ಪಂಚಲೋಹ ವಿಗ್ರಹ ಕಳ್ಳರ ಬಂಧನ


Team Udayavani, Jul 8, 2018, 2:44 PM IST

arrest2.jpg

ಬೆಂಗಳೂರು: ತಮಿಳುನಾಡಿನ ದೇವಾಲಯವೊಂದರಲ್ಲಿ 150 ವರ್ಷಗಳ ಹಳೇ ವಿಗ್ರಹಗಳನ್ನು ಕಳವು ಮಾಡಿ ನಗರದಲ್ಲಿ ಮಾರಾಟ ಮಾಡಲು ಯತಿಸಿದ ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಅರುಣ್‌ (25), ಷೌಕೀರ್‌ (23) ಬಂಧಿತರು. ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಯುತ್ತಿದೆ. ಆರೋಪಿಗಳಿಂದ ಮೂರು ಪಂಚಲೋಹ ವಿಗ್ರಹಗಳನ್ನು ವಶಪಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ತಮಿಳುನಾಡು ಪೊಲೀಸರು ಬೈಕ್‌ ಕಳವು, ಕಳ್ಳತನ ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಲ್ಲಿ ಪರಸ್ಪರ ಪರಿಚಯವಾದ ಆರೋಪಿಗಳು ಹೊರಬಂದ ಬಳಿಕ ಬೆಂಗಳೂರಿಗೆ ಬಂದು ಎಚ್‌ಎಸ್‌ಆರ್‌ ಲೇಔಟ್‌, ಹೊಸೂರಿನಲ್ಲಿ ಬೈಕ್‌ ಕಳ್ಳತನ ಮಾಡಿ ತಮಿಳುನಾಡಿನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಬೈಕ್‌ ಬಿಟ್ಟು ವಿಗ್ರಹ ಕದ್ದರು: ಕದ್ದ ಬೈಕ್‌ಗೆ ನಿರೀಕ್ಷಿತ ಬೆಲೆ ಸಿಗದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಪಂಚಲೋಹ ವಿಗ್ರಹಗಳನ್ನು ಕದ್ದು ಮಾರಾಟ ಮಾಡಲು ಸಂಚು ರೂಪಿಸಿದ್ದರು. ಅದರಂತೆ ತಮಿಳುನಾಡಿನ ಕೆಲ ದೇವಾಲಯಗಳಿಗೆ ಭಕ್ತರ ಸೋಗಿನಲ್ಲಿ ಭೇಟಿ ನೀಡುತ್ತಿದ್ದ ಆರೋಪಿಗಳು, ಸಿಸಿಟಿವಿ ಕ್ಯಾಮೆರಾ ಹಾಗೂ ಭದ್ರತೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು.

ವೇಲೂರು ಜಿಲ್ಲೆಯ ವಾಲಗ ತಾಲೂಕಿನ ಸಾತಂಬಾಕಂನಲ್ಲಿರುವ ಭಜನಾ ಮಂದಿರಕ್ಕೆ ಭೇಟಿ ನೀಡಿದ್ದ ಷೌಕೀರ್‌ ಮತ್ತು ಇತರೆ ಆರೋಪಿಗಳು, ಭದ್ರತೆ ಇಲ್ಲದಿರುವುದನ್ನು ಗಮನಿಸಿ ಮಂದಿರದಲ್ಲಿದ್ದ 150 ವರ್ಷ ಹಳೆಯ ಪಂಚೊಲೋಹದ ವೇಣುಗೋಪಾಲ ಸ್ವಾಮಿ, ಶ್ರೀಕೃಷ್ಣ, ಗಣಪತಿ ಸೇರಿ ನಾಲ್ಕು ವಿಗ್ರಹಗಳನ್ನು ಆರು ತಿಂಗಳ ಹಿಂದೆ ಕಳವು ಮಾಡಿದ್ದರು.

ಖಾಸಗಿ ವಾಹನದಲ್ಲಿ ವಿಗ್ರಹಗಳನ್ನು ನಗರಕ್ಕೆ ಸಾಗಿಸಿದ್ದ ಷೌಕೀರ್‌, ಗೊಲ್ಲಹಳ್ಳಿಯ ಬಾಡಿಗೆ ಮನೆಯಲ್ಲಿ ಇರಿಸಿ ವಿಗ್ರಹ ಕೊಳ್ಳುವವರ ಹುಡುಕಾಟ ನಡೆಸುತ್ತಿದ್ದ. ಈ ಮಧ್ಯೆ ಒಂದು ವಿಗ್ರಹವನ್ನು ಮಂಗಳೂರು ಮೂಲದ ವ್ಯಕ್ತಿಗೆ 5 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಇನ್ನುಳಿದ ಮೂರು ವಿಗ್ರಹಗಳನ್ನು ಮಂಗಳೂರು ಮೂಲದ ವ್ಯಾಪಾರಿಯೊಬ್ಬರಿಗೆ 15 ಲಕ್ಷ ರೂ.ಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್

1-asdsdsad

Poll debut; ವಯನಾಡು ಕ್ಷೇತ್ರ ತಂಗಿಗೆ ಬಿಟ್ಟುಕೊಟ್ಟ ರಾಹುಲ್: ನಾಳೆ ರಾಜೀನಾಮೆ

Bantwal ಹಳೆಯ ದ್ವೇಷಕ್ಕೆ ಬೆಂಕಿಗಾಹುತಿಯಾಯಿತು ಸ್ನೇಹಿತನ ಬೈಕ್ ….

