ಕರೆಯೊಂದು ಸಾಕು; ಆರೋಗ್ಯ ಸೇವೆ ಉಚಿತ


Team Udayavani, Jul 9, 2018, 6:00 AM IST

health.jpg

ಕೋಲಾರ: ಆರೋಗ್ಯ ಸಮಸ್ಯೆಯೇ? ಹಾಗಾದರೆ 1800 425 4325 ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ, ಅಗತ್ಯ ಚಿಕಿತ್ಸೆ ಪಡೆದುಕೊಳ್ಳಿ!

ಹೌದು. ಇಂಥದ್ದೊಂದು ವಿನೂತನ ಆರೋಗ್ಯ ಸೇವೆ ಈಗ ಕೋಲಾರ ಜಿಲ್ಲೆಯಲ್ಲಿ ಲಭ್ಯ. ಎಲ್ಲಾ ರೀತಿಯ ಆರೋಗ್ಯ ಸೇವೆಗಳಿಗೂ ಒಂದೇ ಟೋಲ್‌ ಫ್ರೀ ನಂಬರ್‌ನ ಅಡಿಯಲ್ಲಿ ನೀಡುವ ಈ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಕೋಲಾರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಕರೆಯ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ವೈದ್ಯರೊಂದಿಗೆ ಸಮಾಲೋಚನೆ, ಆಸ್ಪತ್ರೆಗಳಲ್ಲಿರುವ ಸೌಲಭ್ಯಗಳೇನು, ಔಷಧಿಗಳ ಲಭ್ಯತೆ, ಪ್ರಯೋಗಾಲಯ ಸೇವೆ ಇತ್ಯಾದಿ ಮಾಹಿತಿಗಳನ್ನು ಉಚಿತವಾಗಿಯೇ ಪಡೆದುಕೊಳ್ಳುವ ಅವಕಾಶ ಈ ಮೂಲಕ ಒದಗಿಸಲಾಗಿದೆ.

ಟಾಟಾ ಟ್ರಸ್ಟ್‌ಯೋಜನೆ:
ಟಾಟಾ ಟ್ರಸ್ಟ್‌ ಇಂಥದ್ದೊಂದು ಹೊಸ ಯೋಜನೆಗೆ ಚಾಲನೆ ನೀಡಿದೆ. ಸಮುದಾಯ ಸೇವೆಗಳ ನಿಧಿಯಿಂದ ಎಲ್ಲಾ ನಾಗರೀಕರು ಕುಳಿತಲ್ಲೇ ಮಾಹಿತಿ ಪಡೆದುಕೊಳ್ಳುವಂತೆ ಯೋಜನೆ ರೂಪಿಸಿದೆ. ಆರು ತಿಂಗಳ ಬಳಿಕ ಸಾಧಕ-ಬಾಧಕಗಳ ಬಗ್ಗೆ ಪರಿಶೀಲಿಸಿ ಅಧಿಕೃತವಾಗಿ ಜಾರಿಗೆ ತರಲಿದೆ. ಟಾಟಾ ಟ್ರಸ್ಟ್‌ ಈಗಾಗಲೇ ತಿರುವಂತನಪುರದಲ್ಲಿ ಕ್ಯಾನ್ಸರ್‌ ರೋಗಿಗಳಿಗೆ ಹಾಗೂ ನವದೆಹಲಿಯ ಏಮ್ಸ್‌ ಆಸ್ಪತ್ರೆಗೆ ಸೀಮಿತವಾಗಿ ಟೋಲ್‌ ಫ್ರೀ ಕರೆಯ ಮೂಲಕ ಚಿಕಿತ್ಸೆ ಒದಗಿಸುವ ಸೇವೆಯನ್ನು ಡಿಜಿಟಲ್‌ ನರ್ವ್‌ ಸೆಂಟರ್‌ (ಡಿಐಎನ್‌ಸಿ) ಹೆಸರಿನಲ್ಲೇ ಆರಂಭಿಸಿದೆ.

ಇದೀಗ ಕೋಲಾರ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆಯವರೆಗೂ ಎಲ್ಲಾ ಆಸ್ಪತ್ರೆಗಳು ಒಳಪಡುವಂತೆ, ಎಲ್ಲಾ ನಾಗರಿಕರಿಗೂ ಸಿಗುವಂತೆ ಮಾಡಲಾಗಿದೆ. ಕೋಲಾರ ಜಿಲ್ಲಾಸ್ಪತ್ರೆಯೂ ಸೇರಿದಂತೆ  ತಾಲೂಕು, ಸಮುದಾಯಿಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ 82 ಆಸ್ಪತ್ರೆಗಳನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಜತೆಗೆ ಜಿಲ್ಲೆಯ ತಜ್ಞ ವೈದ್ಯರು ತಮ್ಮ ನಿತ್ಯ ಸೇವಾವಧಿಯ ಒಂದು ಗಂಟೆಯನ್ನು ಕರೆ ಸ್ವೀಕರಿಸಿ ರೋಗಿಗಳ ಜತೆ ಸಂವಾದ ನಡೆಸಲು ಮೀಸಲಿಡುತ್ತಿದ್ದಾರೆ.

