ಮೊದಲ ಹಂತದಲ್ಲಿ 500 ಎಲೆಕ್ಟ್ರಿಕ್‌ ಬಸ್‌


Team Udayavani, Jul 9, 2018, 12:12 PM IST

modala-hanta.jpg

ಬೆಂಗಳೂರು: ಗುತ್ತಿಗೆ ಆಧಾರದಲ್ಲಿ 1,500 ಬಸ್‌ಗಳನ್ನು ಪಡೆದು ಸಾರಿಗೆ ಸೇವೆ ಕಲ್ಪಿಸಲು ಉದ್ದೇಶಿಸಿದ್ದ ಬಿಎಂಟಿಸಿ, ಆ ಪೈಕಿ ಮೊದಲ ಹಂತದಲ್ಲಿ 500 ಎಲೆಕ್ಟ್ರಿಕ್‌ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದೆ.

ಒಟ್ಟಾರೆ ಮೂರು ಸಾವಿರ ಬಸ್‌ಗಳ ಪೈಕಿ 1,500 ಬಸ್‌ಗಳನ್ನು ಗುತ್ತಿಗೆ ಪಡೆದು ಸೇವೆ ಕಲ್ಪಿಸುವುದಾಗಿ 2017ರ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು. ಅದರಲ್ಲಿ ಈಗ 500 ಎಲೆಕ್ಟ್ರಿಕ್‌ ಬಸ್‌ಗಳನ್ನು ರಸ್ತೆಗಿಳಿಸಲಿದೆ. ಈ ಸಂಬಂಧ ಸಂಸ್ಥೆಯ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಕೂಡ ಆರಂಭಗೊಳ್ಳಲಿದೆ.

ಡೀಸೆಲ್‌ ಬಸ್‌ಗಳಿಗಿಂತ ಕಡಿಮೆ ದರದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ನೀಡಲು ಕಂಪನಿಗಳು ಮುಂದೆಬಂದಿವೆ. ಈಗಿರುವ ಡೀಸೆಲ್‌ ಆಧಾರಿತ ನಾನ್‌ ಎಸಿ ಬಸ್‌ಗಳಿಗೆ ಪ್ರತಿ ಕಿ.ಮೀ ಕಾರ್ಯಾಚರಣೆಗೆ 52 ರೂ. ತಗಲುತ್ತದೆ. ಆದರೆ, ಎಲೆಕ್ಟ್ರಿಕ್‌ ಬಸ್‌ಗಳನ್ನು ಪ್ರತಿ ಕಿ.ಮೀ.ಗೆ ಕೇವಲ 24.03 ರೂ. ವೆಚ್ಚದಲ್ಲಿ ಓಡಿಸಲು ಹೈದರಾಬಾದ್‌ ಮೂಲದ ಗೋಲ್ಡ್‌ಸ್ಟೋನ್‌ ಕಂಪನಿ ಮುಂದೆಬಂದಿದೆ.

ಇದರೊಂದಿಗೆ 6 ರೂ. ಇಂಧನ ಮತ್ತು 8 ರೂ. ನಿರ್ವಾಹಕ/ ಚಾಲಕನ ವೆಚ್ಚ ಸೇರಿ 40 ರೂ. ಆಗುತ್ತದೆ. ಅಂದರೆ, ನೇರವಾಗಿ ಪ್ರತಿ ಕಿ.ಮೀ.ಗೆ 12 ರೂ. ಉಳಿತಾಯ ಆಗಲಿದೆ. ಈ ಹಿನ್ನೆಲೆಯಲ್ಲಿ 12 ಮೀ. ಉದ್ದದ 500 ನಾನ್‌ ಎಸಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಗುತ್ತಿಗೆ ಪಡೆಯಲು ಉದ್ದೇಶಿಸಿದೆ. 

ಬಿಎಂಟಿಸಿ ಬಸ್‌ಗಳು ಸಾಮಾನ್ಯವಾಗಿ ದಿನಕ್ಕೆ 200 ಕಿ.ಮೀ. ಸಂಚರಿಸುತ್ತವೆ. ಒಂದು ವೇಳೆ ಬಸ್‌ಗಳ ಖರೀದಿಗೆ ಕಂಪನಿಗಳಿಗೆ ಸರ್ಕಾರದ ಸಬ್ಸಿಡಿ ಸಿಗದಿದ್ದರೂ, ಎಲ್ಲ ವೆಚ್ಚವನ್ನು ಕಡಿತಗೊಳಿಸಿ ಕಿ.ಮೀ.ಗೆ ಕನಿಷ್ಠ 5 ರೂ. ಉಳಿತಾಯ ಆಗಲಿದೆ.

