ಅರ್ಜುನ್‌ ಜನ್ಯ ಮ್ಯೂಸಿಕಲ್‌ ನೈಟ್ಸ್‌


Team Udayavani, Apr 10, 2017, 11:24 AM IST

Arjun-Janya-Musical_(126).jpg

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಈಗಾಗಲೇ ಹಲವು ರಿಯಾಲಿಟಿ ಶೋಗಳನ್ನು ನಡೆಸಿದ್ದಾರೆ. ಅಷ್ಟೇ ಅಲ್ಲ, ಸಾಕಷ್ಟು ಮ್ಯೂಸಿಕಲ್‌ ನೈಟ್ಸ್‌ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈಗ ಮೈಸೂರಲ್ಲಿ ಅದ್ಭುತ ರಸಸಂಜೆ ಕಾರ್ಯಕ್ರಮ ಕೊಡಲು ತಯಾರಿ ನಡೆಸಿದ್ದಾರೆ.

ಹೌದು, ಏಪ್ರಿಲ್‌ 22 ರಂದು ಮೈಸೂರಿನ ಸೈಲೆಂಟ್‌ ಶೋರ್ ರೆಸಾರ್ಟ್‌ನಲ್ಲೊಂದು ವಿಶೇಷ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಅವರ ಈ ಕಾರ್ಯಕ್ರಮದಲ್ಲಿ ಗಾಯಕ ವಿಜಯಪ್ರಕಾಶ್‌ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅವರ ಹಾಡುಗಳಿಗೆ ದನಿಯಾಗುವ ಮೂಲಕ ಗೌರವ ಸಲ್ಲಿಸುತ್ತಿದ್ದಾರೆ.

ಅಲ್ಲದೆ, ಅರ್ಜುನ್‌ ಜನ್ಯ ಅವರ ಸಂಗೀತದಲ್ಲಿ ಮೂಡಿಬಂದ ಹಿಟ್‌ ಹಾಡುಗಳನ್ನೇ ಆ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ರಂಜಿಸಲಿದ್ದಾರೆ. ಈ ಕಾರ್ಯಕ್ರಮದ ಉದ್ದೇಶವಿಷ್ಟೇ. ಕನ್ನಡದಲ್ಲಿ ದೊಡ್ಡ ಮಟ್ಟದ ಸ್ಟೇಜ್‌ ಶೋ ನಡೆಯುವುದಿಲ್ಲ ಎಂಬ ಕೊರಗನ್ನು, ನೀಗಿಸುವುದು ಎಂಬುದು ಅರ್ಜುನ್‌ ಜನ್ಯ ಅವರ ಮಾತು.

ಈ ಕಾರ್ಯಕ್ರಮ ಹಲವು ವಿಶೇಷತೆಗಳನ್ನು ಹೊಂದಿದ್ದು, ದೊಡ್ಡ ಬಜೆಟ್‌ನಲ್ಲಿ ನಡೆಯುತ್ತಿದೆ. ಕೇಳುಗರಿಗೆ ಒಳ್ಳೆಯ ಅನುಭವ ಕಟ್ಟಿಕೊಡುವ ಉದ್ದೇಶದಿಂದ ಅದ್ಭುತ ಸೌಂಡ್‌ ಸಿಸ್ಟಂ ಅಳವಡಿಸಲಾಗಿದೆ. ನೋಡಲು ಸಹ ಉತ್ತಮ ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಲಾಗಿದೆ. ನುರಿತ ತಂತ್ರಜ್ಞರು ಈ ವ್ಯವಸ್ಥೆಗೆ ಕೈ ಜೋಡಿಸಿದ್ದಾರೆ.

ನನ್ನ ಬಹುದಿನ ಕನಸು ಈ ಕಾರ್ಯಕ್ರಮ ಮೂಲಕ ಈಡೇರುತ್ತಿದೆ. ಒಂದೊಳ್ಳೆಯ ವೇದಿಕೆಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಕೊಡುವ ಉದ್ದೇಶ ಈಡೇರುತ್ತಿದೆ. ಇದಕ್ಕೆ ಗಾಯಕರಾದ ವ್ಯಾಸರಾಜ್‌, ಇಂದು ನಾಗರಾಜ್‌, ಅನರಾಧ ಭಟ್‌, ಚಂದನ್‌ ಶೆಟ್ಟಿ, ಸಂತೋಷ್‌ ವೆಂಕಿ, ಶಮಿತಾ ಮಲಾಡ್‌ ಸೇರಿದಂತೆ ಸರಿಗಮಪ ಲಿಟ್ಲ ಚಾಂಪ್ಸ್‌ ಸೀಸನ್‌ 10 ಮತ್ತು 11ರ ವಿಜೇತರು ಸಹ ವಿಶೇಷವಾಗಿ ಕಾರ್ಯಕ್ರಮ ಕೊಡುತ್ತಿದ್ದಾರೆ ಎಂದು ವಿವರ ಕೊಡುತ್ತಾರೆ ಅರ್ಜುನ್‌ ಜನ್ಯ.