ಆಶಾ ಕಾರ್ಯಕರ್ತರಿಂದ ನೋಂದಣಿ:
ಜಿಲ್ಲೆಯ 956  ಆಶಾ ಕಾರ್ಯಕರ್ತರ ಪೈಕಿ 300 ಆಶಾ ಕಾರ್ಯಕರ್ತರಿಗೆ 300 ಟ್ಯಾಬ್‌ಗಳನ್ನು ನೀಡಿದ್ದು, ಇವರು ತಮ್ಮ ವ್ಯಾಪ್ತಿಯ ಸಾರ್ವಜನಿಕರನ್ನು ಯೋಜನೆಗೆ ನೋಂದಾಯಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ನೇರವಾಗಿ ಆಸ್ಪತ್ರೆಗೆ ಬಂದು ಯೋಜನೆಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲೂ ಅವಕಾಶವಿದೆ. ಇವೆಲ್ಲದರ ಜತೆಗೆ ಡಿಜಿಟಲ್‌ ನರ್ವ್‌ ಸೆಂಟರ್‌ನಿಂದಲೂ ಮಾಹಿತಿ ನೀಡಲು ಅವಕಾಶ ಮಾಡಲಾಗಿದೆ.

ಯಾವೆಲ್ಲಾ ಆಸ್ಪತ್ರೆಗಳು ಈ ವ್ಯಾಪ್ತಿಗೆ?
ಕೋಲಾರ ಜಿಲ್ಲೆಯಲ್ಲಿ ಸದ್ಯಕ್ಕೆ ಎಸ್‌ಎನ್‌ಆರ್‌, ಆಸ್ಪತ್ರೆ, 5 ತಾಲೂಕು ಆಸ್ಪತ್ರೆಗಳು, ಬೇತಮಂಗಲ ಹಾಗೂ ಗೌನಪಲ್ಲಿ ಸಮುದಾಯಿಕ ಆಸ್ಪತ್ರೆ, ಕೋಲಾರದ ಮುನ್ಸಿಫ‌ಲ್‌, ದರ್ಗಾ ಮೊಹಲ್ಲಾ ಆಸ್ಪತ್ರೆ, ಮಾಲೂರಿನ ದೊಡ್ಡಶಿವಾರ, ಬಂಗಾರಪೇಟೆಯ ಜನರಲ್‌ ಮತ್ತು ಅರ್ಬನ್‌ ಆಸ್ಪತ್ರೆ, ಶ್ರೀನಿವಾಸಪುರದ ಅಡ್ಡಗಲ್‌ ಮತ್ತು ಮುಳಬಾಗಿಲಿನ ತಾಯಲೂರು ಆಸ್ಪತ್ರೆಗಳಲ್ಲಿ ಡಿಜಿಟಲ್‌ ನರ್ವ್‌  ಸೆಂಟರ್‌ ಕೌಂಟರ್‌ಗಳನ್ನು ತೆರೆದು ಸಿಬ್ಬಂದಿ ನೇಮಕ ಮಾಡಿ ಕರೆ ಮಾಡಿ ಬಂದವರಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಮುಂದಿನ ಒಂದು ತಿಂಗಳೊಳಗಾಗಿ ಎಲ್ಲಾ 82 ಆಸ್ಪತ್ರೆಗಳಲ್ಲಿಯೂ ಇಂತ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.

ಉಪಯೋಗವೇನು?:
ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಏನೆಲ್ಲಾ ಚಿಕಿತ್ಸೆಗಳು ಲಭ್ಯವಿದೆ. ತಜ್ಞ ವೈದ್ಯರು ಎಲ್ಲಿ, ಯಾವ ಸಮಯದಲ್ಲಿ ಸಿಗುತ್ತಾರೆ. ಔಷಧಿ,ಆಧುನಿಕ ವೈದ್ಯೋಪಕರಣಗಳ ಮಾಹಿತಿಯನ್ನು ಪಡೆದು, ನಿಗದಿಪಡಿಸಿದ ವೇಳೆಯಲ್ಲೇ ಆಸ್ಪತ್ರೆಗೆ ತೆರಳಬಹುದು. ಇದರಿಂದ ಅನಗತ್ಯ ಓಡಾಟ, ಕಾಯುವಿಕೆಯನ್ನು ತಪ್ಪಲಿದೆ. ರೋಗಿಯ ಚಿಕಿತ್ಸೆಗೆ ಅಗತ್ಯವಾದಲ್ಲಿ ಬೆಂಗಳೂರಿನ ಆಸ್ಪತ್ರೆಗಳ ಮಾಹಿತಿಯನ್ನೂ ಸಂಗ್ರಹಿಸಿ ನೀಡಲಾಗುತ್ತದೆ. ಇದರಿಂದ ಪರಿಣಾಮಕಾರಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ವೈದ್ಯರ ಸಮಯವೂ ಉಳಿತಾಯವಾಗಲಿದೆ.

