ಅಜವಾನಕ್ಕಿಲ್ಲ ಮಾರುಕಟ್ಟೆ: ರೈತ ಕಂಗಾಲು

ಔಷಧಿ ಗುಣವುಳ್ಳ ಬೆಳೆಗೆ ರಾಜ್ಯದಲ್ಲಿಲ್ಲ ಮಾರಾಟ ಕೇಂದ್ರ,ಪ್ರತಿ ಕ್ವಿಂಟಲ್‌ಗೆ 20-25 ಸಾವಿರ ರೂ. ಬೆಲೆ

Team Udayavani, Feb 17, 2021, 5:54 PM IST

ಅಜವಾನಕ್ಕಿಲ್ಲ ಮಾರುಕಟ್ಟೆ: ರೈತ ಕಂಗಾಲು

ಹುನಗುಂದ: ಔಷಧಿ ಗುಣವುಳ್ಳ ಕಡಿಮೆ ಖರ್ಚಿನಲ್ಲಿ ರೈತರಿಗೆ ಹೆಚ್ಚಿನ ಆದಾಯ ತರುವ ಬೆಳೆ ಅಜವಾನ್‌. ಆದರೆ, ತಾಲೂಕಿನ ನೂರಾರು ಎಕರೆಯಲ್ಲಿ ಬೆಳೆದ ಅಜವಾನ್‌ ಮಾರಾಟಕ್ಕೆ ಸೂಕ್ತ ಸ್ಥಳೀಯ ಮಾರುಕಟ್ಟೆಯ ಸೌಲಭ್ಯವಿಲ್ಲದೇ ರೈತರು ಕಂಗಾಲಾಗಿದ್ದಾರೆ.

ತಾಲೂಕಿನಲ್ಲಿ ಆಂದಾಜು 20-30 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುವ ಅಜವಾನ್‌ಗೆರಾಜ್ಯದಲ್ಲಿ ಸೂಕ್ತ ಮಾರುಕಟ್ಟೆಗಳೇ ಇಲ್ಲ. ಇಲ್ಲಿಯ ಬೆಳೆಗಾರರು ಹೊರರಾಜ್ಯದ ಮಾರುಕಟ್ಟೆಯನ್ನು ಅವಲಂಬಿಸುವಂತಾಗಿದೆ.

ಧನ್ನೂರ ಗ್ರಾಮ ರೈತ ವಿಜಯಕುಮಾರ ಕೂಡ್ಲಪ್ಪ ಹುದ್ದಾರ ಎಂಬುವರು ಕಳೆದ ನಾಲ್ಕು ವರ್ಷಗಳಿಂದ ಅಜಿವಾನ್‌ ಬೆಳೆ ಬೆಳೆಯುತ್ತಿದ್ದು, ಪ್ರತಿ ವರ್ಷ 10ರಿಂದ 12 ಎಕರೆ ಜಮೀನನಲ್ಲಿ ಸುಮಾರು 15 ರಿಂದ 20 ಕ್ವಿಂಟಲ್‌ ಅಜವಾನ್‌ ಬೆಳೆಯುತ್ತಿದ್ದಾರೆ.

ಉತ್ಕೃಷ್ಟ ಇಳುವರಿ ಬರುತ್ತಿದ್ದರೂ ಸ್ಥಳೀಯ ಮಾರುಕಟ್ಟೆಯ ಸಮಸ್ಯೆ ಇರುವುದರಿಂದ ಹೊರರಾಜ್ಯ ಆಂಧ್ರಪ್ರದೇಶದ ಕರ್ನೂಲ್‌ ಮಾರುಕಟ್ಟೆಗೆತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆಸೃಷ್ಟಿಯಾಗಿದೆ. ಇದರಿಂದ ಬೆಳೆದ ಬೆಳೆಯಅರ್ಧದಷ್ಟು ಹಣ ಟ್ರಾನ್ಸ್‌ಪೊàರ್ಟ್‌ಗೆ ಖರ್ಚಾಗಲಿದೆ ಎನ್ನುತ್ತಾರೆ ರೈತರು.

