೆ ಅನುಕೂಲ ವಾಗುವ ರೀತಿಯಲ್ಲಿ ಕಾಮಗಾರಿ ಮಾಡುತ್ತಿಲ್ಲ. ಇನ್ಮುಂದೆ ಸ್ಥಳೀಯವಾಗಿ ಶಾಸಕರು, ಸಂಸದರಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಬೇಕಾಗಿದ್ದು, ರೈಲ್ವೆ ಅಂಡರ್‌ಪಾಸ್‌ಗಳ ಸಮಸ್ಯೆಯನ್ನು ಬಗೆಹರಿ ಸಲು ಶ್ರಮಿಸುತ್ತಿರುವ ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಧನ್ಯವಾದಗಳು ಎಂದು ಹೇಳಿದರು.

ಎಂ.ಸಿ.ಮಂಜುನಾಥ್‌

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.