Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

Team Udayavani, Apr 16, 2024, 3:24 PM IST

choo mantar kannada movie

ಶರಣ್‌ ನಟನೆಯ “ಛೂ ಮಂತರ್‌’ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೇ 10ಕ್ಕೆ ಚಿತ್ರ ತೆರೆಗೆ ಬರಲಿದೆ. ಶರಣ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.

“ಕರ್ವ’ ನವನೀತ್‌ ನಿರ್ದೇಶನ ಈ ಚಿತ್ರಕ್ಕಿದ್ದು, ಈಗಾಗಲೇ ಚಿತ್ರದ ಚಿತ್ರದ ಫ‌ಸ್ಟ್‌ಲುಕ್‌, ಮೋಶನ್‌ ಪೋಸ್ಟರ್‌ ಹಾಗೂ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. “ಛೂ ಮಂತರ್‌’ ಮೇಲೆ ನಿರ್ದೇಶಕ ನವನೀತ್‌ ಕೂಡಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ನವನೀತ್‌, “”ಛೂ ಮಂತರ್‌ ಇದೊಂದು ಫ್ಯಾನ್ಸಿ ಲೋಕ. ಹೈಪರ್‌ ಲಿಂಕ್‌ ಇರುವ ಮೂರು ಭಿನ್ನ ಕಥೆಗಳು ಜೊತೆಗೆ ಸಾಗುವ ಚಿತ್ರ ಇದಾಗಿದ್ದು, ನಾಯಕ ಎಲ್ಲಾ ಕಥೆಯಲ್ಲಿ ಇರುತ್ತಾನೆ. ಶರಣ್‌ ಅವರು ಇಲ್ಲಿವರೆಗೆ ಪೂರ್ಣ ಪ್ರಮಾಣದ ಹಾರರ್‌ ಸಿನಿಮಾಗಳನ್ನು ಮಾಡಿಲ್ಲ. ಇದು ಅವರ ಕೆರಿಯರ್‌ನ ಮೊದಲ ಔಟ್‌ ಅಂಡ್‌ ಔಟ್‌ ಹಾರರ್‌ ಸಿನಿಮಾ. ನಾವು ಉತ್ತರಾಖಂಡ್‌ಗೆ ತೆರಳಿ ಹಿಮದಲ್ಲಿ ಶೂಟಿಂಗ್‌ ಮಾಡಿದ್ದೇವೆ’ ಎಂಬುದು ನಿರ್ದೇಶಕ ನವನೀತ್‌ ಮಾತು.

ಚಿತ್ರದ ನಿರ್ಮಾಪಕ ತರುಣ್‌ ಶಿವಪ್ಪ ಮಾತನಾಡಿ, “ಶರಣ್‌ ಅವರ ಜೊತೆ “ವಿಕ್ಟರಿ-2′ ಚಿತ್ರ ಮಾಡಿ ವಿಕ್ಟರಿ ಪಡೆದಿದ್ದೆ. ನಂತರ ಅವರ ಜೊತೆ ಕೆಲಸ ಮಾಡಬೇಕು ಅಂತ ಕಳೆದ ಮೂರು ವರ್ಷಗಳಿಂದ, ಹೊಸ ನಿರ್ದೇಶಕರಿಂದ ಹಿಡಿದು ಅನುಭವಿ ನಿರ್ದೇಶಕರವರೆಗೂ ಕಥೆ ಕೇಳಿಸಿದ್ದೆ. ಆದರೆ ಶರಣ್‌ ಚಿತ್ರಗಳ ಆಯ್ಕೆ ವಿಷಯದಲ್ಲಿ ತುಂಬಾ ಚೂಸಿಯಾಗಿದ್ದರು. ಒಳ್ಳೆ ಕಥೆ, ಪಾತ್ರ, ಭಿನ್ನತೆಯನ್ನು ಕಾಯ್ದು ಕೊಳ್ಳತ್ತಿದ್ದರು. ಇವರಿಗೆ ಕಥೆ ಹೇಳಿಸಿ ಸುಸ್ತಾಗಿದ್ದೆ. ತರುಣ್‌ ಸುಧೀರ್‌ ಅವರು ಸಿಕ್ಕಾಗ ಚಿತ್ರ ಮಾಡುವ ಬಗ್ಗೆ ಕೇಳಿದ್ದೆ. ಆಗ ಅವರು ಶರಣ್‌ ಕೆರಿಯರ್‌ನಲ್ಲಿ ಸಂಪೂರ್ಣ ಹಾರರ್‌ ಚಿತ್ರ ಮಾಡಿಲ್ಲ. ಆ ಥರದ ಕಥೆ ಇದ್ದರೆ ಪ್ರಯತ್ನ ಮಾಡಿ ಅಂದರು. ನಂತರ ಬಂದಿದ್ದೇ “ಛೂ ಮಂತರ್‌’ ಎನ್ನುತ್ತಾರೆ.

