ಅಮೀನಗಡ ಕುರಿ ಸಂತೆ ಇಂದು ಬಂದ್‌


Team Udayavani, Dec 28, 2019, 11:57 AM IST

bk-tdy-1

ಅಮೀನಗಡ: ರಾಜ್ಯ ಮಟ್ಟದಲ್ಲಿ ಪ್ರಸಿದ್ಧಿ ಮತ್ತು ಶತಮಾನಗಳ ಇತಿಹಾಸ ಹೊಂದಿರುವ ಪಟ್ಟಣದ ಕುರಿ ಸಂತೆಯನ್ನು ಕ್ಷುಲಕ್ಕ ಕಾರಣಕ್ಕೆ ಇಂದು (ಡಿ.28ರಂದು) ಬಂದ್‌ ಮಾಡಿರುವ ಕ್ರಮಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಅಮೀನಗಡ ಪಟ್ಟಣ 2011ರ ಜನಗಣತಿ ಪ್ರಕಾರ 15,076 ಜನಸಂಖ್ಯೆ ಹೊಂದಿದೆ. 5 ಸಾವಿರಕ್ಕೂ ಹೆಚ್ಚು ಕುಟುಂಬಗಳು ಇವೆ. ಇನ್ನು ಇಲ್ಲಿನ ಕುರಿ ಸಂತೆಗೆ ಶತಮಾನಗಳ ಇತಿಹಾಸವಿದೆ. ಉತ್ತರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಸಹಿತ ವಿವಿಧ ರಾಜ್ಯಗಳ ವ್ಯಾಪಾರಸ್ಥರು ಇಲ್ಲಿಗೆ ಬರುತ್ತಾರೆ. ಕೋಟ್ಯಂತರ ರೂ. ವ್ಯವಹಾರ ನಡೆಯುತ್ತದೆ ಮತ್ತು ಸಾವಿರಾರು ಬಡ ಕುಟುಂಬಗಳಿಗೆ ಆಸರೆಯಾಗಿರುವ ಈ ಕುರಿ ಸಂತೆಯನ್ನು ಒಂದು ದಿನದ ಮಟ್ಟಿಗೆ ಬಂದ್‌ ಮಾಡಿರುವ ಕ್ರಮಕ್ಕೆ ವ್ಯಾಪಾರಸ್ಥರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಶನಿವಾರ ಸಣ್ಣ ಪುಟ್ಟ ಅಹಿತಕರ ಘಟನೆಗೆ ಡಿ.28ರಂದು ಶನಿವಾರ ಕುರಿ ಮತ್ತು ದನದ (ಜಾನುವಾರುಗಳ) ಸಂತೆ ಬಂದ್‌ ಮಾಡಿರುವ ನಿರ್ಧಾರಕ್ಕೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪಪಂ ಅಧಿಕಾರಗಳ ಹಾಗೂ ಪೊಲೀಸ್‌ ಇಲಾಖೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ರಾಷ್ಟ್ರದ ವಿವಿಧ ಭಾಗದದಿಂದ ಸಾವಿರಾರು ವ್ಯಾಪಾರಸ್ಥರು ಅಮೀನಗಡ ಕುರಿ ಸಂತೆಗೆ ಆಗಮಿಸುತ್ತಾರೆ. ಆದರೆ ಸಣ್ಣ ಪುಟ್ಟ ಘಟನೆಗಳಿಗೆ ಕೋಟ್ಯಂತರ ರೂ. ವ್ಯವಹಾರ ಆಗುವ ಸಂತೆ ಬಂದ್‌ ಮಾಡಿರುವ ಕ್ರಮ ಸರಿಯಲ್ಲ. ಸಣ್ಣ ಪುಟ್ಟ ಘಟನೆಗಳ ನಡೆದ ತಕ್ಷಣ ಜಾನುವಾರು ಸಂತೆ ಬಂದ್‌ ಮಾಡಿದ್ದು ನೆಗಡಿ ಬಂದರೆ ಮೂಗು ಕೊಯ್ದುಕೊಂಡರಂತೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಣ್ಣ ಅಂಗಡಿಕಾರರಿಗೆ, ಬಡ ವ್ಯಾಪಾರಸ್ಥರಿಗೆ, ಕುರಿ ಸಂತೆಗೆ ಅವಲಂಬನೆಯಾಗಿರುವ ಕುಟುಂಬಗಳಿಗೆ ತೊಂದರೆಯಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಡಿ.28ರಂದು ಕುರಿ ಮತ್ತು ದನದ ಸಂತೆ ಬಂದ್‌ ಮಾಡಿದ್ದು ಬಹಳ ಕುಟುಂಬಗಳಿಗೆ ತೊಂದರೆಯಾಗುತ್ತದೆ. ಕೆಲವು ಕುಟುಂಬಗಳು ವಾರಕ್ಕೊಮ್ಮೆ ಹೊಟೇಲ್‌ ಹಾಕಿ ಅಥವಾ ಜಾನುವಾರುಗಳ ಸಂತೆ ಮಾಡಿ ತಮ್ಮ ಜೀವನ ನಡೆಸುತ್ತಿದ್ದಾರೆ. ಸಣ್ಣಪುಟ್ಟ ಘಟನೆಗಳಿಗೆ ಸಂತೆ ಬಂದ್‌ ಮಾಡಿದ್ದು ಬಡ ಜನರಿಗೆ, ಬಡ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗುತ್ತದೆಸಯ್ಯದ ಬೇಪಾರಿ, ಕರವೇ ತಾಲೂಕು ಸಂಘಟನೆ ಕಾರ್ಯದಶಿ