ಈ ಕಾರ್ಯಕ್ರಮಕ್ಕೆ ಟಿಕೆಟ್‌ ದರ ನಿಗದಿಪಡಿಸಲಾಗಿದೆ. ಇದರ ಇನ್ನೊಂದು ಉದ್ದೇಶ, ರಮಾಬಾಯಿ ಚಾರಿಟಿ ಟ್ರಸ್ಟ್‌ವೊಂದಕ್ಕೆ ಸಹಾಯ ಮಾಡುವುದಾಗಿದೆ. ಅಂದಹಾಗೆ, ವಿನಯ್‌ ರಮೇಶ್‌ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸುಮಾರು 10 ಸಾವಿರ ಸಂಗೀತ ಪ್ರಿಯರು ಬರುವ ನಿರೀಕ್ಷೆಯಲ್ಲಿದ್ದಾರೆ ಅವರು.

ಟಾಪ್ ನ್ಯೂಸ್

crime (2)

Loan ವ್ಯಾಜ್ಯ: ತೆಲಂಗಾಣದಲ್ಲಿ ಆದಿವಾಸಿ ಮಹಿಳೆ ಮೇಲೆ ಹಲ್ಲೆ

1-saddsad

Ram Setu ಚಿತ್ರ ಸೆರೆಹಿಡಿದ ಯುರೋಪಿಯನ್‌ ಉಪಗ್ರಹ

pinarayi

Kerala ಹೆಸರು ಕೇರಳಂ ಎಂದು ಬದಲಾಯಿಸಲು ವಿಧಾನಸಭೆ ಸಮ್ಮತಿ

ಕನ್ನಡದ ಶಾಲು ಧರಿಸಿ ಗಮನ ಸೆಳೆದ ಕೋಟ ಶ್ರೀನಿವಾಸ ಪೂಜಾರಿ

ಕನ್ನಡದ ಶಾಲು ಧರಿಸಿ ಗಮನ ಸೆಳೆದ ಕೋಟ ಶ್ರೀನಿವಾಸ ಪೂಜಾರಿ

tree

Belthangady ರಸ್ತೆಗೆ ಬಿದ್ದ ಮರ; ವಾಹನಗಳಿಗೆ ಹಾನಿ

ಓವರ್‌ ಡ್ರಾಫ್ಟ್‌ ಗುರಿ ಸಾಧನೆಯಲ್ಲಿ ಹಿನ್ನಡೆ: ಜಿ.ಪಂ.ಸಿಇಒ ಅಸಮಾಧಾನ

ಓವರ್‌ ಡ್ರಾಫ್ಟ್‌ ಗುರಿ ಸಾಧನೆಯಲ್ಲಿ ಹಿನ್ನಡೆ: ಜಿ.ಪಂ.ಸಿಇಒ ಅಸಮಾಧಾನ

ರಾಜ್ಯ ಧಾರ್ಮಿಕ ಪರಿಷತ್‌ ಸಭೆ: ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ರಚನೆಗೆ ನಿರ್ಧಾರರಾಜ್ಯ ಧಾರ್ಮಿಕ ಪರಿಷತ್‌ ಸಭೆ: ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ರಚನೆಗೆ ನಿರ್ಧಾರ

ರಾಜ್ಯ ಧಾರ್ಮಿಕ ಪರಿಷತ್‌ ಸಭೆ: ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ರಚನೆಗೆ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hejjaru movie releasing on July 19th

Hejjaru; ಪ್ಯಾರಲಲ್‌ ಲೈಫ್ ಸಿನಿಮಾ; ಜುಲೈ 19ಕ್ಕೆ ‘ಹೆಜ್ಜಾರು’ ರಿಲೀಸ್‌

praveen tej’s jigar movie

Praveen Tej; ಭೂಗತ ಲೋಕದಲ್ಲಿ ‘ಜಿಗರ್‌’

Shivarajkumar; ತಮಿಳು ನಿರ್ದೇಶಕನ ಕನ್ನಡ ಚಿತ್ರದಲ್ಲಿ ಶಿವಣ್ಣ

Shivarajkumar; ತಮಿಳು ನಿರ್ದೇಶಕನ ಕನ್ನಡ ಚಿತ್ರದಲ್ಲಿ ಶಿವಣ್ಣ

ರುದ್ರ ಗರುಡ ಪುರಾಣ ಪೋಸ್ಟರ್‌ ಬಂತು

Rishi; ರುದ್ರ ಗರುಡ ಪುರಾಣ ಪೋಸ್ಟರ್‌ ಬಂತು

chef chidambara running successfully

‘chef chidambara’ ಮುಖದಲ್ಲಿ ನಗು; ಎರಡನೇ ವಾರವೂ ಅಡುಗೆ ಘಮ

MUST WATCH

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

ಹೊಸ ಸೇರ್ಪಡೆ

crime (2)

Loan ವ್ಯಾಜ್ಯ: ತೆಲಂಗಾಣದಲ್ಲಿ ಆದಿವಾಸಿ ಮಹಿಳೆ ಮೇಲೆ ಹಲ್ಲೆ

1-saddsad

Ram Setu ಚಿತ್ರ ಸೆರೆಹಿಡಿದ ಯುರೋಪಿಯನ್‌ ಉಪಗ್ರಹ

police USA

Russia; ಚರ್ಚ್‌ಗೆ ದಾಳಿ: 19 ಜನ ಸಾವು, 5 ಉಗ್ರರ ಹತ್ಯೆ

robbers

ಪ್ರವಾದಿ ನಿಂದನೆ: ಪಾಕ್‌ನಲ್ಲಿ ವ್ಯಕ್ತಿಯ ಕೊಂದ ಬಾಲಕ!

congress

ತೆಲಂಗಾಣ; ಬಿಆರ್‌ಎಸ್‌ನ 5ನೇ ಶಾಸಕ ಕಾಂಗ್ರೆಸ್‌ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.