ಬಿಟಿಡಿಎ ಆಡಳಿತ ಮಂಡಳಿಗೆ ಬೇಕಾಗಿದ್ದಾರೆ!


Team Udayavani, Jan 20, 2019, 10:15 AM IST

20-january-17.jpg

ಬಾಗಲಕೋಟೆ: ಸಂತ್ರಸ್ತರಿಗಾಗಿಯೇ ಹುಟ್ಟಿಕೊಂಡ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಆಡಳಿತ ಮಂಡಳಿ ಅಧ್ಯಕ್ಷರು-ಸದಸ್ಯರು ಬೇಕಾಗಿದ್ದಾರೆ!

ಹೌದು, ಇಂತಹವೊಂದು ಮಾತು ನಗರದಲ್ಲಿ ಕೇಳಿ ಬರುತ್ತಿದೆ. ಕಳೆದ ಏಳು ತಿಂಗಳಿಂದ ಪ್ರಾಧಿಕಾರದಲ್ಲಿ ಆಡಳಿತ ಮಂಡಳಿಯೇ ಇಲ್ಲ. ಹೀಗಾಗಿ ಸಂತ್ರಸ್ತರು ತಮ್ಮ ಏನೇ ಸಮಸ್ಯೆ ಹಿಡಿದುಕೊಂಡು, ಬಿಟಿಡಿಎ ಕಚೇರಿಗೆ ಹೋದರೂ, ಯಾವ ಅಧಿಕಾರಿ-ಸಿಬ್ಬಂದಿಯೂ ಕೈಗೆ ಸಿಗುತ್ತಿಲ್ಲ. ಡಿ ದರ್ಜೆ ಸಿಬ್ಬಂದಿ ಮಾತ್ರ ಕಚೇರಿಯಲ್ಲಿ ಕಂಡು ಬರುತ್ತಿದ್ದು, ಅವರನ್ನು ಕೇಳಿದರೆ, ಸಾಹೇಬ್ರು ಬಂದಿಲ್ರಿ ಎಂಬ ಮಾತು ದಿನವೂ ಕೇಳಬೇಕಾಗಿದೆ ಎಂಬುದು ಸಂತ್ರಸ್ತರ ಅಸಮಾಧಾನ.

ನನೆಗುದಿಗೆ ಬಿದ್ದ ಮಹತ್ವದ ಯೋಜನೆ: ಜಲಾಶಯವೊಂದರ ಹಿನ್ನೀರಿನಿಂದ ಇಡೀ ಏಷ್ಯಾದಲ್ಲಿಯೇ ಮುಳುಗಡೆಯಾದ ಜಿಲ್ಲಾ ಕೇಂದ್ರದಲ್ಲಿ ಬಾಗಲಕೋಟೆಗೆ 2ನೇ ಹೆಸರಿದೆ. ಚಂಡಿಗಡ ಹೊರತುಪಡಿಸಿದರೆ, ದೇಶದ ಯಾವ ನಗರವೂ ಹಿನ್ನೀರಿನಿಂದ ಮುಳುಗೊಂಡು, ತನ್ನ ಗತವೈಭವದಿಂದ ಹಿಡಿದು, ಸರ್ವಸ್ವವನ್ನೂ ಕಳೆದುಕೊಂಡಿಲ್ಲ. ಅದಕ್ಕಾಗಿ ಸರ್ವಸ್ವವನ್ನೂ ಕಳೆದುಕೊಂಡ ಸಂತ್ರಸ್ತರಿಗೆ ಯೋಗ್ಯ ಪರಿಹಾರ, ಪುನರ್‌ವಸತಿ ಕಲ್ಪಿಸುವ ಜತೆಗೆ ಅವರಿಗೆ ಬದುಕು ಪುನರ್‌ ನಿರ್ಮಾಣ ಮಾಡಿಕೊಡುವ ಮಹತ್ವದ ಜವಾಬ್ದಾರಿಯೊಂದಿಗೆ ಹುಟ್ಟಿಕೊಂಡಿದ್ದೇ ಈ ಬಿಟಿಡಿಎ. ಆದರೆ, ಸಂತ್ರಸ್ತರು ಯಾರೇ ಬಿಟಿಡಿಎಗೆ ಹೋದರೂ ಕೆಲಸಗಳಾಗುತ್ತಿಲ್ಲ. ಒಂದೊಂದು ಕೆಲಸಕ್ಕೆ ತಿಂಗಳುಗಟ್ಟಲೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೂ ಸುಮಾರು ಒಂದೂವರೆ ವರ್ಷದ ಬಳಿಕ ಆಡಳಿತ ಮಂಡಳಿ ನೇಮಕ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸಚಿವರು, ಶಾಸಕರನ್ನು ಏನೇ ಕೇಳಿದರೂ ಬಿಟಿಡಿಎ ಬೋರ್ಡ್‌ ಇಲ್ಲ (ಆಡಳಿತ ಮಂಡಳಿ). ಹೀಗಾಗಿ ಈಗ ಯಾವ ಕೆಲ್ಸಾನೂ ಆಗಂಗಿಲ್ಲ. ಬೋರ್ಡ್‌ ನೇಮಕ ಆಗ್ಲಿ, ಕೂಡಲೇ ನಿಮ್ಮ ಕೆಲ್ಸ ಮಾಡಿಕೊಡತೀವಿ ಎಂದು ಹೇಳುತ್ತಿದ್ದರು. ಈಗ ಅಂತಹದ್ದೇ ಪರಿಸ್ಥಿತಿ ಪುನರಾವರ್ತನೆಯಾಗಿದೆ. ಜತೆಗೆ ಸಂತ್ರಸ್ತರು, ತಮ್ಮ ಸಮಸ್ಯೆ ಹೇಳಿಕೊಂಡು ಯಾರ ಬಳಿ ಹೋಗಬೇಕು ಎಂಬ ಗೊಂದಲದಲ್ಲೂ ಇದ್ದಾರೆ ಎನ್ನಲಾಗುತ್ತಿದೆ.

