ಶಶಿಕುಮಾರ್‌ ಪುತ್ರನ “ಸೀತಾಯಣ’

ಮೊಡವೆ ಮೂಡುವ ಮುನ್ನ ....

Team Udayavani, Mar 11, 2020, 7:04 AM IST

seetayana

ಕನ್ನಡ ಚಿತ್ರರಂಗದ ಸುಪ್ರೀಂ ಹೀರೋ ಖ್ಯಾತಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಈ ಹಿಂದೆ “ಮೊಡವೆ’ ಎನ್ನುವ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿಕೊಡಲಿದ್ದಾರೆ ಎನ್ನಲಾಗಿತ್ತು. ಆದರೆ ಸದ್ಯ ಆ ಚಿತ್ರದ ನಡುವೆಯೇ ಅಕ್ಷಿತ್‌, ಈಗ “ಸೀತಾಯಣ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದ್ದಾರೆ. ಹೌದು, ಅಕ್ಷಿತ್‌ ಶಶಿಕುಮಾರ್‌ ಅಭಿನಯದ “ಸೀತಾಯಣ’ ಚಿತ್ರದ ಶೂಟಿಂಗ್‌ ಸದ್ದಿಲ್ಲದೆ ಪೂರ್ಣಗೊಂಡಿದ್ದು, ಸದ್ಯ ಈ ಚಿತ್ರದ ಡಬ್ಬಿಂಗ್‌ ಮತ್ತಿತರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತಕ್ಕೆ ತಲುಪಿದೆ.

ಪಕ್ಕಾ ರೊಮ್ಯಾಂಟಿಕ್‌ ಕಂ ಕ್ರೈಂ ಸ್ಟೋರಿ ಎಳೆಯನ್ನು ಹೊಂದಿರುವ “ಸೀತಾಯಣ’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ತೆಲುಗು ಮೂಲದ ನಿರ್ದೇಶಕ ಪ್ರಭಾಕರ್‌ ಆರಿಪಕ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರು, ಮಂಗಳೂರು, ಆಗುಂಬೆ, ವೈಜಾಕ್‌, ಹೈದರಾಬಾದ್‌, ಬ್ಯಾಂಕಾಕ್‌ ಮೊದಲಾದ ಕಡೆಗಳಲ್ಲಿ ಸುಮಾರು 63 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ಚಿತ್ರತಂಡ ಸದ್ಯ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿದೆ.

“ಕಲರ್‌ ಕ್ಲೌಡ್ಸ್‌ ಎಂಟರ್‌ಟೈನ್ಮೆಂಟ್ಸ್‌’ ಬ್ಯಾನರ್‌ನಲ್ಲಿ ರೋಹನ್‌ ಭಾರದ್ವಾಜ್‌, ಲಲಿತಾ ರಾಜಲಕ್ಷ್ಮೀ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಉಪೇಂದ್ರಕುಮಾರ್‌ ಅವರ ಕುಟುಂಬದ ಕುಡಿ ಪದ್ಮನಾಭ ಭಾರದ್ವಾಜ್‌ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ನಟ ಪುನೀತ್‌ ರಾಜಕುಮಾರ್‌ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದು, ಕವಿರಾಜ್‌ ಮತ್ತು ಗೌಸ್‌ಫೀರ್‌ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಇನ್ನು ಚಿತ್ರದಲ್ಲಿ ಅಕ್ಷಿತ್‌ಗೆ ನಾಯಕಿಯಾಗಿ ಮುಂಬೈ ಬೆಡಗಿ ಅನಹಿತ್‌ ಭೂಷಣ್‌ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ.

