Cannes‌ Film Festival: ಕೇನ್ಸ್ ನಲ್ಲಿ ಪ್ರದರ್ಶನ ಕಾಣಲಿದೆ ಭಾರತದ ಈ 7 ಸಿನಿಮಾಗಳು


Team Udayavani, May 15, 2024, 1:33 PM IST

12

ನವದೆಹಲಿ: ಸಿನಿಮಾ ಜಗತ್ತಿನ ಪ್ರತಿಷ್ಠಿತ ಚಲನ ಚಿತ್ರೋತ್ಸವಗಳಲ್ಲಿ ಒಂದಾಗಿರುವ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಆರಂಭಗೊಂಡಿದೆ. 2024 ರ 77ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್  ಮೇ 14 ರಿಂದ ಮೇ 25ರವರೆಗೆ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್‌ನ ಫ್ರೆಂಚ್ ರಿವೇರಿಯಾದಲ್ಲಿ ನಡೆಯಲಿದೆ.

ಪ್ರಪಂಚದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದಾದ ಕೇನ್ಸ್ ಫಿಲ್ಮ್‌ ಫೆಸ್ಟ್‌ ವಲ್‌ ನಲ್ಲಿ ವಿಶ್ವದ ಅನೇಕ ಸಿನಿ ಸೆಲೆಬ್ರಿಟಿಗಳು ಭಾಗಿಯಾಗುತ್ತಾರೆ. ಭಾರತದ ಸ್ಟಾರ್‌ ಗಳಾದ  ಐಶ್ವರ್ಯಾ ರೈ ಬಚ್ಚನ್, ಅದಿತಿ ರಾವ್ ಹೈದರಿ, ಶೋಭಿತಾ ಧೂಲಿಪಾಲ,ಕಿಯಾರಾ ಅಡ್ವಾಣಿ ಕೇನ್ಸ್ ನಲ್ಲಿ ಭಾಗವಹಿಸಿದ್ದಾರೆ.

ಈ ಫಿಲ್ಮ್‌ ಫೆಸ್ಟ್‌ ವಲ್‌ ವಿವಿಧ ವಿಭಾಗದಲ್ಲಿಸಿನಿಮಾ, ಕಿರುಚಿತ್ರ, ಸಾಕ್ಷ್ಯಚಿತ್ರಗಳು ಪ್ರದರ್ಶನವಾಗುತ್ತದೆ. ಭಾರತದಿಂದ ಈ ಬಾರಿ 7 ಸಿನಿಮಾಗಳು ಪ್ರದರ್ಶನ ಕಾಣಲಿದೆ. ಇಲ್ಲಿದೆ ಸಿನಿಮಾಗಳ ಪಟ್ಟಿ..

‘ಆಲ್ ವಿ ಇಮ್ಯಾಜಿನ್ ಯ್ಯಾಸ್ ಲೈಟ್’: ( ನಿರ್ದೇಶನ – ಪಾಯಲ್ ಕಪಾಡಿಯಾ):
ಪಾಯಲ್ ಕಪಾಡಿಯಾ ನಿರ್ದೇಶಿಸಿದ ಈ ಸಿನಿಮಾವೂ ಸುಮಾರು 30 ವರ್ಷಗಳ ಬಳಿಕ ಕಾನ್‌ ಚಲನಚಿತ್ರೋತ್ಸವದಲ್ಲಿ ಪಾಮ್ ಡಿ’ಓರ್( ಕಾನ್‌ ಫೆಸ್ಟ್‌ ವಲ್‌ – ಅತ್ಯುನ್ನತ ಪ್ರಶಸ್ತಿ) ಪ್ರಶಸ್ತಿಗಾಗಿ ಸ್ಪರ್ಧಿಸುವ ಮೊದಲ ಭಾರತೀಯ ಚಲನಚಿತ್ರ ಇದಾಗಿರಲಿದೆ.

ಹಿಂದಿ ಹಾಗೂ ಮಲಯಾಳಂನಲ್ಲಿರುವ ಈ ಸಿನಿಮಾದಲ್ಲಿ ಕಣಿ ಕುಸೃತಿ,ದಿವ್ಯ ಪ್ರಭಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ವಿಚ್ಛೇದಿತ ಮಹಿಳೆ ಹಾಗೂ ಅವರ ಸ್ನೇಹಿತ ನಡುವೆ ನಡೆಯುವ ಕಥೆಯನ್ನು ಸಿನಿಮಾ ಒಳಗೊಂಡಿದೆ.

