ಸಾಯಿ ಪಲ್ಲವಿ ಒಮ್ಮೆ ಕನ್ನಡಕ್ಕೆ ಬಾರಮ್ಮ ….

ಅಂತೆ-ಕಂತೆ ಕೇಳಿ ಅಭಿಮಾನಿಗಳ ಬೇಸರ

Team Udayavani, May 8, 2019, 3:00 AM IST

Sai-Pallavi—05

ಸಾಯಿ ಪಲ್ಲವಿ ಸದ್ಯ ಸೌತ್‌ ಸಿನಿ ದುನಿಯಾದ ಬೇಡಿಕೆಯ ನಟಿ. ತನ್ನ ಕ್ಯೂಟ್‌ ಲುಕ್‌, ಅಭಿನಯ ಮೂಲಕ ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿರುವ ಸಾಯಿ ಪಲ್ಲವಿಯನ್ನು ಈಗ ಕನ್ನಡಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಸಾಯಿ ಪಲ್ಲವಿ ಬಿಝಿಯಾಗುತ್ತಿದ್ದಂತೆ ಆಕೆಯ ಹೆಸರು ಕೂಡಾ ಒಂದೊಂದೇ ಕನ್ನಡ ಸಿನಿಮಾಗಳಲ್ಲಿ ಕೇಳಿಬರುತ್ತಿದೆ.

ಹಾಗಂತ ಆಕೆ ಕನ್ನಡದಲ್ಲಿ ನಟಿಸುತ್ತಾರಾ ಎಂದರೆ ಸದ್ಯಕ್ಕೆ ಉತ್ತರವಿಲ್ಲ. ಈಗಾಗಲೇ ನಿರ್ದೇಶಕ ಮಹೇಶ್‌ ಕುಮಾರ್‌ ತಮ್ಮ “ಮದಗಜ’ ಚಿತ್ರಕ್ಕೆ ಸಾಯಿ ಪಲ್ಲವಿಯನ್ನು ಕರೆತರಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೂ ಮುನ್ನ ನಿರ್ದೇಶಕರೊಬ್ಬರು ಸಾಯಿ ಪಲ್ಲವಿ ಹೆಸರನ್ನು ತಮ್ಮ ಸಿನಿಮಾ ಜೊತೆ ಹರಿಬಿಟ್ಟಿದ್ದರು.

ಆದರೆ, ಆ ಜಾಗಕ್ಕೆ ಬಂದಿದ್ದು, ಮಾತ್ರ ಬೇರೊಬ್ಬ ನವನಟಿ. ಈಗ ದರ್ಶನ್‌ ಅವರ “ರಾಬರ್ಟ್‌’ ಚಿತ್ರಕ್ಕೆ ಸಾಯಿ ಪಲ್ಲವಿ ಬರುತ್ತಾರೆಂಬ ಸುದ್ದಿ ಹಬ್ಬಿದೆ. ಹಾಗಂತ ಚಿತ್ರತಂಡ ಮಾತ್ರ ಈ ಬಗ್ಗೆ ಏನೂ ಮಾತನಾಡಿಲ್ಲ. ನಿರ್ದೇಶಕ ತರುಣ್‌ ಸುಧೀರ್‌ ಹೇಳುವಂತೆ, ಸಾಯಿ ಪಲ್ಲವಿ ಜೊತೆ ಚಿತ್ರತಂಡ ಮಾತುಕತೆ ನಡೆಸಿಯೇ ಇಲ್ಲವಂತೆ. ಹೀಗಿದ್ದರೂ ಆಕೆಯ ಹೆಸರು ಓಡಾಡುತ್ತಿದೆ.

ಪರಭಾಷಾ ಸ್ಟಾರ್‌ ನಟಿಯರ ಹೆಸರುಗಳು ಕನ್ನಡದಲ್ಲಿ ಸೆಟ್ಟೇರುತ್ತಿರುವ ದೊಡ್ಡ ಸಿನಿಮಾಗಳ ಸುತ್ತ ಓಡಾಡುವುದು ಇದು ಹೊಸತೇನಲ್ಲ. ಈ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಚಿತ್ರದ ನಿರ್ದೇಶಕರಿಗೆ ಆ ಬಗ್ಗೆ ಅರಿವಿಲ್ಲದಿದ್ದರೂ, ಯಾರೋ ಒಬ್ಬರು ದೊಡ್ಡ ನಟಿಯ ಹೆಸರನ್ನು ಹೇಳುವ ಮೂಲಕ ಸುದ್ದಿಗೆ ಕಾರಣರಾಗುತ್ತಾರೆ.