ಉಳಿದಂತೆ ಅಜಯ್‌ ಜೋಶ್‌, ಮದುನಂದನ್‌, ಹಿತೇಶ್‌, ಮೇಘನಾ ಗೌಡ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಪ್ರಭಾಕರ್‌ ಆರಿಪಕ್‌, “ಇದೊಂದು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಕಥಾಹಂದರ ಹೊಂದಿರುವ ಸಿನಿಮಾ. ಒಂದು ಹುಡುಗ, ಹುಡುಗಿ, ಮದುವೆ, ಫ್ಯಾಮಿಲಿ ಸೆಂಟಿಮೆಂಟ್‌ಗಳ ಸುತ್ತ ಸಿನಿಮಾ ನಡೆಯುತ್ತದೆ. ಸಿನಿಮಾದಲ್ಲಿ ಬರುವ ಕೆಲವೊಂದು ಟ್ವಿಸ್ಟ್‌ಗಳು ಮತ್ತೂಂದು ಕಡೆ ಪ್ರೇಕ್ಷರನ್ನು ಕರೆದುಕೊಂಡು ಹೋಗುತ್ತದೆ.

ಕೆಲವೊಂದು ಕನ್ನಡ ಮತ್ತು ತೆಲುಗು ಸಿನಿ ಪ್ರೇಕ್ಷಕರಿಗೆ ಇಷ್ಟವಾಗುವಂಥ ಎಲ್ಲ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಸದ್ಯ ಸಿನಿಮಾ ಪೋಸ್ಟ್‌ ಪ್ರೊಡಕ್ಷನ್‌ ಕೊನೆ ಹಂತದಲ್ಲಿದ್ದು, ಆದಷ್ಟು ಬೇಗ ಸಿನಿಮಾದ ಪ್ರಮೋಶನ್‌ ಕೆಲಸಗಳನ್ನು ಶುರು ಮಾಡಲಿದ್ದೇವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ಏಪ್ರಿಲ್‌ ಕೊನೆವಾರ ಅಥವಾ ಮೇ ಸಿನಿಮಾವನ್ನು ರಿಲೀಸ್‌ ಮಾಡುವ ಪ್ಲಾನ್‌ ಇದೆ’ ಎಂದು ಮಾಹಿತಿ ನೀಡುತ್ತಾರೆ. ಅಂದಹಾಗೆ, “ಮೊಡವೆ’ ಚಿತ್ರದ ಮುಹೂರ್ತ ಸಮಯದಲ್ಲಿ ಶಶಿಕುಮಾರ್‌ ಪುತ್ರನ ಹೆಸರು ಆದಿತ್ಯ ಎಂದಿತ್ತು. ಆದರೆ, ಈಗ ಅಕ್ಷಿತ್‌ ಎಂದು ಹೆಸರು ಬದಲಿಸಿಕೊಂಡಂತಿದೆ.

ಟಾಪ್ ನ್ಯೂಸ್

Fraud: ಉಡುಪಿಯಲ್ಲಿ ಪ್ರತ್ಯೇಕ ಪ್ರಕರಣ: 14 ಲ.ರೂ. ವಂಚನೆ

Fraud: ಉಡುಪಿಯಲ್ಲಿ ಪ್ರತ್ಯೇಕ ಪ್ರಕರಣ: 14 ಲ.ರೂ. ವಂಚನೆ

1—-asdasd

Solo Ride; ಬೈಕ್ ನಲ್ಲೆ ಏಕಾಂಗಿಯಾಗಿ ಜಮ್ಮು& ಕಾಶ್ಮೀರ ಸುತ್ತಿ ಬಂದ ಧಾರವಾಡ ಯುವತಿ

Kharge (2)

AICC President ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೇಶಾದ್ಯಂತ ಝಡ್ ಪ್ಲಸ್ ಭದ್ರತೆ