ಸಂತೋಷ್:( ನಿರ್ದೇಶನ – ಸಂಧ್ಯಾ ಸೂರಿ): ಬ್ರಿಟಿಷ್‌ – ಇಂಡಿಯನ್‌ ನಿರ್ದೇಶಕಿ ಸಂಧ್ಯಾ ಸೂರಿ ಅವರ ಈ ಸಿನಿಮಾ ಕೇನ್ಸ್ ಫೆಸ್ಟಿ ವಲ್‌ ನ ಉತ್ಸವದ ಅನ್ ಸರ್ಟೈನ್ ರಿಗಾರ್ಡ್ ವಿಭಾಗದಲ್ಲಿ ಪ್ರದರ್ಶನವಾಗಲಿದೆ. ಸಹಾನಾ ಗೋಸ್ವಾಮಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಕಥೆ ಉತ್ತರ ಭಾರತದ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತದೆ. ವಿಧವೆ ಮಹಿಳೆ ತನ್ನ ಪತಿ ಕಾನ್‌ ಸ್ಟೇಬಲ್‌ ಹುದ್ದೆಯನ್ನು ವಹಿಸಿಕೊಂಡಾಗ ಏನೆಲ್ಲ ಆಗುತ್ತದೆ ಎನ್ನುವುದನ್ನು ಹೇಳಲಾಗಿದೆ.

‘ಸನ್‌ಫ್ಲವರ್ಸ್ ವೆರ್ ದಿ ಫಸ್ಟ್ ಒನ್ಸ್ ಟು ನೋ'( ಕನ್ನಡ ಕಿರುಚಿತ್ರ – ನಿರ್ದೇಶನ – ಚಿದಾನಂದ್ ನಾಯಕ್:

ಕೇನ್ಸ್ ಫಿಲ್ಮ್‌ ಫೆಸ್ಟಿ ವಲ್‌ ನಲ್ಲಿ ಕನ್ನಡಿಗರು ಖುಷಿಯ ಪಡುವ ವಿಚಾರವೆಂದರೆ ಕನ್ನಡದ ಕಿರುಚಿತ್ರವೊಂದು ಪ್ರದರ್ಶನ ಆಗಲಿದೆ. 15 ನಿಮಿಷಗಳ ಈ ಕಿರುಚಿತ್ರ ಸಿನೆಫೊಂಡೇಶನ್ ಅಥವಾ ಲಾ ಸಿನೆಫ್ ವಿಭಾಗದಲ್ಲಿ ಪ್ರದರ್ಶನ ಕಾಣಲಿದೆ. ಈ ಕಿರುಚಿತ್ರವನ್ನು FTII ವಿದ್ಯಾರ್ಥಿಯಾಗಿರುವ ಚಿದಾನಂದ್ ನಾಯಕ್ ನಿರ್ದೇಶನ ಮಾಡಿದ್ದಾರೆ.

ಮಂಥನ್(‌ ನಿರ್ದೇಶನ- ಶ್ಯಾಮ್‌ ಬೆಂಗಾಲ್):‌ 1976 ರಲ್ಲಿ ಶ್ಯಾಮ್‌ ಬೆನಗಲ್‌ ನಿರ್ದೇಶನದಲ್ಲಿ ಬಂದ ʼಮಂಥನ್‌ʼ ಈ ಬಾರಿ ಕೇನ್ಸ್ ಫೆಸ್ಟಿ ವಲ್‌ ನಲ್ಲಿ ಪ್ರದರ್ಶನ ಕಾಣಲಿದೆ. ಗಿರೀಶ್ ಕಾರ್ನಾಡ್, ಸ್ಮಿತಾ ಪಾಟೀಲ್, ನಾಸಿರುದ್ದೀನ್ ಶಾ ಮತ್ತು ಕುಲಭೂಷಣ್ ಖರಬಂದ ನಟಿಸಿರುವ ಈ ಸಿನಿಮಾ ಕ್ಲಾಸಿಕ್‌ ವಿಭಾಗದಲ್ಲಿ ಪ್ರದರ್ಶನ ಕಾಣಲಿದೆ.

‘ಸಿಸ್ಟರ್ ಮಿಡ್‌ನೈಟ್’: ( ನಿರ್ದೇಶಕ -ಕರಣ್ ಕಂಧಾರಿ): ಬಾಲಿವುಡ್‌ ನಟಿ ರಾಧಿಕಾ ಆಪ್ಟೆ ನಟನೆಯ ಈ ಸಿನಿಮಾ ಡೈರೆಕ್ಟರ್ಸ್ ಫೋರ್ಟ್‌ ನೈಟ್ ವಿಭಾಗದಲ್ಲಿ ಪ್ರದರ್ಶನ ಕಾಣಲಿದೆ. ಚಿಕ್ಕ ಊರಿನಿಂದ ಮಹಾನಗರಕ್ಕೆ ಬಂದ ಹುಡುಗಿಯೊಬ್ಬಳ ವೈವಾಹಿಕ ಬದುಕಿನ ಕಥೆಯನ್ನೊಳಗೊಂಡಿದೆ.

