ಶಿವರಾತ್ರಿಗೆ ಹೆಬ್ಬುಲಿ ಘರ್ಜನೆ

Team Udayavani, Feb 15, 2017, 11:04 AM IST

hebbuli.jpg

ಸುದೀಪ್‌  ಅವರ “ಹೆಬ್ಬುಲಿ’ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕೇಳುತ್ತಿದ್ದರು. ಈಗ ಬಿಡುಗಡೆಯ ದಿನಾಂಕ ಅಂತಿಮವಾಗಿದೆ. ಅದು ಫೆ.23. ಹೌದು, ಫೆ.23 ರಂದು “ಹೆಬ್ಬುಲಿ’ ಚಿತ್ರ ಬಿಡುಗಡೆಯಾಗುತ್ತಿದೆ. ಕೇವಲ ರಾಜ್ಯವಷ್ಟೇ ಅಲ್ಲದೇ ಹೊರರಾಜ್ಯ ಹಾಗೂ ಹೊರದೇಶಗಳಲ್ಲೂ “ಹೆಬ್ಬುಲಿ’ ತೆರೆಗೆ ಬರುತ್ತಿದೆ.  

ಕೃಷ್ಣ ನಿರ್ದೇಶನದ ಈ ಸಿನಿಮಾವನ್ನು ಎಸ್‌.ಆರ್‌.ಪ್ರೊಡಕ್ಷನ್ಸ್‌ ಹಾಗೂ ಉಮಾಪತಿ ಫಿಲಂಸ್‌ ಬ್ಯಾನರ್‌ನಡಿ ರಘುನಾಥ್‌ ಹಾಗೂ ಉಮಾಪತಿ ಜೊತೆಯಾಗಿ ನಿರ್ಮಿಸಿದ್ದಾರೆ. ಅಮಲಾ ಪೌಲ್‌ ಈ ಸಿನಿಮಾದ ನಾಯಕಿ. ಈಗಾಗಲೇ ಸುದೀಪ್‌ ಅವರ ವಿಭಿನ್ನ ಗೆಟಪ್‌ ಸಿನಿಮಾ ಬಗೆಗಿನ ಕುತೂಹಲ ಹೆಚ್ಚಿದ್ದು, ಸುದೀಪ್‌ ಹೇರ್‌ಸ್ಟೈಲ್‌ ಕೂಡಾ ಟ್ರೆಂಡಿಂಗ್‌ ಆಗಿದೆ. ಅರ್ಜುನ್‌ ಜನ್ಯಾ ಸಂಗೀತ ನೀಡಿರುವ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಹಾಡುಗಳಿಗೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 

ಇನ್ನು, ಈ ಚಿತ್ರದಲ್ಲಿ ರವಿಚಂದ್ರನ್‌ ಕೂಡಾ ಪ್ರಮುಖ ಪಾತ್ರ ಮಾಡಿದ್ದು, ಸುದೀಪ್‌ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ “ಮಾಣಿಕ್ಯ’ ಸಿನಿಮಾದಲ್ಲಿ ಇವರಿಬ್ಬರು ಅಪ್ಪ-ಮಗನಾಗಿ ಕಾಣಿಸಿಕೊಂಡಿದ್ದರು. ಈಗ ಮತ್ತೂಮ್ಮೆ ತೆರೆಮೇಲೆ ಈ ಜೋಡಿ ಮೋಡಿ ಮಾಡಲಿದೆ. ಚಿತ್ರದಲ್ಲಿ ಸುದೀಪ್‌ ಪ್ಯಾರಾ ಮಿಲಿಟರಿ ಕಮಾಂಡೋ ಆಗಿ ನಟಿಸಿದ್ದಾರೆ. ನಿರ್ದೇಶಕ ಕೃಷ್ಣ ಅವರಿಗೂ ಈ ಸಿನಿಮಾ ಮೇಲೆ ಸಾಕಷ್ಟು ವಿಶ್ವಾಸವಿದೆ.