ಅಜವಾನ್‌ ಮುಂಗಾರು ಬೆಳೆ: ಸಾಂಬರ್‌ ಪದಾರ್ಥ ಬೆಳೆಯಾದ ಅಜವಾನ್‌ ಬೆಳೆಯನ್ನು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾಗುತ್ತದೆ. ಬಿತ್ತನೆಯ ಸಂದರ್ಭದಲ್ಲಿ ಉತ್ತಮ ಮಳೆ ಅವಶ್ಯಕತೆಯಿದೆ.ಬಿತ್ತನೆ ಬಳಿಕ ಮಳೆಯಾಗದಿದ್ದರೂ ಉತ್ತಮ ಇಳುವರಿ ಬರುತ್ತದೆ. ಚಳಿಗಾಲದಲ್ಲಿ ಬೆಳೆ ಕಟಾವಿಗೆಬರುತ್ತದೆ. ಪ್ರತಿ ಎಕರೆಗೆ 3ರಿಂದ 3.5 ಕ್ವಿಂಟಲ್‌ ಇಳುವರಿ ಸಿಗಲಿದೆ. ನಾಲ್ಕು ವರ್ಷದಿಂದ 10 ಎಕರೆ ಜಮೀನನಲ್ಲಿ 20 ಕ್ವಿಂಟಲ್‌ ಅಜವಾನ್‌ ಬೆಳೆದಿದ್ದೇವೆ. 2.50ರಿಂದ 3 ಲಕ್ಷ ಆದಾಯ ಪಡೆದುಕೊಂಡಿದ್ದೇನೆ. ಉಳಿದ ಬೆಳೆಯಲ್ಲಿ ನಷ್ಟ ಅನುಭವಿಸಿದರೂ ಕೂಡಾ ಅಜವಾನ್‌ ಬೆಳೆ ಪ್ರತಿ ವರ್ಷ ಕೈ ಹಿಡಿಯುತ್ತಿದೆ. ಆದರೆ, ಈ ವರ್ಷ 12 ಎಕರೆ ಜಮೀನನಲ್ಲಿ ಬಿತ್ತನೆ ಮಾಡಿದ್ದೆ. ಆದರೆ, ಅತೀಯಾದ ಮಳೆಯಿಂದ ಸ್ವಲ್ಪ ಪ್ರಮಾಣದ ಇಳುವರಿ ಕಡಿಮೆಯಾಗಿದ್ದರೂ ಸಹ 15ರಿಂದ 16 ಕ್ವಿಂಟಲ್‌ ಅಜಿವಾನ್‌ ಇಳುವರಿ ಬಂದಿದೆ ಎನ್ನುತ್ತಾರೆ ರೈತರು.

ಅಜವಾನ್‌ಗೆ ಉತ್ತಮ ಬೆಲೆ: ಅಜವಾನ್‌ನನ್ನು ಔಷಧಿಯ ವಸ್ತು ತಯಾರಿಕೆಯಲ್ಲಿ ಬಳಕೆ ಮಾಡುತ್ತಿರುವುದರಿಂದ ಅಜವಾನ್‌ ಬೆಲೆ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ 20ರಿಂದ 25ಸಾವಿರ ರೂ.ಗೆ ಮಾರಾಟವಾಗಲಿದೆ.

ಮಾರುಕಟ್ಟೆಯ ಸಮಸ್ಯೆ: ಅಜವಾನ್‌ ಬೆಳೆಯನ್ನು ತಾಲೂಕಿನಲ್ಲಿಯೇ ಮೊದಲಿಗೆ ಧನ್ನೂರ ಗ್ರಾಮದ ರೈತ ವಿಜಯಕುಮಾರ ಹುದ್ದಾರ ಬೆಳೆದಿದ್ದು ವಿಶೇಷ. ಅವರು ಅಜವಾನ್‌ನನ್ನು ಹೆಚ್ಚಿನ ಇಳುವರಿಯಲ್ಲಿ ಬೆಳೆದಿರುವುದನ್ನು ಕಂಡು ತಾಲೂಕಿನ ಹಿರೇಬಾದವಾಡಗಿ,ಬೇವಿನಮಟ್ಟಿ, ಚಿಕ್ಕಬಾದವಾಡಗಿ, ಚಿತ್ತವಾಡಗಿ ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ನೂರಾರು ಎಕರೆಯಲ್ಲಿ ಬೆಳೆಯುತ್ತಾರೆ. ಆದರೆ, ರಾಜ್ಯದಲ್ಲಿಯೇ ಮಾರುಕಟ್ಟೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ. ಅಜವಾನ್‌ ಮಾರುಕಟ್ಟೆ ಸ್ಥಾಪಿಸುವಂತೆ ರೈತರ ಒತ್ತಾಯವಾಗಿದೆ.

ಅಜವಾನ್‌ ಬೆಳೆ ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಪಡೆಯುವ ಬೆಳೆ. ಕರ್ನಾಟಕದ ಹುಬ್ಬಳ್ಳಿ ಮತ್ತು ಬೆಂಗಳೂರನಲ್ಲೂ ಅಜವಾನ್‌ ಮಾರುಕಟ್ಟೆಯಿಲ್ಲ. ಆಂಧ್ರದ ಕರ್ನೂಲ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. -ವಿಜಯಕುಮಾರ ಕೆ ಹುದ್ದಾರ್‌, ಧನ್ನೂರದ ಅಜವಾನ್‌ ಬೆಳೆಗಾರ