Bantwal ಸ್ನೇಹಿತರಿಬ್ಬರ ದ್ವೇಷ; ಅಮಾಯಕ ಯುವಕನ ಬೈಕ್‌ ಭಸ್ಮ

1-dharwad

Dharwad; ನೇಚರ್ ವ್ಯೂ ಫೋಟೋಗ್ರಫಿ, ರೀಲ್ಸ್ ಗೆ 16 ರ ಬಾಲಕರಿಬ್ಬರು ಬಲಿ!

renukaacharya

BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ

ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

Davanagere;ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

Ekam web series produced by Rakshit is coming to the audience; Full details are here

ಪ್ರೇಕ್ಷಕರೆದುರು ಬರುತ್ತಿದೆ ರಕ್ಷಿತ್ ನಿರ್ಮಾಣದ Ekam ವೆಬ್ ಸಿರೀಸ್; ಪೂರ್ಣಮಾಹಿತಿ ಇಲ್ಲಿದೆ

Chikkodi;ಸಮಸ್ಯೆ ಬಗೆಹರಿಸಲು, ಬೇಡಿಕೆ ಈಡೇರಿಸಲು ಪ್ರಯತ್ನ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

Chikkodi;ಸಮಸ್ಯೆ ಬಗೆಹರಿಸಲು, ಬೇಡಿಕೆ ಈಡೇರಿಸಲು ಪ್ರಯತ್ನ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ

Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ

6

Bengaluru: ಬಕ್ರೀದ್‌ ನಿಮಿತ್ತ ನಾಳೆ ಹಲವೆಡೆ ಸಂಚಾರ ನಿರ್ಬಂಧ

5

Bengaluru City: ಬೆಂಗಳೂರು ವಿಭಜನೆ ಅಲ್ಲ, ವಿಸ್ತಾರಕ್ಕೆ ಶಿಫಾರಸು

Bengaluru Parks: ಪಾರ್ಕ್‌ಗಳಿಗೆ ಕ್ಯಾಮೆರಾ ಭದ್ರತೆ ಒದಗಿಸಲು ಆಗ್ರಹ

Bengaluru Parks: ಪಾರ್ಕ್‌ಗಳಿಗೆ ಕ್ಯಾಮೆರಾ ಭದ್ರತೆ ಒದಗಿಸಲು ಆಗ್ರಹ

3

Annapurneshwari Police station: ಠಾಣೆಗೆ ಶಾಮಿಯಾನ ಹಾಕಿರುವ ಕುರಿತು ಸಾರ್ವಜನಿಕರ ಆಕ್ರೋಶ

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

1-aasdsadsa-dad

Bihar; ಮುಸ್ಲಿಂ ಮತ್ತು ಯಾದವರ ಕೆಲಸ ಮಾಡುವುದಿಲ್ಲ: ಜೆಡಿಯು ಸಂಸದ

1-asdsdsad

Poll debut; ವಯನಾಡು ಕ್ಷೇತ್ರ ತಂಗಿಗೆ ಬಿಟ್ಟುಕೊಟ್ಟ ರಾಹುಲ್: ನಾಳೆ ರಾಜೀನಾಮೆ

Bantwal ಹಳೆಯ ದ್ವೇಷಕ್ಕೆ ಬೆಂಕಿಗಾಹುತಿಯಾಯಿತು ಸ್ನೇಹಿತನ ಬೈಕ್ ….

Bantwal ಸ್ನೇಹಿತರಿಬ್ಬರ ದ್ವೇಷ; ಅಮಾಯಕ ಯುವಕನ ಬೈಕ್‌ ಭಸ್ಮ

1-dharwad

Dharwad; ನೇಚರ್ ವ್ಯೂ ಫೋಟೋಗ್ರಫಿ, ರೀಲ್ಸ್ ಗೆ 16 ರ ಬಾಲಕರಿಬ್ಬರು ಬಲಿ!

Alnavar: ಎತ್ತ ನೋಡಿದರೂ ಹಕ್ಕಿಗಳ ಕಲರವ

Alnavar: ಎತ್ತ ನೋಡಿದರೂ ಹಕ್ಕಿಗಳ ಕಲರವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.