ಈ ಹಿಂದೆ ಅನುಷ್ಕಾ ಶೆಟ್ಟಿ, ಸಮಂತಾ, ತಮನ್ನಾ … ಹೀಗೆ ಅನೇಕ ನಟಿಯರ ಹೆಸರುಗಳು ಸ್ಟಾರ್‌ ಸಿನಿಮಾಗಳ ನಾಯಕಿಯರ ಪಟ್ಟಿಯಲ್ಲಿ ಓಡಾಡಿವೆ. ನಟಿ ಪ್ರಿಯಾ ವಾರಿಯರ್‌ ಕಣ್ಸನ್ನೆ ಮೂಲಕ ಜನಪ್ರಿಯವಾಗುತ್ತಿದ್ದಂತೆ ಕನ್ನಡ ಸಿನಿಮಾವೊಂದರಲ್ಲಿ ಆಕೆಯ ಹೆಸರು ಕೂಡಾ ಕೇಳಿಬಂದಿತ್ತು.

ಆದರೆ, ಆಕೆ ಬರಲಿಲ್ಲ ಎಂಬುದು ಬೇರೆ ಮಾತು. ಈಗ ಕನ್ನಡದ ಒಂದಷ್ಟು ಸಿನಿಮಾಗಳು ಸೆಟ್ಟೇರುತ್ತಿದ್ದಂತೆ ಸಾಯಿ ಪಲ್ಲವಿ ಹೆಸರು ಕೇಳಿಬರುತ್ತಿದೆ. ಹೀಗೆ ಸುಖಾಸುಮ್ಮನೆ ಹೆಸರನ್ನು ಕೇಳಿದ ಕನ್ನಡ ಸಿನಿ ಪ್ರೇಮಿಗಳು “ಸಾಯಿ ಪಲ್ಲವಿ ಒಮ್ಮೆ ಕನ್ನಡಕ್ಕೆ ಬಾರಮ್ಮ …’ ಎನ್ನುತ್ತಿರುವುದು ಸುಳ್ಳಲ್ಲ.

ಟಾಪ್ ನ್ಯೂಸ್

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

14-Kasaragodu

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

13-Kumbale

ಪತ್ನಿಯ ಸೀಮಂತಕ್ಕಾಗಿ 2 ದಿನಗಳ ಹಿಂದೆ ಕೊಲ್ಲಿಯಿಂದ ಊರಿಗೆ ಬಂದಿದ್ದ ಯುವಕ ಅಪಘಾತದಲ್ಲಿ ಸಾವು

bjpState Govt ಜೂ.28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

State Govt ಜೂ.28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಸರ್ಕಾರ ಕ್ರಮ: ವಿಜಯೇಂದ್ರ

B. Y. Vijayendra ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಸರ್ಕಾರ ಕ್ರಮ

Frank Duckworth, co-inventor of DLS method passed away

Frank Duckworth: ‘ಡಿಎಲ್‌ಎಸ್‌ ನಿಯಮ’ದ  ಫ್ರಾಂಕ್‌ ಡಕ್‌ವರ್ತ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Sandalwood: ಒಂದು ಆತ್ಮ ಮೂರು ಜನ್ಮ

Sandalwood: ಮತ್ತೆ ನಾ ನಿನ್ನ ಬಿಡಲಾರೆ “ನಾ ನಿನ್ನ ಬಿಡಲಾರೆ’

Sandalwood: ಮತ್ತೆ ನಾ ನಿನ್ನ ಬಿಡಲಾರೆ “ನಾ ನಿನ್ನ ಬಿಡಲಾರೆ’

10

Sandalwood: ಆ. 15ಕ್ಕೆ ಕೃಷ್ಣಂ ಪ್ರಣಯ ಸಖಿ ತೆರೆಗೆ

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

hejjaru movie releasing on July 19th

Hejjaru; ಪ್ಯಾರಲಲ್‌ ಲೈಫ್ ಸಿನಿಮಾ; ಜುಲೈ 19ಕ್ಕೆ ‘ಹೆಜ್ಜಾರು’ ರಿಲೀಸ್‌

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

14-Kasaragodu

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Compulsory military service for ultra-conservatives: Israel court

ಕಟ್ಟರ್‌ ಸಂಪ್ರದಾಯವಾದಿಗಳಿಗೂ ಕಡ್ಡಾಯ ಸೇನೆ ಸೇವೆ: ಇಸ್ರೇಲ್‌ ಕೋರ್ಟ್‌

13-Kumbale

ಪತ್ನಿಯ ಸೀಮಂತಕ್ಕಾಗಿ 2 ದಿನಗಳ ಹಿಂದೆ ಕೊಲ್ಲಿಯಿಂದ ಊರಿಗೆ ಬಂದಿದ್ದ ಯುವಕ ಅಪಘಾತದಲ್ಲಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.