ಗ್ರಾ.ಪಂ ಚುನಾವಣೆಗೆ ದಿನ ನಿಗದಿ:ಯಾವ ತಾಲೂಕಿನಲ್ಲಿ ಯಾವಾಗ ಚುನಾವಣೆ?ಇಲ್ಲಿದೆ ಸಂಪೂರ್ಣ ಪಟ್ಟಿ
Team Udayavani, Nov 30, 2020, 1:00 PM IST
ಬೆಂಗಳೂರು: ಬಹುನಿರೀಕ್ಷಿತ ಗ್ರಾಮ ಪಂಚಾಯತ್ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಾಗಿದೆ. ರಾಜ್ಯದ 5,762 ಗ್ರಾಮ ಪಂಚಾಯತ್ ಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ನಿರ್ಧರಿಸಿದೆ.
ಮೊದಲ ಹಂತದಲ್ಲಿ ಡಿಸೆಂಬರ್ 22 ಹಾಗೂ ಎರಡನೇ ಹಂತದಲ್ಲಿ ಡಿಸೆಂಬರ್ 27ಕ್ಕೆ ಮತದಾನ ನಡೆಯಲಿದೆ. ಡಿ.30 ಮತ ಎಣಿಕೆ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಲ್ಲಿರಲಿದ್ದು, ಪಟ್ಟಣ ಪಂಚಾಯತಿ, ಪುರ ಸಭೆ, ನಗರ ಸಭೆ, ನಗರ ಪಾಲಿಕೆ ಮತ್ತು ಮಹಾನಗರ ಪಾಲಿಕೆಗೆ ಅನ್ವಯವಾಗುವುದಿಲ್ಲ.
ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ರಾಜ್ಯದ 5,762 ಗ್ರಾಮ ಪಂಚಾಯಿತಿಗಳ 35, 884 ಕ್ಷೇತ್ರಗಳ 92,121 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ:ಗ್ರಾ.ಪಂ ಸಾರ್ವತ್ರಿಕ ಚುನಾವಣೆಗೆ ಮುಹೂರ್ತ ನಿಗದಿ: ಎರಡು ಹಂತಗಳಲ್ಲಿ ನಡೆಯಲಿದೆ ಮತದಾನ
ಯಾವ ತಾಲೂಕಿನಲ್ಲಿ ಯಾವಾಗ ಚುನಾವಣೆ?
ರಾಜ್ಯದ 30 ಜಿಲ್ಲೆಗಳಲ್ಲೂ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ತಾಲೂಕುಗಳನ್ನು ವಿಂಗಡಿಸಿ ಎರಡು ಹಂತದ ಮತದಾನಕ್ಕೆ ಚುನಾವಣೆ ಆಯೋಗ ಸಿದ್ದತೆ ನಡೆಸಿದೆ.
ಮೊದಲ ಹಂತದಲ್ಲಿ 113 ತಾಲೂಕುಗಳ 2,930 ಹಾಗೂ 2ನೇ ಹಂತದಲ್ಲಿ 113 ತಾಲೂಕುಗಳ 2,832 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ.