ವಿನಾಶಕಾಲೇ ವಿಪರೀತ ಬುದ್ಧಿ: ಯತ್ನಾಳ


Team Udayavani, May 13, 2019, 12:34 PM IST

bag-2

ಬನಹಟ್ಟಿ: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ ಸರ್ವಾಧಿಕಾರ ಧೋರಣೆ ತೋರುತ್ತಿರುವುದು ಇಂದು ನಿನ್ನೆಯದಲ್ಲ. ರಾಜ್ಯವನ್ನೇ ಕೊಳ್ಳೆ ಹೊಡೆದು ಅಕ್ರಮ ಆಸ್ತಿ ಮಾಡುವ ಮೂಲಕ ರಾಜ್ಯದಲ್ಲಿ ದುರಹಂಕಾರದಿಂದ ಮೆರೆಯುತ್ತಿದ್ದಾರೆ. ಸದ್ಯ ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ, ಶಾಸಕ ಬಸನಗೌಡ ಯತ್ನಾಳ ಡಿಕೆಶಿ ವಿರುದ್ಧ ಟಾಂಗ್‌ ಕೊಟ್ಟರು.

ಶನಿವಾರ ರಾತ್ರಿ ನಗರದಲ್ಲಿ ಸಿದ್ಧಸಿರಿ ಮಾರುಕಟ್ಟೆ ಉದ್ಘಾಟನೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೀಪ ಆರುವ ಮುನ್ನ ಎಣ್ಣೆಯಿಲ್ಲದೆ ಹೇಗೆ ದೊಡ್ಡದಾಗಿ ಉರಿಯುತ್ತದೆಯೋ. ಸದ್ಯದಲ್ಲಿಯೇ ಕಾಂಗ್ರೆಸ್‌ ಅಧೋಗತಿಯತ್ತ ಸಾಗಿ, ಅಧಿಕಾರ ಕಳೆದುಕೊಳ್ಳುವ ಎಲ್ಲ ಲಕ್ಷಣಗಳನ್ನೂ ಅರಿತಿರುವ ಡಿಕೆಶಿ ಹತಾಶೆ ಭಾವನೆಯಲ್ಲಿ ಏನೇಲ್ಲ ಹೇಳಿಕೆ ನೀಡುತ್ತಿದ್ದಾರೆಂದು ಯತ್ನಾಳ ಹೇಳಿದರು.

ಈ ಭೂಮಿಯಲ್ಲಿ ನಿಜಾಮ, ಸುಲ್ತಾನರೇ ಮಣ್ಣು ಮುಕ್ಕಿ ಹೋಗಿದ್ದಾರೆ. ಅಹ: ಭಾವನೆಯಿಂದ ನಡೆಯುತ್ತಿರುವ ಇಂಥವರಿಗೆ ಸದ್ಯವೇ ಕೊನೆಗಾಲವಿದೆ ಎಂದರು. ರಾಜ್ಯದಲ್ಲಿ ಮೈತ್ರಿ ಸರ್ಕಾರದಿಂದ ಬೃಹತ್‌ ಕಾಮಗಾರಿಗಳು ನಡೆಯುತ್ತಿಲ್ಲ. ಗುತ್ತಿಗೆದಾರರು ಕಮಿಶನ್‌ ಹಾವಳಿಯಿಂದ ಕೆಲಸವನ್ನೇ ಪಡೆಯುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗ ಸರ್ಕಾರ ನಡೆಸುತ್ತಿರುವ ಅಪವಿತ್ರ ಮೈತ್ರಿ ಸರ್ಕಾರ ಕಮಿಷನ್‌ ಎಂಬ ಭೂತದ ಸುಳಿಯಲ್ಲಿ ಗುತ್ತಿಗೆದಾರರ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆಂದು ಯತ್ನಾಳ ಆರೋಪಿಸಿದರು.

ಜನರ ಸೇವೆಗೆ ಮಾರುಕಟ್ಟೆ: ರಬಕವಿ-ಬನಹಟ್ಟಿ ತಾಲೂಕಿನ ಜನತೆಗೆ ಅಗ್ಗದ ದರದಲ್ಲಿ ಗುಣಮಟ್ಟದ ವಸ್ತುಗಳು ದೊರಕುವ ಮೂಲಕ ಹಾಗು ಕಲಬೆರಕೆ ರಹಿತವಾಗಿ ಸಾವಯವ ವಸ್ತುಗಳ ಬಳಕೆಯಿಂದ ದೀರ್ಘಾಯುಷ್ಯದ ದೃಷ್ಟಿಯಿಂದ ಮಾರುಕಟ್ಟೆಯನ್ನು ನಿರ್ಮಿಸಲು ಸನ್ನದ್ದರಾಗಿದ್ದೇವೆ ಎಂದು ಯತ್ನಾಳ ಹೇಳಿದರು.

ಶಾಸಕ ಸಿದ್ದು ಸವದಿ ಸಿದ್ಧಸಿರಿ ಮಾರುಕಟ್ಟೆಯನ್ನು ಉದ್ಘಾಟಿಸಿದರು. ಹಿರೇಮಠದ ಶರಣಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಬಾಣಕಾರ, ನಿರಾಣಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ, ಬಸವರಾಜ ದಲಾಲ, ಭೀಮಶಿ ಮಗದುಮ್‌, ಶೇಖರ ಕೊಟ್ರಶೆಟ್ಟಿ, ರಾಜು ಅಂಬಲಿ, ಶಿವಾನಂದ ಗಾಯಕವಾಡ, ಸುರೇಶ ಅಕ್ಕಿವಾಟ ಸೇರಿದಂತೆ ಅನೇಕರಿದ್ದರು.

ಟಾಪ್ ನ್ಯೂಸ್

Supreme Court

NEET ಪರೀಕ್ಷೆ ವಿವಾದ: ಕೇಂದ್ರ ಸರಕಾರ‌, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

1-ct

T20 WC; ಕೆನಡಾ ಎದುರಾಳಿ, ಮಳೆ ಭೀತಿ: ಭಾರತಕ್ಕೆ ಪ್ರಾಯೋಗಿಕ ಪಂದ್ಯ

putin (2)

Ukraine ನ್ಯಾಟೊ ಜತೆ ಸೇರದಿದ್ದರೆ ಕದನ ವಿರಾಮ ಘೋಷಣೆ: ಪುತಿನ್‌

1-sddas-dsad

Andhra Pradesh ಪವನ್‌ ಕಲ್ಯಾಣ್‌ ಡಿಸಿಎಂ: ಅಧಿಕೃತ ಘೋಷಣೆ

Mangaluru University ; ಇಂದು ವಾರ್ಷಿಕ ಘಟಿಕೋತ್ಸವ

Mangaluru University ; ಇಂದು ವಾರ್ಷಿಕ ಘಟಿಕೋತ್ಸವ

1—ddsadsadasd

Nagastra-1 ಶತ್ರುವಿನ ಮನೆಯೊಳಗೇ ನುಗ್ಗಿ ದಾಳಿ ಮಾಡಬಲ್ಲ ಡ್ರೋನ್‌ ಸೇನೆ ಸೇರ್ಪಡೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aasasas

Rabkavi Banhatti; ಕೃಷ್ಣಾ ನದಿಯಲ್ಲಿ ಮುಳುಗಿ ಮೀನುಗಾರ ಸಾವು

1-msss

Congress ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

Mahalingapura ಶೀಘ್ರ ಶಾಲೆಯ ಬಿಸಿಯೂಟ ಕೊಠಡಿ, ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯ

Mahalingapura ಶೀಘ್ರ ಶಾಲೆಯ ಬಿಸಿಯೂಟ ಕೊಠಡಿ, ಕಾಂಪೌಂಡ್ ನಿರ್ಮಾಣಕ್ಕೆ ಒತ್ತಾಯ

Rabkavi Banhatti ವೀಳ್ಯದೆಲೆ ಬೆಲೆ ಹೆಚ್ಚಳ; ರೈತರಲ್ಲಿ ಹರ್ಷ

Rabkavi Banhatti ವೀಳ್ಯದೆಲೆ ಬೆಲೆ ಹೆಚ್ಚಳ; ರೈತರಲ್ಲಿ ಹರ್ಷ

Road Mishap ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಇಬ್ಬರಿಗೆ ಗಾಯRoad Mishap ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಇಬ್ಬರಿಗೆ ಗಾಯ

Road Mishap ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿ; ಇಬ್ಬರಿಗೆ ಗಾಯ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

Supreme Court

NEET ಪರೀಕ್ಷೆ ವಿವಾದ: ಕೇಂದ್ರ ಸರಕಾರ‌, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

1-ct

T20 WC; ಕೆನಡಾ ಎದುರಾಳಿ, ಮಳೆ ಭೀತಿ: ಭಾರತಕ್ಕೆ ಪ್ರಾಯೋಗಿಕ ಪಂದ್ಯ

putin (2)

Ukraine ನ್ಯಾಟೊ ಜತೆ ಸೇರದಿದ್ದರೆ ಕದನ ವಿರಾಮ ಘೋಷಣೆ: ಪುತಿನ್‌

1-sddas-dsad

Andhra Pradesh ಪವನ್‌ ಕಲ್ಯಾಣ್‌ ಡಿಸಿಎಂ: ಅಧಿಕೃತ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.