ಈ ಹಿಂದೆ ಸುದೀಪ್‌ ಮಾಡಿರದಂತಹ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ ಎನ್ನುತ್ತಾರೆ. ಅವರು ಹೇಳುವಂತೆ ಚಿತ್ರದಲ್ಲಿ ಕಮರ್ಷಿಯಲ್‌ ಅಂಶಗಳ ಜೊತೆಗೆ ಸೂಕ್ಷ್ಮವಾದ ಸಂದೇಶ ಕೂಡಾ ಅಡಗಿದೆಯಂತೆ.  ಸುಮಾರು 97 ದಿನಗಳ ಕಾಲ ಕರ್ನಾಟಕ, ಕಾಶ್ಮೀರ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ರವಿಶಂಕರ್‌, ಸಂಪತ್‌ರಾಜ್‌, ಚಿಕ್ಕಣ್ಣ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

ಚಿತ್ರಕ್ಕೆ ಕರುಣಾಕರ್‌ ಅವರ ಛಾಯಾಗ್ರಹಣ, ದೀಪು ಎಸ್‌ ಕುಮಾರ್‌ ಅವರ ಸಂಕಲನ, ಹರ್ಷ ನೃತ್ಯ ನಿರ್ದೇಶನವಿದೆ. “ಹೆಬ್ಬುಲಿ’ ಬಾಯಿಗೆ ಬಲಿಯಾಗೋದು ಬೇಡ ಎಂಬ ಕಾರಣಕ್ಕೆ ಸಾಕಷ್ಟು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಕೂಡಾ ಮುಂದಕ್ಕೆ ಹಾಕಿವೆ. ಹಾಗಾಗಿ, ಮಾರ್ಚ್‌ ಎರಡನೇ ವಾರದ ನಂತರವೇ ಹೊಸಬರು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆನ್ನಲಾಗಿದೆ.

ಟಾಪ್ ನ್ಯೂಸ್

Road Mishap ಈಚರ್ ವಾಹನ-ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

Road Mishap ಈಚರ್ ವಾಹನ-ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

Price Hike: ಪೆಟ್ರೋಲ್- ಡೀಸೆಲ್ ಮೇಲೆ ಸೆಸ್ ಹೆಚ್ಚಳ ಮಾಡಿ ರಾಜ್ಯ ಸರ್ಕಾರ!

Price Hike: ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ!

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

7

Uttarakhand: ಕಮರಿಗೆ ಉರುಳಿದ ಟಿಟಿ ವಾಹನ; ಕನಿಷ್ಠ 10 ಮಂದಿ ದುರ್ಮರಣ

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

Renuka Swamy case: ಕನ್ನಡ ಚಿತ್ರರಂಗಕ್ಕೆ ದರ್ಶನ್‌ ದೇವಮಾನವ ಇದ್ದಂತೆ: ನಟಿ ಸಂಜನಾ

Renuka Swamy case: ಕನ್ನಡ ಚಿತ್ರರಂಗಕ್ಕೆ ದರ್ಶನ್‌ ದೇವಮಾನವ ಇದ್ದಂತೆ: ನಟಿ ಸಂಜನಾ

Kannada Cinema; ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

Sandalwood: ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

love li kannada movie

Love Li; ತೆರೆಗೆ ಬಂತು ವಸಿಷ್ಠ ನಟನೆಯ ‘ಲವ್ ಲೀ’

kotee movie

Kotee movie: ನೈಜತೆಯೇ ಕೋಟಿಯ ಜೀವಾಳ

MUST WATCH

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

ಹೊಸ ಸೇರ್ಪಡೆ

Road Mishap ಈಚರ್ ವಾಹನ-ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

Road Mishap ಈಚರ್ ವಾಹನ-ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

9

Monsoon: ಕುರಿ, ಕೋಳಿ ಸಾಕಾಣಿಕೆ ಜೋರು!

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಹಲಸು, ಹಣ್ಣು, ಆಹಾರೋತ್ಸವಗಳ ಸಮೃದ್ಧಿ

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಹಲಸು, ಹಣ್ಣು, ಆಹಾರೋತ್ಸವಗಳ ಸಮೃದ್ಧಿ

Price Hike: ಪೆಟ್ರೋಲ್- ಡೀಸೆಲ್ ಮೇಲೆ ಸೆಸ್ ಹೆಚ್ಚಳ ಮಾಡಿ ರಾಜ್ಯ ಸರ್ಕಾರ!

Price Hike: ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ!

4-udupi

ರಾಮ ನಿರ್ಯಾಣದ ಪ್ರವಚನಗೈಯುತ್ತಲೇ ಮೋಕ್ಷಯಾನ ಕೈಗೊಂಡ ದ್ವೈತ ವೇದಾಂತ ವಿಚಕ್ಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.