Udupi: ಕರಿಮಣಿ ಮಾಲಕರು ಪತ್ತೆ! ಪ್ರಾಮಾಣಿಕತೆ ಮೆರೆದ ಬಸ್‌ ಸಿಬಂದಿ

Udupi: ಕರಿಮಣಿ ಮಾಲಕರು ಪತ್ತೆ! ಪ್ರಾಮಾಣಿಕತೆ ಮೆರೆದ ಬಸ್‌ ಸಿಬಂದಿ

1-sadsadas

Manipur ಘರ್ಷಣೆಗೆ ಕಾರಣ; ವಿವಾದಾತ್ಮಕ ಆದೇಶ ಮಾರ್ಪಡಿಸಿದ ಹೈಕೋರ್ಟ್

Exam 2

CBSE ; 9 ರಿಂದ 12 ನೇ ತರಗತಿಗಳಿಗೆ ತೆರೆದ ಪುಸ್ತಕ ಪರೀಕ್ಷೆಗಳ ಸಾಧ್ಯತೆ

4

ತಂಗಿ ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ನಕಲಿ ಪೊಲೀಸ್‌ ಆಗಿ ಪರೀಕ್ಷಾ ಕೇಂದ್ರಕ್ಕೆ ಹೋದ ಅಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

guru deshpande

Sandalwood; ಹೊಸ ಚಿತ್ರದತ್ತ ಗುರು ದೇಶಪಾಂಡೆ; ಹಾಡುಗಳ ಧ್ವನಿಮುದ್ರಣ ಶುರು

kerebete movie

Kerebete; ಸಾಂಪ್ರದಾಯಿಕ ಶೈಲಿಯಲ್ಲಿ ‘ಕೆರೆಬೇಟೆ’ ಟ್ರೇಲರ್‌ ರಿಲೀಸ್

komal’s new movie kuteera

Kannada Cinema; ‘ಕುಟೀರ’ದೊಳಗೆ ಕೋಮಲ್‌ ಎಂಟ್ರಿ’: ಪ್ರಿಯಾಂಕಾ ಸಾಥ್

16

CCL: ಫೆ.23ರಿಂದ ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌

15

Sandalwood: ‘ಎವಿಡೆನ್ಸ್‌’ ಲಿರಿಕಲ್‌ ಸಾಂಗ್‌ ಬಿಡುಗಡೆ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

Gangolli: ಯುವಕ ಆತ್ಮಹತ್ಯೆ

Gangolli: ಯುವಕ ಆತ್ಮಹತ್ಯೆ

Suḷya: ಕಾಡು ಹಂದಿ ದಾಳಿ; ರಬ್ಬರ್‌ ಟ್ಯಾಪಿಂಗ್‌ ಕಾರ್ಮಿಕೆಗೆ ತೀವ್ರ ಗಾಯ

Suḷya: ಕಾಡು ಹಂದಿ ದಾಳಿ; ರಬ್ಬರ್‌ ಟ್ಯಾಪಿಂಗ್‌ ಕಾರ್ಮಿಕೆಗೆ ತೀವ್ರ ಗಾಯ

Arrested: ಬಜಪೆ; ಹಲವು ಕಳವು ಪ್ರಕರಣಗಳ ಆರೋಪಿ ಸೆರೆ

Arrested: ಬಜಪೆ; ಹಲವು ಕಳವು ಪ್ರಕರಣಗಳ ಆರೋಪಿ ಸೆರೆ

Fraud: ಉಡುಪಿಯಲ್ಲಿ ಪ್ರತ್ಯೇಕ ಪ್ರಕರಣ: 14 ಲ.ರೂ. ವಂಚನೆ

Fraud: ಉಡುಪಿಯಲ್ಲಿ ಪ್ರತ್ಯೇಕ ಪ್ರಕರಣ: 14 ಲ.ರೂ. ವಂಚನೆ

1—-asdasd

Solo Ride; ಬೈಕ್ ನಲ್ಲೆ ಏಕಾಂಗಿಯಾಗಿ ಜಮ್ಮು& ಕಾಶ್ಮೀರ ಸುತ್ತಿ ಬಂದ ಧಾರವಾಡ ಯುವತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.