ಚಿತ್ರದ ನಾಯಕಿ ಅದಿತಿ ಪ್ರಭುದೇವ, ಹಾಗೂ ಪ್ರಭು, ಮೇಘನಾ ಗಾಂವ್ಕರ್‌, ರಜಿನಿ, ಧರ್ಮ ಮುಂತಾದವರು ನಟಿಸಿದ್ದಾರೆ. ಹಾಗೆಯೇ ಚಿಕ್ಕಣ್ಣ, ಶಂಕರ್‌ ಅಶ್ವಥ್‌, ಕಿರಣ್‌, ವಿಜಯ್‌ ಚೆಂಡೂರು, ಓಂ ಪ್ರಕಾಶ್‌ ರಾವ್‌ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ಅವಿನಾಶ್‌ ಹಿನ್ನಲೆ ಸಂಗೀತ, ಚಂದನ್‌ ಶೆಟ್ಟಿ ಸಂಗೀತ, ಅನೂಪ್‌ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ

Uppinangady ಮಣ್ಣು ಹಾಕಿದ ರಸ್ತೆಯಲ್ಲಿ ಸಿಲುಕಿದ ಲಾರಿ

Sullia: ಡ್ಯಾಂ ನೀರು ಹೊರಕ್ಕೆ ನೀರು ಸಂಗ್ರಹದ ಪ್ರದೇಶದಲ್ಲಿ ಕುಸಿತ

Sullia: ಡ್ಯಾಂ ನೀರು ಹೊರಕ್ಕೆ ನೀರು ಸಂಗ್ರಹದ ಪ್ರದೇಶದಲ್ಲಿ ಕುಸಿತ

ಕಡಲಾಳದ ಬಳಕೆಯಾಗದ ಮೀನಿಗೆ ಮಾರುಕಟ್ಟೆ ಅಧಿಕ: ಡಾ| ಮೀನ ಕುಮಾರಿ

ಕಡಲಾಳದ ಬಳಕೆಯಾಗದ ಮೀನಿಗೆ ಮಾರುಕಟ್ಟೆ ಅಧಿಕ: ಡಾ| ಮೀನ ಕುಮಾರಿ

ಮುಂಗಾರು ಎದುರಿಸಲು ಅರಣ್ಯ ಇಲಾಖೆ ಸಜ್ಜು: ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೋನಿ ಮರಿಯಪ್ಪ

ಮುಂಗಾರು ಎದುರಿಸಲು ಅರಣ್ಯ ಇಲಾಖೆ ಸಜ್ಜು: ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟೋನಿ ಮರಿಯಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cannes 2024: Mysore’s Chidananda S Naik won the best short film award

Cannes 2024: ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದ ಮೈಸೂರಿನ ಚಿದಾನಂದ ಎಸ್ ನಾಯಕ್

Sandalwood; 2ಘಟನೆ ಒಂದೇಪರಿಣಾಮ: ಇವರು ಗೆದ್ದು ಸೋತವರಾ? ಸೋತು ಗೆದ್ದವರಾ? ನೀವೇ ನಿರ್ಧರಿಸಿ

Sandalwood; 2ಘಟನೆ ಒಂದೇಪರಿಣಾಮ: ಇವರು ಗೆದ್ದು ಸೋತವರಾ? ಸೋತು ಗೆದ್ದವರಾ? ನೀವೇ ನಿರ್ಧರಿಸಿ

Kannada Cinema; ಇಂದು ತೆರೆಗೆ ಬರುತ್ತಿದೆ ರವಿಚಂದ್ರನ್ ಅವರ ‘ದಿ ಜಡ್ಜ್ ಮೆಂಟ್‌’

Kannada Cinema; ಇಂದು ತೆರೆಗೆ ಬರುತ್ತಿದೆ ರವಿಚಂದ್ರನ್ ಅವರ ‘ದಿ ಜಡ್ಜ್ ಮೆಂಟ್‌’

evidence kannada movie

Kannada Cinema; ತೆರೆಗೆ ಬಂತು ಪ್ರವೀಣ್ ಸಿ.ಪಿ ಅವರ ‘ಎವಿಡೆನ್ಸ್’

1-aaaaa

Kannada Movies; ರಾಜ್ಯದಲ್ಲಿ ಚಿತ್ರಮಂದಿರ ಸ್ಥಗಿತ ಇಲ್ಲ : ಮಂಡಳಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

Heavy Rain ಕರಾವಳಿಯಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

ಘಾಟಿ ಪ್ರದೇಶದಲ್ಲಿ ಮಂಜಿನ ವಾತಾವರಣ; ಹೆದ್ದಾರಿ ಇಲಾಖೆಯಿಂದ ಮಳೆಗಾಲ ಪೂರ್ವ ಕಾಮಗಾರಿ

Hockey

Pro Leagueಹಾಕಿ: ಭಾರತದ ಎರಡೂ ತಂಡಗಳಿಗೆ ಸೋಲು

ಕಾಂಗ್ರೆಸ್‌ನಿಂದ ದಬ್ಬಾಳಿಕೆ: ಬಿಜೆಪಿ ಆರೋಪ

ಕಾಂಗ್ರೆಸ್‌ನಿಂದ ದಬ್ಬಾಳಿಕೆ: ಬಿಜೆಪಿ ಆರೋಪ

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Udupi; ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ರಘುಪತಿ ಭಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.