ಯಾರಿಗೆ ಹೇಳ್ಳೋಣ ಸಮಸ್ಯೆ: ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರವಿದೆ. ಪಕ್ಕದ ಬಸವನಬಾಗೇವಾಡಿಯ ಶಿವಾನಂದ ಪಾಟೀಲರು, ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ. ಅವರು, ತಿಂಗಳಿಗೆ ಎರಡು ಬಾರಿ ಜಿಲ್ಲೆಗೆ ಬಂದು, ಒಂದೆರಡು ಗಂಟೆಯಲ್ಲಿ ತೆರಳುತ್ತಾರೆ. ಅವರು ಒಂದೇ ಒಂದು ದಿನವೂ ಜನ ಸಂಪರ್ಕಸಭೆ ಅಥವಾ ಅಹವಾಲು ಸ್ವೀಕಾರ ಸಭೆ ಮಾಡಿಲ್ಲ. ಇನ್ನು ಬಿಟಿಡಿಎ, ನಗರ ವ್ಯಾಪ್ತಿಯಲ್ಲಿದ್ದು, ಬಾಗಲಕೋಟೆ ಕ್ಷೇತ್ರಕ್ಕೆ ಬಿಜೆಪಿ ಶಾಸಕರಿದ್ದಾರೆ. ಜೆಡಿಎಸ್‌ನ ಮುಖಂಡರು, ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂಬಂತಿದ್ದಾರೆ. ಸ್ಥಳೀಯ ಶಾಸಕರ ಬಳಿ ಹೋದರೂ, ಕಾಂಗ್ರೆಸ್‌ನವರ ಪ್ರಭಾವದಿಂದ ಅವರು ಹೇಳುವ ಕೆಲಸ ಆಗುತ್ತವೆಯೋ ಇಲ್ಲೋ ಎಂಬ ಗೊಂದಲ. ಕಾಂಗ್ರೆಸ್‌ನವರ ಬಳಿ ಹೋದರೆ, ಬಿಟಿಡಿಎ ಬೋರ್ಡ್‌ ನೇಮಕ ಆಗ್ಲಿ ತಡೀರಿ ಎಂಬ ಕಾಲಹರಣ ಮಾಡುವ ಮಾತು. ಹೀಗಾಗಿ ಇವರೆಲ್ಲರ ಮಧ್ಯೆ ಸಂತ್ರಸ್ತರು ಗೋಳಿಡುವಂತಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಐದು ವರ್ಷ ಆದ್ರೂ ಮುಗಿದಿಲ್ಲ: ನವನಗರ ಯೂನಿಟ್-2 ನಿರ್ಮಾಣ, ಮೂಲ ಸೌಲಭ್ಯ ಕಲ್ಪಿಸುವ ಕಾಮಗಾರಿ ಆರಂಭಗೊಂಡು ಬರೋಬ್ಬರಿ ಐದು ವರ್ಷ ಕಳೆದು ಹೋಗಿವೆ. ಸುಮಾರು 552 ಕೋಟಿ ವೆಚ್ಚದ ಈ ಕಾಮಗಾರಿ, ಹುಬ್ಬಳ್ಳಿ ಮೂಲದ ಆರ್‌ಎನ್‌ಎಸ್‌ ಗುತ್ತಿಗೆ ಕಂಪನಿ (ಕೆಲ ಕಾಮಗಾರಿಗಳು) ಪಡೆದಿದ್ದು, 2013ರಲ್ಲಿ ಭೂಮಿಪೂಜೆಯಾಗಿ ಕಾಮಗಾರಿ ಆರಂಭಗೊಂಡರೂ, ಈ ವರೆಗೆ ಪೂರ್ಣವಾಗಿಲ್ಲ. ಹೀಗಾಗಿ 2ನೇ ಯೂನಿಟ್‌ನಲ್ಲಿ ನಿವೇಶನ ಪಡೆದವರು, ತಕ್ಷಣಕ್ಕೆ ಅಲ್ಲಿಗೆ ಸ್ಥಳಾಂತರಗೊಳ್ಳಲು ಆಗುತ್ತಿಲ್ಲ. ಕೆಲವೇ ಕೆಲವರು, ಸೌಲಭ್ಯಗಳಿಲ್ಲದಿದ್ದರೂ 2ನೇ ಯೂನಿಟ್‌ನಲ್ಲಿ ಮನೆ ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ವಿದ್ಯುತ್‌, ನೀರು ಪೂರೈಕೆಯಂತಹ ಯಾವ ಸೌಲಭ್ಯಗಳೂ ಇನ್ನೂ ಯೂನಿಟ್-2ಕ್ಕೆ ಕಲ್ಪಿಸಿಲ್ಲ.

