ಸುಮಂತ್‌ ಗೋವಿಂದ ನಾಮ ಸ್ಮರಣೆ!

3 ವರ್ಷಗಳ ಬಳಿಕ ಹೊಸ ಜೋಶ್‌ನಲ್ಲಿ ಕಂ ಬ್ಯಾಕ್‌

Team Udayavani, Jan 11, 2020, 7:03 AM IST

Sumanth-Shylendra

ಕನ್ನಡದ ಹಿರಿಯ ನಿರ್ಮಾಪಕ ಎಸ್‌. ಶೈಲೇಂದ್ರ ಬಾಬು ಪುತ್ರ ಸುಮಂತ್‌ ಶೈಲೇಂದ್ರ ಈ ಬಾರಿ “ಗೋವಿಂದ’ನ ನಾಮ ಸ್ಮರಣೆ ಮಾಡುತ್ತ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಹೌದು, 2017ರಲ್ಲಿ ತೆರೆಕಂಡ “ಲೀ’ ಚಿತ್ರದ ನಂತರ ಕನ್ನಡದಲ್ಲಿ ಸುಮಂತ್‌ ಶೈಲೇಂದ್ರ ಅಭಿನಯದ ಯಾವ ಚಿತ್ರಗಳೂ ಬಿಡುಗಡೆಯಾಗಿರಲಿಲ್ಲ. ಇದರ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸುಮಂತ್‌, ಮತ್ತೆ ಚಿತ್ರರಂಗಕ್ಕೆ ಬರುತ್ತಾರಾ, ಸಿನಿಮಾಗಳನ್ನು ಮಾಡುತ್ತಾರಾ ಎಂಬ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿರಲಿಲ್ಲ.

ಆದರೆ ಈಗ ಸುಮಂತ್‌ ಅದೆಲ್ಲದಕ್ಕೂ ಉತ್ತರ ನೀಡಲು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈಗಾಗಲೇ ಸುಮಂತ್‌ ಸದ್ದಿಲ್ಲದೆ “ಗೋವಿಂದ ಗೋವಿಂದ’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಚಿತ್ರೀಕರಣ ಕೂಡ ಒಂದಷ್ಟು ಪೂರ್ಣಗೊಂಡಿದೆ. ಸುಮಾರು ಎರಡೂವರೆ ವರ್ಷದ ನಂತರ ಸುಮಂತ್‌ ಈ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಚಿತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರೆ.

ಪಕ್ಕಾ ಕಾಮಿಡಿ ಕಂ ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಗೋವಿಂದ ಗೋವಿಂದ’ ಚಿತ್ರದಲ್ಲಿ ಸುಮಂತ್‌, ಅನೇಕ ವರ್ಷಗಳಿಂದ ಪಿಯುಸಿ ಫೇಲ್‌ ಆಗುತ್ತಲೇ ಬರುತ್ತಿರುವ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. “ಗೋವಿಂದ ಗೋವಿಂದ’ ಚಿತ್ರದ ಮೂಲಕ ರೀ-ಎಂಟ್ರಿ ಕೊಡುವುದರ ಬಗ್ಗೆ ಮಾತನಾಡುವ ಸುಮಂತ್‌, “ಕನ್ನಡದ ನಂತರ ತೆಲುಗಿನಲ್ಲಿ ಒಂದು ಚಿತ್ರದಲ್ಲಿ ಅಭಿನಯಿಸಿದೆ. ಅದಾದ ನಂತರ ಮದುವೆಯಾಯ್ತು. ಫ್ಯಾಮಿಲಿಗಾಗಿ ಒಂದಷ್ಟು ಸಮಯ ತೆಗೆದಿರಿಸಬೇಕಾಯ್ತು.

ಇದರ ನಡುವೆ ಕನ್ನಡದಲ್ಲಿ ಕೆಲವು ಆಫ‌ರ್ ಬಂದರೂ, ಸಬ್ಜೆಕ್ಟ್ ಇಷ್ಟವಾಗದಿದ್ದರಿಂದ ಯಾವುದನ್ನೂ ಒಪ್ಪಿಕೊಂಡಿ ರಲಿಲ್ಲ. ಹೀಗಾಗಿ ಸುಮಾರು ಎರಡೂವರೆ- ಮೂರು ವರ್ಷಗಳ ಕಾಲ ಸಿನಿಮಾಗಳಿಂದ ಸ್ವಲ್ಪ ಗ್ಯಾಪ್‌ ಆಗಿತ್ತು. ಮತ್ತೆ ಒಂದೊಳ್ಳೆ ಸಿನಿಮಾದ ಮೂಲಕ ಆಡಿಯನ್ಸ್‌ ಮುಂದೆ ಬರಬೇಕು ಅಂಥ ಕಾಯುತ್ತಿದೆ. ಅದೇ ವೇಳೆ “ಗೋವಿಂದ ಗೋವಿಂದ’ ಸಿನಿಮಾ ಸಿಕ್ಕಿತು. ನಾನು ಇಲ್ಲಿಯ ವರೆಗೆ ಮಾಡಿದ ಸಿನಿಮಾಗಳಿಗಿಂತ ಇದರ ಕಥೆ ತುಂಬ ವಿಭಿನ್ನವಾಗಿದ್ದರಿಂದ, ಮೊದಲು ಸ್ವಲ್ಪ ಸಮಯ ತೆಗೆದುಕೊಂಡೆ.