ಚಿಕಿತ್ಸೆ ಪಡೆಯುವುದು ಹೇಗೆ?
– ಟೋಲ್‌ ಫ್ರೀ ನಂಬರ್‌ಗೆ ಕರೆಮಾಡಿ ಆಧರ್‌ ಸಂಖ್ಯೆ ನೀಡಿ ಹೆಸರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
– ಆಶಾ ಕಾರ್ಯಕರ್ತರ ಮೂಲಕವೂ ನೋಂದಣಿ ಸಾಧ್ಯ.
– ಬೆಳಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ನೋಂದಣಿಗೆ ಅವಕಾಶ.
– ಕರೆಯ ಮೂಲಕ ಜಿಲ್ಲೆಯ ಯಾವ ಆಸ್ಪತ್ರೆಯಲ್ಲಿ ಸಮಸ್ಯೆಗೆ ಚಿಕಿತ್ಸೆ, ಔಷಧಗಳು, ವೈದ್ಯೋಪಕರಣಗಳ ಬಗ್ಗೆ  ಮಾಹಿತಿ ಲಭ್ಯ.
– ವೈದ್ಯರ ಭೇಟಿಗೂ ಸಮಯ, ದಿನಾಂಕ ನಿಗದಿಪಡಿಸಿಕೊಳ್ಳಬಹುದು. ಸ್ಥಳೀಯ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಅವಕಾಶ.
– ಸ್ಥಳೀಯವಾಗಿ ಲಭ್ಯವಾಗದಿದ್ದರೆ, ಜಿಲ್ಲಾ ವೈದ್ಯಾಧಿಕಾರಿಗಳ ಜತೆ ಚರ್ಚಿಸಿ, ವಚ್ಯುìವಲ್‌ ಮೀಡಿಯಾ ಮೂಲಕ ಚಿಕಿತ್ಸೆ ಸಾಧ್ಯ.

(ಅಂಕಿ-ಸಂಖ್ಯೆ ಬಳಕೆಗೆ)
4.30 ಲಕ್ಷ: ಆರು ತಿಂಗಳಿಂದ ಆಗಿರುವ ನೋಂದಣಿ
400: ಕರೆಗಳನ್ನು ಪ್ರತಿದಿನ ಸ್ವೀಕರಿಸುವ ಸಾಮರ್ಥ್ಯದ ಕೇಂದ್ರ ಸ್ಥಾಪನೆ
100: ಸದ್ಯಕ್ಕೆ ಪ್ರತಿದಿನ ಸ್ವೀಕರಿಸಲಾಗುತ್ತಿರುವ ಕರೆಗಳು

ಕೋಲಾರ ಜಿಲ್ಲೆಯಲ್ಲಿ ಆರಂಭವಾಗಿರುವ ಡಿಜಿಟಲ್‌ ನರ್ವ್‌ ಸೆಂಟರ್‌ ದೇಶದ ಗಮನ ಸೆಳೆದಿದೆ. ಕೇಂದ್ರ ಆರೋಗ್ಯ ಮಂತ್ರಿ ಸೇರಿದಂತೆ ಅನೇಕ ಹಿರಿಯರು ಕಾರ್ಯವೈಖರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಈ ಯೋಜನೆ ಇಡೀ ದೇಶಕ್ಕೆ ವಿಸ್ತರಣೆಯಾಗಲಿದೆ.
– ಡಾ.ವಸಂತ್‌, ಡಿಜಿಟಲ್‌ ನರ್ವ್‌ ಸೆಂಟರ್‌ ಜಿಲ್ಲಾ ಸಂಯೋಜಕರು.

ಗ್ರಾಮಾಂತರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ನೋಂದಣಿ ಕಾರ್ಯ ಚುರುಕಾಗಿದೆ. ಆದರೆ, ನಗರ ಪ್ರದೇಶದ ಜನರಿಂದ ನಿರೀಕ್ಷಿಸಿದಷ್ಟು ನೋಂದಣಿ ಆಗುತ್ತಿಲ್ಲ. ಜಿಲ್ಲೆಯ 16 ಲಕ್ಷ ಮಂದಿಯೂ ನೋಂದಣಿ ಮಾಡಿಸಿಕೊಂಡರೆ ಎಲ್ಲಾ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದ ಚಿಕಿತ್ಸೆ ಸಿಗುವಂತೆ ಮಾಡಲಾಗುವುದು.
– ಡಾ.ಬಿಂದು ಲಾವಣ್ಯ, ಎಸ್‌ಎನ್‌ಆರ್‌ ಆಸ್ಪತ್ರೆ, ಸಂಯೋಜಕರು.

– ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.