ಅಜವಾನ್‌ ಬೆಳೆಗೆ ಬೆಳಗಾವಿ ವಿಭಾಗದಲ್ಲೂ ಮಾರುಕಟ್ಟೆಯ ವ್ಯವಸ್ಥೆಯಿಲ್ಲ. ಈಕುರಿತು ಸರ್ಕಾರದ ಗಮನಕ್ಕೆ ತರಬೇಕು. ಈ ಕುರಿತು ಕೃಷಿ ಮಾರಾಟ ಮಂಡಳಿಯೊಂದಿಗೆ ಮಾತನಾಡುತ್ತೇನೆ. -ನಜೀರ ಅಹ್ಮದ್‌ ಲಕ್ಕುಂಡಿ, ಜಿಲ್ಲಾ ವ್ಯವಸ್ಥಾಪಕರು ಎಪಿಎಂಸಿ ಬಾಗಲಕೋಟೆ.

 

-ಮಲ್ಲಿಕಾರ್ಜುನ ಎಂ ಬಂಡರಗಲ್ಲ

ಟಾಪ್ ನ್ಯೂಸ್

Dingaleshwara

Election; ಧರ್ಮ ಯುದ್ಧಕ್ಕೆ ಎಲ್ಲಸಮಾಜದವರ ಬೆಂಬಲ ಸಿಕ್ಕಿದೆ: ದಿಂಗಾಲೇಶ್ವರ ಸ್ವಾಮೀಜಿ

shivananda

Vijayapura; ಯತ್ನಾಳಗೆ ತಾಕತ್ತಿದ್ದರೆ ಈಗಲೇ ಸ್ಪರ್ಧೆಗೆ ಬರಲಿ: ಸಚಿವ ಶಿವಾನಂದ ಪಾಟೀಲ

1-aa

Udupi Chikmagalur; ಬಣಕಲ್‌-ಬಾಳೂರಿನಲ್ಲಿ ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ

MB Patil 2

Electoral bonds; ಮೋದಿ ಭ್ರಷ್ಟಾಚಾರದ ಮತ್ತೊಂದು ಮುಖ ಬಯಲು:ಎಂ.ಬಿ.ಪಾಟೀಲ್

RCB; Will Glenn Maxwell play against Hyderabad? Here is the update

RCB; ಹೈದರಾಬಾದ್ ವಿರುದ್ದ ಆಡುತ್ತಾರಾ ಗ್ಲೆನ್ ಮ್ಯಾಕ್ಸ್ ವೆಲ್? ಇಲ್ಲಿದೆ ಅಪ್ಡೇಟ್

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

Nirmala Travels: ನಿರ್ಮಲಾ ಟ್ರಾವೆಲ್ಸ್ ನ ಸಂಸ್ಥಾಪಕಿ ನಿರ್ಮಲಾ ಕಾಮತ್ ಇನ್ನಿಲ್ಲ

Nirmala Travels: ನಿರ್ಮಲಾ ಟ್ರಾವೆಲ್ಸ್ ನ ಸಂಸ್ಥಾಪಕಿ ನಿರ್ಮಲಾ ಕಾಮತ್ ಇನ್ನಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

ತಾಕತ್ತಿದ್ದರೆ ಯತ್ನಾಳ್‌ ನನ್ನ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿ: ಪಾಟೀಲ್‌

ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು

Bagalkote; ಯತ್ನಾಳ್ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ…: ಶಿವಾನಂದ ಪಾಟೀಲ್ ಸವಾಲು

1-kash-1

Congress ಪ್ರಭಾವಿ ಶಾಸಕ‌ ಕಾಶಪ್ಪನವರ ಸಂಕಷ್ಟ ಪರಿಹಾರಕ್ಕೆ ಅಯ್ಯಪ್ಪನ ಮೊರೆ !

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Dingaleshwara

Election; ಧರ್ಮ ಯುದ್ಧಕ್ಕೆ ಎಲ್ಲಸಮಾಜದವರ ಬೆಂಬಲ ಸಿಕ್ಕಿದೆ: ದಿಂಗಾಲೇಶ್ವರ ಸ್ವಾಮೀಜಿ

shivananda

Vijayapura; ಯತ್ನಾಳಗೆ ತಾಕತ್ತಿದ್ದರೆ ಈಗಲೇ ಸ್ಪರ್ಧೆಗೆ ಬರಲಿ: ಸಚಿವ ಶಿವಾನಂದ ಪಾಟೀಲ

1-aa

Udupi Chikmagalur; ಬಣಕಲ್‌-ಬಾಳೂರಿನಲ್ಲಿ ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

ಹಾವೇರಿ- ಸತ್ಯದ ಸತ್ಪಥದಿಂದ ಜೀವನ ಪರಿವರ್ತನೆ: ರಂಭಾಪುರಿ ಶ್ರೀ

MB Patil 2

Electoral bonds; ಮೋದಿ ಭ್ರಷ್ಟಾಚಾರದ ಮತ್ತೊಂದು ಮುಖ ಬಯಲು:ಎಂ.ಬಿ.ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.