ನಂತರ ನಿರ್ದೇಶಕರು, ನಿರ್ಮಾಪಕರು, ಚಿತ್ರತಂಡ ಭರವಸೆ ತುಂಬಿದ ಮೇಲೆ ಸಿನಿಮಾ ಒಪ್ಪಿಕೊಂಡೆ’ ಎನ್ನುತ್ತಾರೆ. ಇನ್ನು “ಗೋವಿಂದ ಗೋವಿಂದ’ ಚಿತ್ರಕ್ಕೆ ನವ ನಿರ್ದೇಶಕ ತಿಲಕ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಕಿರುತೆರೆಯಲ್ಲಿ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ತಿಲಕ್‌, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹಿರಿತೆರೆಗೆ ಪರಿಚಯವಾಗುತ್ತಿದ್ದಾರೆ.

ಚಿತ್ರದಲ್ಲಿ ಸುಮಂತ್‌ ಶೈಲೇಂದ್ರಗೆ ನಾಯಕಿಯಾಗಿ ಕವಿತಾ ಗೌಡ ಜೋಡಿ. ಜಾಕಿ ಭಾವನಾ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರೂಪೇಶ್‌ ಶೆಟ್ಟಿ, ಬೆನಕ ಪವನ್‌, ಅಚ್ಯುತ ಕುಮಾರ್‌, ವಿಜಯ್‌ ಚಂಡೂರ್‌, ಶೋಭರಾಜ್‌, ಸುನೇತ್ರಾ ಪಂಡಿತ್‌, ಪದ್ಮಾ ವಸಂತಿ, ಗೋವಿಂದೇಗೌಡ, ಶ್ರೀನಿವಾಸ ಪ್ರಭು ಇತರರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಸದ್ಯ “ಗೋವಿಂದ ಗೋವಿಂದ’ ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಇದೇ ಏಪ್ರಿಲ್‌ಗೆ ತೆರೆಗೆ ಬರುವ ಸಾಧ್ಯತೆ ಇದೆ. ಹೊಸ ಗೆಟಪ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ರೆಡಿಯಾಗಿರುವ “ಗೋವಿಂದ ಗೋವಿಂದ’ ಎಷ್ಟರ ಮಟ್ಟಿಗೆ ಸುಮಂತ್‌ ಕೈ ಹಿಡಿಯುತ್ತಾನೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

ಟಾಪ್ ನ್ಯೂಸ್

1

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

200 days of shooting for yash toxic movie

Yash ಟಾಕ್ಸಿಕ್‌ ಸಿನಿಮಾ 200 ದಿನಗಳ ಶೂಟಿಂಗ್‌; ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣ

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ

ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

Gaza: ರಫಾದಲ್ಲಿ ಸ್ಫೋಟ; ಪ್ರಾಣ ಕಳೆದುಕೊಂಡ ಎಂಟು ಇಸ್ರೇಲಿ ಸೈನಿಕರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

200 days of shooting for yash toxic movie

Yash ಟಾಕ್ಸಿಕ್‌ ಸಿನಿಮಾ 200 ದಿನಗಳ ಶೂಟಿಂಗ್‌; ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣ

Renuka swamy Case: ದರ್ಶನ್‌, ಪವಿತ್ರಾ ಗೌಡ ಮತ್ತೆ ಪೊಲೀಸ್‌ ಕಸ್ಟಡಿಗೆ

Renuka swamy Case: ದರ್ಶನ್‌, ಪವಿತ್ರಾ ಗೌಡ ಮತ್ತೆ ಪೊಲೀಸ್‌ ಕಸ್ಟಡಿಗೆ

chef chidambara movie review

Chef Chidambara Review; ಕಿಲಾಡಿ ಜೋಡಿಯ ಥ್ರಿಲ್ಲಿಂಗ್‌ ಸ್ಟೋರಿ

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

udupi

Udupi; ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜಾ ನಿಧನ

1

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

Michigan; ವಾಟರ್ ಪಾರ್ಕ್ ನಲ್ಲಿ ಗುಂಡಿನ ಮಳೆಗರೆದ ಬಂದೂಕುಧಾರಿ; ಮಗು ಸೇರಿ ಹಲವರಿಗೆ ಗಾಯ

2-lungs

Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ

200 days of shooting for yash toxic movie

Yash ಟಾಕ್ಸಿಕ್‌ ಸಿನಿಮಾ 200 ದಿನಗಳ ಶೂಟಿಂಗ್‌; ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.