ನೂತನ ತಂತ್ರಜ್ಞಾನದೊಂದಿಗೆ “ಅಂತ’ ಮರು ಬಿಡುಗಡೆ

Team Udayavani, Feb 6, 2019, 5:53 AM IST

80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಚಿತ್ರ ಅಂಬರೀಶ್‌ ಅವರ “ಅಂತ’. 1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಸ್‌.ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನವಿದೆ. ರೆಬೆಲ್‌ಸ್ಟಾರ್‌ ಅಂಬರೀಶ್‌ ಇನ್ಸ್‌ಪೆಕ್ಟರ್‌ ಸುಶೀಲ್‌ಕುಮಾರ್‌ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ  ಕನ್ವರ್‌ಲಾಲ್‌ ಎಂಬ ನೆಗೆಟಿವ್‌ ಪಾತ್ರವನ್ನು ಕೂಡ “ಅಂತ’ ಚಿತ್ರದಲ್ಲಿ ಮಾಡಿದ್ದರು. ಆ ಪಾತ್ರ ಜನಮೆಚ್ಚುಗೆ ಪಡೆದಿತ್ತು.

 ಈಗ ಈ ಚಿತ್ರ ಮತ್ತೂಮ್ಮೆ ನೂತನ ತಂತ್ರಜ್ಞಾನದೊಂದಿಗೆ ಬೆಳ್ಳಿತೆರೆಯ ಮೇಲೆ ಬರುತ್ತಿದೆ. ಸದ್ಯ ಲಹರಿ ಸಂಸ್ಥೆ ಬಳಿ ಈ ಚಿತ್ರದ ಹಕ್ಕುಗಳಿದ್ದು, ಲಹರಿ ಸಂಸ್ಥೆಯ ಮುಖಾಂತರ ದೀಪಕ್‌ ಪಿಕ್ಚರ್ ಹಾಗೂ ಶ್ರೀನಿವಾಸ ಪಿಕ್ಚರ್(ಗದಗ) ಈ ಚಿತ್ರವನ್ನು ತರಣೆ ಮಾಡುತ್ತಿದೆ. ಶೀಘ್ರದಲ್ಲೇ ಹೊಸ ರೂಪದ “ಅಂತ’ ಚಿತ್ರವನ್ನು ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