3ನೇ ಯೂನಿಟ್ ಆರಂಭವಿಲ್ಲ: ಇನ್ನು 3ನೇ ಹಂತದಲ್ಲಿ ಮುಳುಗಡೆ ಆಗುವ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು 1632 ಎಕರೆ ಭೂಸ್ವಾಧೀನ ಮಾಡಿಕೊಂಡಿದ್ದು, ಕೆಲವು ಪ್ರಕರಣ ಇಂದಿಗೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿವೆ. ಇದರಲ್ಲಿ ಈಗಾಗಲೇ ಒಂದಷ್ಟು ಭೂಮಿ ವಶಪಡಿಸಿಕೊಂಡಿದ್ದು, ಇಲ್ಲಿ 3ನೇ ಯೂನಿಟ್ (ಬ್ಲಾಕ್‌ ಮಾದರಿ) ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ. 3ನೇ ಯೂನಿಟ್ ನಿರ್ಮಾಣಕ್ಕೆ 2014ರಿಂದ ನೀಲನಕ್ಷೆ, ಪೂರ್ವ ತಯಾರಿ, ಅನುದಾನ ಲಭ್ಯತೆ ಎಲ್ಲವೂ ನಡೆದರೂ, ಬಿಟಿಡಿಎ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಸಂತ್ರಸ್ತರು, ಶಾಶ್ವತ ಪುನರ್‌ವಸತಿಯಿಂದ ದೂರ ಉಳಿಯುವಂತಾಗಿದೆ ಎಂಬ ಮಾತು ಕೇಳಿ ಬಂದಿದೆ.

ನಾವು ಬಿಕಾರಿಗಳಲ್ಲ
523 ಮೀಟರ್‌ ವ್ಯಾಪ್ತಿಯ ಬಾಡಿಗೆದಾರರಿಗೆ ನಿವೇಶನ ಕೊಟ್ಟಿಲ್ಲ. ನಡುಗಡ್ಡೆ ಎಂದು ಘೋಷಣೆ ಮಾಡಿದರೂ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಮನೆ, ಜಾಗೆ ಕೊಟ್ಟು ತ್ಯಾಗ ಮಾಡಿದ ಸಂತ್ರಸ್ತರು ನಿತ್ಯವೂ ಬಿಟಿಡಿಎ ಕಚೇರಿಗೆ ಅಲೆದರೂ ಅಧಿಕಾರಿಗಳು ಗಮನಿಸುತ್ತಿಲ್ಲ. ಸಂತ್ರಸ್ತರನ್ನು, ಅಧಿಕಾರಿಗಳು ಬಿಕಾರಿಗಳಿಂತ ಕಡೆಯಾಗಿ ನೋಡುತ್ತಾರೆ. ಹೀಗಾಗಿ ಸಂತ್ರಸ್ತರ ಸಮಸ್ಯೆ ಚರ್ಚೆಗಾಗಿ ಜ.20ರಂದು, ಸಂಜೆ 5ಕ್ಕೆ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿದೆ. 
• ಎ.ಎ. ದಂಡಿಯಾ, 
ಉಪಾಧ್ಯಕ್ಷ, ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ

•ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

1-qewqeqweqw

CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ

1-assas-aa

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

ಬಿಜೆಪಿ ಶಾಸಕ ಯತ್ನಾಳ ಶುಗರ್‌ ಫ್ಯಾಕ್ಟ್ರಿ ಹೆಂಗ್‌ ಕಟ್ಟಿದ್ರು: ಶಿವಾನಂದ ಪಾಟೀಲ

ಬಿಜೆಪಿ ಶಾಸಕ ಯತ್ನಾಳ ಶುಗರ್‌ ಫ್ಯಾಕ್ಟ್ರಿ ಹೆಂಗ್‌ ಕಟ್ಟಿದ್ರು: ಶಿವಾನಂದ ಪಾಟೀಲ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ‌ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.