ಜಿಲ್ಲೆಯಲ್ಲಿ ಒಂದೇ ದಿನ 47 ಮಂದಿಗೆ ಸೋಂಕು!


Team Udayavani, May 23, 2020, 6:27 AM IST

black friday

ಚಿಕ್ಕಬಳ್ಳಾಪುರ: ಜಿಲ್ಲೆಯ ಪಾಲಿಗೆ ಇದುವರೆಗೂ ಸಮಾಧಾನ ತಂದಿದ್ದ ಕೋವಿಡ್‌ 19 ಇದೀಗ ಮಹಾರಾಷ್ಟ್ರ ವಲಸೆ ಕಾರ್ಮಿಕರ ಆಗಮನದ ಬಳಿಕ ತನ್ನ ಆರ್ಭಟ ಮುಂದುವರಿಸಿದ್ದು, ಜಿಲ್ಲೆಯಲ್ಲಿ ಒಂದೇ ದಿನ ಸೋಂಕಿತರ ಸಂಖ್ಯೆ  ಎರಡಂಕಿ ದಾಟಿ ಬರೋಬ್ಬರಿ 47 ಮಂದಿಯಲ್ಲಿ ಮಹಾಮಾರಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯ ಪಾಲಿಗೆ ಶುಕ್ರವಾರ ಕರಾಳ ದಿನವಾಗಿದೆ.

ಸೋಂಕಿತರು 73ಕ್ಕೆ ಏರಿಕೆ: ಕಳೆದ ಗುರುವಾರದವರೆಗೂ ಜಿಲ್ಲೆಯಲ್ಲಿ ಕೋವಿಡ್‌ 19  ಸೋಂಕಿತರ ಸಂಖ್ಯೆ ಕೇವಲ 26 ಮಾತ್ರ ಇತ್ತು. ಆದರೆ ಶುಕ್ರವಾರ ಮಹಾರಾಷ್ಟ್ರದಿಂದ ಕರೆ ತಂದಿರುವ ವಲಸೆ ಕಾರ್ಮಿಕರಲ್ಲಿ 47 ಮಂದಿಗೆ ಸೋಂಕು ಕಾಣಿಸಿಕೊಳ್ಳುವ  ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆ ಕಂಡಿದ್ದು,  ಒಂದೆರೆಡು ದಿನಗಳಲ್ಲಿ ಸೋಂಕಿತರ ಸಂಖ್ಯೆ ಶತಕ ಬಾರಿಸುವ ಮುನ್ಸೂಚನೆ ದಟ್ಟವಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಗೌರಿಬಿದನೂರು 12, ಚಿಕ್ಕಬಳ್ಳಾಪುರ 9 ಹಾಗೂ ಚಿಂತಾಮಣಿ 5 ಪ್ರಕರಣಗಳು ಸೇರಿ ಒಟ್ಟು 26 ಪ್ರಕರಣಗಳು ಇದ್ದು, ಈ  ಪೈಕಿ ಚಿಕ್ಕಬಳ್ಳಾಪುರ ಹಾಗೂ ಗೌರಿ  ಬಿದ ನೂರಲ್ಲಿ ತಲಾ ಒಬ್ಬರು ಬಲಿಯಾಗಿದ್ದರು. ಉಳಿದ 24 ಪ್ರಕರಣಗಳ ಪೈಕಿ 18 ಮಂದಿ ಸೋಂಕಿನಿಂದ ಸಂಪೂರ್ಣ ಚೇತರಿಕೆ ಕಂಡು ಕೋವಿಡ್‌-19 ಆಸ್ಪತ್ರೆಯಿಂದ ಡಿಸಾcರ್ಜ್‌ ಆಗಿದ್ದರು.

ಆದರೆ ಕಳೆದ ಎರಡು ದಿನಗಳ ಹಿಂದೆ ಮಹಾರಾಷ್ಟ್ರಕ್ಕೆ ತೆರಳಿದ್ದ ಜಿಲ್ಲೆಯ 247 ಮಂದಿ ವಲಸೆ ಕಾರ್ಮಿಕರನ್ನು ಜಿಲ್ಲೆಗೆ ಕರೆ ತಂದು ಕ್ವಾರಂಟೈನ್‌ ಮಾಡಲಾಗಿದ್ದು, ಅವರ ಪೈಕಿ 47 ಮಂದಿಯಲ್ಲಿ ಪಾಸಿಟೀವ್‌ ಬಂದಿರುವುದು ಇಡೀ  ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

ಗೌರಿಬಿದನೂರಿಗೆ ಮತ್ತೆ ಕಂಟಕ: ಹಲವು ದಿನಗಳಿಂದ ಯಾವುದೇ ಪಾಸಿಟೀವ್‌ ಪ್ರಕರಣಗಳು ಕಂಡು ಬರದೇ ನಿರಾಳವಾಗಿದ್ದ ಜಿಲ್ಲೆಯ ಜನರಲ್ಲಿ ಈಗ ಮಹಾರಾಷ್ಟ್ರದಿಂದ ಆಗಮಿಸಿರುವ 47 ವಲಸೆ ಕಾರ್ಮಿಕರಲ್ಲಿ ಸೋಂಕು  ದೃಢಪಟ್ಟಿರುವುದು ಜಿಲ್ಲೆಯನ್ನು ಇನ್ನಷ್ಟು ಆತಂಕಕ್ಕೆ ಕಾರಣವಾಗಿದ್ದು, ಮುಂಬೈ ನಂಜು ಎಲ್ಲಿಗೆ ಮುಟ್ಟುತ್ತದೆಯೆಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮನೆ ಮಾಡಿದೆ. ಸೋಂಕಿತರೆಲ್ಲಾ ಜಿಲ್ಲೆಯ ಗೌರಿಬಿದನೂರು ತಾಲೂಕಿನ  ನಿವಾಸಿಗಳೆಂದು ತಿಳಿದು ಬಂದಿದೆ.

