ಮುರುಘಾ ಮಠದಲ್ಲಿ ಜೈವಿಕ ಉದ್ಯಾನ ನಿರ್ಮಾಣಕ್ಕೆ ಅನುಮೋದನೆ

Team Udayavani, Feb 16, 2017, 3:45 AM IST

banner02.jpg

ಬೆಂಗಳೂರು: ಜೈವಿಕ ಇಂಧನ ಉದ್ಯಾನ ನಿರ್ಮಿಸುವ ಚಿತ್ರದುರ್ಗದ ಮುರುಘಾ ಮಠದ ಪ್ರಸ್ತಾವನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಅನುಮೋದನೆ ಕೊಟ್ಟಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದರೆ ಆದಷ್ಟು ಬೇಗ ಈ ಪ್ರಸ್ತಾವನೆ ಕಾರ್ಯಗತಗೊಳ್ಳಲಿದೆ.

ಜೈವಿಕ ಇಂಧನ ಉದ್ಯಾನ ನಿರ್ಮಿಸುವ ಬಗ್ಗೆ 66 ಎಕರೆ ಜಾಗದ ದಾಖಲೆಗಳೊಂದಿಗೆ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು 2016ರ ಮಾ.12 ರಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಪ್ರಸ್ತಾಪನೆ ಸಲ್ಲಿಸಿದ್ದರು. ಪರಿಶೀಲನಾ ಹಂತ ದಾಟಿದ ಬಳಿಕ ಫೆ.2ರಂದು ಗ್ರಾಮೀಣಾಭಿವೃದ್ಧಿ ಸಚಿವರು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ.

ಒಂದೊಮ್ಮೆ ಮುರುಘಾ ಮಠದ ವತಿಯಿಂದ ಜೈವಿಕ ಇಂಧನ ಉದ್ಯಾನ ನಿರ್ಮಾಣವಾದರೆ, ಅದು ರಾಜ್ಯದ ನಾಲ್ಕನೇ ಜೈವಿಕ ಇಂಧನ ಉದ್ಯಾನ ಆಗಲಿದೆ. ಈಗಾಗಲೇ, ಜೈವಿಕ ಇಂಧನ ಅಭಿವೃದಿಟಛಿ ಮಂಡಳಿ ವತಿಯಿಂದ ರಾಜ್ಯ ದಲ್ಲಿ 3 ಜೈವಿಕ ಇಂಧನ ಉದ್ಯಾನಗಳು ಅನುಷ್ಠಾನದಲ್ಲಿವೆ. ರಾಜ್ಯದ ಪ್ರತಿ ಕಂದಾಯ ವಿಭಾಗಕ್ಕೊಂದು ಜೈವಿಕ ಇಂಧನ ಉದ್ಯಾನ ಇರಬೇಕು ಎನ್ನುವುದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಯೋಜನೆಯಾಗಿತ್ತು.

ಅದರಂತೆ, ಮೈಸೂರು ಕಂದಾಯ ವಿಭಾಗದಲ್ಲಿ ಹಾಸನ ಜಿಲ್ಲೆಯ ಮಡೆನೂರು, ಬೆಳಗಾವಿ ಕಂದಾಯ ವಿಭಾಗದಲ್ಲಿ ಧಾರವಾಡ, ಕಲಬುರಗಿ ಕಂದಾಯ ವಿಭಾಗದಲ್ಲಿ ಯಾದಗಿರಿ ಜಿಲ್ಲೆಯ ತಿಂತಣಿಯಲ್ಲಿ ಜೈವಿಕ ಇಂಧನ ಉದ್ಯಾನಗಳು ಕಾರ್ಯ ನಿರ್ವಹಿಸುತ್ತಿವೆ. ಈ 3 ಜೈವಿಕ ಇಂಧನ ಉದ್ಯಾನಗಳು ತಲಾ 40 ರಿಂದ 50 ಎಕರೆ ಪ್ರದೇಶದಲ್ಲಿದೆ. ಜೈವಿಕ ಇಂಧನ ಕ್ಷೇತ್ರ ಕುರಿತ ಸಮಗ್ರ ಮಾಹಿತಿ, ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳುಹಾಗೂ ಉದ್ದಿಮೆದಾರರಿಗೆ ತಲುಪಿಸುವಲ್ಲಿ ಕ್ರಿಯಾಶೀಲವಾಗಿವೆ. ಆಯಾ ವಿಭಾಗಗಳಲ್ಲಿ ದೊರಕುವ ಹಾಗೂ ಬೇರೆ ಭೌಗೋಳಿಕ ಸನ್ನಿವೇಶಗಳಿಗೆ ಪೂರಕವಾದ ಜೈವಿಕ ಇಂಧನ ಸಸಿಗಳಾದ ಹೊಂಗೆ, ಬೇವು, ಹಿಪ್ಪೆ, ಸಿಮರೂಬ ಮುಂತಾದ ಸಸಿಗಳನ್ನು ಬೆಳೆಸುವುದು, ಅವುಗಳನ್ನು ರೈತರಿಗೆ ನೀಡಿ ಅವರ ಜಮೀನಿನಲ್ಲಿ ನೆಟ್ಟು ಬೆಳೆಸುವಲ್ಲೂ ನೆರವು ನೀಡುತ್ತಿವೆ.

