ಸುರ್‌ ಸುರ್‌ ಬತ್ತಿ ಹಚ್ತಾರಂತೆ ವೈಷ್ಣವಿ!


Team Udayavani, Oct 31, 2018, 11:20 AM IST

vaishnavi.jpg

ನಾಯಕಿ ವೈಷ್ಣವಿ ಮೆನನ್‌ ಮತ್ತೆ ಸುದ್ದಿಯಾಗಿದ್ದಾರೆ. ಹಾಗಂತ, ಅವರು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ ಅಂತಂದುಕೊಳ್ಳುವಂತಿಲ್ಲ. “ಪಾದರಸ’ ಬಳಿಕ ವೈಷ್ಣವಿ ಮೆನನ್‌ ಎಲ್ಲೂ ಸುದ್ದಿಯಾಗಿರಲಿಲ್ಲ. ಅವರೀಗ ಮೆಲ್ಲನೆ “ಸುರ್‌ ಸುರ್‌ ಬತ್ತಿ’ ಹಚ್ಚೋಕೆ ರೆಡಿಯಾಗಿದ್ದಾರೆ. ಹೀಗೆಂದರೆ, ಸ್ವಲ್ಪ ಗೊಂದಲವಾಗಬಹುದು. ಇದು ಸಿನಿಮಾ ವಿಷಯ. ಸದ್ದಿಲ್ಲದೆಯೇ ವೈಷ್ಣವಿ ಮೆನನ್‌ ನಟಿಸಿರುವ “ಸುರ್‌ ಸುರ್‌ ಬತ್ತಿ’ ಚಿತ್ರ ಇದೀಗ ಬಿಡುಗಡೆ ಹಂತಕ್ಕೆ ಬಂದಿದೆ.

ಈ ಚಿತ್ರಕ್ಕೆ ಮುಗಿಲ್‌ ನಿರ್ದೇಶಕರು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಜವಾಬ್ದಾರಿಯೂ ಇವರದೇ. ವೈಷ್ಣವಿ ಮೆನನ್‌ಗೆ ನಾಯಕರಾಗಿ ಆರವ್‌ ಕಾಣಿಸಿಕೊಂಡಿದ್ದಾರೆ. ಆರವ್‌ ಯಾರು ಎಂಬ ಪ್ರಶ್ನೆ ಎದುರಾಗಬಹುದು. “ಚತುಭುಜ’ ಚಿತ್ರ ನೆನಪಿಸಿಕೊಂಡರೆ ಆರವ್‌ ನೆನಪಾಗುತ್ತಾರೆ. ಅಷ್ಟಕ್ಕೂ ನೆನಪಾಗದಿದ್ದರೆ, ಕಿರುತೆರೆಯ “ಲಾಯರ್‌ ಗುಂಡಣ್ಣ’ ಧಾರಾವಾಹಿ ನೆನಪಿಸಿಕೊಂಡರೆ ಆರವ್‌ ಯಾರೆಂಬುದು ಗೊತ್ತಾಗುತ್ತೆ.

ಅದೇ ಆರವ್‌ “ಸುರ್‌ ಸುರ್‌ ಬತ್ತಿ’ ಚಿತ್ರಕ್ಕೆ ಹೀರೋ. ವೈಷ್ಣವಿ ಮೆನನ್‌ಗೆ ಈ ಚಿತ್ರದಲ್ಲೇನು ಪಾತ್ರ ಎಂಬ ಪ್ರಶ್ನೆಗೆ, ಅವರಿಲ್ಲಿ ಸಿಟಿಯಿಂದ ಹಳ್ಳಿಗೆ ಬರುವಂತಹ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ ಎಂಬ ಉತ್ತರ ಬರುತ್ತದೆ. ಹಾಗಾದರೆ, ಆರವ್‌ಗೇನು ಕೆಲಸ ಅಂದರೆ, ಅವರು ಹಳ್ಳಿಯಲ್ಲಿರುವ ಒಬ್ಬ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲರನ್ನೂ ನಗಿಸಿಕೊಂಡು, ನಗುತ್ತಲೇ ತನ್ನೊಳಗಿನ ಭಾವನೆಗಳನ್ನು ಹಂಚಿಕೊಂಡು ಭಾವುಕರಾಗಿ, ಭಾವುಕರನ್ನಾಗಿಸುವ ಪಾತ್ರದಲ್ಲಿ ನಟಿಸಿದ್ದಾರಂತೆ.

ಇಲ್ಲೊಂದು ವಿಶೇಷ ಪಾತ್ರವಿದೆ. ಅದು ತಾಯಿ ಪಾತ್ರ. ಆ ಪಾತ್ರದಲ್ಲಿ ಹಿರಿಯ ನಟಿ ಊರ್ವಶಿ ಅವರು ಕಾಣಿಸಿಕೊಂಡಿದ್ದಾರೆ. ಇಲ್ಲಿ ತಾಯಿ ಮಗನ ಪ್ರೀತಿ-ವಾತ್ಸಲ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಬಹುತೇಕ ಮನರಂಜನೆ ಅಂಶಗಳಲ್ಲೇ ಚಿತ್ರ ಸಾಗಲಿದೆಯಂತೆ. ಇನ್ನು, ಈ ಚಿತ್ರವನ್ನು ಪಿ.ಎಸ್‌.ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಬಿ.ಡಿ.ಕುಮಾರ್‌ ನಿರ್ಮಿಸಿದ್ದಾರೆ. ಇವರಿಗೆ ಇದು ಮೊದಲ ಚಿತ್ರ.