500 ಬಸ್‌ಗೆ ಲೆಕ್ಕಹಾಕಿದರೂ ನಿತ್ಯ ಈ 500 ಎಲೆಕ್ಟ್ರಿಕ್‌ ಬಸ್‌ಗಳಿಂದ ಕನಿಷ್ಠ 5 ಲಕ್ಷ ರೂ. ಉಳಿತಾಯ ಆಗಲಿದೆ. ಅಲ್ಲದೆ, ಡೀಸೆಲ್‌ ಆಧಾರಿತ ಬಸ್‌ಗಳು ಅಪ್ರಸ್ತುವಾಗಲಿದ್ದು, “ಪರಿಸರ ಸ್ನೇಹಿ’ ಬಸ್‌ಗಳಿಗೆ ಮಾತ್ರ ಭವಿಷ್ಯವಿದೆ. ಈ ಎಲ್ಲ ದೃಷ್ಟಿಯಿಂದ ನಿಗಮವು ಎಲೆಕ್ಟ್ರಿಕ್‌ ಬಸ್‌ಗಳತ್ತ ಮುಖಮಾಡಿದೆ ಎಂದು ಹೆಸರು ಹೇಳಲಿಚ್ಛಿಸದ ಉನ್ನತ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಇನ್ನಷ್ಟು ಕಡಿಮೆ ದರದ ನಿರೀಕ್ಷೆ: ಅಷ್ಟೇ ಅಲ್ಲ, ನೂರಾರು ಬಸ್‌ಗಳಿಗೆ ಟೆಂಡರ್‌ ಕರೆದಾಗ ಈ ದರ ಇನ್ನೂ ಕಡಿಮೆ ಆಗುವ ಸಾಧ್ಯತೆ ಇದೆ. ಹೀಗೆ ಟೆಂಡರ್‌ ಕರೆಯುವಾಗ ಎಸಿ, ನಾನ್‌ ಎಸಿ 9 ಮತ್ತು 12 ಮೀ. ಉದ್ದ ಸೇರಿ ನಾಲ್ಕೂ ಮಾದರಿಯ ಬಸ್‌ಗಳಿಗೆ ಟೆಂಡರ್‌ ಆಹ್ವಾನಿಸಲಾಗುವುದು. ಆಗ ಯಾವುದು ಕಡಿಮೆ ದರದಲ್ಲಿ ದೊರೆಯುವುದೋ ಅದಕ್ಕೆ ಟೆಂಡರ್‌ ನೀಡಲಾಗುವುದು ಎಂದು  ಅಧಿಕಾರಿ ತಿಳಿಸಿದರು.

ಟಾಪ್ ನ್ಯೂಸ್

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

Charmady Ghat: ಎರಡನೇ ದಿನವೂ ಕಾಡಾನೆ ಪ್ರತ್ಯಕ್ಷ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

Boliyar case ಹೊರಗಿನವರು ಯಾರು: ಬಿಜೆಪಿ ಪ್ರಶ್ನೆ

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ: ಗಣೇಶ್‌ ರಾವ್‌

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ

Boliyar Incident:ಬಿಜೆಪಿಯಿಂದ ಶಾಂತಿ ಕದಡುವ ಕೆಲಸ: ಮಂಜುನಾಥ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Bengaluru: ರೌಡಿಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

9-

Bengaluru:ಕಳ್ಳತನ ಮಾಡಿದ್ದಕ್ಕೆ ಗಾರ್ಡ್‌ಗಳಿಂದ ಕೈಕಾಲು ಕಟ್ಟಿ ಹಲ್ಲೆ: ಓರ್ವ ವ್ಯಕ್ತಿ ಸಾವು

7-

Bengaluru: ತನ್ನ ಮಗುವನ್ನೇ ಕತ್ತು ಹಿಸುಕಿ ಕೊಂದ ಸಾಫ್ಟ್ವೇರ್‌ ಉದ್ಯೋಗಿ ತಾಯಿ ಸೆರೆ

24

Namma clinic: ಸಾರ್ವಜನಿಕ ಸ್ಥಳದಲ್ಲಿ ಹೊಸದಾಗಿ 254 ನಮ್ಮ ಕ್ಲಿನಿಕ್‌ ಪ್ರಾರಂಭ; ದಿನೇಶ್‌

7-bng

ಬೈಕ್‌ ಕದಿಯುತ್ತಿದ್ದ Food ಡೆಲಿವರಿ ಬಾಯ್‌ ಸೆರೆ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

bjpBSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

BSY ವಿರುದ್ಧ ಸರಕಾರ ಷಡ್ಯಂತ್ರ: ಬಿಜೆಪಿ ಆರೋಪ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

ದ್ವೇಷ ರಾಜಕಾರಣ ಇಲ್ಲ: ಸಿಎಂ, ಕಾಂಗ್ರೆಸ್‌ ಸ್ಪಷ್ಟನೆ

pinarayi

ಅಗ್ನಿ ದುರಂತ; ಕುವೈಟ್‌ಗೆ ತೆರಳಲು ಸಚಿವೆಗೆ ಕೇಂದ್ರ ಅಡ್ಡಿ: ಕೇರಳ ಸಿಎಂ

1-rt

ಗಲಾಟೆ ವಿವಾದ: ವ್ಯಕ್ತಿ ವಿರುದ್ಧ ಕೇಸು ದಾಖಲಿಸಿದ ರವೀನಾ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Dakshina Kannada ರಾತ್ರಿ ವಾಹನ ತಪಾಸಣೆ ಬಿಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.