ಮುರುಘಾ ಮಠದ ಪ್ರಸ್ತಾವನೆ: ಬೆಂಗಳೂರು ಕಂದಾಯ ವಿಭಾಗದಲ್ಲಿ ಜೈವಿಕ ಇಂಧನ ಉದ್ಯಾನ ನಿರ್ಮಿಸುವ ಸಂಬಂಧ ಚಿತ್ರದುರ್ಗ ಮುರುಘಾ ಮಠದ ಶರಣರು 66 ಎಕರೆ ಜಾಗದ ದಾಖಲಾತಿಗಳೊಂದಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಭರವಸೆಯೊಂದಿಗೆ 2016 ಮಾ.12ರಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಫೆ.2ರಂದು ಸಚಿವರು ಅದನ್ನು ಅನುಮೋದಿಸಿದ್ದಾರೆ.

66 ಎಕರೆ ಭೂಮಿ ನೀಡಲು
ಮುರುಘಾಮಠ ಸಿದ್ಧ

ಮುರುಘಾಮಠದ ಮರುಪಸ್ತಾವನೆಯನ್ನು ಪುನರ್‌ಪರಿಶೀಲಿಸಿದ್ದ ಜೈವಿಕ ಇಂಧನ ಮಂಡಳಿಯು, ಜೈವಿಕ ಇಂಧನ ಉದ್ಯಾನ ನಿರ್ಮಾಣಕ್ಕೆ 66 ಎಕರೆ ಜಾಗ ಕೊಡಲು ಮುರುಘಾಮಠ ಸಿದ್ಧವಿದೆ. ಅಲ್ಲದೇ ಈ ಸಂಸ್ಥೆಗೆ ನೀಡಲಾಗಿರುವ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೈವಿಕ ಇಂಧನ ಮಂಡಳಿ ಹಾಗೂ ಮುರುಘಾಮಠ ಒಡಂಬಡಿಕೆ ಮಾಡಿಕೊಂಡು ಉದ್ಯಾನ ನಿರ್ಮಿಸಬಹುದು. ಇದಕ್ಕಾಗಿ 5 ವರ್ಷಗಳ ಕ್ರಿಯಾ ಯೋಜನೆ ರೂಪಿಸಿ ಪ್ರತಿ ವರ್ಷ 1 ಕೋಟಿ ರೂ. ಅನುದಾನ ಮೀಸಲಿಡಬೇಕು. ಈ ಸಾಲಿನ ಬಜೆಟ್‌ನಲ್ಲಿ 1 ಕೋಟಿ ರೂ. ಬಿಡುಗಡೆ ಮಾಡಿದರೆ ಅಗತ್ಯ ಸಿದ್ದತೆ ಮಾಡಿಕೊಳ್ಳಬಹುದು ಎಂದು ಮಂಡಳಿ ತನ್ನ ಟಿಪ್ಪಣಿಯಲ್ಲಿ ಮನವಿ ಮಾಡಿದೆ. ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಫೆ.2ರಂದು ಸಚಿವರು ಅದನ್ನು ಅನುಮೋದಿಸಿದ್ದಾರೆ.