ಈ ಮೊದಲು ಗೌರಿಬಿದನೂರು ತಾಲೂಕಿ ನಲ್ಲಿ ಒಟ್ಟು 12 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಎಲ್ಲರೂ ಗುಣಮುಖ ರಾಗಿದ್ದರು. ಇದೀಗ ಮಹಾರಾಷ್ಟ್ರ ವಲಸಿಗರಿಂದ ಮತ್ತೆ ತಾಲೂಕಿನಲ್ಲಿ ಕೋವಿಡ್‌  19 ಛಾಯೆ ತಲೆ ಎತ್ತಿ ಜನರಲ್ಲಿ ತಲ್ಲಣ ಮೂಡಿಸಿದೆ.

ಜಿಲ್ಲೆಗೆ ಮಹಾರಾಷ್ಟ್ರದಿಂದ ಆಗಮಿಸಿರುವ ವಲಸೆ ಕಾರ್ಮಿಕರ ಪೈಕಿ 47 ಮಂದಿಗೆ ಒಂದೇ ದಿನ ಕೋವಿಡ್‌ 19 ಪಾಸಿಟಿವ್‌ ಬಂದಿದ್ದು, ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆ ಕಂಡಿದೆ. ಹೊರ ರಾಜ್ಯಗಳಿಂದ ಬಂದವರಲ್ಲಿ ಮಾತ್ರ ಸೋಂಕು  ಪತ್ತೆಯಾಗಿದೆ. 
-ಆರ್‌.ಲತಾ, ಜಿಲ್ಲಾಧಿಕಾರಿ

ಟಾಪ್ ನ್ಯೂಸ್

ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?

Mangaluru; ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?

1-NEET-SCAM

NEET ಮರುಪರೀಕ್ಷೆಗೆ ಶೇ. 50 ಮಂದಿ ಗೈರು!

1–sdssadadasd

Ayodhya ಫ‌ಲಿತಾಂಶಕ್ಕೆ ಟೀಕೆ: ಅರ್ಚಕನ ಗನ್‌ಮ್ಯಾನ್‌ ವಾಪಸ್‌ ಪಡೆದ ಆಡಳಿತ!

Parliment New

Modi 3.0: ಲೋಕಸಭೆ ಅಧಿವೇಶನ ಇಂದು ಆರಂಭ: ಏನೇನು ನಡೆಯಲಿದೆ?

ಪೊಲೀಸರಿಗೆ ಸವಾಲಾಗುತ್ತಿರುವ ಪ್ರಚೋದನಕಾರಿ ಪೋಸ್ಟ್‌

ಪೊಲೀಸರಿಗೆ ಸವಾಲಾಗುತ್ತಿರುವ ಪ್ರಚೋದನಕಾರಿ ಪೋಸ್ಟ್‌

1-SURAJ

JDS MLC ಸೂರಜ್‌ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

naksal (2)

Chhattisgarh; ಬಯಲಿಗೆ ಬಂದಿತು ನಕ್ಸಲರ ಕಳ್ಳನೋಟು ಜಾಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-chikkaballapura

Chikkaballapur: ಯೋಗಾ ದಿನಾಚರಣೆಯಲ್ಲಿ ರಾಜಕೀಯ ಕಡು ವೈರಿಗಳ ಸಂಗಮ

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

Chikkaballapura; ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕ ಸಾವು

Chikkaballapura; ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕ ಸಾವು

Kodi Mutt Seer expressed his opinion regarding actor Darshan’s case

ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಕೋಡಿ ಮಠದ ಶ್ರೀಗಳು

9

Monsoon: ಕುರಿ, ಕೋಳಿ ಸಾಕಾಣಿಕೆ ಜೋರು!

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Prajwal Revanna Case ಆರೋಪಿಯಿಂದ ಮಾಹಿತಿ ಹೊರ ತೆಗೆಯುವುದೇ ಎಸ್‌ಐಟಿಗೆ ಸವಾಲು!

Prajwal Revanna Case ಆರೋಪಿಯಿಂದ ಮಾಹಿತಿ ಹೊರ ತೆಗೆಯುವುದೇ ಎಸ್‌ಐಟಿಗೆ ಸವಾಲು!

baby 2

Twin ಹೆಣ್ಣು ಶಿಶು ಜನನ: ಮಕ್ಕಳಿಬ್ಬರನ್ನೂ ಕೊಂದ ತಂದೆ!

ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?

Mangaluru; ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?

1-NEET-SCAM

NEET ಮರುಪರೀಕ್ಷೆಗೆ ಶೇ. 50 ಮಂದಿ ಗೈರು!

1–sdssadadasd

Ayodhya ಫ‌ಲಿತಾಂಶಕ್ಕೆ ಟೀಕೆ: ಅರ್ಚಕನ ಗನ್‌ಮ್ಯಾನ್‌ ವಾಪಸ್‌ ಪಡೆದ ಆಡಳಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.