ಮಿತ್ರರಂಗ ತಂಡದ ಕಲಾವಿದರಾಗಿರುವ ಕುಮಾರ್‌, ನಿರ್ಮಾಣದ ಜೊತೆಗೆ ಇಲ್ಲೊಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಸಾಧುಕೋಕಿಲ, ಎನ್‌.ಕೆ.ಮಠ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ. ಚನ್ನಪಟ್ಟಣ್ಣ, ಬೆಂಗಳೂರು, ಮಡಿಕೇರಿ, ಸುತ್ತಮುತ್ತ ಸುಮಾರು 50 ದಿನಗಳ ಕಾಲ ಚಿತ್ರೀಕರಣವಾಗಿದೆ. ಇನ್ನು, ಈ ಚಿತ್ರಕ್ಕೆ ಪಿ.ಎಸ್‌.ಚಿನ್ನಪ್ಪ ಮತ್ತು ಟಿ.ವಿ.ಗಿರೀಶ್‌ ಅವರು ಸಹ ನಿರ್ಮಾಪಕರಾಗಿದ್ದಾರೆ.

ಲೋಕೇಶ್‌ ಮತ್ತು ಗೌತಮ್‌ ಶ್ರೀವಾಸ್ತವ್‌ ಸಂಗೀತವಿದೆ. ಚಿತ್ರದಲ್ಲಿ ಮೂರು ಹಾಡು ಮತ್ತು ಎರಡು ತುಣುಕುಗಳಿವೆ. ನಿರ್ದೇಶಕರಾದ ಅರಸು ಅಂತಾರೆ ಮತ್ತು ವಿಜಯ ಪ್ರಸಾದ್‌ ಹಾಡುಗಳನ್ನು ಬರೆದಿದ್ದಾರೆ. ಚಂದ್ರಮೋಹನ್‌ ಮತ್ತು ಚಂದ್ರಕಲಾ ನೃತ್ಯ ನಿರ್ದೇಶನ, ಕೌರವ ವೆಂಕಟೇಶ್‌ ಸಾಹಸವಿದೆ. ಎ.ಸಿ.ಮಹೇಂದ್ರನ್‌ ಛಾಯಾಗ್ರಹಣವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ “ಸುರ್‌ ಸುರ್‌ ಬತ್ತಿ’ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

PU ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

14-Kasaragodu

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

13-Kumbale

ಪತ್ನಿಯ ಸೀಮಂತಕ್ಕಾಗಿ 2 ದಿನಗಳ ಹಿಂದೆ ಕೊಲ್ಲಿಯಿಂದ ಊರಿಗೆ ಬಂದಿದ್ದ ಯುವಕ ಅಪಘಾತದಲ್ಲಿ ಸಾವು

bjpState Govt ಜೂ.28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

State Govt ಜೂ.28ಕ್ಕೆ ಬಿಜೆಪಿಯಿಂದ ಮತ್ತೆ ಪ್ರತಿಭಟನೆ

ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಸರ್ಕಾರ ಕ್ರಮ: ವಿಜಯೇಂದ್ರ

B. Y. Vijayendra ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಸರ್ಕಾರ ಕ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Sandalwood: ಒಂದು ಆತ್ಮ ಮೂರು ಜನ್ಮ

Sandalwood: ಮತ್ತೆ ನಾ ನಿನ್ನ ಬಿಡಲಾರೆ “ನಾ ನಿನ್ನ ಬಿಡಲಾರೆ’

Sandalwood: ಮತ್ತೆ ನಾ ನಿನ್ನ ಬಿಡಲಾರೆ “ನಾ ನಿನ್ನ ಬಿಡಲಾರೆ’

10

Sandalwood: ಆ. 15ಕ್ಕೆ ಕೃಷ್ಣಂ ಪ್ರಣಯ ಸಖಿ ತೆರೆಗೆ

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

Tollywood: ʼಕಲ್ಕಿ 2898 ADʼಯ ಪ್ರಭಾಸ್‌ ʼಬುಜ್ಜಿʼ ಸವಾರಿ ಮಾಡಿದ ರಿಷಬ್‌ ಶೆಟ್ಟಿ

hejjaru movie releasing on July 19th

Hejjaru; ಪ್ಯಾರಲಲ್‌ ಲೈಫ್ ಸಿನಿಮಾ; ಜುಲೈ 19ಕ್ಕೆ ‘ಹೆಜ್ಜಾರು’ ರಿಲೀಸ್‌

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

PU ಶೂನ್ಯ ದಾಖಲಾತಿ ಹೊಂದಿರುವ ಪಿಯು ಕಾಲೇಜುಗಳಿಂದ 261 ಹುದ್ದೆ ಸ್ಥಳಾಂತರ

16-madamakki

Madamakki : ವಿಷ ಸೇವಿಸಿ ಆತ್ಮಹತ್ಯೆ

ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

High Court ಕೆಎಸ್‌ಎಟಿ ಸದಸ್ಯರ ನೇಮಕ: ರಾಜ್ಯ ಸರ್ಕಾರಕ್ಕೆ ನೋಟಿಸ್‌

14-Kasaragodu

Kasaragodu: ಮಣ್ಣು ಅಗೆಯುವ ಯಂತ್ರ ಮಗುಚಿ ಬಿದ್ದು ಯುವಕ ಸಾವು

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Amit Shah ಜತೆ ಉಪ ಚುನಾವಣೆ ಬಗ್ಗೆ ಬಿ.ವೈ.ವಿಜಯೇಂದ್ರ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.