ಟಾಪ್ ನ್ಯೂಸ್

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

horocospe

Daily Horoscope; ಈ ರಾಶಿಯ ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ

kKasaragod ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆKasaragod ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ

Kasaragod ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

ಆರೋಪಿಗಳ ಡಿಎನ್‌ಎ ಪರೀಕ್ಷೆ: ದರ್ಶನ್‌, ಪವಿತ್ರಾಗೌಡ ಸೇರಿ 14 ಮಂದಿಗೆ ಪರೀಕ್ಷೆ

ಆರೋಪಿಗಳ ಡಿಎನ್‌ಎ ಪರೀಕ್ಷೆ: ದರ್ಶನ್‌, ಪವಿತ್ರಾಗೌಡ ಸೇರಿ 14 ಮಂದಿಗೆ ಪರೀಕ್ಷೆ

UGC-NET Exam 11 ಲಕ್ಷ ಮಂದಿ ಬರೆದಿದ್ದ ಯುಜಿಸಿ ನೆಟ್‌ ಪರೀಕ್ಷೆ ರದ್ದು , ಸಿಬಿಐ ತನಿಖೆ

UGC-NET Exam 11 ಲಕ್ಷ ಮಂದಿ ಬರೆದಿದ್ದ ಯುಜಿಸಿ ನೆಟ್‌ ಪರೀಕ್ಷೆ ರದ್ದು , ಸಿಬಿಐ ತನಿಖೆ

T20 World Cup,ಭಾರತ-ಅಫ್ಘಾನಿಸ್ಥಾನ ಕ್ರಿಕೆಟ್‌ ಕದನ

T20 World Cup,ಭಾರತ-ಅಫ್ಘಾನಿಸ್ಥಾನ ಕ್ರಿಕೆಟ್‌ ಕದನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

ಆರೋಪಿಗಳ ಡಿಎನ್‌ಎ ಪರೀಕ್ಷೆ: ದರ್ಶನ್‌, ಪವಿತ್ರಾಗೌಡ ಸೇರಿ 14 ಮಂದಿಗೆ ಪರೀಕ್ಷೆ

ಆರೋಪಿಗಳ ಡಿಎನ್‌ಎ ಪರೀಕ್ಷೆ: ದರ್ಶನ್‌, ಪವಿತ್ರಾಗೌಡ ಸೇರಿ 14 ಮಂದಿಗೆ ಪರೀಕ್ಷೆ

ವಿದ್ಯುತ್‌ ಶಾಕ್‌ನಿಂದಲೇ ರೇಣುಕಾಸ್ವಾಮಿ ಸಾವು! ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗ

ವಿದ್ಯುತ್‌ ಶಾಕ್‌ನಿಂದಲೇ ರೇಣುಕಾಸ್ವಾಮಿ ಸಾವು! ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗ

bjpಪರಿಷತ್‌ ವಿಪಕ್ಷ ನಾಯಕ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಪೈಪೋಟಿ

ಪರಿಷತ್‌ ವಿಪಕ್ಷ ನಾಯಕ ಸ್ಥಾನಕ್ಕೆ ಬಿಜೆಪಿಯಲ್ಲಿ ಭಾರೀ ಪೈಪೋಟಿ

ಸರ್ಕಾರಿ ಬಸ್‌ ಪ್ರಯಾಣ ದರ ಹೆಚ್ಚಳ: ಸಾರಿಗೆ ಸಚಿವರ ಸುಳಿವು

Government ಬಸ್‌ ಪ್ರಯಾಣ ದರ ಹೆಚ್ಚಳ: ಸಾರಿಗೆ ಸಚಿವರ ಸುಳಿವು

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

horocospe

Daily Horoscope; ಈ ರಾಶಿಯ ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ

kKasaragod ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆKasaragod ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ

Kasaragod ರಾತ್ರಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

RTC Aadhaar ಜೋಡಣೆ ಗೊಂದಲ: ಕಚೇರಿಗಳಿಂದ ಕಚೇರಿಗಳಿಗೆ ರೈತರ ಅಲೆದಾಟ

ಆರೋಪಿಗಳ ಡಿಎನ್‌ಎ ಪರೀಕ್ಷೆ: ದರ್ಶನ್‌, ಪವಿತ್ರಾಗೌಡ ಸೇರಿ 14 ಮಂದಿಗೆ ಪರೀಕ್ಷೆ

ಆರೋಪಿಗಳ ಡಿಎನ್‌ಎ ಪರೀಕ್ಷೆ: ದರ್ಶನ್‌, ಪವಿತ್ರಾಗೌಡ ಸೇರಿ 14 ಮಂದಿಗೆ ಪರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.