‘ಇನ್ ರಿಟ್ರಿಟ್’: (ನಿರ್ದೇಶನ- ಸೈಯ್ಯದ್ ಮೈಸಮ್ ಅಲಿ): ಸಿನಿಮಾ ಸ್ವತಂತ್ರ ಸಿನಿಮಾ ವಿಭಾಗದಲ್ಲಿ ಪ್ರದರ್ಶನ ಕಾಣಲಿದೆ. ಬಹು ಸಮಯದ ಬಳಿಕ ವ್ಯಕ್ತಿಯೊಬ್ಬ ಹುಟ್ಟೂರಿಗೆ ಬಂದಾಗ ಏನೆಲ್ಲ ಆಗುತ್ತದೆ ಎನ್ನುವುದರ ಸುತ್ತ ಸಿನಿಮಾದ ಕಥೆ ಸಾಗುತ್ತದೆ.

ಶೇಮ್‌ ಲೆಸ್:‌ (ನಿರ್ದೇಶನ – ನಿರ್ದೇಶನ – ಕಾನ್ಸ್ಟಾಂಟಿನ್ ಬೊಜಾನೋವ್) ಈ ಸಿನಿಮಾವನ್ನು ಈ ಸಿನಿಮಾವನ್ನು ನೇಪಾಳ ಹಾಗೂ ಭಾರತದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಕಥೆಯು ದೆಹಲಿಯ ವೇಶ್ಯಾಗೃಹದಲ್ಲಿ ಪೋಲೀಸರನ್ನು ಕೊಂದ ನಂತರ ಉತ್ತರ ಭಾರತದ ಲೈಂಗಿಕ ಕಾರ್ಮಿಕರ ಸಮುದಾಯದಲ್ಲಿ ಆಶ್ರಯ ಪಡೆಯುವ ರೇಣುಕಾ ಅವರ ಸುತ್ತ ಸುತ್ತುತ್ತದೆ.

ಟಾಪ್ ನ್ಯೂಸ್

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

reliance

TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

1-aaa

Kanniyakumari; 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

IMDb ಟಾಪ್​ 100 ಇಂಡಿಯನ್ ಸೆಲೆಬ್ರಿಟಿ ಲಿಸ್ಟ್: ದೀಪಿಕಾ ನಂ.1, ಸ್ಥಾನ ಪಡೆದ ಕನ್ನಡದ ಈ ನಟ

16

‌Bollywood: ‘ಧಡಕ್‌ -2ʼ ಅನೌನ್ಸ್: ಮತ್ತೆ ಲವ್‌ ಸ್ಟೋರಿ ಹೇಳಲು ಹೊರಟ ಕರಣ್‌ ಜೋಹರ್

12

Anant-Radhika 2nd Pre-wed:‌ ಐಷಾರಾಮಿ ಹಡಗು, 800 ಅತಿಥಿಗಳು.. ಏನಿರಲಿದೆ ಈ ಬಾರಿ ವಿಶೇಷ?

Cannesನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಪಾಯಲ್ ಕಪಾಡಿಯಾ

Cannesನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಪಾಯಲ್ ಕಪಾಡಿಯಾ

Deepika Padukone ತಾಯ್ತನ ಪ್ರಶ್ನಿಸಿದ ನೆಟ್ಟಿಗರಿಗೆ ಪತಿ ರಣವೀರ್‌ ತಿರುಗೇಟು

Deepika Padukone ತಾಯ್ತನ ಪ್ರಶ್ನಿಸಿದ ನೆಟ್ಟಿಗರಿಗೆ ಪತಿ ರಣವೀರ್‌ ತಿರುಗೇಟು

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Belagavi: ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟ!

Belagavi: ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟ!

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

1-sub

Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ

1-qewqeweqw

Mangaluru ನಮಾಜ್‌ ಪ್ರಕರಣ: ಬಿ ರಿಪೋರ್ಟ್‌ ಸಲ್ಲಿಕೆ; ಶರಣ್‌ ಪಂಪ್‌ವೆಲ್‌ ವಿರುದ್ಧ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.