ಸಾರ್ವಜನಿಕರ ರಕ್ಷಣೆ ನಮ್ಮ ಕೆಲಸ. ಡಿ.28ರಂದು ಒಂದು ದಿನ ಮಾತ್ರ ಜಾನುವಾರು ಸಂತೆ ಬಂದ್‌ ಮಾಡಲಾಗಿದೆ. ಕಳೆದ ಶನಿವಾರ ನಡೆದ ಘಟನೆಯಿಂದ ಸಮಸ್ಯೆಯಾಗಬಾರದು. ಜನರ ರಕ್ಷಣೆ ನಮ್ಮ ಕರ್ತವ್ಯ. ಆದ್ದರಿಂದ ಸಂತೆ ಬಂದ್‌ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಒಂದು ದಿನ ಸಂತೆ ಬಂದ್‌ ಮಾಡಲಾಗಿದೆ.  –ಡಾ| ಲಕ್ಷ್ಮಿಕಾಂತ ಬಾನಿಕೋಲ ಪಿಎಸೈ ಅಮೀನಗಡ

 

-ಎಚ್‌.ಎಚ್‌. ಬೇಪಾರಿ

ಟಾಪ್ ನ್ಯೂಸ್

Modi Interview

J&K; ಉಗ್ರರ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಶ್ರೇಣಿ ನಿಯೋಜಿಸಲು ಮೋದಿ ಕರೆ

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-msss

Congress ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

Mahalingapura ಶೀಘ್ರ ಶಾಲೆಯ ಬಿಸಿಯೂಟ ಕೊಠಡಿ, ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯ

Mahalingapura ಶೀಘ್ರ ಶಾಲೆಯ ಬಿಸಿಯೂಟ ಕೊಠಡಿ, ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯ

Rabkavi Banhatti ವೀಳ್ಯದೆಲೆ ಬೆಲೆ ಹೆಚ್ಚಳ; ರೈತರಲ್ಲಿ ಹರ್ಷ

Rabkavi Banhatti ವೀಳ್ಯದೆಲೆ ಬೆಲೆ ಹೆಚ್ಚಳ; ರೈತರಲ್ಲಿ ಹರ್ಷ

Road Mishap ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಇಬ್ಬರಿಗೆ ಗಾಯRoad Mishap ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಇಬ್ಬರಿಗೆ ಗಾಯ

Road Mishap ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಇಬ್ಬರಿಗೆ ಗಾಯ

Mudhol;ಕೋಟ್ಯಂತರ ಮೌಲ್ಯದ ನಕಲಿ ಗುಟ್ಕಾ‌ವಶ; 9 ಆರೋಪಿಯ ಬಂಧನ

Mudhol;ಕೋಟ್ಯಂತರ ಮೌಲ್ಯದ ನಕಲಿ ಗುಟ್ಕಾ‌ ವಶ; 9 ಆರೋಪಿಯ ಬಂಧನ

MUST WATCH

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

ಹೊಸ ಸೇರ್ಪಡೆ

1-msss

Congress ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

8

ವಿಷ ಸೇವನೆ : ಪದವಿ ವಿದ್ಯಾರ್ಥಿನಿಯ ಸಾವು 

Modi Interview

J&K; ಉಗ್ರರ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಶ್ರೇಣಿ ನಿಯೋಜಿಸಲು ಮೋದಿ ಕರೆ

Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು

Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು

6

Bantwal: ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.